ಸ್ವಾರ್ಥಿ ....! ಭಾಗ 2
ಸ್ವಾರ್ಥಿ ....! ಭಾಗ 2
ಆದರೆ ಸ್ವಲ್ಪ ದಿನದಲ್ಲೇ ಪ್ರಕಾಶಯ್ಯನ ನಿಜ ರೂಪ ಅನಾವರಣಗೊಂಡಿತ್ತು ಹತ್ತಿರದ ನೆಂಟರ ಮೂಲಕ, ಅದಕ್ಕೆ ಶಿಲ್ಪಾಳಿಗೆ ಬಂದ ಅನುಮಾನವೇ ಕಾರಣ, ಸದಾ ಮೊಬೈಲ್ ನಲ್ಲಿ ಮೆಸೇಜ್ ಹಾಗೂ ಮಾತಾಡುತ್ತಿರುವ ಆ ಮನುಷ್ಯನ ಮೇಲೆ.. ತುಂಬಾನೇ ಅನುಮಾನ ಬಂದಿತ್ತು. ನಂತರ, ಒಮ್ಮೆ ಆತನ ರೂಮಿನ ಮುಂದೆ ಕಸ ಗುಡಿಸುವಾಗ ಒಳಗಿನಿಂದ ಕೇಳಿ ಬಂದ ಮಾತುಗಳು... 'ಇಲ್ಲ ಚಿನ್ನಾ, ಬಂಗಾರ, ನಾನು ಸ್ವಲ್ಪ ಬ್ಯುಸಿ ಇದ್ದೇ ಅದಕ್ಕೆ ಬರೋದಿಕ್ಕೆ ಆಗಲಿಲ್ಲ, ಇವತ್ತು ರಾತ್ರಿ ಬರ್ತೀನಿ ಬಿಡು... ಏನು ಬೇಕು ಅಂತ ಮೆಸೇಜ್ ಮಾಡು ತಂದು ಕೊಡ್ತೀನಿ, ಲವ್ ಯೂ ಚಿನ್ನಿ" ಎಂಬ ಸಂಭಾಷಣೆ ಕೇಳಿ ಬಂದಿತ್ತು, ಆದರೂ ಅದರ ಬಗ್ಗೆ ಜಾಸ್ತಿ ವಿವರಣೆ ಇಲ್ಲದಿದ್ದರಿಂದ ಸುಮ್ಮನಾಗಿದ್ದಳು. ನಂತರ ಒಮ್ಮೆ ಪ್ರಕಾಶಯ್ಯ ಸ್ನಾನಕ್ಕೆ ಹೋಗಿದ್ದಾಗ ಮೊಬೈಲ್ ಚೆಕ್ ಮಾಡಿದ್ದಳು, ಆಗ ಸಿಕ್ಕಿತ್ತು ಲವ್ ಮೆಸೇಜ್ ಗಳು... ಫೋಟೋಗಳು,. ಆಕೆಯೊಂದಿಗೆ ತೆಗಿಸಿಕೊಂಡ ಹೋಟೆಲ್ ರೂಮಿನ ಫೋಟೋಗಳು... ಇನ್ನೇನು ಬೇಕಿತ್ತು ಸಾಕ್ಷಿಗೆ. ನಂತರ ಆ ಫೋಟೋಗಳನ್ನು ಗಂಡನಿಗೂ ತೋರಿಸಿದ್ದಳು. ಗಂಡನೂ... ಆತನ ರಾಸಲೀಲೆ ಹೇಳಿದ್ದ, ಹತ್ತಿರದ ನೆಂಟರಲ್ಲಿ ಸೂಕ್ಷ್ಮವಾಗಿ ವಿಚಾರಿಸಿದಾಗ ತಿಳಿದು ಬಂದ ಸುದ್ದಿ ಕೇಳಿ , ಶಿಲ್ಪ ಹೌಹಾರಿದ್ದಳು.
'ಪ್ರಕಾಶಯ್ಯ, ಹೆಣ್ಣುಗಳ ಕಾಯಲಿ ಮನುಷ್ಯ, ಈಗಲೂ ಇಬ್ಬರು , ಮೂವರು ಗರ್ಲ್‌ಫ್ರೆಂಡ್ ಗಳು ಇದ್ದರು. ತಮ್ಮ ಹೆಂಡತಿ ಇದ್ದಾಗಲೇ, ಮತ್ತೊಬ್ಬ ಮಗಳ ವಯಸ್ಸಿನ ಹುಡುಗಿಯನ್ನು ಹೆಂಡತಿಯ ಮುಂದೆಯೇ ಮದುವೆಯಾಗಿ ಕರೆತಂದಿದ್ದರು ( ಕೇಶವ ಮತ್ತು ಮೈದುನ, ತಮ್ಮ 17ನೇ ವಯಸ್ಸಿನಿಂದಲೇ , ಬೇರೆ ಇದ್ದರು ಓದುವ ಹಾಗೂ ಕೆಲಸದ ಸಲುವಾಗಿ).
