Thursday 4 June 2015

ಮರುಜನ್ಮ.. ...ಸಣ್ಣ ಕಥೆ

"ಅತ್ತಿಗೆ, ನಿಮ್ಮ ಕೈ ಮುಗಿತೇನೆ, ನನ್ನ ದಯವಿಟ್ಟು ಒಳಗೆ ಕಳಿಸಬೇಡಿ, ನನ್ನ ಕೈಲಾಗೊಲ್ಲ.. ಅವರು ನನ್ನ ಮುಕ್ಕಿಬಿಡ್ತಾರೆ" ರೂಮಿಗೆ ಹೋಗಲು ನಿರಾಕರಿಸಿ ಅಳುತ್ತಿದ್ದಳು ವೇದಾ. ಕೆದರಿದ ತಲೆ, ಕಚ್ಚಿದ ಗುರುತು ಒಂದು ಕೆನ್ನೆಯ ಮೇಲಾದರೆ, ಅಂಗೈ ಗುರುತು ಇನ್ನೊಂದರ ಮೇಲೆ. ಆಸ್ತವ್ಯಸ್ತಗೊಂಡ ಸೀರೆ ದೈನ್ಯ ಮುಖ. ಇದ್ಯಾವುದೂ  ಶಾಂತಾ ಅತ್ತಿಗೆ(ಗಂಡನ ಅಕ್ಕ) ಮೇಲೆ  ಯಾವುದೇ ಪರಿಣಾಮ ಬೀರಲಿಲ್ಲ. ಬದಲಿಗೆ "ಗಂಡನಿಗೆ ಸುಖ ಕೊಡಲಾರದ ನೀನೆಂಥ ಹೆಂಡ್ತಿಯೆ ಅವನಿಗೆ, ಹೋಗ್ಲಿ ಬಾ"ಎಂದು ತನ್ನ ರೂಮಿಗೆ ಕರೆದೊಯ್ದು , ಮುಖ ತೊಳೆಸಿ, ಬೇರೆ ಸೀರೆ ಉಡಿಸಿ ತಲೆ ಬಾಚಿ ಅಲಂಕರಿಸಿದಳು. 17 ವರ್ಷದ ಮುಗ್ದ ವೇದಾ ಎಲ್ಲದಕ್ಕೂ ಮೂಕವಾಗಿದ್ದಳು, ಗಂಡನಲ್ಲಿಗೆ ಕಳಿಸದಿದ್ದರೆ ಸಾಕು .ತಾನು ಬೇರೆ ಏನು ಬೇಕಾದರೂ ಮಾಡಲು ಸಿದ್ಧ. ವೇದಾಳ ಕೈ ಹಿಡಿದು ಕರೆದೊಯ್ದಳು ಶಾಂತಾ... ತಲೆ ತಗ್ಗಿಸಿ ಬರುತ್ತಿದ್ದ ವೇದ... ಗಂಡನ ರೂಮಿನ ಎದಿರುಗೆ ಬಂದು ನಿಂತಾಗ... ಬೆಚ್ಚಿದಳು. ದೈನ್ಯವಾಗಿ ಶಾಂತಳತ್ತ ನೋಡಿದಳು. ಶಾಂತಳಿಗೆ ಅದರ ಅರ್ಥ ಗೊತ್ತಿದ್ದರೆ ತಾನೇ...ಕುತ್ಸಿಕತೆ, ಕ್ರೌರ್ಯವಾಗಿ  ನಕ್ಕು,"ಲೋ. ಶ್ರೀಧರಾ, ನಿನ್ನ ಅಪ್ಸರೆ ಬಂದಿದಾಳೆ ನೋಡೋ" ಎಂದು ರೂಮಿನ ಒಳಗೆ ತಳ್ಳಿ ಬಾಗಿಲೇಳೆದುಕೊಂಡ್ಲು.


