Saturday 13 June 2015

ಅಣ್ಣನ ಕೈಲಿ ತಿಂದ ಮೊದಲ ಹಾಗೂ ಕೊನೆ ಏಟು....!...!!!



ನಾನಾಗ ನಾಲ್ಕೂವರೆ ಇಲ್ಲ ಐದು ವರ್ಷದವಳಿರಬಹುದು, ಮನೇಲಿ ಅಮ್ಮನ ಜೊತೆ ಒಬ್ಬಳೇ, ಅಮ್ಮ ತನ್ನ ಪಾಡಿಗೆ ತಾನು ಕೆಲಸ ಮಾಡಿಕೊಂಡಿರೋರು, ನಾನು ನನ್ನ ಬೊಂಬೆಗಳ ಜೊತೆ, ಅಕ್ಕನ್ದಿರಿಬ್ಬರು ಸ್ಕೂಲ್ ಗೆ ಹೋಗಿರ್ತ ಇದ್ದರು. ನನಗೂ ಸ್ಚೂಲ್‌ಗೆ ಹೋಗ್ಬೇಕು ಅಂತ ತುಂಬಾ ಆಸೆ ಇತ್ತು ಆಗ, ಆದರೆ ಇನ್ನೂ ಚಿಕ್ಕವಳು ಅಂತ ಸ್ಕೂಲ್ ಗೆ ಸೇರಿಸಿರಲಿಲ್ಲ. 6 ವರ್ಷಕ್ಕೆ ಒಂದೇ ಸಲ ಒಂದನೇ ಕ್ಲಾಸ್ ಗೆ ಅಡ್ಮಿಶನ್ ಮಾಡಿಸೋಣ ಅಂತ.


ಸರಿ, ಅವತ್ತು ಅಷ್ಟೇ ಎಂದಿನಂತೆ ಅಣ್ಣ ನೈಟ್ ಶಿಫ್ಟ್ ಮಾಡಿ ಬಂದು ಮಲಗೀದಾರೆ, ಅಮ್ಮ ಅಕ್ಕನ್ದಿರಿಬ್ಬರನ್ನು ಸ್ಕೂಲ್ ಗೆ ಕಳಿಸಿ, ಮುಂದಿನ ಬಾಗಿಲು ಹಾಕಿ, ಮನೆ ಕೆಲಸ ಎಲ್ಲಾ ಮಾಡಿ, ಬಟ್ಟೆ ಒಗಿಲಿಕ್ಕೆ ಅಂತ ಹಿತ್ತಿಲ ಕಡೆ ಹೋಗಿದಾರೆ. ನಾನು, ಮನೇಲೇ ಚೇರ್ ಮೇಲೆ, ಗೊಂಬೆ ಗಳ ಜೊತೆ ಆಟ ಆಡ್ತಾ ಇದೀನಿ, ಗೊತ್ತು ಶಬ್ಧ ಮಾಡ್ಬಾರದು ಅಂತ.. ಯಾಕಂದ್ರೆ ನಮ್ಮ ಅಣ್ಣಾ(ಅಪ್ಪನನ್ನ, ನಾವು ಅಣ್ಣಾ ಅಂತಾನೆ ಕರೆಯೋದು) ತುಂಬಾನೇ ಸ್ಟ್ರಿಕ್ಟ್, ಅವರು ನಿದ್ದೆ ಮಾಡುವಾಗ ಒಂದು ಚೂರು ಶಬ್ದ ವಾಗಬಾರದು. ನಾವು ಮೂರು ಜನ ಅಕ್ಕ ತಂಗೀರು ಮನೇಲಿದ್ದರೂ, ಅಣ್ಣ ಮಲಗಿದ್ದರೇ, ಒಂದು ಚೂರು ಗಲಾಟೆ ಮಾಡದೆ ಆಡ್ತಿದ್ವಿ.ನನ್ನ ದೊಡ್ಡಕ್ಕ, ತುಂಬಾನೇ ಪ್ರೀತಿ ನನ್ನ ಕಂಡರೆ, ತಾನೇ ನನಗೆ ಕಥೆ ಹೇಳಿ ಮಲಗಿಸೋದು, ಆಟ ಆಡಿಸೋದು....ಎಲ್ಲಾ.