ನಂತರ, ಮಕ್ಕಳಲ್ಲಿ ಹೇಳಿ ಕೊಂಡಿದ್ದು,' ಆ ಹುಡುಗಿಗೆ ಯಾರು ಇಲ್ಲ ಹಾಗಾಗಿ ಮನೆಯಲ್ಲಿ ನಿಮ್ಮ ತಾಯಿಗೆ ಸಹಾಯವಾಗಲಿ ಅಂತ ತಂದಿಟ್ಟುಕೊಂಡಿರುವುದಾಗಿ ಕಥೆ ಕಟ್ಟಿದ್ದರು'. ಕೇಶವನ ತಾಯಿಯೂ ಮಕ್ಕಳ ಬಳಿ ಹೇಳಿರಲಿಲ್ಲ, ಪ್ರಕಾಶಯ್ಯ, ಆಕೆಯನ್ನು ಮಕ್ಕಳಲ್ಲಿ ಒಂಟಿಯಾಗಿ ಮಾತಾಡಲು ಬಿಟ್ಟರೆ ತಾನೇ....!.
ಕೆಲ ದಿನಗಳ ನಂತರ, ಚಿಕ್ಕ ಹೆಂಡತಿಯ ಮೋಹಕ್ಕೆ ಒಳಗಾದ ಪ್ರಕಾಶಯ್ಯ, ಹೆಂಡತಿಯನ್ನು ಬಲವಂತ ಮಾಡಿ ರಾತ್ರಿ 12 ಗಂಟೆಯಲ್ಲಿ, ಕೆಲಸವಿದೆ, ನಮ್ಮ ಆಫೀಸ್ quatrous ಗೆ ಹೋಗ ಬೇಕೆಂದು ಕರೆದುಕೊಂಡು ಹೋಗಿದ್ದರು, ಅದರ ಹಿಂದಿದ್ದ ಉದ್ದೇಶ ದೇವರಿಗೆ ಗೊತ್ತು... ಹೋಗುವ ರಸ್ತೆಯಲ್ಲಿ... ಆಕ್ಸಿಡೆಂಟ್ ನಲ್ಲಿ, ಅವರ ಪತ್ನಿ ಸ್ಥಳದಲ್ಲೇ ಆಸು ನೀಗಿದ್ದರೆ, ಈ ಮನುಷ್ಯ ಮಾತ್ರ ಏನೂ ಆಗದೆ, ಗುಂಡು ಕಲ್ಲಿನ ಹಾಗೆ ಪಾರಾಗಿದ್ದರು ಕಾಲಿಗೆ ಫ್ರ್ಯಾಕ್ಚರ್ ಆಗಿತ್ತಷ್ಟೆ. ಆದರೆ, ಇಂದಿಗೂ ಆ ಆಕ್ಸಿಡೆಂಟ್ ಒಂದು.. ಅನುಮಾನಾಸ್ಪದ ವಿಷಯವೇ ಎಲ್ಲರಿಗೂ.
ತಾಯಿಯ ಸಾವಿನ ನಂತರವೇ ಮಕ್ಕಳಿಗೆ ತಿಳಿದದ್ದು, ತಮ್ಮ ಅಪ್ಪನ ರಾಸ ಲೀಲೆ..!, ಮಕ್ಕಳಿಬ್ಬರೂ ಏನು ಹೇಳಿರಲಿಲ್ಲ... ಹೇಳುವುದಾದರೂ ಏನು... ಕೇಳಿದರೆ, 'ನಿಮ್ಮ ಅಮ್ಮನಿಗೇ ಏನೂ ಅಭ್ಯಂತರ ವಿರಲಿಲ್ಲ' ಎಂದಿದ್ದನಂತೆ. ಯಾವ ಹೆಣ್ಣೆ ಆಗಲಿ, ತನ್ನ ಮುಂದೆಯೇ, ಇನ್ನೊಬ್ಬ ಹೆಣ್ಣನ್ನು ಮದುವೆಯಾಗುವುದು ಸಹಿಸಿಯಾಳೇ, ಸಂಸಾರ ಮಾಡುವುದನ್ನು ಪ್ರೋತ್ಸಾಹಿಸಿಯಾಳೇ.....??. ಪ್ರಕಾಶಯ್ಯನ ಕಾಮುಕ ,ಅಸಭ್ಯ ಕಾಟ ತಾಳಲಾರದೆ ಒಪ್ಪಿರಬೇಕಷ್ಟೆ. ಶಿಲ್ಪಾಲಿಗೆ, ಮದುವೆಯಾದ ಹೊಸದರಲ್ಲಿ ಆತನ ರೂಮ್ ಕ್ಲೀನ್ ಮಾಡುವಾಗ ದೊರೆತ ಕಾಮಸೂತ್ರ ಬುಕ್ಸ್, ಮತ್ತಷ್ಟು ಅದೇ ರೀತಿಯ ಬುಕ್ಸ್ ದೊರೆತದ್ದೇ ಸಾಕ್ಷಿ,
