Wednesday, 24 June 2015
"ಹಲೋ... ಹೇಳಮ್ಮಾ" ಅಂದೆ.
ಮೆಜೆಸ್ಟಿಕ್ ನಲ್ಲಿ ಇಳಿದಾಗ... ಜನ ಜುಂಗುಳಿ ನೋಡಿ..... ಒಮ್ಮೆ ಭಯವಾಯ್ತು.. ಬಸ್ ಬುಕ್ ಮಾಡಿಲ್ಲ ಏನೂ ಇಲ್ಲ... ಬುಸ್ಸು ಸಿಗುತ್ತೊ ಇಲ್ಲವೋ ಅಂತ... ಅದೂ... back to back ನಾಲ್ಕು ದಿನ ರಜಾ... ಎಲ್ಲರೂ ಊರಿಗೋಗೋ ಆತುರ. ಅಂತೂ ಇಂತೂ ಹೇಗೋ ರಾಜಹಂಸ ದಲ್ಲಿ ಒಂದು ಸೀಟ್ ಸಿಕ್ಕಿ ಹತ್ತಿ ಕೂತದ್ದಾಯ್ತು, ಕೊನೆ ಸೀಟ್ ಬೇರೆ.. ಇನ್ನೂ ನಿದ್ದೆ ಮಾಡಿದ ಹಾಗೆ ಇದೆ....!.
ಒಮ್ಮೆ ನೀಲಾ, ಸುಮಾರು 12 ವರ್ಷದವಳಿರ ಬಹುದು,ಹಸ್ಲರಾ ಕಾನನ ಮಗ ಸಣ್ಣನ, ಜೊತೆ ಆಡುತ್ತಿದ್ದಳು, ಸಣ್ಣಾನು ನೀಲಾಳ ವಯಸ್ಸಿನವನೇ, ಅಡಿಕೆ ಗರಿಯ ಟೋಪಿ ಮಾಡುವುದನ್ನು ಹೇಳಿಕೊಡುತ್ತಿದ್ದ... ದೂರದಿಂದಲೇ.
ಮನೆಯಲ್ಲಿ, ಮಂಜಯ್ಯ... ಕತ್ತಲಾಗಿ ಇನ್ನೂ ಮಗಳು ಬರಲಿಲ್ಲವೆಂದು.. ಟಾರ್ಚ್ ಹಿಡಿದು ತಾವೇ ಕರೆದು ಬರಲು ಹೊರಟಿದ್ದರು... ದಾರಿಯಲ್ಲಿ ಒಬ್ಬರಿಗೊಬ್ಬರು ಮಾತಾಡಿಕೊಂಡು ಬರುತ್ತಿರುವ ಮಗಳು ಮತ್ತು ಪಕ್ಕದ ತೋಟದ ಹಸ್ಲರ ಅಣ್ಣಯ್ಯ ನನ್ನು ಕಂಡು.. ದೂರ್ವಾಸರಾಗಿದ್ದರು. ಎದುರಿಗೆ ಅಪ್ಪನನ್ನು ಕಂಡು ...ಸ್ವಭಾವತ ಭಯಸ್ಥೆಯಾದ ಶೀಲಾ... ಗಾಬರಿಯಿಂದ... "ಅಪ್ಪ...ಅದೂ ಅದೂ... " ಅಂದಿದ್ದಳು.
"ಇಲ್ಲಪ್ಪ... ಕತ್ತಲಗಿತ್ತು ಅಂತ... ಮನೆಯವರೆಗೂ ಬಿಡ್ತೇನೆ ಅಂತ ಬಂದ ಅಷ್ಟೇ...ಅವನು... ಇದುವರೆಗೂ... ನನ್ನೊಟ್ಟಿಗೆ ಮಾತಾಡಿದ್ದೆ ಇಲ್ಲ....."ಎಂದು ಹೇಳ ಹೊರಟವಳನ್ನು ತಡೆದು "ನೀ ಸುಮ್ನಿರು ಕೂಸೇ... ಇವೆಲ್ಲಾ ಹೀಂಗೆ ಚಿಗರ ಕಂಡು... ಒಂದಿನ ನಮ್ಮ ಬ್ರಾಹ್ಮಣರ ಹೆಣ್ ಮಕ್ಕಳ ತಲೆ ಕೆಡಸಿ... ಮದುವೆ ಆಗೋಕ್ಕು ಹೇಸವೊಲ್ಳ... ಕಳ್ಳ ಜಾತಿ ನನ್ಮಕ್ಕಳು" ಎಂದು ಬುಸುಗುಟ್ಟಿದ್ದರು.
ಶೀಲಾಗೆ ಅಪ್ಪನ ಬಗ್ಗೆ ಅಸಹ್ಯ...ಹೇಸಿಗೆ... ಬೇಸರ... ಅವರತ್ತ ಸುಳಿಯುವುದು ಇಲ್ಲ.... BSc ಮುಗಿಸಿ... ಬೆಂಗಳೂರಿನಲ್ಲಿ, ಕೆಲಸದಲ್ಲಿದ್ದಾಳೆ. ತಾಯಿಗಾಗಿ ಊರಿಗೋಗಲು ಮನ ಹಂಬಲಿಸಿದರೂ.. ಅಪ್ಪನ ಮುಖ ನೋಡಲು.. ಮನ ಹಿಂಜರಿಯುತ್ತದೆ...
"ಕೂಸೇ..." ಅಪ್ಪನ ಧನಿ... ಮಫ್ಲೆರ್ ಸುತ್ತಿ ಸ್ವೆಟರ್ ತೊಟ್ಟ ಅಪ್ಪ, ಆ ಡಿಸೆಂಬರ್ ಚಳಿಲಿ ನಡುಗುತ್ತಾ ನಿಂತಿದ್ದರು.. ಆ ಕನ್ನಡಕದ ಹಿಂದಿದ್ದ ಕಂಗಳಲ್ಲಿ ಪ್ರೀತಿಯ ಸೆಲೆ...ಮತ್ತಷ್ಟು ದೇಹ ಬಾಗಿತ್ತು.. ಜರ್ಜರಿತವಾಗಿದ್ದರು.
"ಬಂದ್ಯಾ ಕೂಸೇ.. ಏನೂ ತ್ರಾಸಾಗಿಲ್ಲ ಅಲ್ಲ.. ನಿಮ್ಮವ್ವ ಹೇಳಿದ್ಲು.. ನೀ ಬೆಳಗ್ಗೇನೇ ಬರ್ತಿ ಅಂತ.. ಅದಕ್ಕೆ ಹೊಂಟು ಬಂದೆ" ತಲೆ ನೇವರಿಸಿದ ಅಪ್ಪನತ್ತ.. ಇಷ್ಟು ದಿನ ತೋರದ ತನ್ನ ಪ್ರೀತಿಯ ನೋಟ ಬೀರಿದಳು ಶೀಲಾ....
Monday, 22 June 2015
ಬಾಲ್ಯದ ಪ್ರಿಯಾ ಗೆಳತಿ.... ಎಲ್ಲಿರುವೇ...
ನಾನು ಪ್ರೈಮರೀ ಸ್ಕೂಲ್ನಲ್ಲಿ ದ್ದಾಗ, ನಾಲ್ಕನೇ ತರಗತಿಗೆ ರಶ್ಮಿ ಅನ್ನೋ ಹುಡುಗಿ ಹೊಸ್ದಾಗಿ ಸೇರಿದ್ಲು ಆ ವರ್ಷ, ರಶ್ಮಿ ಯಾವ ಊರಿಂದ ಬಂದಿದ್ದಳು ಅಂತ ನನಗೆ ಸರಿಯಾಗಿ ನೆನಪಿಲ್ಲ. ಆದರೆ, ಹೊಸದಾಗಿ ಸೇರಿದೋಳ ಜೊತೆ ನಾವೆಲ್ಲ.. ನಾ ಮುಂದು ನೀ ಮುಂದು ಅಂತ ಅವಳ ಜೊತೆ ಮಾತಾಡೋಕೆ ಮುಗಿಬಿದ್ದಿದ್ವಿ ... ಅವಳೂ.. ತಾನೂ ಬೇರೆ ಊರಿಂದ ಬಂದಿರೋ ಗತ್ತನ್ನ.. ನಮ್ಮತ್ರ ಚೆನ್ನಾಗೇ ತೋರಿಸಿದ್ಲು.ನಂತರದ ದಿನಗಳಲ್ಲಿ... ರಶ್ಮಿ ಮತ್ತು ನಮ್ಮ ಗೆಳೆತನ ಚೆನ್ನಾಗೇ ಬೆಳೀತು. ಅವಳೂ ಓದುವುದರಲ್ಲಿ ನಮ್ಮ ಸರಿ ಸಮವೇ...
ಅವಳ ಅಪ್ಪ.. AEO (assistant educational officer) ಆಗಿದ್ದರು.. ಹಾಗಾಗಿ ಅವಳೂ ಸ್ವಲ್ಪ ನಮಗಿಂತ ಮೇಲೆ ಅನ್ನೋತರ ಟೀಚರ್ಸ್ ಸಹ ನಡಿಸ್ಕೊಲ್ತ ಇದ್ದದರಿಂದ... ಅವಳಿಗೂ ಸ್ವಲ್ಪ ಜಂಬ ಇದ್ದೇ ಇತ್ತು. ಆದರೆ.. ನನ್ನ ಮತ್ತು ಅವಳ ಸ್ನೇಹಾ..ತುಂಬಾನೇ ಚೆನ್ನಾಗಿತ್ತು. ನಾನು ಸಂಗೀತ ಕಲಿಯುತ್ತಿದ್ದ ದಿನಗಳು, ಅವಳಿಗೆ ದೈವದತ್ತವಾಗಿ ಬಂದ ಕಂಠ.. ಎಲ್ಲ ಸ್ಕೂಲ್ ಪ್ರೋಗ್ರಾಮ್ ನಲ್ಲೂ ಚೆನ್ನಾಗೇ ಇಬ್ಬರು ಭಾಗವಹಿಸ್ತ ಇದ್ವಿ..
ಶಾಲೆ ಇಂದ ನಮ್ಮ ಮನೆ ದೂರ ವಿದ್ದದ್ದರಿಂದ ನಾನು ಊಟದ ಡಬ್ಬಿ ತೆಗೆದು ಕೊಂಡೋಗುತ್ತಿದ್ದೆ, ರಶ್ಮಿಯ ಮನೆ ಶಾಲೆಗತ್ಟಿರಾ ಲಂಚ್ ಬ್ರೇಕ್ ನಲ್ಲಿ.. ನನ್ನನ್ನು ಬಿಡದೆ ತನ್ನ ಮನೆಗೆ ಕರೆದುಕೊಂಡು ಹೋಗುತ್ತಿದ್ದಳು.. ಹಾಗಾಗಿ ನನಗೆ ತುಂಬಾನೇ ಪರಿಚಯ.. ಅವಳ ಮನೆಯವರೆಲ್ಲಾ.