ಸರಿ, ನಾನು ಆಡ್ತಾ ಇದೀನಿ , ಅಂತ ಅಮ್ಮ ನೆಮ್ಮದಿಯಾಗಿ ಬಟ್ಟೆ ಓಗಿತಾ ಇದಾರೆ. ನಾನು ಎಷ್ಟೊತ್ತು ಅಂತ ಆಡಲಿ, ಬೇಜಾರಾಯ್ತು, ಚೇರ್ ಇದ್ದದ್ದು ಮೇನ್ ಡೋರ್ ಪಕ್ಕದ ಕಿಡಕಿ ಅತ್ರ, ಸರಿ, ಚೇರ್ ಮೇಲೆ ನಿಂತು ಹೋಗರನ್ನು ಬರೋರನ್ನು ನೋಡ್ತಾ ನಿಂತುಕೊಂಡೆ, ಅಷ್ಟರಲ್ಲಿ, ನಮ್ಮ ಮನೆ ಪಕ್ಕದಲ್ಲಿರೋ, ಮಹಾಲಕ್ಷ್ಮಿ ಸ್ಚೂಲಿಗೆ ಹೋಗ್ತಾಇರೋದು ಕಾಣಿಸ್ತು, ನನಗೂ ಆಕ್ಷಣಾ ತುಂಬಾನೇ ಆಸೆ ಆಗೋಯ್ತು,"ಮಾಲಚ್ಚಕ್ಕ... ಮಾಲಚ್ಚಕ್ಕ" ಕರೆದೆ ಮೆಲ್ಲಗೆ, ಅಣ್ಣನ ರೂಮಲ್ಲಿ ಫ್ಯಾನ್ ಜೋರಾಗಿ ಇತ್ತಾದರಿಂದ, ಅವರಿಗೆ ಕೇಳಿಸಿರೋ ಸಾದ್ಯತೆ ಇಲ್ಲ. ಸರಿ.. ಕಿಡಕಿ ಅತ್ರ ಬಂದ ಮಾಲಚ್ಚಕ್ಕಾ, "ಏನು, ಪುಟ್ಟಿ' ಅಂದ್ಲು, "ನಾನು ಸ್ಕೂಲ್ ಗೆ ಬರ್ತೀನಿ" ಅಂದೆ. ಅದೇನಂದಾಳೋ.. ನನಗೆ ಸರಿಯಾಗಿ ನೆನಪಿಲ್ಲ. ಆದ್ರೆ, ನಾನು ಚೇರ್ ಸಹಾಯದಿಂದ ಮೇನ್ ಡೋರ  ನಾ ಮೇಲಿನ ಬೋಲ್ಟ್ ತೆಗೆದು, ಚಪ್ಪಲಿ ಮೆಟ್ಟಿ ಹೊರಟೆ ಬಿಟ್ಟೆ ಅವಳ ಜೊತೆ. ನನಗೇನು ಗೊತ್ತಿತ್ತಾಗ, ಸ್ಕೂಲ್ ಗೆ ಸೇರಿದೋರು ಮಾತ್ರ ಹೋಗ ಬೇಕು.. ಇಲ್ಲಾಂದ್ರೆ ಮನೆಲೇ ಇರಬೇಕು ಅಂತ. ಆಗೆಲ್ಲ ಸರ್ಕಾರಿ ಸ್ಚೂಲ್‌ನಲ್ಲೇ ನಮ್ಮ ವಿದ್ಯಾಬ್ಯಾಸ ನಡೆದಿದ್ದು. ನಮ್ಮ ಅಕ್ಕಂದಿರಿದ್ದ ಸ್ಚೂಲೆ ಮಾಲಚ್ಚಕ್ಕನು ಓದ್ತಾ ಇದ್ದದ್ದು, ಆದ್ರೆ ಅವಳು ಏಳನೇ ಕ್ಲಾಸ್. ನಮ್ಮದೊಡ್ಡಕ್ಕ 5ನೇ  ಕ್ಲಾಸ್, ಸಣ್ಣಕ್ಕ ಮೂರನೇ ಕ್ಲಾಸ್.ಸರಿ ನಾನು ಮಾಲಚ್ಚಕ್ಕ ನ ಕೈ ಹಿಡಿದು ನಡೆಯಲಾರಂಬಿಸಿದೆ.. ಸ್ಕೂಲ್ ಮನೆಯಿಂದ ತುಂಬಾನೇ ದೂರ. ಮಾಲಚ್ಚಕ್ಕ ನನ್ನ ಸ್ವಲ್ಪ ದೂರ ಎತ್ತಿಕೊಂಡ್ಲು ಸೊಂಟದ ಮೇಲೆ. ಸರಿ ಸ್ಕೂಲ್ ಗೆ ಬಂದಮೇಲೆ, ಅವಳು ತನ್ನ ಕ್ಲಾಸ್ ರೂಮಿಗೊಗೋಕಿಂತ ಮುಂಚೆ,"ಇದು, ನಿಮ್ಮ ದೊಡ್ಡಕ್ಕನ ಕ್ಲಾಸ್ ರೂಮ್, ಇದು ನಿಮ್ಮ ಸಣ್ಣಕ್ಕನ ಕ್ಲಾಸ್ ರೂಮ್ "ಅಂತ ದೂರದಿಂದಲೇ ತೋರಿಸಿದ್ಲು, ಸರಿ ಆಮೇಲೆ ಅವಳ  ಕ್ಲಾಸ್ ಗೆ ಅವಳು ಹೋದ್ಲು. ನಾನು ಅಲ್ಲೇ ಮೈದಾನದಲ್ಲಿ ಆಡ್ತಾ ಇದ್ದ ಮಕ್ಕಳ ಜೊತೆ ಆಡೋದಕ್ಕೆ ಶುರು ಮಾಡ್ದೆ, ಆ ಮಕ್ಕಳು ಒಂದನೇ ಕ್ಲಾಸ್  ಇರಬೇಕು.. ನಾನು ಎಲ್ಲರಿಗಿಂತ ಪುಟ್ಟವಳು, ಚೆನ್ನವಾದ ಫ್ರೋಕ್ ಹಾಕಿದ್ದೆ, ಸೊ.. ಎಲ್ಲರೂ ಸೇರಿ ಆಟ ಆಡೂದ್ವಿ. ಆಮೇಲೆ ಸುಮಾರು ಹೊತ್ತಾದ ಮೇಲೆ ಒಬ್ಬ ಮಾಸ್ಟರ್ ಬಂದು, ಎಲ್ಲರನ್ನೂ ಕ್ಲಾಸ್ ರೂಮಿಗೆ ಕರಕೊಂಡೊದ್ರು, ನಾನೂ ಹೋಗಿ ಅವರ ಜೊತೆಲೇ ಕೂತೆ, ಮಾಸ್ಟರ್ ಬೋರ್ಡ್ ಮೇಲೆ ಆ ಆ ಇ ಈ ಬರೆದು, ನಮ್ಗೆಲ್ಲರಿಗೂ ಬರೆಯೋಕೆ ಹೇಳಿದ್ರು, ಅವರಿಗಿನ್ನೂ ನಾನು ಹೊಸಬಳು ಅಂತ ಗೊತ್ತೇ ಆಗಿರಲಿಲ್ಲ. ಸರಿ ಎಲ್ಲರತ್ರಾನು  ಸ್ಲೇಟ್  ಬಳಪ ಇದೆ , ಆದ್ರೆ ನನ್ನ ಹತ್ರ ಇಲ್ಲ. ಆಗ ಆ ಮಾಸ್ಟರ್ ನನ್ನ ಕಡೆ ನೋಡಿದ್ರು. "ಯಾರಿದು ಹೊಸ ಪುಟ್ಟಿ, ಎಲ್ಲಿ ನಿನ್ನ ಸ್ಲಟು ಬಳಪ " ಅಂದ್ರು. ಆ ವಯಸಲ್ಲಿ ಭಯ ಎಲ್ಲಾ ಏನು ಅಂತಾನೆ ಗೊತ್ತಿರಲ್ಲ ಅಲ್ವಾ.. ನಾನು ಹೇಳಿದೆ, "ಇಲ್ಲ ನನ್ಹತ್ರ", ನಿನ್ನ ಹೆಸರೇನು, ಯಾರಾ ಮನೆ ಅಂತ ಎಲ್ಲ ವಿಚಾರಿಸಿಕೊಂಡ್ರು, ನಾನೂ ದೈರ್ಯವಾಗೆ ನನ್ನ ಇಬ್ಬರು ಅಕ್ಕಂದಿರೂ ಇದೆ ಸ್ಚೂಲ್‌ನಲ್ಲಿ ಯಾವ ಯಾವ ಕ್ಲಾಸ್ ನಲ್ಲಿ ಓದೋದು ಅಂತ ಹೇಳಿದೆ. ಅವರು ಆಗ, 'ಹೊ...ಎಲ್ಲೋ ಸ್ಕೂಲ್ ಅಬ್ಯಾಸ ಆಗ್ಲಿ ಅಂತ ನನ್ನ ಕರೆತಂದಿದರೆ' ಅಂತ ಅನ್ಕೊಂಡು, ಮುದ್ದು ಮುದ್ದಾಗಿದ್ದ ನನ್ನ, ಎತ್ತಿ ಮುದ್ದಿಟ್ಟು ಮತ್ತೆ ಕೂಳಿಸಿದ್ರು. ಸರಿ ಆಮೇಲೆ.. ಏನೆಲ್ಲ ಮಾಡಿದೆನೋ ಗೊತ್ತಿಲ್ಲ, ನೆನಪಿಲ್ಲ.  

