Tuesday, 29 March 2016
Life ....being a Mom..:-)..:-)
Wednesday, 3 February 2016
ಕರ್ನಾಟಕ ರಾಜ್ಯ ವೂಶೂ ಚ್ಯಾಂಪಿಯನ್ಶಿಪ್ ನಲ್ಲಿ ಮಿಂಚಿದ ನಮ್ಮ ಅಕಾಡೆಮಿಯ ಹುಡುಗರು Shaolin Wushu India academy
ಕರ್ನಾಟಕ ರಾಜ್ಯ ವೂಶೂ ಚ್ಯಾಂಪಿಯನ್ಶಿಪ್ ನಲ್ಲಿ ಮಿಂಚಿದ ನಮ್ಮ ಅಕಾಡೆಮಿಯ ನಮ್ಮ ಹುಡುಗರು Shaolin Wushu India academy
ಸೆಪ್ಟೆಂಬರ್ 2015, ಬಾಗಲಕೋಟೆಯಲ್ಲಿ ನಡೆದ, ಕರ್ನಾಟಕ ರಾಜ್ಯ ವೂಶೂ ಚ್ಯಾಂಪಿಯನ್ಶಿಪ್ ನಲ್ಲಿ ನಮ್ಮ Shaolin Wushu India academy ಯ, ಹುಡುಗರು , 1 ಚಿನ್ನ, 3 ಬೆಳ್ಳಿ, 3 ಕಂಚು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಸಂತೋಷದ ವಿಷಯನ ನಿಮ್ಮಲ್ಲಿ ಹಂಚಿಕೊಳ್ಳುವ ಎಂದು ಈ ಬ್ಲೋಗ್ ಬರೆಯುತ್ತಿದ್ದೇನೆ.
ಕೀರ್ತಿ ತುಂಬಾನೇ... ಕುಶಿಯಲ್ಲಿದ್ದಾರೆ, ಒಬ್ಬ ಗುರುವಾಗಿ ಸಿಕ್ಕ ಗೌರವಕ್ಕೆ ಮತ್ತು ಗೆಲುವಿಗೆ ಹುಮ್ಮಸ್ಸಿನಿಂದ ಮತ್ತಷ್ಟು ಹುಡುಗರ ತಯಾರಿಯಲ್ಲಿ ದ್ದಾರೆ.
ಸೆಪ್ಟೆಂಬರ್ 2015, ಬಾಗಲಕೋಟೆಯಲ್ಲಿ ನಡೆದ, ಕರ್ನಾಟಕ ರಾಜ್ಯ ವೂಶೂ ಚ್ಯಾಂಪಿಯನ್ಶಿಪ್ ನಲ್ಲಿ ನಮ್ಮ Shaolin Wushu India academy ಯ, ಹುಡುಗರು , 1 ಚಿನ್ನ, 3 ಬೆಳ್ಳಿ, 3 ಕಂಚು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಸಂತೋಷದ ವಿಷಯನ ನಿಮ್ಮಲ್ಲಿ ಹಂಚಿಕೊಳ್ಳುವ ಎಂದು ಈ ಬ್ಲೋಗ್ ಬರೆಯುತ್ತಿದ್ದೇನೆ.
ಕೀರ್ತಿ ತುಂಬಾನೇ... ಕುಶಿಯಲ್ಲಿದ್ದಾರೆ, ಒಬ್ಬ ಗುರುವಾಗಿ ಸಿಕ್ಕ ಗೌರವಕ್ಕೆ ಮತ್ತು ಗೆಲುವಿಗೆ ಹುಮ್ಮಸ್ಸಿನಿಂದ ಮತ್ತಷ್ಟು ಹುಡುಗರ ತಯಾರಿಯಲ್ಲಿ ದ್ದಾರೆ.
Monday, 1 February 2016
ತೂಕ ಇಳಿಸೊದು ಹೇಗೆ.....ಅನ್ನೋ ಸಮಸ್ಯೆ ತಾಯಂದಿರ ಪ್ರಶ್ನೆ ಹಾಗೂ ಚಿಂತೆ...ಈಗ ನಾನು ಸಹ ಅದೇ ದೋಣಿಯ ಪಯಣಿಗಳು....;-(
ಹೌದು....ತಾಯಿ ಆಗಿರುವ ಸಂತೋಷ ಒಂದು ಕಡೆಯಾದರೆ...ಮತ್ತೊಂದು ಕಡೆ...ಏರಿರೋ ಇಷ್ಟು ತೂಕನ ಹೇಗಪ್ಪಾ ಕರಗಿಸೋದು ಅನ್ನೋ ಚಿಂತೆ ಇನ್ನೊಂದೆಡೆ.
ನಾನಂತೂ ನನ್ನ ಹಳೇ ಫೋಟೋಸ್ ನೋಡಿ ನೋಡಿ ಯಾವಾಗಪ್ಪಾ ಮತ್ತೆ ನಾನು ಇಷ್ಟು ಸಣ್ಣ ಹಾಗೂ ಸ್ಮಾರ್ಟ್ ಆಗಿ ಕಾಣಿಸೋದು ಅನ್ನೋ ಚಿಂತೇಲಿ ಮಾಡೋ ಊಟ ನಾ ಕಡಿಮೆ ಮಾಡಿದ್ರೆ... ಅಮ್ಮನ ಕೈಲಿ ಬೈಸಿಕೊಳ್ಳಬೇಕಾಗುತ್ತೆ.
