ತುಂಬಾ ದಿನದ ಮೇಲೆ ಬ್ಲಾಗ್ ಓಪನ್ ಮಾಡಿ ಬರೆಯಲು ಕುಳಿತಿದ್ದೇನೆ.
ಬೇಬಿ ಉತ್ಕರ್ಶ್ ನ ಆಟ ಪಾಟ ಗಳಲ್ಲೇ ದಿನಗಳು ಕಳೆದು ಹೋಗ್ತಿವೆ...ಮತ್ತೆ ಫಿಟ್ ಆಗಬೇಕು ಅನ್ನೋ ಹಂಬಲ... ಸಮಯ ಸಿಗ್ತಿಲ್ಲ... ಒಬ್ಬಳೇ ಅವನನ್ನು ನೋಡ್ಕೊತಿದೇನೆ... of course .. i am enjoying and ಲವಿಂಗ್.:-)
ಉತ್ಕರ್ಶ್ ಗೆ ಬೈಕ್ ಮತ್ತು ಕಾರ್ ನಲ್ಲಿ ಸುತ್ತೋದು ಅಂದ್ರೆ ತುಂಬಾ ಇಷ್ಟ. ನಿದ್ದೆ ಮಾಡೋದಿಕ್ಕೆ ತುಂಬಾ ಹಠ ಮಾಡ್ತಿದಾನೆ ಅಂತ ಅನ್ನಿಸಿದ್ರೆ ಸಾಕು... ನಾನು ಕೀರ್ತಿ ಮಗುನ ಬೈಕ್ ನಲ್ಲಿ ಒಂದು ರೌಂಡ್ ಕರೆದುಕೊಂದೊಗ್ತ್ಹಿವಿ. ಚೆನ್ನಾಗಿ ನಿದ್ದೆ ಮಾಡಿ... ಫ್ರೆಶ್ ಆಗಿ ಬಿಡ್ತಾನೆ... ಮತ್ತೆ ತನ್ನ ಆಟದಲ್ಲಿ ತಲ್ಲೀನನಾಗ್ಥನೆ.
ಇಗೀಗ.. ಅಂಬೆ ಗಾಲಿನಲ್ಲಿ ಮನೆ ಎಲ್ಲಾ ಓಡಾಡ್ಥನೆ. ಒಂದೂ ಕೆಲಸ ಮಾಡಲು ಬಿಡೋಲ್ಲ... ಅಡುಗೆ ಮನೆಗೆ ಬಂದು ಕೈಗೆ ಸಿಕ್ಕಿದ್ದನು ಬಾಯಿಗೆ ತುರುಕಿ ಕೊಳ್ಥನೆ.
ದೇವರ ಮನೆಯ ದೀಪ ತುಂಬಾನೆ attraction ... ಹಿಡಿದುಕೊಲ್ಲೋ ಆಸೆ..
ರೆಫ್ರಿಜಿರೇಟರ್ ಬಾಗಿಲು ತೆಗೆದರೆ ಸಾಕು... ಓಡಿ ಬಂದು ಕೂರ್ತನೆ ಬಾಗಿಲು ಹಾಕಲು ಬಿಡೋಲ್ಲ...
ಅವನ ಊಟ ಬಿಟ್ಟು ಇನ್ನೆಲ್ಲ ತಿನ್ತಾನೆ ಪೋರ...
ಮನೆಯಾ ಬಾಗಿಲು ತೆರೆದಿದ್ದರೆ.. ಓಡಿ ಹೋಗಿ ಹೊಸಿಲು ದಾಟಿ,.... ಮೆಟ್ಟಿಲಿನ ಕಡೆ... ಪುಟು ಪುಟು ಓಡ್ತಾನೆ ....ಅವನ ಹಿಂದೆ ಓಡುವುದೇ.. ನನ್ನ ಕೆಲಸವಾಗಿ ಬಿಟ್ಟಿದೆ...
ಅವರಪ್ಪನಿಗೆ... ಅವನಷ್ಟು ಕ್ಯೂಟ್ ಬೇಬಿ ಈ ಪ್ರಪಂಚದಲ್ಲೇ ಇಲ್ಲವಂತೆ...:-)
ನೋಡಿದೊರೆಲ್ಲ ಹೇಳೋದು... ಏಳು ತಿಂಗಳಿಗೆ... ಇಷ್ಟು ಬೇಗ ಅಮ್ಬೇಗಾಲಿನಲ್ಲಿ ..!... ಹನ್ನೊಂದು ತಿಂಗಳಿಗೆ ಓಡಾಡ್ಥನೆ ಹಾಗಾದ್ರೆ ಅಂತ...
ಅವನನ್ನು ಮಲಗಿಸಿ ಬಂದು ಬರೆಯಲು ಕೂತಿದ್ದೇನೆ...
ಅದೋ... ಆಗಲೇ ಎದ್ದು ಹಾಸಿಗೆಯಿಂದ ಇಳಿದು... ನನ್ನ ಹುಡುಕಿ ಕೊಂಡು ಬರ್ತಿದಾನೆ....
ಚಲೋ... ಮತ್ತೆ ಸಿಗೋಣ.