Monday 22 June 2015

ಬಾಲ್ಯದ ಪ್ರಿಯಾ ಗೆಳತಿ.... ಎಲ್ಲಿರುವೇ...

ನಾನು ಪ್ರೈಮರೀ ಸ್ಕೂಲ್ನಲ್ಲಿ ದ್ದಾಗ, ನಾಲ್ಕನೇ ತರಗತಿಗೆ  ರಶ್ಮಿ ಅನ್ನೋ ಹುಡುಗಿ ಹೊಸ್ದಾಗಿ ಸೇರಿದ್ಲು ಆ ವರ್ಷ, ರಶ್ಮಿ ಯಾವ ಊರಿಂದ ಬಂದಿದ್ದಳು ಅಂತ ನನಗೆ ಸರಿಯಾಗಿ ನೆನಪಿಲ್ಲ. ಆದರೆ, ಹೊಸದಾಗಿ ಸೇರಿದೋಳ ಜೊತೆ ನಾವೆಲ್ಲ.. ನಾ ಮುಂದು ನೀ ಮುಂದು ಅಂತ ಅವಳ ಜೊತೆ ಮಾತಾಡೋಕೆ ಮುಗಿಬಿದ್ದಿದ್ವಿ ... ಅವಳೂ.. ತಾನೂ ಬೇರೆ ಊರಿಂದ ಬಂದಿರೋ ಗತ್ತನ್ನ.. ನಮ್ಮತ್ರ ಚೆನ್ನಾಗೇ ತೋರಿಸಿದ್ಲು.ನಂತರದ ದಿನಗಳಲ್ಲಿ... ರಶ್ಮಿ ಮತ್ತು ನಮ್ಮ ಗೆಳೆತನ ಚೆನ್ನಾಗೇ ಬೆಳೀತು. ಅವಳೂ ಓದುವುದರಲ್ಲಿ ನಮ್ಮ ಸರಿ ಸಮವೇ... 


ಅವಳ ಅಪ್ಪ.. AEO (assistant educational officer) ಆಗಿದ್ದರು.. ಹಾಗಾಗಿ ಅವಳೂ ಸ್ವಲ್ಪ ನಮಗಿಂತ ಮೇಲೆ ಅನ್ನೋತರ ಟೀಚರ್ಸ್ ಸಹ ನಡಿಸ್ಕೊಲ್ತ ಇದ್ದದರಿಂದ... ಅವಳಿಗೂ ಸ್ವಲ್ಪ ಜಂಬ ಇದ್ದೇ ಇತ್ತು. ಆದರೆ.. ನನ್ನ ಮತ್ತು ಅವಳ ಸ್ನೇಹಾ..ತುಂಬಾನೇ ಚೆನ್ನಾಗಿತ್ತು. ನಾನು ಸಂಗೀತ ಕಲಿಯುತ್ತಿದ್ದ ದಿನಗಳು, ಅವಳಿಗೆ ದೈವದತ್ತವಾಗಿ ಬಂದ ಕಂಠ.. ಎಲ್ಲ ಸ್ಕೂಲ್ ಪ್ರೋಗ್ರಾಮ್ ನಲ್ಲೂ  ಚೆನ್ನಾಗೇ  ಇಬ್ಬರು ಭಾಗವಹಿಸ್ತ ಇದ್ವಿ..


ಶಾಲೆ ಇಂದ ನಮ್ಮ ಮನೆ ದೂರ ವಿದ್ದದ್ದರಿಂದ ನಾನು ಊಟದ ಡಬ್ಬಿ ತೆಗೆದು ಕೊಂಡೋಗುತ್ತಿದ್ದೆ, ರಶ್ಮಿಯ ಮನೆ ಶಾಲೆಗತ್ಟಿರಾ ಲಂಚ್ ಬ್ರೇಕ್ ನಲ್ಲಿ.. ನನ್ನನ್ನು ಬಿಡದೆ ತನ್ನ ಮನೆಗೆ ಕರೆದುಕೊಂಡು ಹೋಗುತ್ತಿದ್ದಳು.. ಹಾಗಾಗಿ  ನನಗೆ ತುಂಬಾನೇ ಪರಿಚಯ.. ಅವಳ ಮನೆಯವರೆಲ್ಲಾ.


