Saturday, 16 May 2015

ಓ ನೆನಪೇ.....


ಓ ನೆನಪೇ ನೀನೆಷ್ಟು ಸುಂದರ
ನೀ ಬರುವ ಆ ಘಳಿಗೆ ಅದೆಷ್ಟು ಮಧುರ
ನನ್ನಲ್ಲಿರುವ ನೀನು ಎಂದೆಂದಿಗೂ ಅಮರ.


ನೆನಪೇ ನೀ ಆಗಿರಬಹುದು ಕೆಲವರಿಗೆ
ಕಾಡುವ ಬೆಂಬಿಡದ ರಕ್ಕಸ
ನನಗೆ ಮಾತ್ರ ನೀ ಬರಲೇ ಬೇಕು ದಿನಕ್ಕೊಮ್ಮೆ
ಬಂದರೆ ತಂದೇ ತರುವೆ ಮರೆಯದೆ ಸಂತಸ.


ಆಗಿರಬಹುದು, ನೀ ಕೆಲವರ
ಪ್ರಾಣ ಹರಣಕ್ಕೆ ಕಾರಣ,
ಅಂತೆಯೇ ನಾ ಜೀವಂತವಿರುವುದಕ್ಕೂ
ಪರೋಕ್ಷವಾಗಿ ನೀನೇ ಕಾರಣ.


ನನ್ನೀ ಒಂಟಿ ಜೀವನದಲಿ
ಬಂದು ತೋರಿದೆ ನೀ ಆತ್ಮೀಯ ಅನುಭೂತಿ
ನೆನಪೇ, ನೀ ಅಂತೆಯೇ
ಕಲಿಸಿಕೊಟ್ಟೆ ಜೀವನದ ರೀತಿ-ನೀತಿ.


2 comments:

  1. ನೆನಪುಗಳ ಮಾತು ಮಧುರ' ನೆನಪಾಯಿತು. ನೆನಪೇ ಹಾಗೆ ಕೆಲವರನ್ನು ಕಾಡಿಸುತ್ತದೆ, ಕೆಲವರನ್ನು ಸಂತೋಷದಿಂದಿರಿಸುತ್ತದೆ. ನೆನಪಿಲ್ಲದೇ ಏನಿದೆ.

    ReplyDelete
  2. Thank u for visiting ...:-)

    ReplyDelete