"ನಿವ್ಯ ಇದ್ದಿದ್ದರೆ ಚೆನ್ನಾಗಿ ಟೈಮ್ ಪಾಸ್ ಆಗ್ತಿತ್ತು ಅಲ್ವಾ ಅಪ್ಪು", ಅಂತ ಗಂಡನಕಡೆ, ನೋಡಿದರೆ ಕೊಂಚ ನಾಲಿಗೆ ತುಟಿಯಿಂದಾಚೆ ಬಿಟ್ಟು ನನ್ನ ಕಡೀನೆ ನೋಡ್ತಾ ಇದ್ರು. ಹ ಹ ಹ ನಗು ನನ್ನ ತುಟಿಮೇಲೆ, ನೀವ್ಯ ಯಾವಾಗ್ಲೂ ಹಾಗೆ , ನಿದ್ದೆ ಬಂದುಬಿಟ್ರಾಂತು ಆದೇ ಪೋಸ್ ನಲ್ಲಿ ತೊಡೆಮೇಲೆ ಮಲ್ಗಥ ಇದ್ದಿದ್ದು.
"ನಿವ್ಯ", ಒಂಭತ್ತು ತಿಂಗಳ ಮುದ್ದು ಪೋರಿ, ನಮ್ಮ ಮನೆಯ ಪಕ್ಕದಲ್ಲಿ ಬಾಡಿಗೆಗಿದ್ದ, ಮರಾಠಿ ದಂಪತಿಯ ಮಗಳು, ನಿವ್ಯ ಮತ್ತು ನಿತ್ಯ ಅವಳಿ ಮಕ್ಕಳು. ನಿವ್ಯ ನಮಗೆ ಚೆಂದಾಗಿ ಒಂದಿಕೊಂಡುಬಿಟ್ಟಿದ್ದಳು, ನಮ್ಮ ಮನೆಲೇ, ಆಟ, ಹಾಲು, ನಿದ್ದೆ ಎಲ್ಲಾ, ನಾಲ್ಕು ತಿಂಗಳ ಮಗುವಿನಿಂದ, ನಮ್ಮಲ್ಲೇ ಹೆಚ್ಚಾಗಿ ಇರುತ್ತಿದ್ದಳು.
ನಿತ್ಯ, ಸ್ವಲ್ಪ ರಿಸರ್ವ್ಡ್, ಅಮ್ಮನ ಮಗಳು. ಹಾಗಾಗಿ ನಮಗೆ ನಿವ್ಯ ತುಂಬಾ ಮುದ್ದು. ಮಕ್ಕಳನ್ನೇ ಎತ್ತಿಕೊಳ್ಳದ ನಮ್ಮ ಹೆಜಮಾನರು ನೀವ್ಯಾಳನ್ನು ಎತ್ತಿ ಮುದ್ದಾಡುತ್ತಿದ್ದರು, ಅವಳು ಹಾಗೆ.. ನಗೆ ಮಲ್ಲಿಗೆ.. ಮುದ್ದು ಬಂಗಾರಿ, ಹವಳದ ಮಣಿ...ತನ್ನ ನಗುವಿನಿಂದಾಗೆ ಎಲ್ಲರನ್ನೂ ಆಕರ್ಷಿಸಿಬಿಡುತ್ತಿದ್ದಳು.
ಅವರ ಮನೆಗೆ ಹೋದ್ರೆ ಸಾಕು, " ಆಂಟೀ ಕೆ ಪಾಸ್ ಜಾಒ ಬೇಟಿ" ಅಂತ, ಅವರಮ್ಮ, ನನ್ನ ಮಡಿಲಿಗೆ ನೀವ್ಯ ಳನ್ನು ತುರುಕೋಕ್ಕೆ ಕಾಯ್ತರ್ತಿದ್ರು. ಯಾಕಂದ್ರೆ, ಒಬ್ಬರೇ ಆ ಇಬ್ಬರು ತುಂಟ ಪುಟಾಣಿಗಳ್ನ ನೋಡ್ಕೊಳೋದ್ರಲ್ಲಿ, ಸುಸ್ತೋ ಸುಸ್ತು. ಯಾರಾದ್ರೂ ಬಂದ್ರೆ ಸಾಕು, ಸ್ವಲ್ಪ ಹೊತ್ತು ಮಕ್ಕಳನ್ನ ನೋಡಿ ಕೊಂಡ್ರೆ ಸಾಕು ಅಂತ ಕಾಯ್ತಿರ್ತಿದ್ರು.
ಈಗ ಹತ್ತು ದಿನದಿಂದ ನಮ್ಮ ಮನೆ ಬಿಕೋ ಅಂತಿದೆ, ನೀವ್ಯಳ ಅಳು,ನಗೆ,ಕೇಕೆ ಗಳಿಲ್ಲದೆ. ಅವರ ತಂದೆ ಸಾಫ್ಟ್‌ವೇರ್ ಇಂಜಿನಿಯರ್, ಹಾಗಾಗಿ ಹೈದೆರಾಬಾದ್ ನಿಂದ ಒಳ್ಳೆ ಆಫರ್ ಬಂದ ತಕ್ಷಣ ಒಪ್ಪಿಕೊಂಡು ಮನೆ ಕಾಲಿ ಮಾಡಿಕೊಂಡು ಹೊರಟು ಹೋದ್ರು ಹತ್ತು ದಿನಗಳ ಕೆಳಗೆ.
