ಮರೆತರೂ ಮರೆಯಲಿ ಹ್ಯಾಂಗಾ.....Inspired by Malathisanchyinda : Maggie mania
(http://malathisanchiyinda.blogspot.in/2015/06/good-bye.html)
ಮ್ಯಾಗಿ ಟೂ ಮಿನಿಟ್ಸ್ ನೂಡಲ್ಸ್,
ಮ್ಯಾಗಿ ಕಪ್ ನೂಡಲ್ಸ್,
ಮ್ಯಾಗಿ ಮಲ್ಟೀಗ್ರೇನ್ ನೂಡಲ್ಸ್,
ಮ್ಯಾಗಿ ಆಟ್ಟ ನೂಡಲ್ಸ್,
ಮ್ಯಾಗಿ ಓಟ್ಸ್ ನೂಡಲ್ಸ್....
ಓ ದೇವರೇ,....ಎಷ್ಟು ವೆರೈಟೀ ಇತ್ತು. ಮನೆಯಲ್ಲಂತೂ ಯಾವಾಗ್ಲೂ ಸ್ಟಾಕ್ ಇರೋದು . ಯಾಕಂದ್ರೆ ಮನೇಲಿ ನಾನು, ಕೀರ್ತಿ(ನನ್ನ ಪ್ರೀತಿಯ ಯಜಮಾನರು), ಇಬ್ಬರೇ ಆದ್ದರಿಂದ.. ಅಡುಗೆ ಮಾಡಲು ಬೇಜಾರಾದಾಗಲೆಲ್ಲಾ.. ಮ್ಯಾಗಿ ವೆರೈಟೀ! ಸವಿಯಲು ಸಿದ್ದ.
ನನಗೆ ಮ್ಯಾಗಿ ಕಪ್ ನೂಡಲ್ಸ್ ಇಷ್ಟ ಆದ್ರೆ, ಕೀರ್ತಿ ಗೆ ಮ್ಯಾಗಿ ಓಟ್ಸ್ ನೂಡಲ್ಸ್. ನಾನು ಎಷ್ಟಾದ್ರೂ easy way of cooking ಇಷ್ಟ ಪಡುವವಳು. ಎಲೆಕ್ಟ್ರಿಕ್ ಕೆಟ್ಲ್ ನಲ್ಲಿ ನೀರು ಕುದಿಸು, ಕಪ್ ನೂಡಲ್ಸ್ ಗೆ ಸುರಿ, 3-4 ನಿಮಿಷ ಬಿಡು...slurp.... slurp..... ಅಂತ ತಿಂದು ಮುಗಿಸು.
ಕೀರ್ತಿಗೆ ಈರುಳ್ಳಿ, ಟೊಮ್ಯಾಟೋ, ಹಸಿಮೆಣಸಿನಕಾಯಿ, ಗರಂ ಮಾಸಲಾ ಹಾಕ್ಲೇಬೇಕು...(ಪಾಪ ಅವರೇ ತರಕಾರಿ ಕಟ್ ಮಾಡಿ ಕೊಡೋದು in fact).
ನಮ್ಮ ತಂದೆ ಮೊನ್ನೆ(ಭಾನುವಾರ) ಬಂದಿದ್ದಾಗ ಕೇಳ್ತಿದ್ರು, ಇನ್ನೂ ನೂಡಲ್ಸ್ ತಿಂತಿದೀರಾ ಅಂತ... "ಇಲ್ಲ ಅಣ್ಣಾ " ಅಂತ ಬಾಯಲ್ಲಿ ಹೇಳಿದೆನಾದ್ರೂ... ಮನೆಲಿ ಇನ್ನೂ 2-3 ಪ್ಯಾಕೆಟ್ ಮ್ಯಾಗಿ ಹಾಗೇ ಇತ್ತು....!
