Monday 1 February 2016

ತೂಕ ಇಳಿಸೊದು ಹೇಗೆ.....ಅನ್ನೋ ಸಮಸ್ಯೆ ತಾಯಂದಿರ ಪ್ರಶ್ನೆ ಹಾಗೂ ಚಿಂತೆ...ಈಗ ನಾನು ಸಹ ಅದೇ ದೋಣಿಯ ಪಯಣಿಗಳು....;-(



ಹೌದು....ತಾಯಿ ಆಗಿರುವ ಸಂತೋಷ ಒಂದು ಕಡೆಯಾದರೆ...ಮತ್ತೊಂದು ಕಡೆ...ಏರಿರೋ ಇಷ್ಟು ತೂಕನ ಹೇಗಪ್ಪಾ ಕರಗಿಸೋದು ಅನ್ನೋ ಚಿಂತೆ ಇನ್ನೊಂದೆಡೆ.


ನಾನಂತೂ ನನ್ನ ಹಳೇ ಫೋಟೋಸ್ ನೋಡಿ ನೋಡಿ ಯಾವಾಗಪ್ಪಾ ಮತ್ತೆ ನಾನು ಇಷ್ಟು ಸಣ್ಣ ಹಾಗೂ ಸ್ಮಾರ್ಟ್ ಆಗಿ ಕಾಣಿಸೋದು ಅನ್ನೋ ಚಿಂತೇಲಿ ಮಾಡೋ ಊಟ ನಾ ಕಡಿಮೆ ಮಾಡಿದ್ರೆ... ಅಮ್ಮನ ಕೈಲಿ ಬೈಸಿಕೊಳ್ಳಬೇಕಾಗುತ್ತೆ.

ಆದ್ರೂ...ಅಮ್ಮ ಪ್ರತೀ ಸಲ ಸಾರಿಗೆ ಒಗ್ಗರಣೆ ಹಾಕುವಾಗ....."ಅಮ್ಮಾ...ಪ್ಲೀಸ್ ತುಪ್ಪ ಕಮ್ಮಿ ಹಾಕಮ್ಮ" ಅನ್ನೋದನ್ನು ಮರೆಯೋಲ್ಲ. ಅವಾಗಲೂ ಅಮ್ಮ " ಬಾಣಂತಿ ದೇಹಕ್ಕೆ ತುಪ್ಪ ತುಂಬಾ ಅವಶ್ಯ...ಬಾಯ್ ಮುಚ್ಚಿ ಕೊಟ್ಟದ್ದಣ್ಣ ತಿನ್ನು..." ಅನ್ನೋ ಬೈಗುಳ.

ಇನ್ನ ಎದ್ದು ಒಡಾಡುವ ಹಾಗೂ ಇಲ್ಲ, "ಜಾಸ್ತಿ ಓಡಾಡ ಬೇಡ, ಹೊರಗಡೆ ಹೋಗ್ಬೇಡ, ಜಾಸ್ತಿ ಕೂತಿರಬೇಡ, ಚೆನ್ನಾಗಿ ನಿದ್ದೆ ಮಾಡು" ಅನ್ನೋ ಅಮ್ಮನ ಮಾತುಗಳು...ಹೋದಲ್ಲೆಲ್ಲ ಹಿಂಬಾಲಿಸುತ್ತಲೇ ಇರುತ್ತೆ ...ಇನ್ನೂ ನಾನು ವಾಕಿಂಗ್ ಮಾಡಿದ ಹಾಗೆ... ವಾಕಿಂಗ್ ಮಾಡದೆ ಹೇಗೆ ನನ್ನ ತೂಕ ಇಳಿಸೋ... ಮೊದಲ ಪ್ರಯತ್ನಕ್ಕೆ...ಕಲ್ಲು:-(

ಮತ್ತೆ, ಮೇಲಿಂದ ಮೇಲೆ...ತುಪ್ಪ ಹಾಕಿದ ತಿಂಡಿಗಳಾದ... ಮೆಂತ್ಯ ದೋಸೆ, ಅಂಟಿನ ಉಂಡೆ.... ಇತ್ಯಾದಿ..ಐದು ತಿಂಗಳು ತಿಂದು ಸಾಕಾಗಿದೆ...

ಹೌದು... ನಿಂಗ್ಯಾರಿಗಾದ್ರೂ ಅನ್ನಿಸಿದ್ದು ಇದೆಯಾ... ನಂಗಂತೂ ಅನ್ನಿಸಿದ್ದಿದೆ, ಬೇರೆಯವರು ಎಷ್ಟು ತಿಂದರೂ.. ದಪ್ಪನೆ ಆಗೋಲ್ಲ... ನಾನಂತೂ ದಿನಕ್ಕೆ 3 ಘಂಟೆ ವರ್ಕೌಟ್ ಮಾಡಿದ್ರು.. ಸಣ್ಣ ಆಗಲು ತುಂಬಾನೇ ದಿನ ಬೇಕು....:-(

ಈಗಂತೂ... ಮಗುನಾ ನಾನೊಬ್ಬಳೇ ನೋಡಿ ಕೊಳ್ತಿರೋದು.. ದಿನ ದಿನಕ್ಕೆ.. ತುಂಟ ಪೊರಾಗುತ್ತಾ ಇದ್ದಾನೆ.. ಮೂರೂವರೆ ತಿಂಗಳಿಗೆ ಬೋರಲು ಬಿದ್ದಿದ್ದಾನೆ,,, ಈಗ 5 ತಿಂಗಳು...ಮೊಣಕಾಲ ಮೇಲೆ.. ನಿಲ್ಲುವ ಯತ್ನದಲ್ಲಿ ಇದ್ದಾನೆ....ಅಂಬೆಗಾಲು ಇಡಲು ಶುರು ಮಾಡಿದರೆ ನನಗೆ ಅವನನ್ನು ಹಿಡಿಯುವ ಮಹಾ ಕೆಲಸವೇ ದಿನವೆಲ್ಲಾ...ಕಪ್ಪೆಯನ್ನು ತಕ್ಕಡಿಯಲ್ಲಿಟ್ಟಂತೆ...!

ನಿಮ್ಮೆಲ್ಲರಿಗಾಗಿ ಅವನ ಕ್ಯೂಟ್ ಕ್ಯೂಟೀ ಕ್ಯೂಟೀ ಪಿಕ್--


ಉತ್ಕರ್ಶ್ ಕೀರ್ತಿ

No comments:

Post a Comment