ಅವಳಿಗೆ 3 ಅಕ್ಕಂದಿರು, ಒಬ್ಬಳು ತಂಗಿ, ಒಬ್ಬ ತಮ್ಮ,..6 ಜನ ಮಕ್ಕಳ ದೊಡ್ಡ ಕುಟುಂಬ.. ಕೆಲವೊಮ್ಮೆ ನನಗೆ ಅವರ ಮನೆಯವರ ಹೆಸರುಗಳೇ ನೆನಪಿರುತ್ತಿರಲಿಲ್ಲ.. ಇಲ್ಲ ಕನ್ಫ್ಯೂಷನ್ :-(
ಶನಿವಾರ .. ಭಾನುವಾರಗಳಂದು ಅವಳು ನಮ್ಮ ಮನೆಗೆ ಬರುತ್ತಿದ್ದಳು.. ನಮ್ಮದು ತುಂಬಾ ದೊಡ್ಡ ಕಾಂಪೌಂಡ್.... ಎಷ್ಟೊಂದು ಮರ ಗಿಡ.. ಆಡಲು ಜೋಕಾಲಿ.. ಹಾಗಾಗಿ (ಈಗ ಅದೆಲ್ಲ ಇಲ್ಲ... ಬಾಡಿಗೆ ಮನೆಗಳನ್ನು ಕಟ್ಟಿಸಿದೇವೆ ಖಾಲಿ ಜಗದಲ್ಲೆಲ್ಲ....). ಆರನೇ ತರಗತಿಯವರೆಗೂ ಜೊತೆಯಲ್ಲೇ ಓದಿದ್ದೆವು, ಅವಳ ತಂದೆಗೆ ವರ್ಗ ವಾದದ್ದರಿಂದ ಅವಳು ದೊಡ್ಡಬಳ್ಳಾಪುರಕ್ಕೆ ಹೊರಟು ಹೋದಳು.. ನಂತರವೂ.. ನಾವು ಪತ್ರ ದ ಮೂಲಕ ಟಚ್ ನಲ್ಲಿದ್ದೆವು.. ಸುಮಾರು ಪತ್ರಗಳು,,
ಹತ್ತನೇ ತರಗತಿವರೆಗೆ ಸಾಲು ಸಾಲು ಪತ್ರ .. ತಿಂಗಳಿಗೊಮ್ಮೆ ಎಂಬಂತೆ, ಅವರ ತಂದೆಗೆ ಮತ್ತೆ ವರ್ಗವಾಗಿದ್ದರಿಂದ.. ಅವಳು ಮತ್ತೆ ಬೇರೆ ಉರಿಗೆ ಹೋದ ಮೇಲೆ.. ನಮ್ಮ ಗೆಳೆತನ ಕೊನೆಗೊಂಡಿತ್ತು, ಅನ್ನೋದಕ್ಕಿಂತ.. ನಮ್ಮ ಪತ್ರ ವ್ಯವಹಾರ ನಿಂತಿತ್ತು.
ನನಗವಳ ಬದಲಾದ ವಿಳಾಸ ತಿಳಿದಿರಲಿಲ್ಲ. ನನ್ನ PUC ಮುಗಿದ ಸಮಯದಲ್ಲಿ ಒಮ್ಮೆ ಪತ್ರ ಬರೆದಿದ್ದಳು... ಆಗ ನಮ್ಮ ಮನೆಗೆ ಲ್ಯಾಂಡ್ ಲೈನ್ ಫೋನ್ ಬಂದಿತ್ತು, ನಂಬರ್ ಕೊಟ್ಟು ಫೋನ್ ಮಾಡಲು ಬರೆದಿದ್ದೆ. ಒಮ್ಮೆ ಫೋನ್ ಸಹಾ ಮಾಡಿದ್ದಳು ಅಮ್ಮಣ್ಣಿ ಕಾಲೇಜ್/' ಮಹಾರಾಣಿ ಕಾಲೇಜ್ ನಲ್ಲಿ BSc ಮಾಡುತ್ತಿರುವುದಾಗಿ ಹೇಳಿದ್ದಳು.. ನಂತರ ಪತ್ರ ವ್ಯವಹಾರವೂ ಇಲ್ಲ . ಫೋನು ಇಲ್ಲ...
ರಶ್ಮಿ, ಇಂದ್ಯಾಕೋ ತುಂಬಾ ನೆನಪಾಗಿದ್ದಾಳೇ....ಅವಳನ್ನು ಹುಡುಕುವ ಎಲ್ಲಾ ಪ್ರಯತ್ನವೂ ಮಾಡಿದೆ..through social networking...ಪ್ಚ್...ಪ್ಚ್... nope... I couldn't find her.. ರಶ್ಮಿ ಎಲ್ಲೇ ಇದ್ದರೂ ಚೆನ್ನಾಗಿರಲಿ ಅನ್ನೋ ಹಾರೈಕೆಯೊಂದಿಗೆ... ಮತ್ತು ಈ ಬ್ಲೋಗ್ ಮೂಲಕವಾದ್ರೂ ಸಿಗಲಿನ್ನೊ ಆ ಸಣ್ಣ ಆಸೆಯೊಂದಿಗೆ.. ಈ ಬ್ಲಾಗ್ ನಾ, ಈ ಪೋಸ್ಟ್ ...:-)
Saturday, 13 June 2015
ಅಣ್ಣನ ಕೈಲಿ ತಿಂದ ಮೊದಲ ಹಾಗೂ ಕೊನೆ ಏಟು....!...!!!
ನಾನಾಗ ನಾಲ್ಕೂವರೆ ಇಲ್ಲ ಐದು ವರ್ಷದವಳಿರಬಹುದು, ಮನೇಲಿ ಅಮ್ಮನ ಜೊತೆ ಒಬ್ಬಳೇ, ಅಮ್ಮ ತನ್ನ ಪಾಡಿಗೆ ತಾನು ಕೆಲಸ ಮಾಡಿಕೊಂಡಿರೋರು, ನಾನು ನನ್ನ ಬೊಂಬೆಗಳ ಜೊತೆ, ಅಕ್ಕನ್ದಿರಿಬ್ಬರು ಸ್ಕೂಲ್ ಗೆ ಹೋಗಿರ್ತ ಇದ್ದರು. ನನಗೂ ಸ್ಚೂಲ್‌ಗೆ ಹೋಗ್ಬೇಕು ಅಂತ ತುಂಬಾ ಆಸೆ ಇತ್ತು ಆಗ, ಆದರೆ ಇನ್ನೂ ಚಿಕ್ಕವಳು ಅಂತ ಸ್ಕೂಲ್ ಗೆ ಸೇರಿಸಿರಲಿಲ್ಲ. 6 ವರ್ಷಕ್ಕೆ ಒಂದೇ ಸಲ ಒಂದನೇ ಕ್ಲಾಸ್ ಗೆ ಅಡ್ಮಿಶನ್ ಮಾಡಿಸೋಣ ಅಂತ.
ಸರಿ, ಅವತ್ತು ಅಷ್ಟೇ ಎಂದಿನಂತೆ ಅಣ್ಣ ನೈಟ್ ಶಿಫ್ಟ್ ಮಾಡಿ ಬಂದು ಮಲಗೀದಾರೆ, ಅಮ್ಮ ಅಕ್ಕನ್ದಿರಿಬ್ಬರನ್ನು ಸ್ಕೂಲ್ ಗೆ ಕಳಿಸಿ, ಮುಂದಿನ ಬಾಗಿಲು ಹಾಕಿ, ಮನೆ ಕೆಲಸ ಎಲ್ಲಾ ಮಾಡಿ, ಬಟ್ಟೆ ಒಗಿಲಿಕ್ಕೆ ಅಂತ ಹಿತ್ತಿಲ ಕಡೆ ಹೋಗಿದಾರೆ. ನಾನು, ಮನೇಲೇ ಚೇರ್ ಮೇಲೆ, ಗೊಂಬೆ ಗಳ ಜೊತೆ ಆಟ ಆಡ್ತಾ ಇದೀನಿ, ಗೊತ್ತು ಶಬ್ಧ ಮಾಡ್ಬಾರದು ಅಂತ.. ಯಾಕಂದ್ರೆ ನಮ್ಮ ಅಣ್ಣಾ(ಅಪ್ಪನನ್ನ, ನಾವು ಅಣ್ಣಾ ಅಂತಾನೆ ಕರೆಯೋದು) ತುಂಬಾನೇ ಸ್ಟ್ರಿಕ್ಟ್, ಅವರು ನಿದ್ದೆ ಮಾಡುವಾಗ ಒಂದು ಚೂರು ಶಬ್ದ ವಾಗಬಾರದು. ನಾವು ಮೂರು ಜನ ಅಕ್ಕ ತಂಗೀರು ಮನೇಲಿದ್ದರೂ, ಅಣ್ಣ ಮಲಗಿದ್ದರೇ, ಒಂದು ಚೂರು ಗಲಾಟೆ ಮಾಡದೆ ಆಡ್ತಿದ್ವಿ.ನನ್ನ ದೊಡ್ಡಕ್ಕ, ತುಂಬಾನೇ ಪ್ರೀತಿ ನನ್ನ ಕಂಡರೆ, ತಾನೇ ನನಗೆ ಕಥೆ ಹೇಳಿ ಮಲಗಿಸೋದು, ಆಟ ಆಡಿಸೋದು....ಎಲ್ಲಾ.
