Tuesday, 8 December 2015

THANK YOU SHAOLIN WUSHU FAMILY

THANK YOU SHAOLIN WUSHU  FAMILY

 ಇಂದಿಗೆ ಒಂದು ವರ್ಷದ ಹಿಂದೆ... ನನ್ನ ಮುಖ ಅಪ್ಪು(Keerthi), ಅಪ್ಪು ಮುಖ ನಾನು ಅಂತ ನೋಡಿಕೊಂಡಿದ್ದೋರು, ಹೊತ್ತಿಲ್ಲ ಗೊತ್ತಿಲ್ಲ ಊಟಕ್ಕೆ, ನಿದ್ದೆಗೆ..., ಆದ್ರೆ ಈಗ, ನಮ್ಮ ಮುದ್ದು ಕಂದನ ಆಗಮನದಿಂದ,... ಎಲ್ಲ ಟೈಮ್ ಟೇಬಲ್ ಪ್ರಕಾರ ನಡಿಯೋ ಹಾಗೆ ಆಗಿದೆ,. ಮಗು ಹುಟ್ಟಿದಾಗಿಂದ ಮನೆಯ ಹೊರಗಡೆ ಹೋಗಲಾಗಿರಲಿಲ್ಲ, ಇಂದಿಗೆ ನಮ್ಮ ಮುದ್ದು ಕಂದನಿಗೆ 4 ತಿಂಗಳು ತುಂಬಿ 5 ಕ್ಕೆ ಬಿದ್ದಿದೆ, ಹಾಗೆಯೇ ನನ್ನ ಹುಟ್ಟಿದಬ್ಬ.
ಸರಿ, ಸಂಜೆ ಸುಬ್z ಜಯನಗರಕ್ಕೆ ಊಟಕ್ಕೆ ಹೋಗೋದೆಂದು  ನಾನು  , ಅಪ್ಪು ಮಾತಾಡಿಕೊಂಡಿದ್ದೆವು... ನಾನು ಒಲ್ಲದ ಮನಸ್ಸಿನಿಂದಲೇ ಒಪ್ಪಿದ್ದೆ, ಮಗು ಅಳಲು ಶುರು ಮಾಡಿದರೆ ಏನು  ಮಾಡುವುದೆಂದು....ಅಪ್ಪುವಿನ ಮನಸ್ಸಿಗೆ ನೋವಾಗ ಬಾರದೆಂದು ಒಪ್ಪಿದ್ದು!! ಆದ್ರೆ ಮಗು ಉತ್ಕರ್ಶ್ ಅತ್ತಿದ್ದ ರೇ  ಕೇಳಿ.... ಚೆನ್ನಾಗಿ ನಿದ್ದೆ ಮಾಡಿದ.

ಅರೆ ಹೇಳಲೇ ಮರೆತೇ,,,,ಈ  ವರ್ಷದ ಬರ್ತ್‌ಡೇ ಗಿಫ್ಟ್ ಬ್ರೇಸ್ಲೆಟ್ .....ರಾತ್ರಿ ಹನ್ನೆರಡಕ್ಕೇ.... ವಿಶ್ ಮಾಡಿ ಕೊಟ್ಟಿದ್ದರು.

ಸಂಜೆ... ಏಳಕ್ಕೆಲ್ಲಾ... ಕಂದನನ್ನು ರೆಡೀ ಮಾಡಿ ನಾನು ರೆಡೀ ಆಗಿ... ಹೊರಟದ್ದಾಯ್ತು, ಸುಬ್ಜ಼್ ಗೆ ಹೋದಾಗ.... ಅರೆ ನಮ್ಮ ಶವೋಲಿನ್ ವೂಶೂ ಕುಟುಂಬದ ಮೆಂಬರ್ಸ್.... ಓ ಮೈ ಗಾಡ್ ಇಟ್ಸ್ ಆ  ಸರ್ಪ್ರೈಸ್ ಪಾರ್ಟೀ.....