ಆ ಪುಟ್ಟಿನ ಮರೆಯೋಕೆ ಆಗ್ತಿಲ್ಲ, ವಾಟ್ಸ್ಸಪ್ಪ್ ನಲ್ಲಿ ಅವರಮ್ಮನ ಜೊತೆ ದಿನ ಚಾಟ್ ಮಾಡುವಾಗ್ಲೂ, "ಮಿಸ್ಸಿಂಗ್ ನಿವ್ಯ" ಅನ್ನೋ ಪದ ವಿದ್ದೆ ಇರುತ್ತೆ,
ಆದ್ರೆ "ಮಿಸ್ಸಿಂಗ್ ಯೂ ...." ಅನ್ನೋ ವಾಕ್ಯ ನನ್ನ ಮನದ ಧುಖ ನಾ ನಿಜವಾಗಿಯೂ ಕನ್ವೇ ಮಾಡುತ್ತಾ.....? ಆ ಪುಟ್ಟಿಗೆ ನಾನು ನೆನಪಿರ್ತಿನ.....? ಅನ್ನೋ ಪ್ರಶ್ನೆ ಗಳು ಏಳ್ತವ.
"ಮಿಸ್ಸಿಂಗ್ ಯೂ"ಅನ್ನೋದು.. ಈಗ ತುಂಬಾನೇ ಸುಲಭವೆನ್ನಿಸೋ ವೇ ಆಫ್ ಕನ್ವೇಯಿಂಗ್, ಆದ್ರೆ, ಇದಕ್ಕಿಂತಲೂ ಸೂಕ್ಷಮವಾದ, ಸೂಕ್ತವಾದ, ವಾಕ್ಯ ಅಥವಾ ಪದ ನಿಮಗೆ ಗೊತ್ತಾ.......ದಯವಿಟ್ಟು ತಿಳಿಸಿ....
(ನಿವ್ಯ ಬ್ಲೂ ಫ್ರೋಕ್, ನಿತ್ಯ ಗ್ರೀನ್ ಫ್ರೋಕ್)
ಬಹಳ ಮುದ್ದಾಗಿವೆ ಕಂದಮ್ಮಗಳು.. ಮಕ್ಕಳೊಡನೆ ಹೊಂದಿಕೋ ಬಿಟ್ಟರೇ ಹಾಗೇನೆ ಬಿಟ್ಟಿರೋಕೆ ಆಗಲ್ಲ...
ReplyDeleteThank u sir, haudu avaranna nenesikollada dinave illa...
Deleteಬ್ಲಾಗ್ ಲೋಕಕ್ಕೆ ಸ್ವಾಗತ ದಿವ್ಯ ಅವರೇ. ನಿಮ್ಮ ಮುಖ ಪರಿಚಯವಿಲ್ಲದಿದ್ದರೂ ಬ್ಲಾಗಿಗೆ ಹೊಸಬರೆಂಬ ಭಾವದಿಂದ ಕೆಳಗಿನ ಮಾತುಗಳ ಹೇಳುತ್ತಿದ್ದೇನೆ. ಹೆಚ್ಚೆನಿದರೆ ಅಥವಾ ಪಿಚ್ಚೆನಿಸಿದರೆ ದಯವಿಟ್ಟು ಕ್ಷಮಿಸಿ.
ReplyDeleteನಿವ್ಯ, ನಿತ್ಯರೆಂಬ ಅವಳಿ ಮಕ್ಕಳ ಕಥಾನಕ ಚೆನ್ನಾಗಿದೆ.
ಎರಡನೆಯ ಬ್ಲಾಗ್ ಲೇಖನ ಬರೆಯೋ ಸಡಗರದಲ್ಲಿ ಒಂದಿಷ್ಟು ಮುದ್ರಣ ದೋಷಗಳು ನುಸುಳಿವೆ.. ಸರಿಪಡಿಸಿಕೊಂಡರೆ ಲೇಖನವನ್ನೋದಲು ಇನ್ನೂ ಚೆಂದವಿರುತ್ತೆ ಎಂಬ ಸಲಹೆಯೊಂದಿಗೆ..
ಹೆಜಮಾನರು--> ಯಜಮಾನರು
ಒಂದಿಕೊಂಡು --> ಹೊಂದಿಕೊಂಡು
ಮಲ್ಗಥ--> ಮಲ್ಗತಾ
ನೀವ್ಯ --> ನಿವ್ಯ
ಧುಖ --> ದುಃಖ
ಮೊದಲಿಗೆ; ನನ್ನ ಬ್ಲೋಗ್ ವಿಸಿಟ್ ಮಾಡಿದ್ದಕ್ಕೆ ಧನ್ಯವಾದಗಳು. ಹೌದು, ನಾನು ಬ್ಲೋಗ್ ಪ್ರಪಂಚಕ್ಕೆ ಹೊಸಬಳು.
Deleteಎರಡನೆಯದಾಗಿ;ನನ್ನ ಹೆಸರು ದಿವ್ಯ ಅಲ್ಲ, ಕುಶಿ.
ಮೂರನೆಯದಾಗಿ; ನಿಮ್ಮ ಸಲಹೆ ಗಳಿಗೆ, ನನ್ನ ಹೃತ್ಪೂರ್ವಕ ಧನ್ಯವಾದಗಳು, ಮುಂದೆ ಟೈಪ್ ಮಾಡುವಾಗ ಖಂಡಿತ ನಿಮ್ಮ ಮಾತನ್ನು ನೆನಪಿನಲ್ಲಿಟ್ತುಕ್ಕೊಳ್ಳುತ್ತೇನೆ.
ನಾಲ್ಕನೆಯದಾಗಿ; ದಯವಿಟ್ಟು ನಿಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ನನ್ನ ಮುಂದಿನ ಪೋಸ್ಟ್ ಗಳಲ್ಲೂ ತಿಳಿಸುತ್ತಾ ಇರಿ