ಸ್ವಾರ್ಥಿ.....! ಭಾಗ 3
ಮುಂದುವರೆದ ಭಾಗ.....
ಪ್ರಕಾಶಯ್ಯನ ಕಾಟ ತಾಳಲಾರದೆ ಶಿಲ್ಪಾ, ಕೆಲಸಕ್ಕೆ ಸೇರಿದ್ದಳು. ಆಫೀಸ್ನಾ ಕ್ಯಾಬ್ ಫೇಸಿಲಿಟೀ ಇದ್ದರೂ, ಬೇಡ ನಾನೇ ಡ್ರಾಪ್ ಮಾಡ್ತೀನಿ, ನನಗೆ on the way ,ಅಂತ ದಿನಾ ಡ್ರಾಪ್ ಮಾಡಲು ಶುರು ಮಾಡಿದ್ದ ಪ್ರಕಾಶಯ್ಯ, ಆತ 30 ವರ್ಷದಿಂದ two wheeler ಓಡಿಸುತ್ತಿದ್ದರೂ , ಇನ್ನೂ ಸರಿಯಾಗಿ ಬರದು, ನಾಲ್ಕೂವರೆ ಅಡಿಯ ಮನುಷ್ಯ.. ಶಿಲ್ಪಾಳಿಗೆ ಸಾಕು ಸಾಕಾಗಿ ಹೋಗುತ್ತಿತ್ತು, ನಾನೇ ಡ್ರೈವ್ ಮಾಡ್ತೀನಿ ಅಂದ್ರು ಕೇಳದ ಮನುಷ್ಯ.. ದಾರಿಯಲ್ಲಿ ಯಾವುದಾದರೂ ಹುಡುಗಿಯೋ, ಹೆಂಗಸೋ ಕಂಡರಂತೂ ಕೇಳುವುದೇ ಬೇಡ... ದೃಷ್ಟಿ ಆಕಡೆ.
'ಸರಿ ಹೆಂಡತೀನ ಮೇಲೆ ಕಳಿಸಿದ್ದಾಯ್ತು, ನನ್ನನ್ನೂ ಕಳಿಸಿ ಪುಣ್ಯ ಕಟ್ಟಿಕೊ ತಂದೆ ' ಅನ್ನೋ ಪ್ರಾರ್ಥನೆ ಮಾಡುತ್ತಿದ್ದಳು ಶಿಲ್ಪಾliterally. ಅಂತೂ ಇಂತೂ ಶಿಲ್ಪ 6 ತಿಂಗಳು ಕೆಲಸ ಮಾಡುವಲ್ಲಿ, ಸುಸ್ತಾಗಿದ್ದಳು, ಮನೆಯಲ್ಲಿ ಕಾಡುವ ಪ್ರಕಾಶಯ್ಯ, ಸಂಜೆ 6 ಕ್ಕೆಲ್ಲಾ ಮನೆಯಲ್ಲಿರಬೇಕು, ಇಲ್ಲ ವಾದರೆ ನೂರಾರು ಕ್ರಾಸ್ ಕ್ವೆಸ್ಚನ್ಸ್. 'ತಾನು ಕಳ್ಳ, ಪರರನ್ನು ನಂಬ' ಅನ್ನೋ ಹಾಗೆ, ಅದೇನು ಸರ್ಕಾರಿ ಆಫೀಸ್ ಕೆಟ್ಟೋಯ್ತೆ, 6 ಕ್ಕೆಲ್ಲಾ ಮನೆಯಲ್ಲಿರಲು...