ಅಪ್ಪುವಿನತ್ತ  ನೋಡಿದೆ... "ಏನಪ್ಪು ನಾವಿಬ್ರೇ ಅಂತ... ನಾನು ಸರಿಯಾಗಿ ಡ್ರೆಸ್ ಕೂಡ ಮಾಡಿಕೊಂಡು ಬಂದಿಲ್ಲ" ಅಂತ (OF COURSE... ಮಗುವದಾಗಿನಿಂದ... ಯಾವ ಬಟ್ಟೆಯು ನನಗೆ ಫಿಟ್ ಆಗ್ತಿಲ್ಲ .. ಅನ್ನೋದು ಬೇರೆ ವಿಷ್ಯ..  :-(. ಹಾಗಾಗಿ ನಾನು ಹೊಸ ಬಟ್ಟೆ ಶಾಪಿಂಗ್ ಕೂಡ ಮಾಡ್ತಿಲ್ಲ..... .. ) ಅಪ್ಪು ಹೇಳಿದ್ದು ಇಷ್ಟು... "MY PRINCESS LOOKS ALWAYS BEAUTIFUL." ಅಂತ...(OH... THANK YOU GOD ಐ ಹ್ಯಾವ್ ಸಚ್ ಆ ಲವಿಂಗ್ ಹಸ್ಬೆಂಡ್ & ಲವ್ಲೀ ಕಿಡ್)...

 ನನ್ನ ಬ್ಲೋಗ್ ಫ್ಯಾಮಿಲೀ ಗಾಗಿ ಒಂದು ಫೋಟೋ....ಶವೋಲಿನ್ ವೂಶೂ ಫ್ಯಾಮಿಲೀ ಗೆ ನನ್ನ ಧನ್ಯವಾದಗಳು.


Wednesday, 30 September 2015

Uthkarsh Keerthi -Our tiny little bud has arrived on August 8, 2015

ಥ್ಯಾಂಕ್ ಯೂ ಫ್ರೆಂಡ್ಸ್, ಎರೆಡು ತಿಂಗಳಿಂದ ಏನೇನೂ ಬರೆಯಲು ಆಗಲಿಲ್ಲ, ಆದರೂ, ನಿಮ್ಮೆಲ್ಲರ ಪ್ರೋತ್ಸಾಹ ಹಾಗೂ ನಿಮ್ಮ ಆತ್ಮೀಯ ಕಾಮೆಂಟ್ ಗಳಿಗೆ ಹೃತ್ಪೂರ್ವಕ ಧನ್ಯವಾದಗಳು.  

ನಮ್ಮ ಮುದ್ದಾದ ಮಗ ನಮ್ಮ ಮನೆ ಮನ ತುಂಬಿದ್ದು, ಆಗಸ್ಟ್ 8 ರಂದು, ನಮಗೆ ಶುಭ ಹಾರೈಸಿದ... ಹಾಗೂ ಸದಾ ಸಹಾಯ ಮಾಡಲು ಸಿದ್ದರಾಗಿದ್ದ  Shaolin wushu cultural centre ಕುಟುಂಬದ ಪ್ರತೀ ಸದಸ್ಯರಿಗೂ ನನ್ನ ಹಾಗೂ  ಕೀರ್ತಿಯ ಹೃತ್ಪೂರ್ವಕ ಧನ್ಯವಾದಗಳು.  

ನಮ್ಮ ಮುದ್ದು ಕುವರನ ಹೆಸರು ಉತ್ಕರ್ಶ್ ಕೀರ್ತಿ...ನಾನವನಿಗೆ Olympian baby  ಅಂತಾನೆ ಕರೆಯೋದು ಯಾಕಂದ್ರೆ ಅವನು ಹುಟ್ಟಿರೋದು... 5 ವರ್ಷದ ಹಿಂದೆ ಬೀಜಿಂಗ್ ನಲ್ಲಿ ಒಲಿಂಪಿಕ್ ಶುರುವಾದ ದಿನ.(8-8-2008)
ಚೀನಾದಲ್ಲಿ, ತಾಯಂದಿರು.. ಈ ದಿನಕ್ಕೋಸ್ಕರ ತುಂಬಾ ದಿನಗಳ ಹಿಂದೆಯೇ .caesarean  ಮಾಡಿಸಿಕೊಳ್ಳಲು ಡಾಕ್ಟರ್ ಅಪಾಯಂಟ್‌ಮೆಂಟ್ ತೆಗೆದು ಕೊಂಡಿದ್ದರಂತೆ...!ಅವರಿಗೆಲ್ಲ ಇದು ತುಂಬಾನೇ auspicious day.