ರೂಮೊಕ್ಕ ವೇದಾ ತರ ತರ ನಡುಗುತ್ತಿದ್ದಳು, ಅವಳ ಏಳೇ ದೇಹ ಕಂಪಿಸುತ್ತಿತ್ತು, ಕೈ ಮುಗಿದಳು ಗಂಡನತ್ತ ನೋಡಿ. ಮಾತು ಹೊರಡಲಿಲ್ಲ ಬಾಯಿಂದ."ನನ್ನಿಂದ ತಪ್ಪಿಸಿಕೊಂಡು ಎಲ್ಲಿ ಹೋಗಬಹುಬಹುದಂದುಕೊಂಡಿದ್ದೆ.....! ನನ್ನ ಸ್ವೀಟ್ ವೇದು..." ಎಂದು ಹತ್ತಿರ ಬಂದವನತ್ತ ನೋಡದೆ, ತಪ್ಪಿಸಿಕೊಳ್ಳಲು ಎಲ್ಲಾದರೂ ಜಾಗವಿರುವುದೇನೋ ಎಂದು ಅತ್ತಿತ್ತ ನೋಡಿದಳು. ಇಲ್ಲಾ... ಅಷ್ಟರಲ್ಲೇ, ಮೃಗದಂತೆ ಅವನ ಬಿಗಿ ಬಂದನದಲ್ಲಿದ್ದಳು. ತಪ್ಪಿಸಿಕೊಳ್ಳುವ ಮಾತೆಲ್ಲಿ.... ಅವಳು ಒದ್ದಾಡಿದಷ್ಟು, ಅವನ ಹಿಂಸೆ, ವಿಕೃತತೆ ಹೆಚ್ಚಾಗು ತ್ತಿತ್ತು . ಸಹಿಸಲಾರದೆ, ಜ್ಞಾನ ತಪ್ಪಿದಳು ವೇದಾ.


ಜ್ಞಾನ ಬಂದಾಗಲೂ, ಅದೇ ಪರಿಸ್ಥಿತಿಯಲ್ಲಿ ಬಿದ್ದಿದ್ದಳು ವೇದಾ ನೆಲದ ಮೇಲೆ. ಮೈ ಮೇಲೆ ಕೂದಲೆಳೆ ಬಟ್ಟೆಯೂ ಇಲ್ಲದೆ, ಮೈಯೆಲ್ಲಾ ನಜ್ಜು ಗುಜ್ಜಾದ ನೋವು.ಮೈ ಮುದುರಿ  ನಾಚಿಕೆಯಿಂದ ಹಿಡಿಯಷ್ಟಾಗಿ ತಲೆಯೆತ್ತಿ ನೋಡಿದರೆ...., ಎದುರಿಗೆ ಕುಳಿತು ಕಾಯುತ್ತಿದ್ದ ಶ್ರೀಧರ ,ಅವಳು ಎಂದು ಎಚ್ಚರಗೊಂಡಾಳೋ... ಎಂದು, ಅವಳು ಎಚ್ಚರಗೊಂಡಿದ್ದು, ಗಮನಿಸಿ, ಕೈಲಿದ್ದ, ಕ್ಯಾಮರ, ಮತ್ತೆ ಟೀವೀ ಮೇಲೆ ಸರಿಯಾದ ಆಂಗಲ್ ಗೆ ಅಡ್ಜಸ್ಟ್ ಮಾಡಿ ಹತ್ತಿರ ಬಂದವನತ್ತ, ಬೆದರಿದ ಕಂಗಳಲ್ಲೇ ಬೇಡವೆಂಬಂತೆ ಶಕ್ತಿ ಇಲ್ಲದ  ಕೈಗಳನ್ನೆತ್ತಿ  ಬೇಡಿದಳು, ಶ್ರೀಧರನ ಕಂಗಳಲ್ಲಿ ವಿಕೃತ ಕಾಮ ಮತ್ತೊಮ್ಮೆ ವಿಜ್ರುಂಬಿಸಿತು.