ನಾನು, ಕೀರ್ತಿ ವರ್ಷಕೊಮ್ಮೆ ಅಥವಾ ಎರೆಡು ಸಲ, ಚೀನಾ ಶವೋಲಿನ್ ಟ್ರಿಪ್ ಹೋಗ್ತೀವಿ, (China Shaolin temple- for Kungfu training), ವೆಜಿಟೆರಿಯನ್ ಆದ ನಮಗೆ ಆ ಒಂದು - ಒಂದೂವರೆ ತಿಂಗಳು ಡೈಯೆಟ್ ಮಾಡೋಕೆ ಒಳ್ಳೆ ಚಾನ್ಸ್. ಯಾಕಂದ್ರೆ. ಅವರ ಊಟ ನಮ್ಮ ಕೈಲಿ ಮಾಡೋಕಾಗೊಲ್ಲ. ಹಾಸ್ಟಲ್ ನಲ್ಲಿ ವೆಜ್ ಬೇರೆಯಾಗೇನೋ ಬೆಯ್ಸ್ತಾರೆ.. ಆದರೆ ಉಪ್ಪಿಲ್ಲ ...ಕಾರ ಇಲ್ಲ..., ಸುಮ್ನೆ ಸೌತೆಕಾಯಿನೋ.. ಆಲೂಗಡ್ದೇನೋ, ಸೆಲೆರಿ ಸೊಪ್ಪೋ, ಎಲೆ ಕೋಸೋ ಇಲ್ಲಾಂದ್ರೆ.. ಸೋಯಾ ಮೊಳಕೆ ಕಾಳನ್ನೊ, ಆಲಿವ್ ಆಯಿಲ್ ಹಾಕಿ ಅರ್ಧ ಬೇಯ್ಸಿ ಕೊಡ್ತಾರೆ. ಅದರ ಜೊತೆ ಒಂದು ಬಟ್ಟಲು ಅನ್ನ...ಅದೂ ಬರೆ ಮಧ್ಯಾನ್ಹದ ಊಟಕ್ಕೆ.
ಬೆಳಗ್ಗೆ ಮತ್ತೆ ಸಾಯಂಕಾಲ ಒಂದು ತರಕಾರಿ ಜೊತೆಗೆ ಒಂದು ಸೋಯಾ ಬನ್ ಅಷ್ಟೇ. ( ಬೆಳಗ್ಗಿನ ತಿಂಡಿ - 7 .30 ಕ್ಕೆ, ಮಧ್ಯಾನ್ಹ ಊಟ - 11.30 ಕ್ಕೆ, ರಾತ್ರಿ ಊಟ - 6.30 ಕ್ಕೆ). ನಾವಂತೂ ಆ ಟ್ರೈನಿಂಗ್ ಜೊತೆ ಈ ಅರೆ ಹೊಟ್ಟೆ ಊಟ.. ಕೇಳ್ಬೇಡಿ... ಹೇಗೆ ಪ್ಲ್ಯಾನ್ಸ್ ಮಾಡ್ತ ಇರ್ತೀವಿ ಗೊತ್ತಾ.. ಬೆಂಗಳೂರಿಗೆ ಹೋದ ತಕ್ಷಣ S N ನಲ್ಲಿ ಇಡ್ಲಿ ವಡೆ ತಿನ್ಬೇಕು, MTR ನಲ್ಲಿ ಊಟ ಮಾಡ್ಬೇಕು, ಅಮ್ಮನ ಕೈನ ಘೀ ರೈಸ್ ತಿನ್ನಬೇಕು ಅಂತ ದಿನಾ ಮನಸಲ್ಲೇ ಲಿಸ್ಟ್ ಮಾಡಿಕೊಂಡು ಬಾಯಲ್ಲಿ ನೀರೂರುಸಿಕೋತಿದ್ವಿ
ಅಲ್ಲಿನವರು ಹಾಗೂ ಬೇರೆ ದೇಶಗಳಿಂದ ಬಂದ ಇತರೆ ಟ್ರೇನೀ ಗಳು ... ಚೆನ್ನಾಗಿ ತಿಂತಾರೆ, ನಮಗೆ ಆಲಿವ್ ಆಯಿಲ್ ವಾಸನೆ(ಸುವಾಸನೆ ಕೆಲವರಿಗೆ) ಸೇರೊಲ್ಲ. ಮತ್ತೆ ರಾತ್ರಿ 9 ಕ್ಕೆಲ್ಲಾ ಹಸಿವು, ಆಗೆಲ್ಲ ಮ್ಯಾಗಿ ನಮ್ಮ ಆಪತ್ಬಾಂಧವ. ಎಲ್ಲಾ ರೂಮ್ ಗಳಲ್ಲೂ ಎಲೆಕ್ಟ್ರಿಕ್ ಕೆಟ್ಲ್ ಇರ್ತ ಇತ್ತು. ಗ್ರೀನ್ ಟೀ ಮಾಡಿಕೊಳ್ಳಲು,. ಸೋ... ನಮಗೆ ಕಪ್ ನೂಡೆಲ್ಸ್ ಮಾಡ್ಕೊಳೋಕೆ ತೊಂದ್ರೆ ಇಲ್ಲ.... ಬಿಸಿ ನೀರು ಕುದಿಸು, ಮ್ಯಾಗಿ ಕಪ್ ಗೆ ಸುರಿ.. ತಿನ್ನು.... ನಮಗೆ ನಿಜವಾಗ್ಲೂ.. ಉಪ್ಪು ಕಾರ ತಿಂದು ಎಷ್ಟೋ.. ಯುಗಗಳಾಗಿ ಬಿಟ್ಟಿದೆಯೋ ಎನಿಸಿಬಿಟ್ಟಿರುತ್ತೆ ಅಲ್ಲಿನ ಊಟ ಮಾಡಿ , ಆರೋಗ್ಯದ ಕಡೆ ಇಂದ ನೋಡಿದ್ರೆ..Chinese have the best food..."for taste Indian food.. for health Chinese food" ಅನ್ನೋ ಗಾದೆನೇ ಇದೆ...
ನಮ್ಮ ಮ್ಯಾಗಿ.. ನಾಲಿಗೆ ಸೋಕಿದ ತಕ್ಷಣ .. ಆ ಹದವಾದ ಉಪ್ಪು, ಕಾರ , ಮಸಾಲೆಯ ರುಚಿ .. ಹ್ಮಮ್ಮ್ಮ್ಮ್ಮ್ಮ್.. ಹೇಳೋಕೆ ಪದಗಳೇ ಇಲ್ಲ.. ಅನುಭವಿಸಿಯೇ ತೀರಬೇಕು.ನಮ್ಮ ಕಣ್ಣಲಿ ನೀರು ಬರೋದೊಂದು ಬಾಕಿ.. ಸಂತೋಷದಿಂದ.
.
ಮೊನ್ನೆ ಮೊನ್ನೆ.. ಮೇ ನಲ್ಲಿ ಹಾಂಗ್‌ಕಾಂಗ್ ಗೆ ಹೋಗಿದ್ವಿ.. ಕೀರ್ತಿ, ಇಂಟರ್‌ನ್ಯಾಶನಲ್ ವೂಶೂ ಮತ್ತು ಕುಂಗ್ ಫೂ ಟೂರ್ನಮೆಂಟ್ ನಲ್ಲಿ ಪಾರ್ಟಿಸಿಪೇಟ್ ಮಾಡಿದ್ರು....5 ದಿನದ ಟೂರ್ನಮೆಂಟ್. ನಾನು ಇದುವರೆಗೂ ಹಾಂಗ್‌ಕಾಂಗ್ ಗೆ 5 ಸಲ ಹೋಗಿದೆನೆ. ಆದ್ರೆ This was the best trip ever, ಅಲ್ಲಿನ ಆರ್ಗನೈಸರ್ಸ್ ನಮಗೆ 5 ಸ್ಟಾರ್ ಹೋಟೆಲ್ ನಲ್ಲಿ ಅಕ್ಕೋಮೊಡೇಶನ್ ಒದಗಿಸಿದ್ರು.(ನೀವು ಹಾಂಗ್‌ಕಾಂಗ್ ಹೋಗೋ ಹಾಗಿದ್ರೆ, ನಾನು ನಿಮಗೆ ಪ್ರಿಫರ್ ಮಾಡೋದು The L hotel in Nina tower) . 80 ಅಂತಸ್ತಿನ ಕಟ್ಟಡ, ನಮ್ಮ ರೂಮ್ ಇದ್ದದ್ದು 57ನೇ ಅಂತಸ್ತಿನಲ್ಲಿ. ಅಲ್ಲಿನ ಲಿಫ್ಟ್ ಗಳು ಎಷ್ಟು fast ಅಂದ್ರೆ, 57ನೇ ಅಂತಸ್ತಿಗೆ ಒಂದು ನಿಮಿಷಕ್ಕಿಂತ ಬೇಗನೇ ರೀಚ್ ಆಗ್ತಿದ್ವಿ.
