ಹೀಗೂ ಒಂದು ಕಾಲೇಜ್ ತಮಾಷೆ....:-)
ನಾನು MBA ಮಾಡುತ್ತಿದ್ದ ದಿನಗಳು, POM(production and operations management) ಅನ್ನೋ ಸಬ್ಜೆಕ್ಟ್ ಇತ್ತು, ಆ ಸುಬ್ಜೆಕ್ಟೇ ಬೋರೋ ಇಲ್ಲ ಆ ಸಬ್ಜೆಕ್ಟ್ ಟೀಚ್ ಮಾಡೋ ಪ್ರೊಫೆಸರ್ ಬೋರ್ ಮಾಡ್‌ಸ್ತಿದ್ದರೋ.. ಗೊತ್ತಿಲ್ಲ, ಆದ್ರೆ ನಿದ್ದೆ ಮಾತ್ರ.. ತುಂಬಾ ಬರೋದು. ಮೊದಲೇ ಕ್ಲಾಸ್ ನಲ್ಲಿ ಕುಳಿತ್ಕೊಳ್ಳೋದು ಸೆಕೆಂಡ್ ಬೆಂಚ್, ನಿದ್ದೆ ಹೇಗೆ ಮಾಡೋದು...?? ಅದಕ್ಕೆ ಒಂದು ಐಡಿಯಾ ಇತ್ತು ನಮ್ಮತ್ರ... ಅವರು ಪಾಠ ಮಾಡೋವಾಗ, ಇಂಪಾರ್ಟೆಂಟ್ ಪಾಯಂಟ್ಸ್ ನೋಟ್ ಮಾಡ್ಕೊಳ್ತಿದ್ವಲ್ಲ, ಅದೇ ನೋಟ್ ಬುಕ್ಕಲ್ಲೀ, ಅವರ ಬಗ್ಗೆ ಕಾಮೆಂಟ್ ಬರೆದು ಪಾಸ್ ಮಾಡ್ತಿದ್ವಿ ಪಕ್ಕದೊರಿಗೆ, ಅವರು ಅವರ ಬುಕ್ ನನಗೆ ಕೊಡೋರು... ಅವರಿಂದ ಅವರ ಪಕ್ಕದೊರಿಗೆ... ಹೀಗೆ..ಫರ್ಸ್ಟ್ ಬೆಂಚ್‌ಗೂ ಸೆಕೆಂಡ್ ಬೆಂಚ್‌ಗೂ ಬುಕ್ ಹರಿದಾಡೋದು.. ಜೊತೆಗೆ... ನಾನು ಬರೆದ ಕಾಮೆಂಟ್ ಗೆ ಅವರ ಕಾಮೆಂಟ್ ಸೇರಿಸುತ್ತಾ ಹೋಗೋರು... ಕೊನೆಗೆ ಆ ನೋಟ್ ಬುಕ್ ನನ್ನ ಹತ್ರ ಬರೋ ಅಷ್ಟೊತ್ತಿಗೆ... ದೊಡ್ಡ ಕತೇನೇ ಆಗಿರ್ತಿತ್ತು... ಮತ್ತೆ ನಾನು ಬರೆದ ಕಾಮೆಂಟ್ ಇಂದ ಕೊನೆಯವರು ಬರೆದ ಕಾಮೆಂಟ್ ಓದುವಷ್ಟರಲ್ಲಿ... ಸಿಕ್ಕಾಪಟ್ಟೆ ನಗು ಬಂದ್ಬಿಡ್ತಿತ್ತು...ಹೇಗೋ ತಡ್ಕೊಂಡು...ಮತ್ತೆ ಪಾಠಧ ಕಡೆ ಕಾನ್ಸೆಂಟ್ರೇಟ್ ಮಾಡ್ತಿದ್ವಿ. ಮತ್ತೆ ಹತ್ತು -ಹದಿನೈದು ನಿಮಿಷ ಆದ್ಮೇಲೆ ನಿದ್ದೆ ಎಳಿತಿತ್ತು..ಮತ್ತೆ ಅದೇ ರೀತಿ ಹೊಸ ಕಾಮೆಂಟ್ ಶುರು.