ಸರಿ, ನಾನು ಆಡ್ತಾ ಇದೀನಿ , ಅಂತ ಅಮ್ಮ ನೆಮ್ಮದಿಯಾಗಿ ಬಟ್ಟೆ ಓಗಿತಾ ಇದಾರೆ. ನಾನು ಎಷ್ಟೊತ್ತು ಅಂತ ಆಡಲಿ, ಬೇಜಾರಾಯ್ತು, ಚೇರ್ ಇದ್ದದ್ದು ಮೇನ್ ಡೋರ್ ಪಕ್ಕದ ಕಿಡಕಿ ಅತ್ರ, ಸರಿ, ಚೇರ್ ಮೇಲೆ ನಿಂತು ಹೋಗರನ್ನು ಬರೋರನ್ನು ನೋಡ್ತಾ ನಿಂತುಕೊಂಡೆ, ಅಷ್ಟರಲ್ಲಿ, ನಮ್ಮ ಮನೆ ಪಕ್ಕದಲ್ಲಿರೋ, ಮಹಾಲಕ್ಷ್ಮಿ ಸ್ಚೂಲಿಗೆ ಹೋಗ್ತಾಇರೋದು ಕಾಣಿಸ್ತು, ನನಗೂ ಆಕ್ಷಣಾ ತುಂಬಾನೇ ಆಸೆ ಆಗೋಯ್ತು,"ಮಾಲಚ್ಚಕ್ಕ... ಮಾಲಚ್ಚಕ್ಕ" ಕರೆದೆ ಮೆಲ್ಲಗೆ, ಅಣ್ಣನ ರೂಮಲ್ಲಿ ಫ್ಯಾನ್ ಜೋರಾಗಿ ಇತ್ತಾದರಿಂದ, ಅವರಿಗೆ ಕೇಳಿಸಿರೋ ಸಾದ್ಯತೆ ಇಲ್ಲ. ಸರಿ.. ಕಿಡಕಿ ಅತ್ರ ಬಂದ ಮಾಲಚ್ಚಕ್ಕಾ, "ಏನು, ಪುಟ್ಟಿ' ಅಂದ್ಲು, "ನಾನು ಸ್ಕೂಲ್ ಗೆ ಬರ್ತೀನಿ" ಅಂದೆ. ಅದೇನಂದಾಳೋ.. ನನಗೆ ಸರಿಯಾಗಿ ನೆನಪಿಲ್ಲ. ಆದ್ರೆ, ನಾನು ಚೇರ್ ಸಹಾಯದಿಂದ ಮೇನ್ ಡೋರ ನಾ ಮೇಲಿನ ಬೋಲ್ಟ್ ತೆಗೆದು, ಚಪ್ಪಲಿ ಮೆಟ್ಟಿ ಹೊರಟೆ ಬಿಟ್ಟೆ ಅವಳ ಜೊತೆ. ನನಗೇನು ಗೊತ್ತಿತ್ತಾಗ, ಸ್ಕೂಲ್ ಗೆ ಸೇರಿದೋರು ಮಾತ್ರ ಹೋಗ ಬೇಕು.. ಇಲ್ಲಾಂದ್ರೆ ಮನೆಲೇ ಇರಬೇಕು ಅಂತ. ಆಗೆಲ್ಲ ಸರ್ಕಾರಿ ಸ್ಚೂಲ್‌ನಲ್ಲೇ ನಮ್ಮ ವಿದ್ಯಾಬ್ಯಾಸ ನಡೆದಿದ್ದು. ನಮ್ಮ ಅಕ್ಕಂದಿರಿದ್ದ ಸ್ಚೂಲೆ ಮಾಲಚ್ಚಕ್ಕನು ಓದ್ತಾ ಇದ್ದದ್ದು, ಆದ್ರೆ ಅವಳು ಏಳನೇ ಕ್ಲಾಸ್. ನಮ್ಮದೊಡ್ಡಕ್ಕ 5ನೇ ಕ್ಲಾಸ್, ಸಣ್ಣಕ್ಕ ಮೂರನೇ ಕ್ಲಾಸ್.ಸರಿ ನಾನು ಮಾಲಚ್ಚಕ್ಕ ನ ಕೈ ಹಿಡಿದು ನಡೆಯಲಾರಂಬಿಸಿದೆ.. ಸ್ಕೂಲ್ ಮನೆಯಿಂದ ತುಂಬಾನೇ ದೂರ. ಮಾಲಚ್ಚಕ್ಕ ನನ್ನ ಸ್ವಲ್ಪ ದೂರ ಎತ್ತಿಕೊಂಡ್ಲು ಸೊಂಟದ ಮೇಲೆ. ಸರಿ ಸ್ಕೂಲ್ ಗೆ ಬಂದಮೇಲೆ, ಅವಳು ತನ್ನ ಕ್ಲಾಸ್ ರೂಮಿಗೊಗೋಕಿಂತ ಮುಂಚೆ,"ಇದು, ನಿಮ್ಮ ದೊಡ್ಡಕ್ಕನ ಕ್ಲಾಸ್ ರೂಮ್, ಇದು ನಿಮ್ಮ ಸಣ್ಣಕ್ಕನ ಕ್ಲಾಸ್ ರೂಮ್ "ಅಂತ ದೂರದಿಂದಲೇ ತೋರಿಸಿದ್ಲು, ಸರಿ ಆಮೇಲೆ ಅವಳ ಕ್ಲಾಸ್ ಗೆ ಅವಳು ಹೋದ್ಲು. ನಾನು ಅಲ್ಲೇ ಮೈದಾನದಲ್ಲಿ ಆಡ್ತಾ ಇದ್ದ ಮಕ್ಕಳ ಜೊತೆ ಆಡೋದಕ್ಕೆ ಶುರು ಮಾಡ್ದೆ, ಆ ಮಕ್ಕಳು ಒಂದನೇ ಕ್ಲಾಸ್ ಇರಬೇಕು.. ನಾನು ಎಲ್ಲರಿಗಿಂತ ಪುಟ್ಟವಳು, ಚೆನ್ನವಾದ ಫ್ರೋಕ್ ಹಾಕಿದ್ದೆ, ಸೊ.. ಎಲ್ಲರೂ ಸೇರಿ ಆಟ ಆಡೂದ್ವಿ. ಆಮೇಲೆ ಸುಮಾರು ಹೊತ್ತಾದ ಮೇಲೆ ಒಬ್ಬ ಮಾಸ್ಟರ್ ಬಂದು, ಎಲ್ಲರನ್ನೂ ಕ್ಲಾಸ್ ರೂಮಿಗೆ ಕರಕೊಂಡೊದ್ರು, ನಾನೂ ಹೋಗಿ ಅವರ ಜೊತೆಲೇ ಕೂತೆ, ಮಾಸ್ಟರ್ ಬೋರ್ಡ್ ಮೇಲೆ ಆ ಆ ಇ ಈ ಬರೆದು, ನಮ್ಗೆಲ್ಲರಿಗೂ ಬರೆಯೋಕೆ ಹೇಳಿದ್ರು, ಅವರಿಗಿನ್ನೂ ನಾನು ಹೊಸಬಳು ಅಂತ ಗೊತ್ತೇ ಆಗಿರಲಿಲ್ಲ. ಸರಿ ಎಲ್ಲರತ್ರಾನು ಸ್ಲೇಟ್ ಬಳಪ ಇದೆ , ಆದ್ರೆ ನನ್ನ ಹತ್ರ ಇಲ್ಲ. ಆಗ ಆ ಮಾಸ್ಟರ್ ನನ್ನ ಕಡೆ ನೋಡಿದ್ರು. "ಯಾರಿದು ಹೊಸ ಪುಟ್ಟಿ, ಎಲ್ಲಿ ನಿನ್ನ ಸ್ಲಟು ಬಳಪ " ಅಂದ್ರು. ಆ ವಯಸಲ್ಲಿ ಭಯ ಎಲ್ಲಾ ಏನು ಅಂತಾನೆ ಗೊತ್ತಿರಲ್ಲ ಅಲ್ವಾ.. ನಾನು ಹೇಳಿದೆ, "ಇಲ್ಲ ನನ್ಹತ್ರ", ನಿನ್ನ ಹೆಸರೇನು, ಯಾರಾ ಮನೆ ಅಂತ ಎಲ್ಲ ವಿಚಾರಿಸಿಕೊಂಡ್ರು, ನಾನೂ ದೈರ್ಯವಾಗೆ ನನ್ನ ಇಬ್ಬರು ಅಕ್ಕಂದಿರೂ ಇದೆ ಸ್ಚೂಲ್‌ನಲ್ಲಿ ಯಾವ ಯಾವ ಕ್ಲಾಸ್ ನಲ್ಲಿ ಓದೋದು ಅಂತ ಹೇಳಿದೆ. ಅವರು ಆಗ, 'ಹೊ...ಎಲ್ಲೋ ಸ್ಕೂಲ್ ಅಬ್ಯಾಸ ಆಗ್ಲಿ ಅಂತ ನನ್ನ ಕರೆತಂದಿದರೆ' ಅಂತ ಅನ್ಕೊಂಡು, ಮುದ್ದು ಮುದ್ದಾಗಿದ್ದ ನನ್ನ, ಎತ್ತಿ ಮುದ್ದಿಟ್ಟು ಮತ್ತೆ ಕೂಳಿಸಿದ್ರು. ಸರಿ ಆಮೇಲೆ.. ಏನೆಲ್ಲ ಮಾಡಿದೆನೋ ಗೊತ್ತಿಲ್ಲ, ನೆನಪಿಲ್ಲ.
ಇತ್ತ, ಬಟ್ಟೆ ಒಗೆದು ಬಂದ ಅಮ್ಮ, ಮನೆ ಬಾಗಿಲು ತೇಗಿದಿರೋದು ನೋಡಿ.. ಗಾಬರಿಯಾಗಿದರೆ.. ನಾನು ಬೇರೆ ಕಾಣಿಸ್ತಿಲ್ಲ..... ಹೊರಗಡೆ ಎಲ್ಲಾ ಹುಡುಕಿದಾರೆ. ಎಲ್ಲೂ ಇಲ್ಲ.. ಆ ಬೀದಿಲಿರೊ ಎಲ್ಲ ಮನೆಗಳಲ್ಲೂ ಹುಡುಕಿದರೆ... ನಾನು ಸಿಕ್ಕಿಲ್ಲ. ಅಮ್ಮನ ಸ್ಥಾನದಲ್ಲಿ, ಇವತ್ತು ನಾನು ಇದ್ದು ನೆನೆಸಿಕೊಂಡರೆ.. ಅಮ್ಮ ಪಟ್ಟಿರಾ ಬಹುದಾದ.. ಧುಖ, ಸಂಕಟ, ಭಯ ನಿಜಾವಾಗ್ಲೂ ಯಾವ ತಾಯಿಗೂ ಬೇಡ ಅನ್ನಿಸುತ್ತೆ.
ಮನೆ ಬೀಗ ಹಾಕಿಕೊಂಡು ಅಕ್ಕ ಪಕ್ಕದ ಬೀದಿ, ಮೇನ್ ರೂಡ್ ನಾ ಅಂಗಡಿಗಳ ಕಡೆ ಎಲ್ಲ ಕಡೆ ಹುಡುಕಿದರೆ ನಾನು ಸಿಕ್ಕಿಲ್ಲ. ಅಷ್ಟರಲ್ಲಿ ಅದೇ ಉರಲ್ಲಿದ್ದ ನಮ್ಮ ಚಿಕ್ಕಮ್ಮ( ತಾಯಿಯ ದೂರದ ಸಂಭಂದಿ) ಸಿಕ್ಕಿ, ಇಬ್ಬರೂ ಎಲ್ಲಾ ಕಡೆ ಹುಡುಕಿದಾರೆ. ನನ್ನ ಪತ್ತೆ ಇಲ್ಲ. ಸರಿ ಮನೆಗೆ ಬಂದು, ಅಣ್ಣನಿಗೆ ಹೇಳೋಕೆ ಅಮ್ಮನಿಗೆ ಭಯ, ಮೊದಲೇ ಅಣ್ಣಾ,, ದೂರ್ವಾಸ ಮುನಿ ಕೋಪದಲ್ಲಿ, ಹೇಳದೆ ಇರೋಕು ಆಗೋಲ್ಲ. ಸರಿ ಮದ್ಯಾನ್ಹ 3 ಗಂಟೆ ವರ್ಗೂ ಹುಡುಕಿ ಹುಡುಕಿ ಸಾಕಾಗಿ .. ನಿದಾನವಾಗಿ ಅಣ್ಣನನ್ನ ಎಬ್ಬಿಸಿ ಅಮ್ಮ, ಹೇಳಿದರೆ, ಮೊದಲೇ ನಿದ್ದೆ ಮಂಪರಿನಲ್ಲಿದ್ದ ಅಪ್ಪನಿಗೆ ....ಮೊದಲು ಅರ್ಥ ಆಗಿಲ್ಲ... ಆಮೇಲೆ ಮತ್ತೇ.. ಎಲ್ಲಾ ಕಡೆ ಹುಡುಕಾಡಿದರೆ.. ಆದರೆ.. ನಾನು ಸಿಕ್ಕಿಲ್ಲ. ಅಮ್ಮನಂತು ಸಾಯೋಷ್ಟು ಭಯದಿಂದ.. ತತ್ತರಿಸಿದರೆ.. ಇತ್ತ ಕಡೆ.. ಮೊದಮೊದಲು ದೈರ್ಯವಾಗಿದ್ದ ಅಣ್ಣಾ, ನಾನು ಎಲ್ಲೂ ಕಾಣಿಸದೆ ಇದ್ದ ಭಯ ದಲ್ಲಿ, ಅಮ್ಮನಿಗೊಂದು ಕೆನ್ನೆಗೆ ಬಾರಿಸಿದ್ದರು ಸಹ.. 'ಮಗುನಾ ಸರಿಯಾಗಿ ನೋಡ್ಕೊಳೋಕೆ ಆಗೊಲ್ವ ಅಂತ"... ಅಮ್ಮ ಭಯದಲ್ಲಿ ಏನೂ ಮಾಡಲು ತೋಚದೆ ಅಳೋದಕ್ಕೂ ಶಕ್ತಿ ಇಲ್ಲದೆ ಕೂತಿದಾರೆ. ಆಗ ಸ್ವಲ್ಪ ಮಕ್ಕಳ ಕಳ್ಳರು ಜಾಸ್ತಿನೇ.. ನಮ್ಮ ಅಣ್ಣನಿಗೆ ಅದೇ ತಲೇಲಿ ಸುಳಿತ ಇದ್ದದ್ದು.. ಎಲ್ಲೋ.. ನನ್ನ, ಮಕ್ಕಳು ಕಳ್ಳರೇ ಎತ್ತ್ಕೊಂಡೋಗಿ ಬಿಟ್ಟಿದಾರೆ ಅಂತ. ಸರಿ ಪೋಲೀಸ್ ಕಂಪ್ಲೈಯೆಂಟ್ ಕೊಡೋಣ ಅಂತ ಅಣ್ಣಾ ತೀರ್ಮಾನಿಸಿ ರೆಡೀ ಆದ್ರು.