ಸೊಸೆ ಇಲ್ಲದಿದ್ದಾಗ, ಕೇಶವನ ಮುಂದೆ, 'ತನ್ನಂಥ ತಂದೆಯೇ ಇಲ್ಲ ನಾನು ನನ್ನ ಜೀವನ ನಾ ಮುಡುಪಾಗಿಟ್ಟಿರೊದೆ ನಿಮಗೋಸ್ಕರ', ಅನ್ನೋ ರೀತಿ build up, brain wash.....ಹೂ...ಕೇಶವನೂ ಸರಿ, ಮೊದಲೇ ಮುಗ್ದ, ತಂದೆ ಹೇಳಿದ್ದಕ್ಕೆಲ್ಲ ಸೈ. ಶಿಲ್ಪಾ ಏನಾದರೂ ಮಾವನ ಬಗ್ಗೆ ಹೇಳಲು ಹೋದರೆ..'ನೀನ್ಯಾಕೆ ಅವರಿಗೆ ಸರಿಯಾಗಿ ಉತ್ತರಿಸೊಲ್ಲ, ಮುಖ ಯಾಕೆ ಒರಟಾಗಿ ಇಟ್ಟುಕೋತಿಯ, ಅವರು ಏನೇ ಇರಲಿ, ನಿನ್ನ ಕರ್ತವ್ಯ ಮಾಡು' ಅನ್ನೋ ಭಾಷಣ ಕೇಳಿ ಕೇಳಿ, ಶಿಲ್ಪ... ರೋಧಿಸಿದ್ದು ಎಷ್ಟೋ ಸಲ. ಗಂಡ ಹೆಂಡಿರ ಮಧ್ಯೆ ಜಗಳ ತಂದಿತ್ತು ತಮಾಷೆ ನೋಡುವುದರಲ್ಲೂ ಎತ್ತಿದ ಕೈ ಪ್ರಕಾಶಯ್ಯ..ನೀವೆಲ್ಲಾದರೂ ಇಂಥ ತಂದೆ ಉರುಫ್ ಮಾವ ನನ್ನು ನೋಡಿದ್ದೀರಾ(ಮಾವ ಇರಬಹುದೇನೋ...ಆದ್ರೆ ತಂದೆ)......??
4 ವರ್ಷಗಳ ಕಾಲ ಸಹಿಸಿದ ಶಿಲ್ಪ, ಹೇಗೋ ಬೇರೆ ಹೋಗಲು ಕೇಶವನನ್ನೂ ಒಪ್ಪಿಸಿದ್ದಾಗಿತ್ತು, ಅಡ್ವಾನ್ಸ್ ಕೂಡ ಕೊಟ್ಟಾಗಿತ್ತು ಹೊಸ ಮನೆಗೆ ಹೋಗಲು, ಲೀಸ್ ಮೇಲೆ . ಶಿಲ್ಪ ತವರು ಮನೆಗೆ ಹೋದಾಗ, ಪ್ರಕಾಶಯ್ಯ , ಕೇಶವನ ತಲೆ ಮತ್ತೆ brain wash ಮಾಡಿದ್ದರು, 'ಲೀಸ್ ದುಡ್ಡನ್ನು ಮನೆ ಬಿಡುವಾಗ ಕೊಡದ್ದಿದ್ದರೆ ಏನು ಮಾಡ್ತೀರಿ....? ಒಂದಲ್ಲ , ಎರೆಡಲ್ಲಾ ಹತ್ತು ಲಕ್ಷ.. ..!ಹಾಗೆ ಹೀಗೆ....., ಅದೇ ಹತ್ತು ಲಕ್ಷ ನನಗೆ ಕೊಡಿ, ನಾನೆಲ್ಲಾದ್ರೂ ಅಪಾರ್ಟ್ಮೆಂಟ್ ಮೇಲೆ ಇನ್‌ವೆಸ್ಟ್ ಮಾಡ್ತೀನಿ, (ಈ ಮನುಷ್ಯನಿಗೆ ಇರೋದೂ ಕೊಟ್ಟು ಮುಂಡ ಮೊಚ್ಕೊಳ್ಳಬೇಕಾಗಿತ್ತಂತೆ)... ' ಅಂತ ಫುಲ್ ತಲೆಗೆ ಬೆಣ್ಣೆ ತಿಕ್ಕಿದಾನೆ, ಕೇಶವನು ತಿಕ್ಕಿಸಿಕೊಂಡಿದಾನೆ. ತಾಯಿ ಮನೆಯಲ್ಲಿದ್ದ ಶಿಲ್ಪ ಅಳುತ್ತಲೇ ಬಂದಿದ್ದಳು, ಫೋನ್ ಮೂಲಕ ಗಂಡ ಬೇರೆ ಹೋಗುವುದು ಬೇಡವೆಂದಾಗ.