ಕಾಮೆಂಟ್ ಏನಾದ್ರೂ ಆಗಿರ್ತಿತ್ತು, ಕೆಲವೊಮ್ಮೆ, ಆ ಪ್ರೊಫೆಸರ್ ನಿಂತಿರೋ ಪೋಸ್ ಬಗ್ಗೆ, ಅವರು pronounce ಮಾಡೋ ಕೆಲ ಪದಗಳ ಬಗ್ಗೆ ಹೀಗೆ ಸುಮಾರು topics ಇರ್ತ ಇತ್ತು ನಮ್ಮಹತ್ರ..ಫರ್ಸ್ಟ್ two ಬೆಂಚ್ ಸ್ ನಲ್ಲಿ ನಾವು ಆಲ್‌ಮೋಸ್ಟ್ ಎಲ್ಲ ಕನ್ನಡ ಬರ್ತಿದ್ದ ಹುಡುಗಿಯರೇ ಇದ್ದದ್ದು, ಹಾಗಾಗಿ ನಾವು ಕಾಮೆಂಟ್ಸ್ ನಾ ಕನ್ನಡದಲ್ಲೇ ಬರೆದು, ಪಾಸ್ ಮಾಡ್ತ್ ಇದ್ದದ್ದು, ಸೊ ಬೇರೆ ಸ್ಟೇಟ್ ಹುಡುಗಿಯರಿಗೆ ಏನು ಗೊತ್ತಾಗ್ತಾ ಇರಲಿಲ್ಲ.
ಹಾ... ಹೇಳೋದೇ ಮರೆತಿದ್ದೆ, ಫರ್ಸ್ಟ್ ಬೆಂಚ್‌ನಲ್ಲಿ ಒಬ್ಬ ಕಲ್ಕತ್ತಾ ಹುಡುಗಿ Ms. ಬ್ಯಾನಾರ್ಜೀ ಕುಳಿತುಕೊಳ್ತ ಇದ್ದಳು, ಕಾಲೇಜ ಗೆ ಸೇರಿದ ಹೊಸದರಲ್ಲಿ, ನಾವು ಅವಳನ್ನು ನೋಡಿ.. ಗ್ಯಾರಂಟೀ ಇದು... ರಾಂಕ್ ಸ್ಟೂಡಂಟ್ ಅಂತ ಅಂದುಕೊಂಡಿದ್ವಿ( ಯಾವಾಗ್ಲೂ,, ಟೆಕ್ಸ್ಟ್ ಬುಕ್ಸ್ ನಲ್ಲೇ ಕಣ್ಣು, ದಪ್ಪ ದಪ್ಪ ಕನ್ನಡಕ ಬೇರೆ, ಯಾರತ್ರಾನೂ ಮಾತಾಡ್ತಾ ಇರಲಿಲ್ಲ, ಫರ್ಸ್ಟ್ ಬೆಂಚ್ ನಲ್ಲಿ ಫರ್ಸ್ಟ್ ಸೀಟ್) ಹೀಗಾಗಿ, ನಾವೂ ಸ್ವಲ್ಪ ಸೀರೀಯಸ್ ಆಗಿ ಇರ್ತಿದ್ವಿ ಅವಳ ಹತ್ರ. ಮತ್ತೆ lecturers ಪಾಠ ಮಾಡುವಾಗ ಅವರು ವಿವರಿಸೋ ಪ್ರತೀ ಪದನೂ... ನೋಟ್ ಬುಕ್ ನಲ್ಲಿ ಬರೆದುಕೊಳ್ಳೋಳು,(ನಾವೂ ಬರೆದು ಕೊಳ್ತಾ ಇದ್ವಿ ಓನ್ಲೀ.. ಇಂಪಾರ್ಟೆಂಟ್ ಪಾಯಂಟ್ಸ್ ಅಷ್ಟೇ.). ನಂತರ ಅವಳ ಬುಕ್ 'ಸ್ವಲ್ಪ ಕೊಡು ನೋಡಿ ಕೊಡ್ತೀವಿ ಅಂದ್ರೆ... ಜಪ್ಪಯ್ಯ ಅಂದ್ರು ಕೊಡ್ತಾ ಇರಲಿಲ್ಲ', ಸರಿ ಬಿಟ್ಟಾಕು ಅಂತ ಕೇಳೋದು ಬಿಟ್ಟುಬಿಟ್ವಿ... ನಾವೇನು ಕಮ್ಮಿನಾ... ನಾವು ಚೆನ್ನಾಗಿ ಓದುತ್ತಿದ್ವಿ.. ನಮಗೂ ಈಗೊ ಇತ್ತು ಅಷ್ಟೋ ಇಷ್ಟೋ...:- )