ಇತ್ತ ಸ್ಚೂಲ್‌ನಲ್ಲಿ. ಎಲ್ಲ ಕ್ಲಾಸ್ ಗಳೂ ಮುಗೀತಿದ್ಡಾಗೆ, ನಾನು ನನ್ನ ದೊಡ್ಡಕ್ಕನ ಕ್ಲಾಸ್ ನಾ ಹೊರಗೆ ನಿಂತು ಕಾಯ್ತಿದ್ದೀನಿ(ಮಾಲಚ್ಚಕ್ಕ ತೋರಿಸಿದ್ಲಲ್ಲ), ಅವರ ಕ್ಲಾಸ್ ಬಿಟ್ಟೊಡನೆ... "ಸುನೀತಕ್ಕಾ..." ಅಂತ ಅವಳ ತೆಕ್ಕೆಗೆ ಬಿದ್ದೊ ಳನ್ನ.. ಅಕ್ಕ ಎತ್ತಿ ಮುದ್ದಿಸಿ .. "ನೀನಿಲ್ಲಿ,,,,??? ಅಮ್ಮ ಬಂದಿದರಾ...?" ಅಂತೆಲ್ಲ ಕೇಳಿದಳು. ನಾನು ಇಲ್ಲ ಅಂತ.. ಬೆಳಿಗ್ಗೆ ಇಂದ ಆದದ್ದನ್ನೆಲ್ಲ ಹೇಳಿದೆ ಏನೋ ಮಹಾ ಕಾರ್ಯ ಸಾಧಿಸಿದೋಳ ಹಾಗೆ.....
ಸರಿ ಇಬ್ಬರು ಅಕ್ಕಂದಿರ ಜೊತೆ ನಾನು ಮನೆಗೆ ಹೊರಟೆ. ಸುನೀತಕ್ಕ ನನ್ನ ಉಪ್ಪು ಕೂಸು ಮಾಡಿಕೊಂಡೆ ಎತ್ತಿಕೊಂಡು ಬಂದ್ಲು ಅಷ್ಟೂ ದೂರ ಪಾಪ., ಅವಳಿಗೆ ಮನೆಲಿ ಆಗಿರ್ಬಹುದಾದ ಪಜೀತೀ ಬಗ್ಗೆ ಯಾವುದೇ ಸುಳಿವಿರಲಿಲ್ಲ.ಮನೆ ಹತ್ರಾಗುವಷ್ಟರಲ್ಲಿಬೀ, ಅಣ್ಣಾ ಸೈಕಲ್ನ ಮನೆಯಿಂದ ಆಚೆ ನಿಲ್ಸಿದ್ದರು. ಪೋಲೀಸ್ ಸ್ಟೇಶನ್ ಗೆ ಹೋಗಬೇಕು ಅಂತ, ಸರಿ ಮನೆಗೆ ಹೋದ ಮೇಲೆ, ಅಣ್ಣನಿಗೆ ನನ್ನ ನೋಡಿದ ಸಂತೋಷಕ್ಕಿಂತ.. ಅವರಿಗಾಗಿದ್ದ ಭಯ ಗಾಬರಿನೆ ಒಂದು ಕೈ ಜಾಸ್ತಿ ಇತ್ತು. ಸರಿ.. ಸುನೀತಕ್ಕನ ಕಡೆ ಕೋಪ ಹೋಯ್ತು.. ಅವಳೇ ನನ್ನ ಸ್ಚೂಲ್‌ಗೆ ಕರಕೊಂಡೋಗಿರೋದು ಅಂತ.. ಆದರೆ ಅವಳಿಂದ ಗೊತ್ತಾಗಿದ್ದು ನಾನು ಮಾಲಚ್ಚಕ್ಕನ ಜೊತೆ ಹೋಗಿದ್ದರ ಬಗ್ಗೆ. ಸರಿ ಅದೆಲ್ಲಿತ್ತೊ ಕೋಪ ಅಣ್ಣನಿಗೆ, ಸೈಕಲ್ ಫಾಕ್ಸ್ (ಸೈಕಲ್ ಚಕ್ರದ ಕಂಬಿ), ಕೈಗೆ ತಗೊಂಡೋರೆ... ಬಿಟ್ಟರು ಬಿಟ್ಟ್ರು....ನನಗೆ, ಅಳಲು ಕೂಡ ಶಕ್ತಿ ಇಲ್ಲದೆ ನಿಂತಿದ್ದೆ, ಒಂದಲ್ಲ, ಎರೆಡಲ್ಲಾ.. ಸುಮಾರು ಏಟು,, ಅಡ್ಡ ಬಂದ ಅಮ್ಮನಿಗೂ ಬಿತ್ತು. ಚಿಕ್ಕಮ್ಮ "ಬೇಡ ಭಾವ ಮಗು ಬಿಡಿ ಬಿಡಿ" ಎನ್ನುತಿದ್ದರೂ... ಅಣ್ಣನಿಗೆ ಅರಿವಿಲ್ಲ. ಮೈ ಎಲ್ಲ ಬಾಸುಂಡೆ.. ಕೆಂಪಗಿನ ಬರೆ.. ನನ್ನ ಏಳೇ ಮೈ ಮೇಲೆಲ್ಲಾ... ನನಗೆ ಕೂಯೀ ಮಿಯೀ ಅನ್ನಲು ಬಾಯಿಲ್ಲ. ದೈರ್ಯವಿಲ್ಲ.
ಅಮ್ಮ ನನ್ನ ಎಳೆದುಕೊಂಡೋಗಿ ರೂಮಲ್ಲಿ ತಬ್ಬಿಕೊಂಡು ಗೋಳೋ ಎಂದು ಅಳಲು ಶುರು ಮಾಡಿದ್ರು.. ನನಗೂ ಅಳು.. ಆದ್ರೆ.. ಎಷ್ಟು ನೋವಿತ್ತು.. ಏನಾಗ್ತಾ ಇತ್ತು ಅಂತ ನನಗೆ ನಿಜವಾಗ್ಲೂ ನೆನಪಿಲ್ಲ.. ಸ್ವಲ್ಪ ಹೊತ್ತಿಗೆ ಅಮ್ಮನ ತೊಡೆ ಮೇಲೆ ನಿದ್ದೆ ಮಾಡಿದ್ದೆ. ಅಣ್ಣಾ ... ನೈಟ್ ಶಿಫ್ತಿಗೊಗುವಾಗ್ಲೂ ನಾನು ಮಲಗಿಯೇ ಇದ್ದೇನಂತೆ.. ಮಲಗಿದ್ದವಳನ್ನೇ ನೋಡಿ ಅಣ್ಣಾ... ಮೈಗೆ ಏನಾದ್ರೂ ಹಚ್ಚಲು ಹೇಳಿ ಹೋದ್ರು. ಆ ರಾತ್ರಿ ನನಗೆ ಎದ್ದದ್ದೂ ನೆನಪಿಲ್ಲ, ಊಟ ಮಾಡಿದ್ದು ನೆನಪಿಲ್ಲ.
ಆದ್ರೆ.. ಬೆಳಗ್ಗೆ ಎದ್ದಾಗು.. ಅಣ್ಣಾ ನನ್ನ ಪಕ್ಕದಲ್ಲೇ ಕೂತಿದ್ರು. ನೈಟ್ ಶಿಫ್ತಿಗೆ ಅಂತ ಹೋದ ಅಣ್ಣಾ ನಾ ಕೈಲಿ ಕೆಲಸ ಮಾಡಲಾಗಲಿಲ್ಲವಂತೆ ಅಯ್ಯೋ ಮಗೂಗೆ ಹೊಡೆದು ಬಿಟ್‌ನಲ್ಲ.. ಅನ್ನೋ ಹಪ ಹಪಿ..ತಳಮಳ.. ಸಂಕಟ.. ದುಖಃ.., ಅರ್ಧ ರಾತ್ರಿ ಸುಮಾರು, ಹನ್ನೆರಡೋ.. ಒಂದು ಗಂಟೆಗೆಲ್ಲ 6 ಮೈಲಿ, ಸೈಕಲ್ ತುಳಕೊಂಡು ಮನೆಗೆ ವಾಪಸ್ ಬಂದೋರು.. ನನ್ನ ಪಕ್ಕನೆ ಕೂತಿದ್ರಂತೆ. ಬೆಳಗ್ಗೆ ಎದ್ದ ನನ್ನ ಮುದ್ದಿಸಿದ್ದೋ ಮುದ್ದಿಸಿದ್ದು.. ಅಮ್ಮನ ಕೈಲಿ ನನ್ನ ರೆಡೀ ಮಾಡಿಸಿ.. ಮರತ್‌ಹಳ್ಳಿ ಗೆ ಕರಕೊಂಡು ಹೋಗಿ ಸಿನೆಮಾ ತೋರಿಸಿ.. ಹೋಟೆಲ್‌ನಲ್ಲಿ ಮಸಾಲೆ ದೋಸೆ , ಹೋರ್ಲೀಕ್ಸ್ ಕೊಡಿಸಿ ಮನೆಗೆ ಕರಕೊಂಡು ಬಂದಿದ್ದರು. ಅಮ್ಮ ಮತ್ತು ಅಕ್ಕಂದಿರಿಗೂ ಬೇಕರಿ ತಿಂಡಿಗಳು.... :-0
ಈಗಲೂ.. ನನಗೆ ... ಈ ಘಟನೆ ನೆನಪಾಗೋದು ಯಾಕೆ ಅಂದ್ರೆ.. ಅದಾದ ಮೇಲೆ ಅಣ್ಣಾ ನನಗೆ ಯಾವತ್ತೂ ಹೊಡೆದಿರಲಿಲ್ಲ. ನಾನು ಅವರ ಮುದ್ದಿನ ಮಗಳೆ ಅಂದಿಗೂ.. ಇಂದಿಗೂ.
ಸ್ಚೂಲಿಗೊಗೊ ಮಕ್ಕಳನ್ನೆಲ್ಲ.. ನಮ್ಮ ಬೀದಿಯಲ್ಲಿ ನೋಡುವಾಗ.. ಈ ಘಟನೆ ನೆನಪಾಯ್ತು.. ಅದಕ್ಕೆ ಶೇರ್ ಮಾಡಿದೆನೆ.. :-)
ನಿಮ್ಮ ಸಲಹೆ ಸೂಚನೆಗಳಿಗೆ.. ಸದಾ ಸ್ವಾಗತ
Monday, 8 June 2015
ಮರೆತರೂ ಮರೆಯಲಿ ಹ್ಯಾಂಗಾ...........ಮ್ಯಾಗಿ.. ಮ್ಯಾಗಿ... ಮ್ಯಾಗಿ....!!!
ಮರೆತರೂ ಮರೆಯಲಿ ಹ್ಯಾಂಗಾ.....Inspired by Malathisanchyinda : Maggie mania
(http://malathisanchiyinda.blogspot.in/2015/06/good-bye.html)
ಮ್ಯಾಗಿ ಟೂ ಮಿನಿಟ್ಸ್ ನೂಡಲ್ಸ್,
ಮ್ಯಾಗಿ ಕಪ್ ನೂಡಲ್ಸ್,
ಮ್ಯಾಗಿ ಮಲ್ಟೀಗ್ರೇನ್ ನೂಡಲ್ಸ್,
ಮ್ಯಾಗಿ ಆಟ್ಟ ನೂಡಲ್ಸ್,
ಮ್ಯಾಗಿ ಓಟ್ಸ್ ನೂಡಲ್ಸ್....
ಓ ದೇವರೇ,....ಎಷ್ಟು ವೆರೈಟೀ ಇತ್ತು. ಮನೆಯಲ್ಲಂತೂ ಯಾವಾಗ್ಲೂ ಸ್ಟಾಕ್ ಇರೋದು . ಯಾಕಂದ್ರೆ ಮನೇಲಿ ನಾನು, ಕೀರ್ತಿ(ನನ್ನ ಪ್ರೀತಿಯ ಯಜಮಾನರು), ಇಬ್ಬರೇ ಆದ್ದರಿಂದ.. ಅಡುಗೆ ಮಾಡಲು ಬೇಜಾರಾದಾಗಲೆಲ್ಲಾ.. ಮ್ಯಾಗಿ ವೆರೈಟೀ! ಸವಿಯಲು ಸಿದ್ದ.