ವೇದಾ, ಆಗಷ್ಟೇ PUC ಗೆ ಸೇರಿದ್ದಳು, ಮನೆಯವರ ವಿರೋಧದ ಮದ್ಯೆ ಅಣ್ಣ ವೆಂಕಟೇಶ್  ಒಬ್ಬನೇ ಸಹಾಯಕ್ಕೆ ನಿತದ್ದು. ಸಣ್ಣ ಹಳ್ಳಿಯ ದೇವಸ್ಥಾನದ ಅರ್ಚಕರಾಗಿದ್ದ ಶಂಕರಯ್ಯನವರು ಪಕ್ಕಾ ಸಂಪ್ರದಾಯಸ್ಥರು, ಮೊದಲ ಮಗ ಶಂಕರ ಹುಟ್ಟಿದ, ಹನ್ನೆರೆಡು ವರ್ಷಕ್ಕೆ ಹುಟ್ಟಿದ ಅಪರೂಪದ ಮಗಳು ವೇದಾ. ಅವಳ 15 ನೇ ವರ್ಷದಿಂದಲೇ ಅವಳ ಮದುವೆಗಾಗಿ ತಯಾರಿ ನಡೆದಿತ್ತು, ಮಗಳು ಕಾಲೇಜ್ ಗೆ ಹೋಗುವೆನಂದಾಗ... ದೊಡ್ಡ ವಾಗ್ವಾದವೇ ನಡೆದಿತ್ತು ಮನೆಯಲ್ಲಿ ತಂದೆ ಮಗನಿಗೆ. ಶಂಕರಯ್ಯನವರ ತಾಯಿ ಇನ್ನೂ ಗಟ್ಟಿ ಮುಟ್ಟಾಗಿದ್ದರು, ಶಂಕರಯ್ಯನವರ ಪತ್ನಿಯನ್ನು ಇನ್ನೂ ತಮ್ಮ ಹಿಡಿತದಲ್ಲೇ ಇಟ್ಟುಕೊಂಡಿದ್ದರು, ಆಕೆಗೆ ತನ್ನತನ ವೆನ್ನುವುದೇ ಇರಲಿಲ್ಲ. ಗಂಡ ಮತ್ತು ಅತ್ತೆಯ ಕೈ ಕೆಳಗೆ ಅವರು ಹೇಳಿದಂತೆಯೇ  ನಡೆಯುತ್ತಿದ್ದರು.... ವೆಂಕಟೇಶ  ಡಿಗ್ರೀ ಮುಗಿಸಿ ಯಾವುದೋ,.. ಖಾಸಗಿ ಕಂಪನೀಯಲ್ಲಿ ಅಕೌಂಟೆಂಟ್ ಆಗಿದ್ದ.. ತನ್ನ ತಂಗಿಯೂ ಓದಲಿ ಎಂಬ ಆಸೆಯಿಂದ ಅವಳಿಗೆ ಬೆಂಬಲಿಸಿದ್ದ. 

ಆದರೇನು, PUC ಗೆ ಸೇರಿದ ಸ್ವಲ್ಪೇ ದಿನದಲ್ಲಿ ವೇದಾಳಿಗೆ ಸಂಭಂದ ಕುದುರಿ ಬಂದಿತ್ತು. ಹುಡುಗ ಅಮೇರಿಕದಲ್ಲಿ ಯಾವುದೋ ಕೆಲಸದಲ್ಲಿದ್ದ, ಸದ್ಯಕ್ಕೆ ಬೆಂಗಳೂರಿನಲ್ಲೇ ಕೆಲಸವಾಗಿದ್ದರಿಂದ ತಿರುಗಿ ಬಂದಿದ್ದ. ಶಂಕರಯ್ಯನವರು, ತಮ್ಮ ಯೋಗ್ಯತೆಗೆ ಮೀರಿದ ಸಂಬಂಧವೆಂದು, ಸಂತೋಷ ಪಟ್ಟು ಮದುವೆ ಮಾಡಿಕೊಟ್ಟಿದ್ದರು.
ವೆಂಕಟೇಶನ ವಿರೋಧ ಯಾವುದೇ ಲೆಕ್ಕಕ್ಕಿರಲಿಲ್ಲ.. ವೇದಾಳಂತು ಸರಿ... ಅತ್ತೆಯ ಕೈಲಿ ನಡುಗುವ ಅಮ್ಮನ ಮಗಳು... ಇನ್ನೇನನ್ನು  ನೀರಿಕ್ಷಿಸಲು ಸಾಧ್ಯ.. ಕಣ್ಮುಚ್ಚಿ ಕುತ್ತಿಗೆಯೋಡ್ಡಿದ್ದಳು. 