ಇದೆಲ್ಲ ಫರ್ಸ್ಟ್ ಸೆಮೆಸ್ಟರ್ ನಲ್ಲಿ ನಡೆದಿದ್ದು. ಫರ್ಸ್ಟ್ ಸೆಮೆಸ್ಟರ್ ರಿಸಲ್ಟ್ ಬಂತು ನೋಡಿ... ನಮಗೆಲ್ಲ ಶಾಕ್... ಯಾಕೆ ಅಂತೀರಾ.... ನಮ್ಮ ರಿಸಲ್ಟ್ ನೋಡಿ... ಯಾಕಂದ್ರೆ... ನಮ್ಮ ಗ್ರೂಪ್ ನಲ್ಲಿ ಎಲ್ಲರೂ ಫರ್ಸ್ಟ್ ಕ್ಲಾಸ್, ನಾನೇ highest ಗ್ರೂಪ್ ನಲ್ಲಿ (distinction ಗೆ ಸ್ವಲ್ಪ ಮಾರ್ಕ್ಸ್ ಕಮ್ಮಿ ಆಗಿತ್ತು). ನಾವ್ಯಾರೂ ಇಷ್ಟು ಚೆಂದದ ರಿಸಲ್ಟ್ ಎಕ್ಸ್‌ಪೆಕ್ಟ್ ಮಾಡಿರಲಿಲ್ಲ. ಶಾಕ್ ಆಗಿದ್ದು ಇದಕ್ಕಲ್ಲ ಮಾರಾಯ್ರೆ....! ನಮ್ಮ Ms. ಬ್ಯಾನಾರ್ಜೀ ಎಲ್ಲಾ ಸಬ್ಜೆಕ್ಟ್ ನಲ್ಲೂ ಫೇಲ್....ಏಳೂ ಸಬ್ಜೆಕ್ಟ್ನಲ್ಲಿ ಅದಕ್ಕೆ ಶಾಕ್... ಯಾರು ಅದರ ಬಗ್ಗೆ ಮಾತಾಡ್ಲಿಲ್ಲ, ಅಣಕಿಸಿಯೂ ಇಲ್ಲ. ಆದ್ರೆ ಪ್ರತಿ ಸಬ್ಜೆಕ್ಟಿಗೂ ಅವಳ ಹತ್ರ ಲೆಕ್ಚರರ್ ರೆಫರ್ ಮಾಡಲು ಹೇಳಿದ ಎಲ್ಲಾ ಟೆಕ್ಸ್ಟ್ ಬುಕ್ಸ್ ಇತ್ತು... ಅದೇ ಆಶ್ಚರ್ಯ... ನನ್ನ ಹತ್ರ ಅಂತೂ ಒಂದು ಟೆಕ್ಸ್ಟ್ ಇರಲಿಲ್ಲ. ನನ್ನ ಪೂರ MBA ನಾ ನಾನು ಒಂದು ಟೆಕ್ಸ್ಟ್ ಬುಕ್ ತೆಗೆದು ಕೊಳ್ಳದೆ, ಕಾಲೇಜ್ ಗೆ ಟಾಪರ್ ಆಗಿ ಪಾಸ್ ಮಾಡಿದ್ದು ನನಗೆ ಹೆಮ್ಮೆಯ ವಿಷಯ.
ಹಾ.. ಹಾ.... ಈಗ ಮೊದಲಿನ ವಿಷಯಕ್ಕೆ ಬರ್ತೇನೆ... ನಾವು ಕಾಮೆಂಟ್ ಬರೆದು ಪಾಸ್ ಮಾಡಲಿಕ್ಕೆ ಶುರು ಮಾಡಿದ್ದು ಸೆಕೆಂಡ್ ಸೆಮೆಸ್ಟರ್ ಇರುವಾಗ,(ನಾವು ಸ್ವಲ್ಪ ಚಿಗುರ್‍ಕೊಂಡಿದ್ವಿ, ಫರ್ಸ್ಟ್ ಸೆಮೆಸ್ಟರ್ ಆದ್ರೆ ಸ್ವಲ್ಪ ಭಯ ಇರುತ್ತೆ ಅಲ್ವಾ... ಹಾಗಾಗಿ ಆಗ ಕಾಮೆಂಟ್ಸ್ ಪಾಸ್ ಮಾಡ್ತಿರಲಿಲ್ಲ), ಹಂಗಂತ ಎಲ್ಲ ಕ್ಲಾಸ್ ನಲ್ಲೂ ಹೀಗೆ ಮಾಡ್ತಿದ್ವಿ ಅನ್ಕೋಬೇಡಿ... only in POM class.