ಎರೆಡು ತಿಂಗಳಿಂದ  ಈ ತುಂಟನನ್ನ ಸಂಬಾಲಿಸುವುದರಲ್ಲಿ ಸಮಯ ಕಳೆದದ್ದೇ ತಿಳಿಯಲಿಲ್ಲ. ಅವನ ಮಲಗು , ಆಟ , ಊಟಗಳ.. ದಿನಚರಿ ಇನ್ನೂ ಒಂದು ಹಂತಕ್ಕೆ ಬಂದಿಲ್ಲ..ಹೀಗಾಗಿ... ನನಗೆ ಬರೆಯಲು ಬಿಡುವಾಗಲಿಲ್ಲ.

ನಿಮ್ಮೆಲ್ಲರಿಗಾಗಿ ಅವನ ಒಂದು ಫೋಟೋ.

ಇನ್ನಾದರೂ...ಸ್ವಲ್ಪ ಬಿಡುವು ಮಾಡಿಕೊಂಡು ಬರೆಯುವ ಪ್ರಯತ್ನದಲ್ಲಿ ನನ್ನ ಮೊದಲನೇ ಲೇಖನ ಇದು.  ನಿಮ್ಮೆಲ್ಲರ ಶುಭ ಹಾರೈಕೆ ನಮ್ಮೊಟ್ಟಿಗಿ ರಲಿ . ನಿಮ್ಮ ಚೆಂದದ ಸಲಹೆಗಳಿಗೆ ನನ್ನ ಧನ್ಯವಾದಗಳು.

Thursday, 16 July 2015

ಸಿಂಗಪುರದಲ್ಲಿ ಎರೆಡು ದಿನ....

ನಾವು ಮೊದಲು ನೋಡಿದ್ದು ಸಿಂಗಪುರ್ ಫ್ಲೋಯೆರ್(Singapore flyer).ಅದರಲ್ಲಿ ಕೂತರೆ ಸಿಂಗಪುರ್ ನಾ 360 ಡಿಗ್ರೀ ವ್ಯೂ.. ರೋಮಾಂಚಕಾರಿಯಾದದ್ದು. ಇದರಲ್ಲ್ಲಿ ತುತ್ತ ತುದಿಯನ್ನು ತಲುಪಿದಾಗ ನಮ್ಮ ಮನದ ಇಚ್ಛೆಯನ್ನು ಪ್ರಾರ್ಥಿಸಿದಲ್ಲಿ ನೆರವೇರುತ್ತದೆ ಅನ್ನೋ ಪ್ರತೀತಿಯೂ  ಇದೆ. ನಾನು ಕಣ್ಮುಚ್ಚಿ ಐದತ್ತು ನಿಮಿಷ ಪ್ರಾರ್ಥಿಸಿದ್ದು ಕಂಡು  ಕೀರ್ತಿ ಅಣಕಿಸಿದ್ದರು.. "ಎಲ್ಲರಿಗೂ ಒಳ್ಳೆಯದಾಗಲಿ ಅಂತ  ಪ್ರಾರ್ಥಿಸಿದರೆ ಸಾಕಪ್ಪ.. ಅದೇನು.. ವಂಶದವರ ಹೆಸರೆಲ್ಲಾ ಹೇಳಿಕೊಂಡು ಅವರಿಗೆ ಇದು ಕೊಡು, ಅದು ಕೊಡು ಅಂತ ಬೇಡಿಕೊಳ್ಳೋದು" ಅಂತ...:-(