ಇತ್ತ, ಬಟ್ಟೆ ಒಗೆದು ಬಂದ ಅಮ್ಮ, ಮನೆ ಬಾಗಿಲು ತೇಗಿದಿರೋದು ನೋಡಿ.. ಗಾಬರಿಯಾಗಿದರೆ.. ನಾನು ಬೇರೆ ಕಾಣಿಸ್ತಿಲ್ಲ..... ಹೊರಗಡೆ ಎಲ್ಲಾ ಹುಡುಕಿದಾರೆ. ಎಲ್ಲೂ ಇಲ್ಲ.. ಆ ಬೀದಿಲಿರೊ ಎಲ್ಲ ಮನೆಗಳಲ್ಲೂ ಹುಡುಕಿದರೆ... ನಾನು ಸಿಕ್ಕಿಲ್ಲ. ಅಮ್ಮನ ಸ್ಥಾನದಲ್ಲಿ, ಇವತ್ತು ನಾನು ಇದ್ದು ನೆನೆಸಿಕೊಂಡರೆ.. ಅಮ್ಮ ಪಟ್ಟಿರಾ ಬಹುದಾದ.. ಧುಖ, ಸಂಕಟ, ಭಯ ನಿಜಾವಾಗ್ಲೂ ಯಾವ ತಾಯಿಗೂ ಬೇಡ ಅನ್ನಿಸುತ್ತೆ. 