|
A view from 57th floor room in L hotel, Hong kong.
|
ಅಲ್ಲಿನ ರೂಮ್ ಗಳು, 30* 40 ಸೈಟ ನಷ್ಟು ದೊಡ್ಡದು (ನಮ್ಮ ಬೆಂಗಳೂರಿನ ಇಡೀ ಮನೆಯಷ್ಟು)... ಬಾಲ್ಕನೀ ಇಂದ ಕೆಳಗೆ ನೋಡೋದೇ ಒಂದು ಮಜಾ....ಇನ್ನು ಬ್ರೇಕ್‌ಫಾಸ್ಟ್ .... The L hotel ನಾ ಬಫೆನಲ್ಲಿ. ಥೇಟ್ ಅಮೆರಿಕನ್ ಸ್ಟೈಲ್ & ಚೈನೀಸ್ ಸ್ಟೈಲ್. ಸರಿ ಹೇಗೋ ಗಡದ್ದಾದ ತಿಂಡಿ ಮುಗಿಸಿ ಟೂರ್ನಮೆಂಟ್ ಗೆ ಹೋದ್ರೆ.. ಮಧ್ಯಾನ್ಹ ಊಟ ಬೇಡ ಅನ್ನಿಸ್ತಿತ್ತು, ಆದ್ರೆ ರಾತ್ರಿ ಊಟಕ್ಕಾಗಿ ಪರದಾಡ್ತಿದ್ವಿ.
ಯಾಕೆ ಅಲ್ಲಿ ಹೋಟೆಲ್ ಗಳಿರಲಿಲ್ಲವ ನಿಮ್ಮ ಊಟಕ್ಕೆ ಅಂತ ನೀವು ಕೇಳ ಬಹುದು... ಆದ್ರೆ ಅಲ್ಲಿ ಹೋಗಿ ನೀವು ನಾನ್ವೆಜ್ ಅಲ್ಲ ವೆಜ್ ಊಟ ಬೇಕು ಅಂತ ಅವರಿಗೆ ವಿವರಿಸೋದರಲ್ಲಿ .... ಬೆಳಗಾಗಿರುತ್ತೆ. ಅವರಿಗೆ ಮೀನು, ಮೊಟ್ಟೆ ವೆಜ್ ಫುಡ್. ಮತ್ತು ಅವರ ಗ್ರೇವೀ ಇಂದ... ಮಾಂಸದ ತುಂಡನ್ನು ತೆಗೆದು ಹಾಕಿದರೆ ಅದೇ ವೆಜ್ ಫುಡ್. ಅದಕ್ಕಾಗಿ ಇದೆಲ್ಲ ಸರ್ಕಸ್ ಬೇಡ ಅಂತ ನಾವು ನಮ್ಮ ಮ್ಯಾಗಿ ಇಟ್ಟೊಕೊಂಡಿರ್ತಿದ್ವಿ. ಜೊತೆಗೆ ಅಲ್ಲಿ ತಾಜಾ ಹಣ್ಣುಗಳಿಗೆ ಬರವಿಲ್ಲ. ಹಾಗಾಗಿ ಹಣ್ಣುಗಳನ್ನು ಕೊಂಡು ತಿಂತಿದ್ವಿ. ಸೋ ಆಗೆಲ್ಲ ನಮಗೆ ಹೊಟ್ಟೆ ತುಂಬಿಸಿದ್ದು ಈ ಮ್ಯಾಗಿ ಕಪ್ ನೂಡಲ್ಸ್.