Singapore flyer 

ಎರಡನೆಯದಾಗಿ ಸಿಂಗಪುರ್ ಮರ್ಲೀಯನ್ (Merlion), ಸಿಂಹದ ತಲೆ ಹಾಗೂ  ಮೀನಿನ ದೇಹ ಉಳ್ಳ ಈ ಲಾಂಛನ ಸಿಂಗಪುರ್ ನಾ ಮಾರ್ಕೆಟಿಂಗ್ ಐಕಾನ್.
Singapore merlion

ಸಿಂಗಪುರ್ ನಾ ಚೈನಾ ಟೌನ್ ನನಗೆ ತುಂಬಾ ಇಷ್ಟವಾದ ಸ್ಥಳ ಯಾಕೆಂದ್ರೆ... ಶಾಪಿಂಗ್ ಶಾಪಿಂಗ್ ಶಾಪಿಂಗ್...:-) 
ಚೀನೀಯರ ಜನಸಂಕ್ಯೆ ಸಿಂಗಪುರ್ ನಲ್ಲಿ ಎಲ್ಲರಿಗಿಂತ ಜಾಸ್ತಿ. ಚೈನಾ ಟೌನ್ ನಲ್ಲ್ಲ್  ಏನೆಲ್ಲಾ ಸಿಗುತ್ತ್ತೆ ಗೊತ್ತಾ.. ಫೆಂಗ್‍ಶುಈ ವಸ್ತುಗಳು, ಬಟ್ಟೆಗಳು,......etc. ಚೌಕಾಸಿ (bargain) ಮಾಡೋಕ್ಕು ಚೆಂದ...ಅಲ್ಲಿನ ಆರ್ಕಿಟೆಕ್ಚರ್ ನೋಡುಗರ ಮೈ ಮನ ಸೆಳೆಯುತ್ತೆ.
China town Singapore
ಮರುದಿನ ನಾವು ಪೂರ್ತಿಯಾಗಿ ಮೀಸಲಾಗಿಟ್ಟದ್ದು, ಸೆಂಟೋಸ ಐಲ್ಯಾಂಡ್ ಸಿಂಗಪುರ್(Sentosa island)
ಸೆಂಟೋಸ ಐಲ್ಯಾಂಡ್ ಈಸ್ ಫುಲ್ ಆಫ್ ಆಡ್ವೆಂಚರ್ಸ್,.....ಅಂಡರ್ ವಾಟರ್  ಹಾಗೂ ಓಶನ್ ವರ್ಲ್ಡ್ (under water & ocean world)ನಲ್ಲಿ ಡೋಲ್ಫಿನಗಳ ಶೋ.... ಬೀಚ್ ವಾಕ್(there are 4 -5 beaches), ಮೇಣದ ಮ್ಯೂಸೀಯಮ್(Madame Tussauds museum), ಚಿಟ್ಟೆಗಳ ಉದ್ಯಾನವನ (butterfly & insects kingdom), 
Me & keerthi in Ocean world with a seal

ಮರುದಿನ ಬಿಡಲಾರದೆ ಸಿಂಗಪುರ್ ನ ಬಿಟ್ಟು ಹೊರಡಲೇಬೇಕಿತ್ತು.. ಆ ಎರೆಡು ದಿನಗಳು ಸಿಂಗಪುರ್ ನಗರವನ್ನು(ದೇಶವನ್ನು) ನೋಡಲು ಏನೇನೂ ಸಾಲದಾಗಿತ್ತು. ಮತ್ತೊಮ್ಮೆ ಬರುವ ಆಶಯವನ್ನೊತ್ತು ಹಾಂಗ್‌ಕೋಂಗ್ ನಾ ಫ್ಲೈಟ್ ಹತ್ತಿದ್ದೆವು.
 
ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ.....:-)

Monday, 6 July 2015

ನಮ್ಮ ದೇಶಕ್ಕೂ ಒಬ್ಬ ಲೀ ಬೇಕು(Lee Kuan Yew).....ಸಿಂಗಪುರದಲ್ಲಿ (Singapore) ಎರೆಡು ದಿನ....