ನನಗೆ ಮ್ಯಾಗಿ ಕಪ್ ನೂಡಲ್ಸ್ ಇಷ್ಟ ಆದ್ರೆ, ಕೀರ್ತಿ ಗೆ ಮ್ಯಾಗಿ ಓಟ್ಸ್ ನೂಡಲ್ಸ್. ನಾನು ಎಷ್ಟಾದ್ರೂ easy way of cooking ಇಷ್ಟ ಪಡುವವಳು. ಎಲೆಕ್ಟ್ರಿಕ್ ಕೆಟ್ಲ್ ನಲ್ಲಿ ನೀರು ಕುದಿಸು, ಕಪ್ ನೂಡಲ್ಸ್ ಗೆ ಸುರಿ, 3-4 ನಿಮಿಷ ಬಿಡು...slurp.... slurp..... ಅಂತ ತಿಂದು ಮುಗಿಸು.
ಕೀರ್ತಿಗೆ ಈರುಳ್ಳಿ, ಟೊಮ್ಯಾಟೋ, ಹಸಿಮೆಣಸಿನಕಾಯಿ, ಗರಂ ಮಾಸಲಾ ಹಾಕ್ಲೇಬೇಕು...(ಪಾಪ ಅವರೇ ತರಕಾರಿ ಕಟ್ ಮಾಡಿ ಕೊಡೋದು in fact).
ನಮ್ಮ ತಂದೆ ಮೊನ್ನೆ(ಭಾನುವಾರ) ಬಂದಿದ್ದಾಗ ಕೇಳ್ತಿದ್ರು, ಇನ್ನೂ ನೂಡಲ್ಸ್ ತಿಂತಿದೀರಾ ಅಂತ... "ಇಲ್ಲ ಅಣ್ಣಾ " ಅಂತ ಬಾಯಲ್ಲಿ ಹೇಳಿದೆನಾದ್ರೂ... ಮನೆಲಿ ಇನ್ನೂ 2-3 ಪ್ಯಾಕೆಟ್ ಮ್ಯಾಗಿ ಹಾಗೇ ಇತ್ತು....!
ನಾನು, ಕೀರ್ತಿ ವರ್ಷಕೊಮ್ಮೆ ಅಥವಾ ಎರೆಡು ಸಲ, ಚೀನಾ ಶವೋಲಿನ್ ಟ್ರಿಪ್ ಹೋಗ್ತೀವಿ, (China Shaolin temple- for Kungfu training), ವೆಜಿಟೆರಿಯನ್ ಆದ ನಮಗೆ ಆ ಒಂದು - ಒಂದೂವರೆ ತಿಂಗಳು ಡೈಯೆಟ್ ಮಾಡೋಕೆ ಒಳ್ಳೆ ಚಾನ್ಸ್. ಯಾಕಂದ್ರೆ. ಅವರ ಊಟ ನಮ್ಮ ಕೈಲಿ ಮಾಡೋಕಾಗೊಲ್ಲ. ಹಾಸ್ಟಲ್ ನಲ್ಲಿ ವೆಜ್ ಬೇರೆಯಾಗೇನೋ ಬೆಯ್ಸ್ತಾರೆ.. ಆದರೆ ಉಪ್ಪಿಲ್ಲ ...ಕಾರ ಇಲ್ಲ..., ಸುಮ್ನೆ ಸೌತೆಕಾಯಿನೋ.. ಆಲೂಗಡ್ದೇನೋ, ಸೆಲೆರಿ ಸೊಪ್ಪೋ, ಎಲೆ ಕೋಸೋ ಇಲ್ಲಾಂದ್ರೆ.. ಸೋಯಾ ಮೊಳಕೆ ಕಾಳನ್ನೊ, ಆಲಿವ್ ಆಯಿಲ್ ಹಾಕಿ ಅರ್ಧ ಬೇಯ್ಸಿ ಕೊಡ್ತಾರೆ. ಅದರ ಜೊತೆ ಒಂದು ಬಟ್ಟಲು ಅನ್ನ...ಅದೂ ಬರೆ ಮಧ್ಯಾನ್ಹದ ಊಟಕ್ಕೆ.
ಬೆಳಗ್ಗೆ ಮತ್ತೆ ಸಾಯಂಕಾಲ ಒಂದು ತರಕಾರಿ ಜೊತೆಗೆ ಒಂದು ಸೋಯಾ ಬನ್ ಅಷ್ಟೇ. ( ಬೆಳಗ್ಗಿನ ತಿಂಡಿ - 7 .30 ಕ್ಕೆ, ಮಧ್ಯಾನ್ಹ ಊಟ - 11.30 ಕ್ಕೆ, ರಾತ್ರಿ ಊಟ - 6.30 ಕ್ಕೆ). ನಾವಂತೂ ಆ ಟ್ರೈನಿಂಗ್ ಜೊತೆ ಈ ಅರೆ ಹೊಟ್ಟೆ ಊಟ.. ಕೇಳ್ಬೇಡಿ... ಹೇಗೆ ಪ್ಲ್ಯಾನ್ಸ್ ಮಾಡ್ತ ಇರ್ತೀವಿ ಗೊತ್ತಾ.. ಬೆಂಗಳೂರಿಗೆ ಹೋದ ತಕ್ಷಣ S N ನಲ್ಲಿ ಇಡ್ಲಿ ವಡೆ ತಿನ್ಬೇಕು, MTR ನಲ್ಲಿ ಊಟ ಮಾಡ್ಬೇಕು, ಅಮ್ಮನ ಕೈನ ಘೀ ರೈಸ್ ತಿನ್ನಬೇಕು ಅಂತ ದಿನಾ ಮನಸಲ್ಲೇ ಲಿಸ್ಟ್ ಮಾಡಿಕೊಂಡು ಬಾಯಲ್ಲಿ ನೀರೂರುಸಿಕೋತಿದ್ವಿ
ಅಲ್ಲಿನವರು ಹಾಗೂ ಬೇರೆ ದೇಶಗಳಿಂದ ಬಂದ ಇತರೆ ಟ್ರೇನೀ ಗಳು ... ಚೆನ್ನಾಗಿ ತಿಂತಾರೆ, ನಮಗೆ ಆಲಿವ್ ಆಯಿಲ್ ವಾಸನೆ(ಸುವಾಸನೆ ಕೆಲವರಿಗೆ) ಸೇರೊಲ್ಲ. ಮತ್ತೆ ರಾತ್ರಿ 9 ಕ್ಕೆಲ್ಲಾ ಹಸಿವು, ಆಗೆಲ್ಲ ಮ್ಯಾಗಿ ನಮ್ಮ ಆಪತ್ಬಾಂಧವ. ಎಲ್ಲಾ ರೂಮ್ ಗಳಲ್ಲೂ ಎಲೆಕ್ಟ್ರಿಕ್ ಕೆಟ್ಲ್ ಇರ್ತ ಇತ್ತು. ಗ್ರೀನ್ ಟೀ ಮಾಡಿಕೊಳ್ಳಲು,. ಸೋ... ನಮಗೆ ಕಪ್ ನೂಡೆಲ್ಸ್ ಮಾಡ್ಕೊಳೋಕೆ ತೊಂದ್ರೆ ಇಲ್ಲ.... ಬಿಸಿ ನೀರು ಕುದಿಸು, ಮ್ಯಾಗಿ ಕಪ್ ಗೆ ಸುರಿ.. ತಿನ್ನು.... ನಮಗೆ ನಿಜವಾಗ್ಲೂ.. ಉಪ್ಪು ಕಾರ ತಿಂದು ಎಷ್ಟೋ.. ಯುಗಗಳಾಗಿ ಬಿಟ್ಟಿದೆಯೋ ಎನಿಸಿಬಿಟ್ಟಿರುತ್ತೆ ಅಲ್ಲಿನ ಊಟ ಮಾಡಿ , ಆರೋಗ್ಯದ ಕಡೆ ಇಂದ ನೋಡಿದ್ರೆ..Chinese have the best food..."for taste Indian food.. for health Chinese food" ಅನ್ನೋ ಗಾದೆನೇ ಇದೆ...
ನಮ್ಮ ಮ್ಯಾಗಿ.. ನಾಲಿಗೆ ಸೋಕಿದ ತಕ್ಷಣ .. ಆ ಹದವಾದ ಉಪ್ಪು, ಕಾರ , ಮಸಾಲೆಯ ರುಚಿ .. ಹ್ಮಮ್ಮ್ಮ್ಮ್ಮ್ಮ್.. ಹೇಳೋಕೆ ಪದಗಳೇ ಇಲ್ಲ.. ಅನುಭವಿಸಿಯೇ ತೀರಬೇಕು.ನಮ್ಮ ಕಣ್ಣಲಿ ನೀರು ಬರೋದೊಂದು ಬಾಕಿ.. ಸಂತೋಷದಿಂದ.
.
ಮೊನ್ನೆ ಮೊನ್ನೆ.. ಮೇ ನಲ್ಲಿ ಹಾಂಗ್‌ಕಾಂಗ್ ಗೆ ಹೋಗಿದ್ವಿ.. ಕೀರ್ತಿ, ಇಂಟರ್‌ನ್ಯಾಶನಲ್ ವೂಶೂ ಮತ್ತು ಕುಂಗ್ ಫೂ ಟೂರ್ನಮೆಂಟ್ ನಲ್ಲಿ ಪಾರ್ಟಿಸಿಪೇಟ್ ಮಾಡಿದ್ರು....5 ದಿನದ ಟೂರ್ನಮೆಂಟ್. ನಾನು ಇದುವರೆಗೂ ಹಾಂಗ್‌ಕಾಂಗ್ ಗೆ 5 ಸಲ ಹೋಗಿದೆನೆ. ಆದ್ರೆ This was the best trip ever, ಅಲ್ಲಿನ ಆರ್ಗನೈಸರ್ಸ್ ನಮಗೆ 5 ಸ್ಟಾರ್ ಹೋಟೆಲ್ ನಲ್ಲಿ ಅಕ್ಕೋಮೊಡೇಶನ್ ಒದಗಿಸಿದ್ರು.(ನೀವು ಹಾಂಗ್‌ಕಾಂಗ್ ಹೋಗೋ ಹಾಗಿದ್ರೆ, ನಾನು ನಿಮಗೆ ಪ್ರಿಫರ್ ಮಾಡೋದು The L hotel in Nina tower) . 80 ಅಂತಸ್ತಿನ ಕಟ್ಟಡ, ನಮ್ಮ ರೂಮ್ ಇದ್ದದ್ದು 57ನೇ ಅಂತಸ್ತಿನಲ್ಲಿ. ಅಲ್ಲಿನ ಲಿಫ್ಟ್ ಗಳು ಎಷ್ಟು fast ಅಂದ್ರೆ, 57ನೇ ಅಂತಸ್ತಿಗೆ ಒಂದು ನಿಮಿಷಕ್ಕಿಂತ ಬೇಗನೇ ರೀಚ್ ಆಗ್ತಿದ್ವಿ.