ಸರಿ ಸುಮಾರು ದಿನ ಹೀಗೆ ನಡೀತು... ಒಂದು ದಿನ ಕ್ಲಾಸ್ ತುಂಬಾನೇ ಬೋರಿಂಗ್ ಇತ್ತು.. ನಿದ್ದೆ.. ಅಂದ್ರೆ ನಿದ್ದೆ ಎಳೀತಾ ಇತ್ತು ಲಂಚ್ ಪೀರಿಯಡ್ ಆದ ಮೇಲೆ ಮೊದಲನೇ ಕ್ಲಾಸ್ ಬೇರೆ, ಹೊಟ್ಟೆಯೊಳಗಿನ ಊಟ ನಮ್ಮೆಲ್ಲರ ಮೇಲೆ ದ್ವೇಷ ತೀರಿಸಿಕೊಳ್ತಾ ಇತ್ತು. ಸರಿ ನಾನೇ ಕಾಮೆಂಟ್ ಬರೆಯಲು ಶುರು ಮಾಡಿದೆ, ಆ ಪ್ರೊಫೆಸರ್ ಯಾವಾಗ್ಲೂ ಸ್ಟೇಜ್ ಮೇಲೆ ನಿಂತು ಪಾಠ ಮಾಡುವಾಗ, ತಮ್ಮ ದೇಹವನ್ನು ಸ್ವಲ್ಪ ಸೊಟ್ಟಕ್ಕೆ ಇಟ್ಟು ನಿಂತು, ಎಡ ಕೈ ಸೊಂಟದ ಮೇಲೆ ಕೈ ಇಟ್ಟುಕೊಂಡು explain ಮಾಡೋರು... ನಂಗ್ಯಾಕೋ.. ಅವತ್ತು ಅದು ಥೇಟ್ ಬೇಲೂರು ಶೀಲಾ ಬಾಲಿಕೆ ತರ ಕಾಣಿಸಿಬಿಡ್ತು......:-), ಅದನ್ನೇ ಬರೆದು ಪಾಸ್ ಮಾಡಿದೆ 'ಆಹಾ.. ನೋಡಿರೇ ನಮ್ಮಬೇಲೂರು ಶೀಲಾ ಬಾಲಿಕೆನಾ.. ನೋಡಲು ಎರಡೂ ಕಣ್ಣೂ ಸಾಲ್ತ ಇಲ್ಲ' ಅಂತ.. ಸರಿ ಪಾಸ್ ಆಯ್ತು ನನ್ನ ನೋಟ್ ಬುಕ್. ನನ್ನ ಪಕ್ಕದಲ್ಲಿದ್ದೋರು ಹೇಗೋ ನಗು ತಡೆದುಕೊಂಡು... ತಮ್ಮ ಕಾಮೆಂಟ್ ನಾ ಬರೆದು ಪಾಸ್ ಮಾಡುದ್ರು.. ಆದ್ರೆ ಫರ್ಸ್ಟ್ ಬೆಂಚ್ ನಲ್ಲಿದ್ದ ಶರ್ಲೀ(Shirley) ಗೆ ನಗು ತಡೆಯೋಕೆ ಆಗಲಿಲ್ಲ, ಕೈ ಬಾಯಿಗಡ್ಡ ಇತ್ತು ನಕ್ಕೆ ಬಿಟ್ಲು ಸ್ವಲ್ಪ ಜೋರಾಗೇ, ಅವಳ ಕಡೆಯೇ ನೋಡ್ತಾ ಇದ್ದ ನನ್ನ ಮುಖದ ಮೇಲೂ ಮಂದಹಾಸ, ಕಾಮೆಂಟ್ ಬರೆದ ನನ್ನ ಬಗ್ಗೆಯೇ ಹೆಮ್ಮೆ, ಪ್ರೊಫೆಸರ್ ನನ್ನ ಕಡೆ ನೋಡಿದ್ರು, "why are you smiling, is there any joke??? ", ಅಂದ್ರು, ನಾನು ಸ್ವಲ್ಪ ತಡಬಡಾಯ್ಸಿ, "no sir, nothing" ಅಂದೆ, ಅಷ್ಟರಲ್ಲಿ ನನ್ನ ನೋಟ್ ಬುಕ್ ನಾ ಮುಂದಿನ ಬೆಂಚ್ ನಿಂದ ಇನ್ನೊಂದು ಹುಡುಗಿ ಅವಳೆಲ್ಲಿ ಸಿಕ್ಕಿ ಹಾಕಿಕೊ ಬೇಕಾಗುತ್ತೋ ಅನ್ನೋ ಭಯದಲ್ಲಿ ನನ್ನ ಕೈಲಿ ಕೊಟ್ಳು....:-(