ಮನೆ ಬೀಗ ಹಾಕಿಕೊಂಡು ಅಕ್ಕ ಪಕ್ಕದ ಬೀದಿ, ಮೇನ್ ರೂಡ್ ನಾ ಅಂಗಡಿಗಳ ಕಡೆ ಎಲ್ಲ ಕಡೆ ಹುಡುಕಿದರೆ ನಾನು ಸಿಕ್ಕಿಲ್ಲ. ಅಷ್ಟರಲ್ಲಿ ಅದೇ ಉರಲ್ಲಿದ್ದ ನಮ್ಮ ಚಿಕ್ಕಮ್ಮ( ತಾಯಿಯ ದೂರದ ಸಂಭಂದಿ) ಸಿಕ್ಕಿ, ಇಬ್ಬರೂ ಎಲ್ಲಾ ಕಡೆ ಹುಡುಕಿದಾರೆ. ನನ್ನ ಪತ್ತೆ ಇಲ್ಲ. ಸರಿ ಮನೆಗೆ ಬಂದು, ಅಣ್ಣನಿಗೆ ಹೇಳೋಕೆ ಅಮ್ಮನಿಗೆ ಭಯ, ಮೊದಲೇ ಅಣ್ಣಾ,, ದೂರ್ವಾಸ ಮುನಿ ಕೋಪದಲ್ಲಿ, ಹೇಳದೆ ಇರೋಕು ಆಗೋಲ್ಲ. ಸರಿ ಮದ್ಯಾನ್ಹ  3 ಗಂಟೆ ವರ್ಗೂ ಹುಡುಕಿ ಹುಡುಕಿ ಸಾಕಾಗಿ .. ನಿದಾನವಾಗಿ ಅಣ್ಣನನ್ನ ಎಬ್ಬಿಸಿ ಅಮ್ಮ, ಹೇಳಿದರೆ, ಮೊದಲೇ ನಿದ್ದೆ ಮಂಪರಿನಲ್ಲಿದ್ದ ಅಪ್ಪನಿಗೆ ....ಮೊದಲು ಅರ್ಥ ಆಗಿಲ್ಲ... ಆಮೇಲೆ ಮತ್ತೇ.. ಎಲ್ಲಾ ಕಡೆ ಹುಡುಕಾಡಿದರೆ..  ಆದರೆ.. ನಾನು ಸಿಕ್ಕಿಲ್ಲ. ಅಮ್ಮನಂತು ಸಾಯೋಷ್ಟು ಭಯದಿಂದ.. ತತ್ತರಿಸಿದರೆ.. ಇತ್ತ ಕಡೆ.. ಮೊದಮೊದಲು ದೈರ್ಯವಾಗಿದ್ದ ಅಣ್ಣಾ, ನಾನು ಎಲ್ಲೂ ಕಾಣಿಸದೆ ಇದ್ದ  ಭಯ ದಲ್ಲಿ, ಅಮ್ಮನಿಗೊಂದು ಕೆನ್ನೆಗೆ ಬಾರಿಸಿದ್ದರು ಸಹ.. 'ಮಗುನಾ ಸರಿಯಾಗಿ ನೋಡ್ಕೊಳೋಕೆ ಆಗೊಲ್ವ ಅಂತ"... ಅಮ್ಮ ಭಯದಲ್ಲಿ  ಏನೂ ಮಾಡಲು ತೋಚದೆ ಅಳೋದಕ್ಕೂ ಶಕ್ತಿ ಇಲ್ಲದೆ ಕೂತಿದಾರೆ.  ಆಗ ಸ್ವಲ್ಪ ಮಕ್ಕಳ ಕಳ್ಳರು ಜಾಸ್ತಿನೇ.. ನಮ್ಮ ಅಣ್ಣನಿಗೆ ಅದೇ ತಲೇಲಿ ಸುಳಿತ ಇದ್ದದ್ದು.. ಎಲ್ಲೋ.. ನನ್ನ, ಮಕ್ಕಳು ಕಳ್ಳರೇ ಎತ್ತ್ಕೊಂಡೋಗಿ ಬಿಟ್ಟಿದಾರೆ ಅಂತ.  ಸರಿ ಪೋಲೀಸ್ ಕಂಪ್ಲೈಯೆಂಟ್ ಕೊಡೋಣ ಅಂತ ಅಣ್ಣಾ ತೀರ್ಮಾನಿಸಿ ರೆಡೀ ಆದ್ರು. 