A view from 57th floor room in L hotel, Hong kong. |
ಅಲ್ಲಿನ ರೂಮ್ ಗಳು, 30* 40 ಸೈಟ ನಷ್ಟು ದೊಡ್ಡದು (ನಮ್ಮ ಬೆಂಗಳೂರಿನ ಇಡೀ ಮನೆಯಷ್ಟು)... ಬಾಲ್ಕನೀ ಇಂದ ಕೆಳಗೆ ನೋಡೋದೇ ಒಂದು ಮಜಾ....ಇನ್ನು ಬ್ರೇಕ್‌ಫಾಸ್ಟ್ .... The L hotel ನಾ ಬಫೆನಲ್ಲಿ. ಥೇಟ್ ಅಮೆರಿಕನ್ ಸ್ಟೈಲ್ & ಚೈನೀಸ್ ಸ್ಟೈಲ್. ಸರಿ ಹೇಗೋ ಗಡದ್ದಾದ ತಿಂಡಿ ಮುಗಿಸಿ ಟೂರ್ನಮೆಂಟ್ ಗೆ ಹೋದ್ರೆ.. ಮಧ್ಯಾನ್ಹ ಊಟ ಬೇಡ ಅನ್ನಿಸ್ತಿತ್ತು, ಆದ್ರೆ ರಾತ್ರಿ ಊಟಕ್ಕಾಗಿ ಪರದಾಡ್ತಿದ್ವಿ.
ಯಾಕೆ ಅಲ್ಲಿ ಹೋಟೆಲ್ ಗಳಿರಲಿಲ್ಲವ ನಿಮ್ಮ ಊಟಕ್ಕೆ ಅಂತ ನೀವು ಕೇಳ ಬಹುದು... ಆದ್ರೆ ಅಲ್ಲಿ ಹೋಗಿ ನೀವು ನಾನ್ವೆಜ್ ಅಲ್ಲ ವೆಜ್ ಊಟ ಬೇಕು ಅಂತ ಅವರಿಗೆ ವಿವರಿಸೋದರಲ್ಲಿ .... ಬೆಳಗಾಗಿರುತ್ತೆ. ಅವರಿಗೆ ಮೀನು, ಮೊಟ್ಟೆ ವೆಜ್ ಫುಡ್. ಮತ್ತು ಅವರ ಗ್ರೇವೀ ಇಂದ... ಮಾಂಸದ ತುಂಡನ್ನು ತೆಗೆದು ಹಾಕಿದರೆ ಅದೇ ವೆಜ್ ಫುಡ್. ಅದಕ್ಕಾಗಿ ಇದೆಲ್ಲ ಸರ್ಕಸ್ ಬೇಡ ಅಂತ ನಾವು ನಮ್ಮ ಮ್ಯಾಗಿ ಇಟ್ಟೊಕೊಂಡಿರ್ತಿದ್ವಿ. ಜೊತೆಗೆ ಅಲ್ಲಿ ತಾಜಾ ಹಣ್ಣುಗಳಿಗೆ ಬರವಿಲ್ಲ. ಹಾಗಾಗಿ ಹಣ್ಣುಗಳನ್ನು ಕೊಂಡು ತಿಂತಿದ್ವಿ. ಸೋ ಆಗೆಲ್ಲ ನಮಗೆ ಹೊಟ್ಟೆ ತುಂಬಿಸಿದ್ದು ಈ ಮ್ಯಾಗಿ ಕಪ್ ನೂಡಲ್ಸ್.
ಆ ಮಳೆಯಲೀ .. ಚಳಿಯಲೀ.. ಬಾಲ್ಕನೀಯಲ್ಲಿ ಕೂತ್ಕೊಂಡು.. ಒಂದು ದೊಡ್ಡ ಕಪ್ ಗ್ರೀನ್ ಟೀ ಮತ್ತೆ ಬಿಸಿ ಬಿಸಿ ನೂಡಲ್ಸ್ ತಿಂತಾ ಇದ್ರೆ .. ಅದರ ಮಜಾನೇ ಬೇರೆ.
ಕೀರ್ತಿ with his gold medals |
ಹಾ.. ಹ.. ಹೇಳೋದೇ ಮರ್ತೇ ನೋಡಿ.. ಕೀರ್ತಿ ಹಾಂಗ್‌ಕೋಂಗ್ ಟೂರ್ನಮೆಂಟ್ ನಲ್ಲಿ ಎರೆಡು ಗೋಲ್ಡ್ ಮೆಡಲ್ ಗೆದ್ದು ಬಂದ್ರು... ಅದಕ್ಕೆ ಹೇಳಿದ್ದು "This was the best trip ever" ಅಂತ.
ಹೂಂ.. ಮತ್ತೆ ಈಗ ಮುಂದಿನ ಸರ್ತಿ ನಾವು ಚೀನಾ ಕೆ ಹೋದಾಗ ನಮ್ಮ ಹಸಿವನ್ನು, ನಾಲಿಗೆಯ ರುಚಿಯನ್ನೂ ತಣಿಸೋದು ಹೇಗೆ ಅನ್ನೋದು..ಈಗಿನಿಂದಲೇ ಚಿಂತೆಯಾಗಿ ಬಿಟ್ಟಿದೆ ನಂಗೆ.
ಇಷ್ಟೂ ವರ್ಷಗಳು ಮ್ಯಾಗಿ ನಮಗೆ ಆಪತ್ಬಾಂಧವ. ಆದರೆ ಈಗ ಮ್ಯಾಗಿ... ಮ್ಯಾಗಿ... ನೀನ್ಯಾಕೆ ಹೀಗೆ ಮಾಡಿದೆ... ನಿನ್ನ ಮರೆತರೂ ಮರೆಯಲಿ ಹ್ಯಾಂಗ... ಹಸಿದಿದ್ದಾಗ.. ನಾಲಿಗೆ ಕೆಟ್ಟು ಕೇರವಾಗಿದ್ದಾಗ ನೀನು ತೋರಿಸಿದ ರುಚಿ, ಸ್ವಾದ.. ಆತ್ಮೀಯತೆ.. ಹೇಗೆ ಮರೆಯಲಿ.
ಅದಕ್ಕೋಸ್ಕರ ಈ ನನ್ನ ಲೇಖನ, ನಿನಗೆ ಮುಡಿಪು.. I sincerely dedicate this article to you Maggie...
ಹಾಗೆ ಈ ಆರ್ಟಿಕಲ್ ಬರೆಯೋಕೆ ಇನ್ಸ್ಪಿರೇಶನ್ ಆದ ನೆನಪಿನ ಸಂಚಿಯಿಂದ ಮಾಲತಿ ಯವರಿಗೂ ನನ್ನ ಧನ್ಯವಾದಗಳು.
ಓದುವ ನಿಮ್ಮೆಲರಿಗೂ ಸಹ ನನ್ನ ಧನ್ಯವಾದಗಳು.
Thursday, 4 June 2015
ಮರುಜನ್ಮ.. ...ಸಣ್ಣ ಕಥೆ
"ಅತ್ತಿಗೆ, ನಿಮ್ಮ ಕೈ ಮುಗಿತೇನೆ, ನನ್ನ ದಯವಿಟ್ಟು ಒಳಗೆ ಕಳಿಸಬೇಡಿ, ನನ್ನ ಕೈಲಾಗೊಲ್ಲ.. ಅವರು ನನ್ನ ಮುಕ್ಕಿಬಿಡ್ತಾರೆ" ರೂಮಿಗೆ ಹೋಗಲು ನಿರಾಕರಿಸಿ ಅಳುತ್ತಿದ್ದಳು ವೇದಾ. ಕೆದರಿದ ತಲೆ, ಕಚ್ಚಿದ ಗುರುತು ಒಂದು ಕೆನ್ನೆಯ ಮೇಲಾದರೆ, ಅಂಗೈ ಗುರುತು ಇನ್ನೊಂದರ ಮೇಲೆ. ಆಸ್ತವ್ಯಸ್ತಗೊಂಡ ಸೀರೆ ದೈನ್ಯ ಮುಖ. ಇದ್ಯಾವುದೂ ಶಾಂತಾ ಅತ್ತಿಗೆ(ಗಂಡನ ಅಕ್ಕ) ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ. ಬದಲಿಗೆ "ಗಂಡನಿಗೆ ಸುಖ ಕೊಡಲಾರದ ನೀನೆಂಥ ಹೆಂಡ್ತಿಯೆ ಅವನಿಗೆ, ಹೋಗ್ಲಿ ಬಾ"ಎಂದು ತನ್ನ ರೂಮಿಗೆ ಕರೆದೊಯ್ದು , ಮುಖ ತೊಳೆಸಿ, ಬೇರೆ ಸೀರೆ ಉಡಿಸಿ ತಲೆ ಬಾಚಿ ಅಲಂಕರಿಸಿದಳು. 17 ವರ್ಷದ ಮುಗ್ದ ವೇದಾ ಎಲ್ಲದಕ್ಕೂ ಮೂಕವಾಗಿದ್ದಳು, ಗಂಡನಲ್ಲಿಗೆ ಕಳಿಸದಿದ್ದರೆ ಸಾಕು .ತಾನು ಬೇರೆ ಏನು ಬೇಕಾದರೂ ಮಾಡಲು ಸಿದ್ಧ. ವೇದಾಳ ಕೈ ಹಿಡಿದು ಕರೆದೊಯ್ದಳು ಶಾಂತಾ... ತಲೆ ತಗ್ಗಿಸಿ ಬರುತ್ತಿದ್ದ ವೇದ... ಗಂಡನ ರೂಮಿನ ಎದಿರುಗೆ ಬಂದು ನಿಂತಾಗ... ಬೆಚ್ಚಿದಳು. ದೈನ್ಯವಾಗಿ ಶಾಂತಳತ್ತ ನೋಡಿದಳು. ಶಾಂತಳಿಗೆ ಅದರ ಅರ್ಥ ಗೊತ್ತಿದ್ದರೆ ತಾನೇ...ಕುತ್ಸಿಕತೆ, ಕ್ರೌರ್ಯವಾಗಿ ನಕ್ಕು,"ಲೋ. ಶ್ರೀಧರಾ, ನಿನ್ನ ಅಪ್ಸರೆ ಬಂದಿದಾಳೆ ನೋಡೋ" ಎಂದು ರೂಮಿನ ಒಳಗೆ ತಳ್ಳಿ ಬಾಗಿಲೇಳೆದುಕೊಂಡ್ಲು.
ರೂಮೊಕ್ಕ ವೇದಾ ತರ ತರ ನಡುಗುತ್ತಿದ್ದಳು, ಅವಳ ಏಳೇ ದೇಹ ಕಂಪಿಸುತ್ತಿತ್ತು, ಕೈ ಮುಗಿದಳು ಗಂಡನತ್ತ ನೋಡಿ. ಮಾತು ಹೊರಡಲಿಲ್ಲ ಬಾಯಿಂದ."ನನ್ನಿಂದ ತಪ್ಪಿಸಿಕೊಂಡು ಎಲ್ಲಿ ಹೋಗಬಹುಬಹುದಂದುಕೊಂಡಿದ್ದೆ.....! ನನ್ನ ಸ್ವೀಟ್ ವೇದು..." ಎಂದು ಹತ್ತಿರ ಬಂದವನತ್ತ ನೋಡದೆ, ತಪ್ಪಿಸಿಕೊಳ್ಳಲು ಎಲ್ಲಾದರೂ ಜಾಗವಿರುವುದೇನೋ ಎಂದು ಅತ್ತಿತ್ತ ನೋಡಿದಳು. ಇಲ್ಲಾ... ಅಷ್ಟರಲ್ಲೇ, ಮೃಗದಂತೆ ಅವನ ಬಿಗಿ ಬಂದನದಲ್ಲಿದ್ದಳು. ತಪ್ಪಿಸಿಕೊಳ್ಳುವ ಮಾತೆಲ್ಲಿ.... ಅವಳು ಒದ್ದಾಡಿದಷ್ಟು, ಅವನ ಹಿಂಸೆ, ವಿಕೃತತೆ ಹೆಚ್ಚಾಗು ತ್ತಿತ್ತು . ಸಹಿಸಲಾರದೆ, ಜ್ಞಾನ ತಪ್ಪಿದಳು ವೇದಾ.