ಮದುವೆಯ ದಿನವೇ.. ವೇದಾಳನ್ನು ಬೆಂಗಳೂರಿಗೆ ಕರೆ ದೊಯ್ದಿದ್ದರು ಶ್ರೀಧರನ ಮನೆಯವರು(ಶ್ರೀಧರನಿಗೆ ತಂದೆ ತಾಯಿ ಇಲ್ಲ, ಗಂಡ ಸತ್ತ ಮೇಲೆ  ತಮ್ಮನೊಡನಿದ್ದ  ಅಕ್ಕ ಶಾಂತಾ ಒಬ್ಬಳೇ.). ಮೊದಲ ರಾತ್ರಿಯೇ.. ವೇದಾಳಿಗೆ  ನರಕ ದರ್ಶನವಾಗಿತ್ತು. ಅಮೇರಿಕ ದಿಂದ ತಂದ...ಕಾಮಕೇಳಿಯ.. ಕಸ್ಸೆಟ್ಸ್ TV ಯಲ್ಲಿ ಹಾಕಿ.. ವೇದಾಳನ್ನು ನೋಡಲು ಒತ್ತಾಯಿಸಿ ಅಂತೆಯೇ ಅವಳ ಮೇಲೆ ಅತ್ಯಾಚಾರವೆಸಗಿದ್ದ ( ಹೆಣ್ಣಿಗೆ ಇಷ್ಟವಿಲ್ಲದ ಮೇಲೆ ಅವಳು ವೈಶ್ಯೆ ಯೇ ಆಗಿರಲಿ.. ಅದು ಅತ್ಯಾಚಾರವೇ ಸೈ ಅಲ್ಲವೇ....??).ಅದಕ್ಕೆ.. ತಕ್ಕಂತೆ ಅವನ ಅಕ್ಕ ಶಾಂತಾ... ತಾನೂ ನಾದಿನಿಯ ಮೇಲೆ ತನ್ನ ಮಾನಸಿಕ ವಿಕೃತತೆಯನ್ನು ತೋರಿಸಿಕೊಳ್ಳುತ್ತಿದ್ದಳು.. ಬೇಕೆಂದೇ  ವೇದಾಳನ್ನು ಶೃಂಗರಿಸಿ.. ಅವನ ರೂಮಿಗೆ ತಳ್ಳಿ, ಹೊರಗಿಂದ ಚಿಲಕ ಹಾಕಿಕೊಳ್ಳುತ್ತಿದ್ದಳು.
ಶ್ರೀಧರ ನದು ತೀರಲಾರದ ದಾಹ.. ಕಾಮುಕತೆ.. ವಿಕೃತತೆವೇದಾ... ಮೇಲೆ ಎಸಗಿದ ಅತ್ಯಾಚಾರದ ವೀಡಿಯೋ ಮಾಡಿ ... ಮತ್ತೆ ಮತ್ತೆ ನೋಡುವುದು.


ಪಕ್ಕದ  ಮನೆಯವರ ಮುಂದೆಲ್ಲ" ಅಯ್ಯೋ... ನನ್ನ ತಮ್ಮನಿಗೆ, ಎಂತಹಾ ಹಳ್ಳಿ ಗೊಡ್ಡು  ಗಂಟು ಬಿದ್ದಿದೆಯಮ್ಮ... ಅವನ ಇಷ್ಟಾ ನಿಷ್ಟ ಗಳನ್ನು ಅರ್ಥವೇ ಮಾಡಿಕೊಳ್ಳೋಲ್ಲ...."ಇನ್ನೂ ಇತ್ಯಾದಿ ದೂರುತ್ತಿದ್ದಳು. ವೇದಾ ರಾತ್ರಿಯಾಯಿತಂದರೆ ಬೆವರಿ ನಡುಗುತ್ತಿದ್ದಳು... ಮದುವೆಯಾಗಿ 1 ತಿಂಗಳಲ್ಲೇ.. ಸೊರಗಿ ಸೊಪ್ಪಾಗಿದ್ದಳು.  ಶಂಕರಯ್ಯನವರೊಮ್ಮೆ.. ಅಳಿಯನಿಗೆ ಫೋನ್ ಮಾಡಿ.. ಮಗಳನ್ನು ನೋಡಲು ಬರುವೆನೆಂದರೆ... ಶ್ರೀಧರ "ಇಲ್ಲ ಮಾವನವರೇ... ನಿಮ್ಮ ವೇದಾಳೊಟ್ಟಿಗೆ ನಾನು ಹನಿಮೂನ್ ಗೆ ಹೊರಟಿರುವೆ, ಬಂದ ಮೇಲೆ ನಾನೇ ಫೋನ್ ಮಾಡುವೆ" ಎಂದು ನಯವಾಗಿ ನಿರಾಕರಿಸಿದ್ದ.
ವೇದಾ ತನ್ನ ಅಣ್ಣಾ ವೆಂಕಟೇಶನ ಆಫೀಸ್ ಫೋನಿಗೆ ಫೋನ್ ಮಾಡೋಣವೆಂದರೆ.. ಶಾಂತಾಳ ಹದ್ದಿನ ಕಣ್ಣು.. ದಿಕ್ಕು ತೋಚದೆ... ಸುಮ್ಮನಾಗಿದ್ದಳು. ಇದೆ ರೀತಿ ಮುಂದುವರೆದು.ಶ್ರೀಧರನ ವಿಕೃತ ಕಾಮ ತಾಳಲಾರದೆ.. ವೇದಾ ಎರೆಡು - ಮೂರು ಸಲ ಮೂರ್ಛೆಯೋಗಿ, ಜ್ಞಾನ ಬರಲು ಮೂರು ದಿನಗಳೇ ಬೇಕಾಗಿತ್ತು...ಆಗಲೂ ಶ್ರೀಧರನಾಗಲಿ,ಶಾಂತಳಾಗಲಿ, ಅವಳನ್ನು ಆಸ್ಪತ್ರೆ ಗೆ ಕರೆದೊಯ್ದಿರಲಿಲ್ಲ. 