ಇತ್ತ ಸ್ಚೂಲ್‌ನಲ್ಲಿ. ಎಲ್ಲ ಕ್ಲಾಸ್ ಗಳೂ ಮುಗೀತಿದ್ಡಾಗೆ, ನಾನು ನನ್ನ ದೊಡ್ಡಕ್ಕನ ಕ್ಲಾಸ್ ನಾ ಹೊರಗೆ ನಿಂತು ಕಾಯ್ತಿದ್ದೀನಿ(ಮಾಲಚ್ಚಕ್ಕ ತೋರಿಸಿದ್ಲಲ್ಲ), ಅವರ ಕ್ಲಾಸ್ ಬಿಟ್ಟೊಡನೆ... "ಸುನೀತಕ್ಕಾ..." ಅಂತ ಅವಳ ತೆಕ್ಕೆಗೆ ಬಿದ್ದೊ ಳನ್ನ.. ಅಕ್ಕ ಎತ್ತಿ ಮುದ್ದಿಸಿ .. "ನೀನಿಲ್ಲಿ,,,,??? ಅಮ್ಮ ಬಂದಿದರಾ...?" ಅಂತೆಲ್ಲ ಕೇಳಿದಳು. ನಾನು ಇಲ್ಲ ಅಂತ.. ಬೆಳಿಗ್ಗೆ ಇಂದ ಆದದ್ದನ್ನೆಲ್ಲ ಹೇಳಿದೆ ಏನೋ ಮಹಾ ಕಾರ್ಯ ಸಾಧಿಸಿದೋಳ ಹಾಗೆ.....