ಜ್ಞಾನ ಬಂದಾಗಲೂ, ಅದೇ ಪರಿಸ್ಥಿತಿಯಲ್ಲಿ ಬಿದ್ದಿದ್ದಳು ವೇದಾ ನೆಲದ ಮೇಲೆ. ಮೈ ಮೇಲೆ ಕೂದಲೆಳೆ ಬಟ್ಟೆಯೂ ಇಲ್ಲದೆ, ಮೈಯೆಲ್ಲಾ ನಜ್ಜು ಗುಜ್ಜಾದ ನೋವು.ಮೈ ಮುದುರಿ ನಾಚಿಕೆಯಿಂದ ಹಿಡಿಯಷ್ಟಾಗಿ ತಲೆಯೆತ್ತಿ ನೋಡಿದರೆ...., ಎದುರಿಗೆ ಕುಳಿತು ಕಾಯುತ್ತಿದ್ದ ಶ್ರೀಧರ ,ಅವಳು ಎಂದು ಎಚ್ಚರಗೊಂಡಾಳೋ... ಎಂದು, ಅವಳು ಎಚ್ಚರಗೊಂಡಿದ್ದು, ಗಮನಿಸಿ, ಕೈಲಿದ್ದ, ಕ್ಯಾಮರ, ಮತ್ತೆ ಟೀವೀ ಮೇಲೆ ಸರಿಯಾದ ಆಂಗಲ್ ಗೆ ಅಡ್ಜಸ್ಟ್ ಮಾಡಿ ಹತ್ತಿರ ಬಂದವನತ್ತ, ಬೆದರಿದ ಕಂಗಳಲ್ಲೇ ಬೇಡವೆಂಬಂತೆ ಶಕ್ತಿ ಇಲ್ಲದ ಕೈಗಳನ್ನೆತ್ತಿ ಬೇಡಿದಳು, ಶ್ರೀಧರನ ಕಂಗಳಲ್ಲಿ ವಿಕೃತ ಕಾಮ ಮತ್ತೊಮ್ಮೆ ವಿಜ್ರುಂಬಿಸಿತು.
ವೇದಾ, ಆಗಷ್ಟೇ PUC ಗೆ ಸೇರಿದ್ದಳು, ಮನೆಯವರ ವಿರೋಧದ ಮದ್ಯೆ ಅಣ್ಣ ವೆಂಕಟೇಶ್ ಒಬ್ಬನೇ ಸಹಾಯಕ್ಕೆ ನಿತದ್ದು. ಸಣ್ಣ ಹಳ್ಳಿಯ ದೇವಸ್ಥಾನದ ಅರ್ಚಕರಾಗಿದ್ದ ಶಂಕರಯ್ಯನವರು ಪಕ್ಕಾ ಸಂಪ್ರದಾಯಸ್ಥರು, ಮೊದಲ ಮಗ ಶಂಕರ ಹುಟ್ಟಿದ, ಹನ್ನೆರೆಡು ವರ್ಷಕ್ಕೆ ಹುಟ್ಟಿದ ಅಪರೂಪದ ಮಗಳು ವೇದಾ. ಅವಳ 15 ನೇ ವರ್ಷದಿಂದಲೇ ಅವಳ ಮದುವೆಗಾಗಿ ತಯಾರಿ ನಡೆದಿತ್ತು, ಮಗಳು ಕಾಲೇಜ್ ಗೆ ಹೋಗುವೆನಂದಾಗ... ದೊಡ್ಡ ವಾಗ್ವಾದವೇ ನಡೆದಿತ್ತು ಮನೆಯಲ್ಲಿ ತಂದೆ ಮಗನಿಗೆ. ಶಂಕರಯ್ಯನವರ ತಾಯಿ ಇನ್ನೂ ಗಟ್ಟಿ ಮುಟ್ಟಾಗಿದ್ದರು, ಶಂಕರಯ್ಯನವರ ಪತ್ನಿಯನ್ನು ಇನ್ನೂ ತಮ್ಮ ಹಿಡಿತದಲ್ಲೇ ಇಟ್ಟುಕೊಂಡಿದ್ದರು, ಆಕೆಗೆ ತನ್ನತನ ವೆನ್ನುವುದೇ ಇರಲಿಲ್ಲ. ಗಂಡ ಮತ್ತು ಅತ್ತೆಯ ಕೈ ಕೆಳಗೆ ಅವರು ಹೇಳಿದಂತೆಯೇ ನಡೆಯುತ್ತಿದ್ದರು.... ವೆಂಕಟೇಶ ಡಿಗ್ರೀ ಮುಗಿಸಿ ಯಾವುದೋ,.. ಖಾಸಗಿ ಕಂಪನೀಯಲ್ಲಿ ಅಕೌಂಟೆಂಟ್ ಆಗಿದ್ದ.. ತನ್ನ ತಂಗಿಯೂ ಓದಲಿ ಎಂಬ ಆಸೆಯಿಂದ ಅವಳಿಗೆ ಬೆಂಬಲಿಸಿದ್ದ.
ಆದರೇನು, PUC ಗೆ ಸೇರಿದ ಸ್ವಲ್ಪೇ ದಿನದಲ್ಲಿ ವೇದಾಳಿಗೆ ಸಂಭಂದ ಕುದುರಿ ಬಂದಿತ್ತು. ಹುಡುಗ ಅಮೇರಿಕದಲ್ಲಿ ಯಾವುದೋ ಕೆಲಸದಲ್ಲಿದ್ದ, ಸದ್ಯಕ್ಕೆ ಬೆಂಗಳೂರಿನಲ್ಲೇ ಕೆಲಸವಾಗಿದ್ದರಿಂದ ತಿರುಗಿ ಬಂದಿದ್ದ. ಶಂಕರಯ್ಯನವರು, ತಮ್ಮ ಯೋಗ್ಯತೆಗೆ ಮೀರಿದ ಸಂಬಂಧವೆಂದು, ಸಂತೋಷ ಪಟ್ಟು ಮದುವೆ ಮಾಡಿಕೊಟ್ಟಿದ್ದರು.
ವೆಂಕಟೇಶನ ವಿರೋಧ ಯಾವುದೇ ಲೆಕ್ಕಕ್ಕಿರಲಿಲ್ಲ.. ವೇದಾಳಂತು ಸರಿ... ಅತ್ತೆಯ ಕೈಲಿ ನಡುಗುವ ಅಮ್ಮನ ಮಗಳು... ಇನ್ನೇನನ್ನು ನೀರಿಕ್ಷಿಸಲು ಸಾಧ್ಯ.. ಕಣ್ಮುಚ್ಚಿ ಕುತ್ತಿಗೆಯೋಡ್ಡಿದ್ದಳು.
ಮದುವೆಯ ದಿನವೇ.. ವೇದಾಳನ್ನು ಬೆಂಗಳೂರಿಗೆ ಕರೆ ದೊಯ್ದಿದ್ದರು ಶ್ರೀಧರನ ಮನೆಯವರು(ಶ್ರೀಧರನಿಗೆ ತಂದೆ ತಾಯಿ ಇಲ್ಲ, ಗಂಡ ಸತ್ತ ಮೇಲೆ ತಮ್ಮನೊಡನಿದ್ದ ಅಕ್ಕ ಶಾಂತಾ ಒಬ್ಬಳೇ.). ಮೊದಲ ರಾತ್ರಿಯೇ.. ವೇದಾಳಿಗೆ ನರಕ ದರ್ಶನವಾಗಿತ್ತು. ಅಮೇರಿಕ ದಿಂದ ತಂದ...ಕಾಮಕೇಳಿಯ.. ಕಸ್ಸೆಟ್ಸ್ TV ಯಲ್ಲಿ ಹಾಕಿ.. ವೇದಾಳನ್ನು ನೋಡಲು ಒತ್ತಾಯಿಸಿ ಅಂತೆಯೇ ಅವಳ ಮೇಲೆ ಅತ್ಯಾಚಾರವೆಸಗಿದ್ದ ( ಹೆಣ್ಣಿಗೆ ಇಷ್ಟವಿಲ್ಲದ ಮೇಲೆ ಅವಳು ವೈಶ್ಯೆ ಯೇ ಆಗಿರಲಿ.. ಅದು ಅತ್ಯಾಚಾರವೇ ಸೈ ಅಲ್ಲವೇ....??).ಅದಕ್ಕೆ.. ತಕ್ಕಂತೆ ಅವನ ಅಕ್ಕ ಶಾಂತಾ... ತಾನೂ ನಾದಿನಿಯ ಮೇಲೆ ತನ್ನ ಮಾನಸಿಕ ವಿಕೃತತೆಯನ್ನು ತೋರಿಸಿಕೊಳ್ಳುತ್ತಿದ್ದಳು.. ಬೇಕೆಂದೇ ವೇದಾಳನ್ನು ಶೃಂಗರಿಸಿ.. ಅವನ ರೂಮಿಗೆ ತಳ್ಳಿ, ಹೊರಗಿಂದ ಚಿಲಕ ಹಾಕಿಕೊಳ್ಳುತ್ತಿದ್ದಳು.
ಶ್ರೀಧರ ನದು ತೀರಲಾರದ ದಾಹ.. ಕಾಮುಕತೆ.. ವಿಕೃತತೆವೇದಾ... ಮೇಲೆ ಎಸಗಿದ ಅತ್ಯಾಚಾರದ ವೀಡಿಯೋ ಮಾಡಿ ... ಮತ್ತೆ ಮತ್ತೆ ನೋಡುವುದು.
ಪಕ್ಕದ ಮನೆಯವರ ಮುಂದೆಲ್ಲ" ಅಯ್ಯೋ... ನನ್ನ ತಮ್ಮನಿಗೆ, ಎಂತಹಾ ಹಳ್ಳಿ ಗೊಡ್ಡು ಗಂಟು ಬಿದ್ದಿದೆಯಮ್ಮ... ಅವನ ಇಷ್ಟಾ ನಿಷ್ಟ ಗಳನ್ನು ಅರ್ಥವೇ ಮಾಡಿಕೊಳ್ಳೋಲ್ಲ...."ಇನ್ನೂ ಇತ್ಯಾದಿ ದೂರುತ್ತಿದ್ದಳು. ವೇದಾ ರಾತ್ರಿಯಾಯಿತಂದರೆ ಬೆವರಿ ನಡುಗುತ್ತಿದ್ದಳು... ಮದುವೆಯಾಗಿ 1 ತಿಂಗಳಲ್ಲೇ.. ಸೊರಗಿ ಸೊಪ್ಪಾಗಿದ್ದಳು. ಶಂಕರಯ್ಯನವರೊಮ್ಮೆ.. ಅಳಿಯನಿಗೆ ಫೋನ್ ಮಾಡಿ.. ಮಗಳನ್ನು ನೋಡಲು ಬರುವೆನೆಂದರೆ... ಶ್ರೀಧರ "ಇಲ್ಲ ಮಾವನವರೇ... ನಿಮ್ಮ ವೇದಾಳೊಟ್ಟಿಗೆ ನಾನು ಹನಿಮೂನ್ ಗೆ ಹೊರಟಿರುವೆ, ಬಂದ ಮೇಲೆ ನಾನೇ ಫೋನ್ ಮಾಡುವೆ" ಎಂದು ನಯವಾಗಿ ನಿರಾಕರಿಸಿದ್ದ.
ವೇದಾ ತನ್ನ ಅಣ್ಣಾ ವೆಂಕಟೇಶನ ಆಫೀಸ್ ಫೋನಿಗೆ ಫೋನ್ ಮಾಡೋಣವೆಂದರೆ.. ಶಾಂತಾಳ ಹದ್ದಿನ ಕಣ್ಣು.. ದಿಕ್ಕು ತೋಚದೆ... ಸುಮ್ಮನಾಗಿದ್ದಳು. ಇದೆ ರೀತಿ ಮುಂದುವರೆದು.ಶ್ರೀಧರನ ವಿಕೃತ ಕಾಮ ತಾಳಲಾರದೆ.. ವೇದಾ ಎರೆಡು - ಮೂರು ಸಲ ಮೂರ್ಛೆಯೋಗಿ, ಜ್ಞಾನ ಬರಲು ಮೂರು ದಿನಗಳೇ ಬೇಕಾಗಿತ್ತು...ಆಗಲೂ ಶ್ರೀಧರನಾಗಲಿ,ಶಾಂತಳಾಗಲಿ, ಅವಳನ್ನು ಆಸ್ಪತ್ರೆ ಗೆ ಕರೆದೊಯ್ದಿರಲಿಲ್ಲ.