ಅವಳಲ್ಲಿ  ಇನ್ನೇನು ನನಗೆ ಉಳಿದಿಲ್ಲ ಎಂಬ ಭಾವನೆ ಶ್ರೀಧರನಿಗೆ ಬಂದು... ಅವಳ ಕೈಲಿ ಡೈವೋರ್ಸ್ಗೆ ಸೈನ್ ಮಾಡಿಸಿಕೊಂಡಿದ್ದ... ಅವಳ ಅಣ್ಣನಿಗೆ ಫೋನ್ ಮಾಡಿ ಬರಲು ಹೇಳಿದ್ದ. ವೆಂಕಟೇಶ ಬಂದಾಗ, "ಅಣ್ಣಾ ನಾನಿಲ್ಲಿ ಇರೋಕಾಗಲ್ಲ ಅಣ್ಣಾ... " ಎಂದು ತೆಕ್ಕೆ ಬಿದ್ದು ಆಳುತ್ತಿದ್ದ,... ಮೂಳೆ ಚಕ್ಕಳವಾಗಿದ್ದ  ತಂಗಿಯನ್ನು ನೋಡಿ... ಬಿಕ್ಕಿ ಬಿಕ್ಕಿ ಅತ್ತುಬಿಟ್ಟ.
ಶ್ರೀಧರ ಅವನ ಮೇಲೇ ಗೂಬೆ ಕೂರಿಸಿದಾ "ವೇದಾ ಏನು ಅರಿಯದ ಮುಗ್ದೆ ಅವಳಿಗೆ ಧಾಂಪತ್ಯ ಜೀವನವೇನೆಂಬುದೇ ತಿಳಿಯದು... ನೀವೆಲ್ಲ ಸೇರಿ ನನ್ನ ಬಾಳು ಹಾಳುಮಾಡಿದಿರಿ. ಅವಳನ್ನು ಕರೆದುಕೊಂಡೋಗಿ, ಅವಳೂ ಒಪ್ಪಿ ಡಿವೋರ್ಸೆಗೆ ಸೈನ್ ಮಾಡಿದ್ದಾಳೆ" ಎಂದಿದ್ದ. ವೆಂಕಟೇಶ ಮರು ಮಾತಾಡದೆ.. ತಂಗಿಯನ್ನು ಮನೆಗೆ ಕರೆದು ಕೊಂಡು ಬಂದಿದ್ದ. ಅವಳ ಮೈ ಮೇಲಿನ ಕಚ್ಚಿದ ಗುರ್ತು... ಕೆನ್ನೆಯೆಲ್ಲಾ ಬಾತುಹೋಗಿದ್ದೆ ಸಾಕಿತ್ತು ಅವನಿಗೆ ಇಡೀ ಕಥೆ ಹೇಳಲು.
ಮನೆಯಲ್ಲಿ ದೊಡ್ಡ ಜಗಳವೇ ನಡೆಯಿತು, ಶಂಕರಯ್ಯ ಮಗನನ್ನು ಹಿಡಿದು ಕೆನ್ನೆಗೆ ನಾಲ್ಕು ಬಾರಿಸಿಯೂ ಬಿಟ್ಟರು.. ಅವರಿಗೆ ಮಗಳ ಸ್ಥಿತಿಯ ಬಗ್ಗೆ ಯಾವುದೇ ಕಾಳಜಿಯಿಲ್ಲ.. ಕೇವಲ, ಮರ್ಯಾದೆಯ ಪ್ರಶ್ನೆ... ನೋಡಿದವರು ಏನೆಂದಾರು.... ನಾವು ತಲೆ ಎತ್ತಿ ತಿರುಗುವುದು ಹೇಗೆ..... !
ಹೆಣ್ಣಾದವಳು  ಗಂಡನ ಮನೆಯಲ್ಲಿರಬೇಕಷ್ಟೆ... ಅವನು ಸಾಯಿಸಿದರು ಅಷ್ಟೇ... ಬಾಳಿಸಿದರೂ ಅಷ್ಟೇ... ಮಗಳನ್ನು ಮತ್ತೆ.. ಅಳಿಯನ ಕಾಲಿಡಿದು.. ಅವನ ಮನೆಗೆ ಬಿಟ್ಟು ಬರಲು ರೆಡೀ ಯಾದಾಗ, ವೆಂಕಟೇಶ ತಡೆಯಾದಾದ.. ತಂಗಿಯ ಕೈ ಹಿಡಿದು.. ಮನೆಯಿಂದ ಹೊರ ಬಂದಿದ್ದ " ಅಪ್ಪಾ... ನೀವು ಒಬ್ಬ ತಂದೆಯಾ... ಅವಳ ಸ್ಥಿತಿ ಏನು ಅಂತ ಕಣ್ಣಿಗೆ ಕಟ್ಟಿದಂತಿದೆ.. ಮತ್ತೆ ಅದೇ ನರಕಕ್ಕೆ ತಳ್ಳಲು ಸಿದ್ದರಾಗಿದ್ದೀರಲ್ಲ.. ನಿಜಕ್ಕೂ ನೀವು ಮನುಷ್ಯರೇನಾ... ಬೇಡ.. ನನ್ನ ತಂಗಿಗೆ ನಾನು ಇದ್ದೇನೆ" ಏನು ಹೇಳಲು ಮರೆತಿರಲಿಲ್ಲ .