 ಸರಿ ಇಬ್ಬರು ಅಕ್ಕಂದಿರ ಜೊತೆ ನಾನು ಮನೆಗೆ ಹೊರಟೆ. ಸುನೀತಕ್ಕ ನನ್ನ ಉಪ್ಪು ಕೂಸು ಮಾಡಿಕೊಂಡೆ ಎತ್ತಿಕೊಂಡು ಬಂದ್ಲು ಅಷ್ಟೂ ದೂರ ಪಾಪ., ಅವಳಿಗೆ ಮನೆಲಿ ಆಗಿರ್ಬಹುದಾದ ಪಜೀತೀ ಬಗ್ಗೆ ಯಾವುದೇ ಸುಳಿವಿರಲಿಲ್ಲ.ಮನೆ ಹತ್ರಾಗುವಷ್ಟರಲ್ಲಿಬೀ, ಅಣ್ಣಾ ಸೈಕಲ್ನ ಮನೆಯಿಂದ ಆಚೆ ನಿಲ್ಸಿದ್ದರು. ಪೋಲೀಸ್ ಸ್ಟೇಶನ್ ಗೆ ಹೋಗಬೇಕು ಅಂತ, ಸರಿ ಮನೆಗೆ ಹೋದ ಮೇಲೆ, ಅಣ್ಣನಿಗೆ ನನ್ನ ನೋಡಿದ ಸಂತೋಷಕ್ಕಿಂತ.. ಅವರಿಗಾಗಿದ್ದ  ಭಯ ಗಾಬರಿನೆ ಒಂದು ಕೈ ಜಾಸ್ತಿ ಇತ್ತು. ಸರಿ.. ಸುನೀತಕ್ಕನ ಕಡೆ ಕೋಪ ಹೋಯ್ತು.. ಅವಳೇ ನನ್ನ ಸ್ಚೂಲ್‌ಗೆ ಕರಕೊಂಡೋಗಿರೋದು ಅಂತ.. ಆದರೆ ಅವಳಿಂದ ಗೊತ್ತಾಗಿದ್ದು ನಾನು ಮಾಲಚ್ಚಕ್ಕನ ಜೊತೆ ಹೋಗಿದ್ದರ ಬಗ್ಗೆ. ಸರಿ ಅದೆಲ್ಲಿತ್ತೊ ಕೋಪ ಅಣ್ಣನಿಗೆ, ಸೈಕಲ್ ಫಾಕ್ಸ್ (ಸೈಕಲ್ ಚಕ್ರದ ಕಂಬಿ), ಕೈಗೆ ತಗೊಂಡೋರೆ... ಬಿಟ್ಟರು ಬಿಟ್ಟ್ರು....ನನಗೆ, ಅಳಲು ಕೂಡ ಶಕ್ತಿ ಇಲ್ಲದೆ ನಿಂತಿದ್ದೆ, ಒಂದಲ್ಲ, ಎರೆಡಲ್ಲಾ.. ಸುಮಾರು ಏಟು,, ಅಡ್ಡ ಬಂದ ಅಮ್ಮನಿಗೂ ಬಿತ್ತು. ಚಿಕ್ಕಮ್ಮ "ಬೇಡ ಭಾವ ಮಗು ಬಿಡಿ ಬಿಡಿ" ಎನ್ನುತಿದ್ದರೂ... ಅಣ್ಣನಿಗೆ ಅರಿವಿಲ್ಲ. ಮೈ ಎಲ್ಲ ಬಾಸುಂಡೆ.. ಕೆಂಪಗಿನ ಬರೆ.. ನನ್ನ ಏಳೇ ಮೈ ಮೇಲೆಲ್ಲಾ... ನನಗೆ ಕೂಯೀ ಮಿಯೀ ಅನ್ನಲು ಬಾಯಿಲ್ಲ. ದೈರ್ಯವಿಲ್ಲ. 

ಅಮ್ಮ ನನ್ನ ಎಳೆದುಕೊಂಡೋಗಿ ರೂಮಲ್ಲಿ ತಬ್ಬಿಕೊಂಡು ಗೋಳೋ ಎಂದು ಅಳಲು ಶುರು ಮಾಡಿದ್ರು.. ನನಗೂ ಅಳು.. ಆದ್ರೆ.. ಎಷ್ಟು ನೋವಿತ್ತು.. ಏನಾಗ್ತಾ ಇತ್ತು ಅಂತ ನನಗೆ ನಿಜವಾಗ್ಲೂ ನೆನಪಿಲ್ಲ.. ಸ್ವಲ್ಪ ಹೊತ್ತಿಗೆ ಅಮ್ಮನ ತೊಡೆ ಮೇಲೆ ನಿದ್ದೆ ಮಾಡಿದ್ದೆ.  ಅಣ್ಣಾ ... ನೈಟ್ ಶಿಫ್ತಿಗೊಗುವಾಗ್ಲೂ ನಾನು ಮಲಗಿಯೇ ಇದ್ದೇನಂತೆ.. ಮಲಗಿದ್ದವಳನ್ನೇ ನೋಡಿ ಅಣ್ಣಾ... ಮೈಗೆ ಏನಾದ್ರೂ ಹಚ್ಚಲು ಹೇಳಿ ಹೋದ್ರು. ಆ ರಾತ್ರಿ ನನಗೆ  ಎದ್ದದ್ದೂ ನೆನಪಿಲ್ಲ, ಊಟ ಮಾಡಿದ್ದು ನೆನಪಿಲ್ಲ. 