ಆ ಮಳೆಯಲೀ .. ಚಳಿಯಲೀ.. ಬಾಲ್ಕನೀಯಲ್ಲಿ ಕೂತ್ಕೊಂಡು.. ಒಂದು ದೊಡ್ಡ ಕಪ್ ಗ್ರೀನ್ ಟೀ ಮತ್ತೆ ಬಿಸಿ ಬಿಸಿ ನೂಡಲ್ಸ್ ತಿಂತಾ ಇದ್ರೆ .. ಅದರ ಮಜಾನೇ ಬೇರೆ.
|
ಕೀರ್ತಿ with his gold medals |
ಹಾ.. ಹ.. ಹೇಳೋದೇ ಮರ್ತೇ ನೋಡಿ.. ಕೀರ್ತಿ ಹಾಂಗ್‌ಕೋಂಗ್ ಟೂರ್ನಮೆಂಟ್ ನಲ್ಲಿ ಎರೆಡು ಗೋಲ್ಡ್ ಮೆಡಲ್ ಗೆದ್ದು ಬಂದ್ರು... ಅದಕ್ಕೆ ಹೇಳಿದ್ದು "This was the best trip ever" ಅಂತ.
ಹೂಂ.. ಮತ್ತೆ ಈಗ ಮುಂದಿನ ಸರ್ತಿ ನಾವು ಚೀನಾ ಕೆ ಹೋದಾಗ ನಮ್ಮ ಹಸಿವನ್ನು, ನಾಲಿಗೆಯ ರುಚಿಯನ್ನೂ ತಣಿಸೋದು ಹೇಗೆ ಅನ್ನೋದು..ಈಗಿನಿಂದಲೇ ಚಿಂತೆಯಾಗಿ ಬಿಟ್ಟಿದೆ ನಂಗೆ.
ಇಷ್ಟೂ ವರ್ಷಗಳು ಮ್ಯಾಗಿ ನಮಗೆ ಆಪತ್ಬಾಂಧವ. ಆದರೆ ಈಗ ಮ್ಯಾಗಿ... ಮ್ಯಾಗಿ... ನೀನ್ಯಾಕೆ ಹೀಗೆ ಮಾಡಿದೆ... ನಿನ್ನ ಮರೆತರೂ ಮರೆಯಲಿ ಹ್ಯಾಂಗ... ಹಸಿದಿದ್ದಾಗ.. ನಾಲಿಗೆ ಕೆಟ್ಟು ಕೇರವಾಗಿದ್ದಾಗ ನೀನು ತೋರಿಸಿದ ರುಚಿ, ಸ್ವಾದ.. ಆತ್ಮೀಯತೆ.. ಹೇಗೆ ಮರೆಯಲಿ.
ಅದಕ್ಕೋಸ್ಕರ ಈ ನನ್ನ ಲೇಖನ, ನಿನಗೆ ಮುಡಿಪು.. I sincerely dedicate this article to you Maggie...
ಹಾಗೆ ಈ ಆರ್ಟಿಕಲ್ ಬರೆಯೋಕೆ ಇನ್ಸ್ಪಿರೇಶನ್ ಆದ ನೆನಪಿನ ಸಂಚಿಯಿಂದ ಮಾಲತಿ ಯವರಿಗೂ ನನ್ನ ಧನ್ಯವಾದಗಳು.
ಓದುವ ನಿಮ್ಮೆಲರಿಗೂ ಸಹ ನನ್ನ ಧನ್ಯವಾದಗಳು.
first and foremost Congratulations to Keerti!! May he win many more medals in the sport.
ReplyDeletethank you for the interesting article. enjoyed reading this!!
:-)
malathi S
Thank u.....:-) :-)
DeleteWish Keerti from my side. Whole India should feel proud. By the way Kushi U had baby boy or baby girl. Did u try my tip while climbing steps. It worked or not. From now on wards u have to write according to ur baby`s schedule :)
ReplyDeleteThank u po prateeksha, blessed with a baby boy
DeleteThank u po prateeksha, blessed with a baby boy
Delete