ಅಂತೂ ಇಂತೂ ... ಗಂಡನನ್ನು ಒಲಿಸಿ...ಓಲಾಡಿ ಹೊಸ ಮನೆಗೆ ಬಂದಿದ್ದಾಗಿತ್ತು.. ಶಿಲ್ಪ... ಏನನ್ನು ಹೆಚ್ಚಿಗೆ ಆ ಮನೆಯಿಂದ ತಂದಿರಲಿಲ್ಲ. ಶಿಲ್ಪಾ ಸ್ವಲ್ಪ ನೆಮ್ಮದಿಯ ಉಸಿರು ಬಿಡುವಂತಗಿತ್ತು.... ಆದರೂ ಬೆಂಬಿಡದ ಪಿಶಾಚಿ ಪ್ರಕಾಶಯ್ಯ, ದಿನ ರಾತ್ರಿ ಉಟಕ್ಕೆ ಹಾಜರ್, ಅದೇ ರಾಗ ಆದೆ ತಾಳ, ಅನ್ನಸಾರ ಲ್ಲಿ ಏನು ಸಿಕ್ಕೊಲ್ಲ, ಚಪಾತಿ ಜೀರ್ಣ ಆಗೋಲ್ಲ., ಮಣ್ಣು ಮಸಿ.. ಶಿಲ್ಪ ಈಗ ಅದಕ್ಕೆಲ್ಲ ಕೇರ್ ಮಾಡೊಲ್ಲಾ... ತಿಂದರೆ ತಿನ್ನಲಿ ಬಿಟ್ಟರೆ ಬಿಡಲಿ... ಮೈದುನ ಮಾತ್ರ.. ದಿನ ಊಟ ಮಾಡಿಯೇ ಹೋಗ್ತಾನೆ.... ಸದ್ಯಕ್ಕೆ ಅಪ್ಪನೊಂದಿಗೆ ಇದ್ದಾನೆ... ದಿನವೂ ತಂದೆಯ ಬಗ್ಗೆ ದೂರುತ್ತಾನೆ ಅತ್ತಿಗೆಯ ಬಳಿ,'ನನಗಿನ್ನೂ, ಈಗ 26 ವರ್ಷ ಮದುವೆಯಾಗು ಅಂತ ಪ್ರಾಣ ತಿಂತಾರೆ ಅತ್ತಿಗೆ.... ನಾನು ರೂಮ್ ಮಾಡಿಕೊಂಡು ಹೋಗ್ತೀನಿ ಅಂತ' ಶಿಲ್ಪ ಎಲ್ಲದಕ್ಕೂ ಈಗ ನಿರ್ಲಿಪ್ತೆ.
4 ವರ್ಷದಿಂದ ತನ್ನ ತನವನ್ನೇಕಳೆದುಕೊಂಡಿದ್ದ ಶಿಲ್ಪ.. ಈಗ.. ಮತ್ತೊಮ್ಮೆ ತನ್ನನ್ನು ರೂಪಿಸಿಕೊಳ್ಳುವ ಪ್ರಯತ್ನದಲ್ಲಿದ್ದಾಳೆ. ಅಷ್ಟರಲ್ಲೇ.. ತಾನು ತಾಯಾಗುವ ಸುದ್ದಿ..'ok ... no problem ಇನ್ನೊದು ವರ್ಷ, ತಾಯ್ತನದ ಸವಿ ಸವಿದು... ಕರಿಯರ್ ಬಗ್ಗೆ ಯೋಚಿಸಿದರೆ ಆಯಿತೆಂದು' , ನವಮಾಸಗಳು ಕಳೆದು, ಈಗ ಮುದ್ದಾದ ಮಗುವಿನ ತಾಯಾಗಿದ್ದಾಳೆ.
ನನಗೂ ನಾಮಕರಣದ ಕರೆಯೋಲೆ ಬಂದಿದೆ....ಹೋಗಿ ಬರ್ತೇನೆ.....
ನಿಮ್ಮ ಸಲಹೆ ಅನಿಸಿಕೆಗಳಿಗೆ ಸ್ವಾಗತ.. ಕಾಗುಣಿತ ದೋಷವಿದ್ದಲಿ ದಯೆಇಟ್ಟು ಕ್ಷಮಿಸಿ.
:-) enu hesariTTiddaare??
ReplyDeleteAakruthi.....& she is lovely.
Delete