ಆದ್ರೆ.. ಬೆಳಗ್ಗೆ ಎದ್ದಾಗು.. ಅಣ್ಣಾ ನನ್ನ ಪಕ್ಕದಲ್ಲೇ ಕೂತಿದ್ರು. ನೈಟ್ ಶಿಫ್ತಿಗೆ ಅಂತ ಹೋದ ಅಣ್ಣಾ ನಾ ಕೈಲಿ ಕೆಲಸ ಮಾಡಲಾಗಲಿಲ್ಲವಂತೆ ಅಯ್ಯೋ ಮಗೂಗೆ ಹೊಡೆದು ಬಿಟ್‌ನಲ್ಲ.. ಅನ್ನೋ ಹಪ ಹಪಿ..ತಳಮಳ.. ಸಂಕಟ.. ದುಖಃ.., ಅರ್ಧ ರಾತ್ರಿ ಸುಮಾರು, ಹನ್ನೆರಡೋ.. ಒಂದು ಗಂಟೆಗೆಲ್ಲ 6 ಮೈಲಿ, ಸೈಕಲ್ ತುಳಕೊಂಡು  ಮನೆಗೆ ವಾಪಸ್ ಬಂದೋರು.. ನನ್ನ ಪಕ್ಕನೆ ಕೂತಿದ್ರಂತೆ. ಬೆಳಗ್ಗೆ ಎದ್ದ ನನ್ನ ಮುದ್ದಿಸಿದ್ದೋ ಮುದ್ದಿಸಿದ್ದು.. ಅಮ್ಮನ ಕೈಲಿ ನನ್ನ ರೆಡೀ ಮಾಡಿಸಿ.. ಮರತ್‌ಹಳ್ಳಿ ಗೆ ಕರಕೊಂಡು ಹೋಗಿ ಸಿನೆಮಾ ತೋರಿಸಿ.. ಹೋಟೆಲ್‌ನಲ್ಲಿ ಮಸಾಲೆ ದೋಸೆ , ಹೋರ್ಲೀಕ್ಸ್ ಕೊಡಿಸಿ ಮನೆಗೆ ಕರಕೊಂಡು ಬಂದಿದ್ದರು. ಅಮ್ಮ ಮತ್ತು ಅಕ್ಕಂದಿರಿಗೂ ಬೇಕರಿ ತಿಂಡಿಗಳು.... :-0

ಈಗಲೂ.. ನನಗೆ ... ಈ ಘಟನೆ ನೆನಪಾಗೋದು ಯಾಕೆ ಅಂದ್ರೆ.. ಅದಾದ ಮೇಲೆ ಅಣ್ಣಾ ನನಗೆ ಯಾವತ್ತೂ ಹೊಡೆದಿರಲಿಲ್ಲ. ನಾನು ಅವರ ಮುದ್ದಿನ ಮಗಳೆ ಅಂದಿಗೂ.. ಇಂದಿಗೂ.

ಸ್ಚೂಲಿಗೊಗೊ ಮಕ್ಕಳನ್ನೆಲ್ಲ.. ನಮ್ಮ ಬೀದಿಯಲ್ಲಿ ನೋಡುವಾಗ.. ಈ ಘಟನೆ ನೆನಪಾಯ್ತು.. ಅದಕ್ಕೆ ಶೇರ್ ಮಾಡಿದೆನೆ.. :-)

ನಿಮ್ಮ ಸಲಹೆ ಸೂಚನೆಗಳಿಗೆ.. ಸದಾ ಸ್ವಾಗತ

No comments:

Post a Comment