ತಂಗಿಯೊಡನೆ ಬೆಂಗಳೂರಿನಲ್ಲಿ ಮನೆ ಮಾಡಿ ಇರತೊಡಗಿದ್ದ. ಆದರೆ ವೇದಾ ಮಾನಸಿಕವಾಗಿ ಹಾಗೂ ದೈಹಿಕವಾಗಿ ಜರ್ಜರಿತಳಾಗಿದ್ದಳು. ಡಾಕ್ಟರ್ ಹೇಳಿದ್ದರು... "ಸಾಮೂಹಿಕವಾಗಿ ಹತ್ತು ದಿನ ಒಂದೇ ಸಮನೆ ಅತ್ಯಾಚಾರವೆಸಗಿದಂತಿದೆ ನಿಮ್ಮ ತಂಗಿಯ ದೇಹಸ್ಥಿಥಿ.. ".. ವೆಂಕಟೇಶ... ಆಸ್ಪತ್ರೆ ಎಂದೂ ನೋಡದೆ ಡಾಕ್ಟರ್ ಕೈಹಿಡಿದು ಭೋರೆಂದು ಅತ್ತಿದ್ದ .
"ವೇದಾ ಗರ್ಭವತಿಯೂ ಹೌದು, ಆದರೆ ಆಕೆ ಇರೋ ಸ್ಥಿತಿಲಿ ... ಅಬಾರ್ಶನ್  ಮಾಡುವುದೇ ಒಳ್ಳೆಯದು... ಮಾಡದಿದ್ದರೂ ಮುಂದೆ.. ಸುಮಾರು ಪ್ರಾಬ್ಲಮ್ಸ್ ಆಗುತ್ತವೆ,ಅಬ್‌ನಾರ್ಮಲ್ ಮಗು ಆಗುವ ಚಾನ್ಸಸ್ ಸಹ ಹೆಚ್ಚು" ಎಂದಾಗ  ವೆಂಕಟೇಶ ಎಲ್ಲದಕ್ಕೂ ಒಪ್ಪಿ ಸಹಿ ಮಾಡಿದ್ದ. ಸತತವಾಗಿ 3 ತಿಂಗಳ ಚಿಕಿತ್ಸೆ, ಕೌನ್ಸೆಲಿಂಗ್ ಗಳಿಂದ ..ವೇದಾ ಒಂದು ಮಟ್ಟಿಗೆ ಸುಧಾರಿಸಿಕೊಂಡಳು. 