ಅಷ್ಟೇ , ಪ್ರೊಫೆಸರ್ ಗೆ ಅರ್ಥ ಆಯ್ತು.. "ho.. your passing comments on me, is this what you do during the class hours" ಅಂದ್ರು... ನಂಗೋ.. ಕಿವಿಎಲ್ಲಾ ಬಿಸಿ ಆಗೋಯ್ತು ಭಯದಿಂದ, ಅವರೆಲ್ಲಿ ನನ್ನ ನೋಟ್ ಬುಕ್ ಇಸ್ಕೊಂಡು ನೋಡ್ತಾರೋ ಅಂತ, ಸದ್ಯಕ್ಕೆ ಆ ಮಹಾನುಭಾವರು ಸ್ಟೇಜ್ ಇಂದ ಇಳಿದು ಬರಲೇ ಇಲ್ಲ. ನಾನು ಬಚಾವ್, "sorry sir " ಅಂದೆ, ಆವರಿಗೆ ಏನು ಅರ್ಥ ಆಯ್ತೋ... ಇಲ್ಲ ತಮ್ಮ ಕಾಲೇಜ್ ಡೇಸ್ ನೆನಪಾಯ್ತೋ... ಸುಮ್ಮನಾದ್ರು.
ಯಪ್ಪಾ.... ಅವತ್ತೇ ಲಾಸ್ಟ್... ಅವರ ಕ್ಲಾಸ್ ನಲ್ಲಿ ಕಾಮೆಂಟ್ ಬರೆದು ಪಾಸ್ ಮಾಡೋ ಕೆಲಸಕ್ಕೆ ರಾಜೀನಾಮೆ ಕೊಟ್ಟೆ. ಆದ್ರೂ... ಬೇಲೂರು ಶೀಲಾ ಬಾಲಿಕೆ... ಯಾವಾಗ್ಲೂ... ನೆನಪಾಗುತ್ತೆ... ಆಗೆಲ್ಲ ಆ ಪ್ರೊಫೆಸರ್ ,,, ಆ ಕ್ಲಾಸ್. ಎಲ್ಲಾ ನೆನಪಾಗುತ್ತೆ. ಯಾಕೋ...ಈ ತಮಾಷೆ ನಾ ನಿಮ್ಮೊಂದಿಗೆ ಹಂಚಿಕೋಬೇಕನ್ನಿಸಿತು ಪೋಸ್ಟ್ ಮಾಡಿದೆನೆ.... ನಿಮಗೂ... ನಗು ಬಂದ್ರೆ ನಕ್ಕು ಬಿಡಿ... ಮತ್ತೆ ಕಾಮೆಂಟ್ ಮಾಡೋದ್ನ ಮರೀಬೇಡಿ....:-)
Happy weekend everyone....:-)
Hey.. kushi
ReplyDeletenice one. enjoyed reading.
nanagu nagu banthu odi.
he... he.. thank u
Delete:-) :-) naanu college kalitillaa. aadre namma girls convent nalli masti ge enoo kaDime iralillaa. good one!!
ReplyDeleteThank u malathi mam :-)
ReplyDeletenice writeup..... thank u..
ReplyDeleteThank u for visiting my blog...:-)
Deleteಚನ್ನಾಗಿ ಬರೆಯುತ್ತೀರಿ. ಆಸಕ್ತಿದಾಯಕ ವಿಷಯಗಳನ್ನು ಆರಿಸಿಕೊಂಡು ಬರೆದಿದ್ದೀರಿ. ಹೀಗೇ ಬರೆಯುತ್ತಾ ಹೋಗಿ. ಮತ್ತೂ ಉತ್ತಮಗೊಳ್ಳುತ್ತದೆ. ಮತ್ತೆ ಮತ್ತೆ ಓದಿ ತಪ್ಪುಗಳನ್ನು ತಿದ್ದಿ. ನೀಟಾಗಿ format ಮಾಡಿ. ಪುಸ್ತಕದಲ್ಲಿದ್ದಂತೆ ಸ್ವಲ್ಪ ಬಿಡಿಬಿಡಿಯಾಗಿ, ಜಾಸ್ತಿ white spaces ಕೊಟ್ಟು ಬರೆದರೆ ಓದಲು ಅನುಕೂಲ.
ReplyDeleteThank u Very much for visiting...:-)
ReplyDeleteSurely will keep in mind..while writing....