ಅವಳಿಗೆ 3 ಅಕ್ಕಂದಿರು, ಒಬ್ಬಳು ತಂಗಿ, ಒಬ್ಬ ತಮ್ಮ,..6  ಜನ ಮಕ್ಕಳ ದೊಡ್ಡ ಕುಟುಂಬ.. ಕೆಲವೊಮ್ಮೆ  ನನಗೆ ಅವರ ಮನೆಯವರ ಹೆಸರುಗಳೇ ನೆನಪಿರುತ್ತಿರಲಿಲ್ಲ.. ಇಲ್ಲ ಕನ್ಫ್ಯೂಷನ್  :-( 


ಶನಿವಾರ .. ಭಾನುವಾರಗಳಂದು ಅವಳು ನಮ್ಮ ಮನೆಗೆ ಬರುತ್ತಿದ್ದಳು.. ನಮ್ಮದು ತುಂಬಾ ದೊಡ್ಡ ಕಾಂಪೌಂಡ್.... ಎಷ್ಟೊಂದು ಮರ ಗಿಡ.. ಆಡಲು ಜೋಕಾಲಿ.. ಹಾಗಾಗಿ (ಈಗ ಅದೆಲ್ಲ ಇಲ್ಲ... ಬಾಡಿಗೆ ಮನೆಗಳನ್ನು ಕಟ್ಟಿಸಿದೇವೆ ಖಾಲಿ ಜಗದಲ್ಲೆಲ್ಲ....). ಆರನೇ ತರಗತಿಯವರೆಗೂ ಜೊತೆಯಲ್ಲೇ ಓದಿದ್ದೆವು, ಅವಳ ತಂದೆಗೆ ವರ್ಗ ವಾದದ್ದರಿಂದ ಅವಳು ದೊಡ್ಡಬಳ್ಳಾಪುರಕ್ಕೆ ಹೊರಟು ಹೋದಳು.. ನಂತರವೂ.. ನಾವು ಪತ್ರ ದ ಮೂಲಕ  ಟಚ್ ನಲ್ಲಿದ್ದೆವು.. ಸುಮಾರು ಪತ್ರಗಳು,,
ಹತ್ತನೇ ತರಗತಿವರೆಗೆ ಸಾಲು ಸಾಲು ಪತ್ರ .. ತಿಂಗಳಿಗೊಮ್ಮೆ ಎಂಬಂತೆ, ಅವರ ತಂದೆಗೆ ಮತ್ತೆ  ವರ್ಗವಾಗಿದ್ದರಿಂದ.. ಅವಳು ಮತ್ತೆ ಬೇರೆ ಉರಿಗೆ ಹೋದ ಮೇಲೆ.. ನಮ್ಮ ಗೆಳೆತನ ಕೊನೆಗೊಂಡಿತ್ತು, ಅನ್ನೋದಕ್ಕಿಂತ.. ನಮ್ಮ ಪತ್ರ ವ್ಯವಹಾರ ನಿಂತಿತ್ತು.


ನನಗವಳ  ಬದಲಾದ ವಿಳಾಸ ತಿಳಿದಿರಲಿಲ್ಲ. ನನ್ನ PUC ಮುಗಿದ ಸಮಯದಲ್ಲಿ ಒಮ್ಮೆ ಪತ್ರ ಬರೆದಿದ್ದಳು... ಆಗ ನಮ್ಮ ಮನೆಗೆ ಲ್ಯಾಂಡ್ ಲೈನ್ ಫೋನ್ ಬಂದಿತ್ತು, ನಂಬರ್ ಕೊಟ್ಟು ಫೋನ್ ಮಾಡಲು ಬರೆದಿದ್ದೆ. ಒಮ್ಮೆ ಫೋನ್ ಸಹಾ ಮಾಡಿದ್ದಳು ಅಮ್ಮಣ್ಣಿ ಕಾಲೇಜ್/' ಮಹಾರಾಣಿ ಕಾಲೇಜ್ ನಲ್ಲಿ  BSc ಮಾಡುತ್ತಿರುವುದಾಗಿ ಹೇಳಿದ್ದಳು.. ನಂತರ ಪತ್ರ ವ್ಯವಹಾರವೂ ಇಲ್ಲ . ಫೋನು ಇಲ್ಲ...
ರಶ್ಮಿ, ಇಂದ್ಯಾಕೋ ತುಂಬಾ ನೆನಪಾಗಿದ್ದಾಳೇ....ಅವಳನ್ನು ಹುಡುಕುವ ಎಲ್ಲಾ ಪ್ರಯತ್ನವೂ ಮಾಡಿದೆ..through social networking...ಪ್ಚ್...ಪ್ಚ್... nope... I couldn't  find her.. ರಶ್ಮಿ ಎಲ್ಲೇ ಇದ್ದರೂ ಚೆನ್ನಾಗಿರಲಿ ಅನ್ನೋ ಹಾರೈಕೆಯೊಂದಿಗೆ... ಮತ್ತು ಈ ಬ್ಲೋಗ್ ಮೂಲಕವಾದ್ರೂ ಸಿಗಲಿನ್ನೊ ಆ ಸಣ್ಣ ಆಸೆಯೊಂದಿಗೆ.. ಈ ಬ್ಲಾಗ್ ನಾ, ಈ ಪೋಸ್ಟ್ ...:-)



No comments:

Post a Comment