ವೇದಾ ಮತ್ತೆ ಓದಲು ನಿರ್ಧರಿಸಿ, ಅಂತೆಯೇ..PUC  ಗೆ ಸೇರಿದ್ದಳು.
ವೆಂಕಟೇಶ.. ತನ್ನ ಆಫೀಸ್ ನಲ್ಲೇ ತನ್ನ ಸಹದ್ಯೋಗಿಯಾದ.. ವೀಣಾಳನ್ನು, ಮದುವೆಯಾದ.. ವೀಣಾ.. ನಿಜಕ್ಕೂ ವೇದಾಳ ಪಾಲಿಗೆ ದಾರಿದೀಪ. ತಾಯಿ, ಅಕ್ಕ, ಅತ್ತಿಗೆ, ಸ್ನೇಹಿತೆ ಎಲ್ಲವೂ ಆಗಿದ್ದಾಳೆ.


ಈಗ ವೇದಾ.. ತನ್ನ Mcom ಮುಗಿಸಿ ದೊಡ್ಡ  ಮಲ್ಟಿನ್ಯಾಶನಲ್  ಕಂಪನೀ ಯಲ್ಲಿ ದೊಡ್ಡ ಹುದ್ದೆಯಲ್ಲಿದ್ದಾಳೆ. ಮೊದಲಿನ ಮುಗ್ದತೆ ಮುಖದ ಮೇಲೆ ಹಾಗೆ ಇದೆ. ಆದರೆ ಸ್ವಾಬಿಮಾನ ...ಆತ್ಮಸ್ಥೈರ್ಯ , ಸ್ವಾತಂತ್ರ್ಯ,  ಸ್ವಾವಲಂಬಿ ಬದುಕು ಅವಳನ್ನು ತುಂಬಾ ಎತ್ತರಕ್ಕೇರಿಸಿದೆ. ಹಿಂದಿನದೆಲ್ಲ ಅವಳಿಗೆ ನೆನಪೇ ಇಲ್ಲವೆನ್ನುವಷ್ಟು ಬದಲಾಗಿದ್ದಾಳೆ. ಬರುವ ನಾಳೆಗಳನ್ನು ಒಬ್ಬಳೇ ಎದುರಿಸಬಲ್ಲಳು. ಮರುಜನ್ಮ ಕೊಟ್ಟ ಅಣ್ಣಾ ಅತ್ತಿಗೆ ಅವಳ ಪಾಲಿಗೆ ಸರ್ವಸ್ವ... 


ಆದರೆ ಇನ್ನೂ, ಅವಳ ತಂದೆ ಶಂಕರಯ್ಯ ಮತ್ತು ಅಜ್ಜೀ, ಇವರಿಬ್ಬರನ್ನೂ ಕ್ಷಮಿಸಿಲ್ಲ.. ನೋಡಲೂ ಬಂದಿಲ್ಲ. ಇಷ್ಟು ವರ್ಷಗಳಲ್ಲಿ.. ವೇದಾ ತಾಯಿ.. ಮಗಳಿಗಾದ ಅನ್ಯಾಯಕ್ಕೆ, ಮಗನನ್ನು ನೋಡದೆ..ಗಂಡನ ಬಳಿ ತನ್ನ ಆಸೆ ,ಅಭಿಪ್ರಾಯ ವ್ಯಕ್ತಪಡಿಸಲಾಗದೆ    ಕೊರಗಿ,ಕೊರಗಿ ಇಹಲೋಕ ತ್ಯಜಿಸಿದ್ದರು. ಆದರೆ ಶಂಕರಯ್ಯ ಮತ್ತು ಅವರ ತಾಯಿ ಮಾತ್ರ.. ವೇದಾ ಮತ್ತು ವೆಂಕಟೇಶನ ಅಪರಾಧವನ್ನು.....(???) ಕ್ಷಮಿಸಿಲ್ಲ.

2 comments:

  1. ತುಂಬಾ ಇಷ್ಟ ಅಯ್ತು ಸ್ಟೋರಿ

    ReplyDelete
  2. ಅದ್ಭುತ ಕಥೆ

    ReplyDelete