ಅವಳಲ್ಲಿ ಇನ್ನೇನು ನನಗೆ ಉಳಿದಿಲ್ಲ ಎಂಬ ಭಾವನೆ ಶ್ರೀಧರನಿಗೆ ಬಂದು... ಅವಳ ಕೈಲಿ ಡೈವೋರ್ಸ್ಗೆ ಸೈನ್ ಮಾಡಿಸಿಕೊಂಡಿದ್ದ... ಅವಳ ಅಣ್ಣನಿಗೆ ಫೋನ್ ಮಾಡಿ ಬರಲು ಹೇಳಿದ್ದ. ವೆಂಕಟೇಶ ಬಂದಾಗ, "ಅಣ್ಣಾ ನಾನಿಲ್ಲಿ ಇರೋಕಾಗಲ್ಲ ಅಣ್ಣಾ... " ಎಂದು ತೆಕ್ಕೆ ಬಿದ್ದು ಆಳುತ್ತಿದ್ದ,... ಮೂಳೆ ಚಕ್ಕಳವಾಗಿದ್ದ ತಂಗಿಯನ್ನು ನೋಡಿ... ಬಿಕ್ಕಿ ಬಿಕ್ಕಿ ಅತ್ತುಬಿಟ್ಟ.
ಶ್ರೀಧರ ಅವನ ಮೇಲೇ ಗೂಬೆ ಕೂರಿಸಿದಾ "ವೇದಾ ಏನು ಅರಿಯದ ಮುಗ್ದೆ ಅವಳಿಗೆ ಧಾಂಪತ್ಯ ಜೀವನವೇನೆಂಬುದೇ ತಿಳಿಯದು... ನೀವೆಲ್ಲ ಸೇರಿ ನನ್ನ ಬಾಳು ಹಾಳುಮಾಡಿದಿರಿ. ಅವಳನ್ನು ಕರೆದುಕೊಂಡೋಗಿ, ಅವಳೂ ಒಪ್ಪಿ ಡಿವೋರ್ಸೆಗೆ ಸೈನ್ ಮಾಡಿದ್ದಾಳೆ" ಎಂದಿದ್ದ. ವೆಂಕಟೇಶ ಮರು ಮಾತಾಡದೆ.. ತಂಗಿಯನ್ನು ಮನೆಗೆ ಕರೆದು ಕೊಂಡು ಬಂದಿದ್ದ. ಅವಳ ಮೈ ಮೇಲಿನ ಕಚ್ಚಿದ ಗುರ್ತು... ಕೆನ್ನೆಯೆಲ್ಲಾ ಬಾತುಹೋಗಿದ್ದೆ ಸಾಕಿತ್ತು ಅವನಿಗೆ ಇಡೀ ಕಥೆ ಹೇಳಲು.
ಮನೆಯಲ್ಲಿ ದೊಡ್ಡ ಜಗಳವೇ ನಡೆಯಿತು, ಶಂಕರಯ್ಯ ಮಗನನ್ನು ಹಿಡಿದು ಕೆನ್ನೆಗೆ ನಾಲ್ಕು ಬಾರಿಸಿಯೂ ಬಿಟ್ಟರು.. ಅವರಿಗೆ ಮಗಳ ಸ್ಥಿತಿಯ ಬಗ್ಗೆ ಯಾವುದೇ ಕಾಳಜಿಯಿಲ್ಲ.. ಕೇವಲ, ಮರ್ಯಾದೆಯ ಪ್ರಶ್ನೆ... ನೋಡಿದವರು ಏನೆಂದಾರು.... ನಾವು ತಲೆ ಎತ್ತಿ ತಿರುಗುವುದು ಹೇಗೆ..... !
ಹೆಣ್ಣಾದವಳು ಗಂಡನ ಮನೆಯಲ್ಲಿರಬೇಕಷ್ಟೆ... ಅವನು ಸಾಯಿಸಿದರು ಅಷ್ಟೇ... ಬಾಳಿಸಿದರೂ ಅಷ್ಟೇ... ಮಗಳನ್ನು ಮತ್ತೆ.. ಅಳಿಯನ ಕಾಲಿಡಿದು.. ಅವನ ಮನೆಗೆ ಬಿಟ್ಟು ಬರಲು ರೆಡೀ ಯಾದಾಗ, ವೆಂಕಟೇಶ ತಡೆಯಾದಾದ.. ತಂಗಿಯ ಕೈ ಹಿಡಿದು.. ಮನೆಯಿಂದ ಹೊರ ಬಂದಿದ್ದ " ಅಪ್ಪಾ... ನೀವು ಒಬ್ಬ ತಂದೆಯಾ... ಅವಳ ಸ್ಥಿತಿ ಏನು ಅಂತ ಕಣ್ಣಿಗೆ ಕಟ್ಟಿದಂತಿದೆ.. ಮತ್ತೆ ಅದೇ ನರಕಕ್ಕೆ ತಳ್ಳಲು ಸಿದ್ದರಾಗಿದ್ದೀರಲ್ಲ.. ನಿಜಕ್ಕೂ ನೀವು ಮನುಷ್ಯರೇನಾ... ಬೇಡ.. ನನ್ನ ತಂಗಿಗೆ ನಾನು ಇದ್ದೇನೆ" ಏನು ಹೇಳಲು ಮರೆತಿರಲಿಲ್ಲ .
ತಂಗಿಯೊಡನೆ ಬೆಂಗಳೂರಿನಲ್ಲಿ ಮನೆ ಮಾಡಿ ಇರತೊಡಗಿದ್ದ. ಆದರೆ ವೇದಾ ಮಾನಸಿಕವಾಗಿ ಹಾಗೂ ದೈಹಿಕವಾಗಿ ಜರ್ಜರಿತಳಾಗಿದ್ದಳು. ಡಾಕ್ಟರ್ ಹೇಳಿದ್ದರು... "ಸಾಮೂಹಿಕವಾಗಿ ಹತ್ತು ದಿನ ಒಂದೇ ಸಮನೆ ಅತ್ಯಾಚಾರವೆಸಗಿದಂತಿದೆ ನಿಮ್ಮ ತಂಗಿಯ ದೇಹಸ್ಥಿಥಿ.. ".. ವೆಂಕಟೇಶ... ಆಸ್ಪತ್ರೆ ಎಂದೂ ನೋಡದೆ ಡಾಕ್ಟರ್ ಕೈಹಿಡಿದು ಭೋರೆಂದು ಅತ್ತಿದ್ದ .
"ವೇದಾ ಗರ್ಭವತಿಯೂ ಹೌದು, ಆದರೆ ಆಕೆ ಇರೋ ಸ್ಥಿತಿಲಿ ... ಅಬಾರ್ಶನ್ ಮಾಡುವುದೇ ಒಳ್ಳೆಯದು... ಮಾಡದಿದ್ದರೂ ಮುಂದೆ.. ಸುಮಾರು ಪ್ರಾಬ್ಲಮ್ಸ್ ಆಗುತ್ತವೆ,ಅಬ್‌ನಾರ್ಮಲ್ ಮಗು ಆಗುವ ಚಾನ್ಸಸ್ ಸಹ ಹೆಚ್ಚು" ಎಂದಾಗ ವೆಂಕಟೇಶ ಎಲ್ಲದಕ್ಕೂ ಒಪ್ಪಿ ಸಹಿ ಮಾಡಿದ್ದ. ಸತತವಾಗಿ 3 ತಿಂಗಳ ಚಿಕಿತ್ಸೆ, ಕೌನ್ಸೆಲಿಂಗ್ ಗಳಿಂದ ..ವೇದಾ ಒಂದು ಮಟ್ಟಿಗೆ ಸುಧಾರಿಸಿಕೊಂಡಳು.
ವೇದಾ ಮತ್ತೆ ಓದಲು ನಿರ್ಧರಿಸಿ, ಅಂತೆಯೇ..PUC ಗೆ ಸೇರಿದ್ದಳು.
ವೆಂಕಟೇಶ.. ತನ್ನ ಆಫೀಸ್ ನಲ್ಲೇ ತನ್ನ ಸಹದ್ಯೋಗಿಯಾದ.. ವೀಣಾಳನ್ನು, ಮದುವೆಯಾದ.. ವೀಣಾ.. ನಿಜಕ್ಕೂ ವೇದಾಳ ಪಾಲಿಗೆ ದಾರಿದೀಪ. ತಾಯಿ, ಅಕ್ಕ, ಅತ್ತಿಗೆ, ಸ್ನೇಹಿತೆ ಎಲ್ಲವೂ ಆಗಿದ್ದಾಳೆ.
ಈಗ ವೇದಾ.. ತನ್ನ Mcom ಮುಗಿಸಿ ದೊಡ್ಡ ಮಲ್ಟಿನ್ಯಾಶನಲ್ ಕಂಪನೀ ಯಲ್ಲಿ ದೊಡ್ಡ ಹುದ್ದೆಯಲ್ಲಿದ್ದಾಳೆ. ಮೊದಲಿನ ಮುಗ್ದತೆ ಮುಖದ ಮೇಲೆ ಹಾಗೆ ಇದೆ. ಆದರೆ ಸ್ವಾಬಿಮಾನ ...ಆತ್ಮಸ್ಥೈರ್ಯ , ಸ್ವಾತಂತ್ರ್ಯ, ಸ್ವಾವಲಂಬಿ ಬದುಕು ಅವಳನ್ನು ತುಂಬಾ ಎತ್ತರಕ್ಕೇರಿಸಿದೆ. ಹಿಂದಿನದೆಲ್ಲ ಅವಳಿಗೆ ನೆನಪೇ ಇಲ್ಲವೆನ್ನುವಷ್ಟು ಬದಲಾಗಿದ್ದಾಳೆ. ಬರುವ ನಾಳೆಗಳನ್ನು ಒಬ್ಬಳೇ ಎದುರಿಸಬಲ್ಲಳು. ಮರುಜನ್ಮ ಕೊಟ್ಟ ಅಣ್ಣಾ ಅತ್ತಿಗೆ ಅವಳ ಪಾಲಿಗೆ ಸರ್ವಸ್ವ...
ಆದರೆ ಇನ್ನೂ, ಅವಳ ತಂದೆ ಶಂಕರಯ್ಯ ಮತ್ತು ಅಜ್ಜೀ, ಇವರಿಬ್ಬರನ್ನೂ ಕ್ಷಮಿಸಿಲ್ಲ.. ನೋಡಲೂ ಬಂದಿಲ್ಲ. ಇಷ್ಟು ವರ್ಷಗಳಲ್ಲಿ.. ವೇದಾ ತಾಯಿ.. ಮಗಳಿಗಾದ ಅನ್ಯಾಯಕ್ಕೆ, ಮಗನನ್ನು ನೋಡದೆ..ಗಂಡನ ಬಳಿ ತನ್ನ ಆಸೆ ,ಅಭಿಪ್ರಾಯ ವ್ಯಕ್ತಪಡಿಸಲಾಗದೆ ಕೊರಗಿ,ಕೊರಗಿ ಇಹಲೋಕ ತ್ಯಜಿಸಿದ್ದರು. ಆದರೆ ಶಂಕರಯ್ಯ ಮತ್ತು ಅವರ ತಾಯಿ ಮಾತ್ರ.. ವೇದಾ ಮತ್ತು ವೆಂಕಟೇಶನ ಅಪರಾಧವನ್ನು.....(???) ಕ್ಷಮಿಸಿಲ್ಲ.
Subscribe to:
Posts (Atom)