ಥ್ಯಾಂಕ್ ಯೂ ಫ್ರೆಂಡ್ಸ್, ಎರೆಡು ತಿಂಗಳಿಂದ ಏನೇನೂ ಬರೆಯಲು ಆಗಲಿಲ್ಲ, ಆದರೂ, ನಿಮ್ಮೆಲ್ಲರ ಪ್ರೋತ್ಸಾಹ ಹಾಗೂ ನಿಮ್ಮ ಆತ್ಮೀಯ ಕಾಮೆಂಟ್ ಗಳಿಗೆ ಹೃತ್ಪೂರ್ವಕ ಧನ್ಯವಾದಗಳು.
ನಮ್ಮ ಮುದ್ದಾದ ಮಗ ನಮ್ಮ ಮನೆ ಮನ ತುಂಬಿದ್ದು, ಆಗಸ್ಟ್ 8 ರಂದು, ನಮಗೆ ಶುಭ ಹಾರೈಸಿದ... ಹಾಗೂ ಸದಾ ಸಹಾಯ ಮಾಡಲು ಸಿದ್ದರಾಗಿದ್ದ Shaolin wushu cultural centre ಕುಟುಂಬದ ಪ್ರತೀ ಸದಸ್ಯರಿಗೂ ನನ್ನ ಹಾಗೂ ಕೀರ್ತಿಯ ಹೃತ್ಪೂರ್ವಕ ಧನ್ಯವಾದಗಳು.
ನಮ್ಮ ಮುದ್ದು ಕುವರನ ಹೆಸರು ಉತ್ಕರ್ಶ್ ಕೀರ್ತಿ...ನಾನವನಿಗೆ Olympian baby ಅಂತಾನೆ ಕರೆಯೋದು ಯಾಕಂದ್ರೆ ಅವನು ಹುಟ್ಟಿರೋದು... 5 ವರ್ಷದ ಹಿಂದೆ ಬೀಜಿಂಗ್ ನಲ್ಲಿ ಒಲಿಂಪಿಕ್ ಶುರುವಾದ ದಿನ.(8-8-2008)
ಚೀನಾದಲ್ಲಿ, ತಾಯಂದಿರು.. ಈ ದಿನಕ್ಕೋಸ್ಕರ ತುಂಬಾ ದಿನಗಳ ಹಿಂದೆಯೇ .caesarean ಮಾಡಿಸಿಕೊಳ್ಳಲು ಡಾಕ್ಟರ್ ಅಪಾಯಂಟ್‌ಮೆಂಟ್ ತೆಗೆದು ಕೊಂಡಿದ್ದರಂತೆ...!ಅವರಿಗೆಲ್ಲ ಇದು ತುಂಬಾನೇ auspicious day.
ಎರೆಡು ತಿಂಗಳಿಂದ ಈ ತುಂಟನನ್ನ ಸಂಬಾಲಿಸುವುದರಲ್ಲಿ ಸಮಯ ಕಳೆದದ್ದೇ ತಿಳಿಯಲಿಲ್ಲ. ಅವನ ಮಲಗು , ಆಟ , ಊಟಗಳ.. ದಿನಚರಿ ಇನ್ನೂ ಒಂದು ಹಂತಕ್ಕೆ ಬಂದಿಲ್ಲ..ಹೀಗಾಗಿ... ನನಗೆ ಬರೆಯಲು ಬಿಡುವಾಗಲಿಲ್ಲ.
ಇನ್ನಾದರೂ...ಸ್ವಲ್ಪ ಬಿಡುವು ಮಾಡಿಕೊಂಡು ಬರೆಯುವ ಪ್ರಯತ್ನದಲ್ಲಿ ನನ್ನ ಮೊದಲನೇ ಲೇಖನ ಇದು. ನಿಮ್ಮೆಲ್ಲರ ಶುಭ ಹಾರೈಕೆ ನಮ್ಮೊಟ್ಟಿಗಿ ರಲಿ . ನಿಮ್ಮ ಚೆಂದದ ಸಲಹೆಗಳಿಗೆ ನನ್ನ ಧನ್ಯವಾದಗಳು.
ನಿಮಗೆ ಅಭಿನಂದನೆಗಳು ಮತ್ತು ಶುಭ ಹಾರೈಕೆಗಳು. ಹೀಗಿದ್ದಾಗೂ ಸಮಯ ಮಾಡಿಕೊಂಡು ಬರೆದಿದ್ದು ತೋರಿಸುತ್ತದೆ ನಿಮಗೆ ಬರವಣಿಗೆ ಎಷ್ಟು ಇಷ್ಟ ಮತ್ತು ಮುಖ್ಯ ಎಂದು. ಮುಂದುವರೆಯಲಿ.
ReplyDeleteThank u so much Mahesh sir...:-)
Delete