ಆದ್ರೂ...ಅಮ್ಮ ಪ್ರತೀ ಸಲ ಸಾರಿಗೆ ಒಗ್ಗರಣೆ ಹಾಕುವಾಗ....."ಅಮ್ಮಾ...ಪ್ಲೀಸ್ ತುಪ್ಪ ಕಮ್ಮಿ ಹಾಕಮ್ಮ" ಅನ್ನೋದನ್ನು ಮರೆಯೋಲ್ಲ. ಅವಾಗಲೂ ಅಮ್ಮ " ಬಾಣಂತಿ ದೇಹಕ್ಕೆ ತುಪ್ಪ ತುಂಬಾ ಅವಶ್ಯ...ಬಾಯ್ ಮುಚ್ಚಿ ಕೊಟ್ಟದ್ದಣ್ಣ ತಿನ್ನು..." ಅನ್ನೋ ಬೈಗುಳ.
ಇನ್ನ ಎದ್ದು ಒಡಾಡುವ ಹಾಗೂ ಇಲ್ಲ, "ಜಾಸ್ತಿ ಓಡಾಡ ಬೇಡ, ಹೊರಗಡೆ ಹೋಗ್ಬೇಡ, ಜಾಸ್ತಿ ಕೂತಿರಬೇಡ, ಚೆನ್ನಾಗಿ ನಿದ್ದೆ ಮಾಡು" ಅನ್ನೋ ಅಮ್ಮನ ಮಾತುಗಳು...ಹೋದಲ್ಲೆಲ್ಲ ಹಿಂಬಾಲಿಸುತ್ತಲೇ ಇರುತ್ತೆ ...ಇನ್ನೂ ನಾನು ವಾಕಿಂಗ್ ಮಾಡಿದ ಹಾಗೆ... ವಾಕಿಂಗ್ ಮಾಡದೆ ಹೇಗೆ ನನ್ನ ತೂಕ ಇಳಿಸೋ... ಮೊದಲ ಪ್ರಯತ್ನಕ್ಕೆ...ಕಲ್ಲು:-(
ಮತ್ತೆ, ಮೇಲಿಂದ ಮೇಲೆ...ತುಪ್ಪ ಹಾಕಿದ ತಿಂಡಿಗಳಾದ... ಮೆಂತ್ಯ ದೋಸೆ, ಅಂಟಿನ ಉಂಡೆ.... ಇತ್ಯಾದಿ..ಐದು ತಿಂಗಳು ತಿಂದು ಸಾಕಾಗಿದೆ...
ಹೌದು... ನಿಂಗ್ಯಾರಿಗಾದ್ರೂ ಅನ್ನಿಸಿದ್ದು ಇದೆಯಾ... ನಂಗಂತೂ ಅನ್ನಿಸಿದ್ದಿದೆ, ಬೇರೆಯವರು ಎಷ್ಟು ತಿಂದರೂ.. ದಪ್ಪನೆ ಆಗೋಲ್ಲ... ನಾನಂತೂ ದಿನಕ್ಕೆ 3 ಘಂಟೆ ವರ್ಕೌಟ್ ಮಾಡಿದ್ರು.. ಸಣ್ಣ ಆಗಲು ತುಂಬಾನೇ ದಿನ ಬೇಕು....:-(
ಈಗಂತೂ... ಮಗುನಾ ನಾನೊಬ್ಬಳೇ ನೋಡಿ ಕೊಳ್ತಿರೋದು.. ದಿನ ದಿನಕ್ಕೆ.. ತುಂಟ ಪೊರಾಗುತ್ತಾ ಇದ್ದಾನೆ.. ಮೂರೂವರೆ ತಿಂಗಳಿಗೆ ಬೋರಲು ಬಿದ್ದಿದ್ದಾನೆ,,, ಈಗ 5 ತಿಂಗಳು...ಮೊಣಕಾಲ ಮೇಲೆ.. ನಿಲ್ಲುವ ಯತ್ನದಲ್ಲಿ ಇದ್ದಾನೆ....ಅಂಬೆಗಾಲು ಇಡಲು ಶುರು ಮಾಡಿದರೆ ನನಗೆ ಅವನನ್ನು ಹಿಡಿಯುವ ಮಹಾ ಕೆಲಸವೇ ದಿನವೆಲ್ಲಾ...ಕಪ್ಪೆಯನ್ನು ತಕ್ಕಡಿಯಲ್ಲಿಟ್ಟಂತೆ...!
ನಿಮ್ಮೆಲ್ಲರಿಗಾಗಿ ಅವನ ಕ್ಯೂಟ್ ಕ್ಯೂಟೀ ಕ್ಯೂಟೀ ಪಿಕ್--
ಉತ್ಕರ್ಶ್ ಕೀರ್ತಿ |
Subscribe to:
Posts (Atom)