ಮತ್ತೆ ಚಿಕ್ಕ ಹೆಂಡತಿಯ ಮಾತು ಕೇಳಿ ಇದ್ದ ಮನೆ ಮಾರಿದ್ದು ಆಯಿತು, ಮಕ್ಕಳು ಒಂದೂ ಮಾತು ಕೇಳದೆ ಹೋಗಿ ಸೈನ್ ಮಾಡಿ ಬಂದಿದ್ದರು(ನನಗನಿಸುವುದು... ಇಂಥ ಮಕ್ಕಳೂ ಇರುವರೆ... ಅಂತ....! ಅವರ ಮೇಲೆ ಶಿಲ್ಪಾಳಿಗೆ ಹೇಳಿದ ದೂರಿಗೆ ಲ್ಲೆಕ್ಕವಿಲ್ಲ). ಬಂದ 50 ಲಕ್ಷದಲ್ಲಿ, ಒಂದು ಪೈಸೆಯೂ ಉಳಿದಿಲ್ಲ , ಚಿಕ್ಕ ಹೆಂಡತಿ ಎಲ್ಲವನ್ನೂ ಬಾಚಿಕೊಂಡು... ಟೋಪಿ ಹಾಕಿ ಪರಾರಿಯಾಗಿದ್ದು ಆಯ್ತು.... ಇಷ್ಟು ದಿನ ಅವಳಿದ್ದಳು.
ಸೊಸೆ ಯಾಕೆ ಬೇಕಾಯಿತೆಂದರೆ.. ಮನೆಯಲ್ಲಿ ಕೂಳು ಹಾಕಲು ಯಾರೂ ಇರಲಿಲ್ಲ.. ಮತ್ತು ನೆಂಟರ ಮುಂದೆಲ್ಲ ಮಾನ ಮೂರು ಕಾಸಿಗೆ ಹರಾಜಾಗಿತ್ತು. ಮಕ್ಕಳನ್ನು ಹೋಗಿ ಗೋಗರೆದು... ಹೇಗೂ. ಮದುವೆಯೂ ಮಾಡಿಸಿದ್ದಾಯ್ತು... ಅಣ್ಣನ ಮಾತಿಗೆ ಬೆಲೆ ಕೊಟ್ಟು ಮೈದುನ ಬಂದುಜೊತೆಯಲ್ಲಿ ಇರಲಾರಂಬಿಸಿದ್ದ.ಆದರೆ ಅವನಿಗೆ ತಂದೆಯ ಬಗ್ಗೆ ಒಂದಿನಿತೂ ಗೌರವ ಉಳಿದಿರಲಿಲ್ಲ.ಅತ್ತಿಗೆಯನ್ನು ಗೌರವಿಸುತ್ತಿದ್ದ.
ಕೇಶವನೇ, ತನ್ನ ಕರ್ತವ್ಯ ಎಂದು.. ತಂದೆಯನ್ನು ನೋಡಿಕೊಳ್ಳುತ್ತಿದ್ದ. ಆದರೆ ಆತನಿಲ್ಲದಿದ್ದಾಗ, ಸೊಸೆಯ ಮುಂದೆ ತನ್ನ ಬಾಲ ಬಿಚ್ಚಿ, ಅವಳನ್ನು ಗೋಳು ಹೊಯ್ದುಕೊಳ್ಳುತ್ತಿದ್ದ ಈ ಪ್ರಕಾಶಯ್ಯ.
ಇನ್ನೂ ಇದೆ.. ......
ನಿಮ್ಮ ಅನಿಸಿಕೆಗಳನ್ನು ದಯವಿಟ್ಟು ಬರೆಯಿರಿ... ಕಾಗುಣಿತ ದೋಷಗಳನ್ನು ತಿದ್ದುವ ಪ್ರಯತ್ನ ಮಾಡುತ್ತಲೇ ಇದ್ದೇನೆ. ದೋಷಗಳು ಕಂಡಬಂದಲ್ಲಿ ಮನ್ನಿಸಿ
chennagide khushi. waiting for part 3..keep it up
ReplyDeleteThank u malathi mam, part three is uploaded...:-)
ReplyDeletePls do let me know...about the ending...even I was little confused to conclude the story.