ಮಾರ್ಚ್‌ನಲ್ಲಿ  ಹಾಂಗ್‌ಕಾಂಗ್ ನಲ್ಲಿ  ನಡೆದ  ಇಂಟರ್‌ನ್ಯಾಶನಲ್  ವೂಶೂ ಚ್ಯಾಂಪಿಯನ್ಶಿಪ್  ನ  ಬಗ್ಗೆ  ಬರೆದಿದ್ದೆ. ಅದರ ಲಿಂಕ್ ಇಲ್ಲಿದೆ ಮರೆತರೂ ಮರೆಯಲಿ ಹ್ಯಾಂಗಾ...........ಮ್ಯಾಗಿ.. ಮ್ಯಾಗಿ... ಮ್ಯಾಗಿ....!!!
ಹೇಗಿದ್ದರೂ ಹಾಂಗ್‌ಕಾಂಗ್ ಗೆ ಹೋಗುವಾಗ.. ಸಿಂಗಪುರ್ ಮೇಲೆ ಹೋಗೋಣ.. ಹಾಗೆ ಅಲ್ಲೆರೆಡು  ದಿನವಿದ್ದು.. ನೋಡಲಾಗುವಷ್ಟು ಸ್ಥಳಗಳನ್ನು ನೋಡಿ  ಹೋಗೋಣ  ಎಂದು  ಪ್ಲಾನ್  ಮಾಡಿದ್ದು ನಾನು :-)  ಸರಿ  ನಾವು ಸಿಂಗಪುರ್  ತಲುಪಿದಾಗ ರಾತ್ರಿ 12.30. ನಮ್ಮನ್ನು ಪಿಕ್ ಮಾಡಲು  ಟ್ಯಾಕ್ಸೀ ಡ್ರೈವರ್  ಕಾದು ನಿಂತಿದ್ದ. ಸರಿ ಅವನ  AC ಕಾರ್ ಹತ್ತಿ ಕೂತದ್ದಾಯ್ತು.. ನಾವು ಬುಕ್ ಮಾಡಿದ್ದು ಕಲ್ಚರಲ್ ಹೋಟೆಲ್ , ಜಲನ್ ಬೇಸರ್ ರೋಡ್.  ಸಿಂಗಪುರ್ ನಲ್ಲಿ ಕಾಣಸಿಗುವುದು..ಗ್ರೀನರೀ, ಸ್ವಚ್ಛತೆ,  ಟ್ರ್ಯಾಫಿಕ್ ರೂಲ್ಸ್. ಮಧ್ಯರಾತ್ರಿಯಲ್ಲೂ  ಯಾರು  ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡೊಲ್ಲಾ.
ಸರಿ, ಹೋಟೆಲ್ ತಲಪಲು ಅರ್ಧ ಗಂಟೆಯೂ ಆಗಲಿಲ್ಲ.ಚೆಕ್ ಇನ್ ಆಗಿ, ನಮ್ಮ ಲಗೇಜ್ ಎಲ್ಲ ರೂಂಗೆ ಸೇರಿಸಿ.. ಏನಾದರೂ ತಿನ್ನಲು ಸಿಗುವುದೇನೋ ಎಂದು ರಿಸೆಪ್ಶನ್ ನಲ್ಲಿ ಕೇಳಿದರೆ... ಅವ ಹೇಳಿದ್ದು.  "go straight & take a left again take right, there is a super market called Mustaffa... you will find everything there" ಎಂದ. ಕೀರ್ತಿ ಎರೆಡೆರೆದು  ಬಾರಿ ಕೇಳಿದರು "will it be open 24/7", ಅವನು ಹೂ..  ಅಂದಮೇಲೆ ಅತ್ತ ನಡೆದಿದ್ದು. ಸರಿ.. ದಾರಿಯಲ್ಲೇ ಎರೆಡೆರೆದು ಸಣ್ಣಸಣ್ಣ  ಚೈನೀಸ್ ರೆಸ್ಟಾರೆಂಟ್ಗಳು  ಕಾಣಿಸಿದವು..  ಆದರೆ ಸಸ್ಯಾಹಾರಿ ಊಟವೆನೂ ಇರಲಿಲ್ಲ...ಸರಿ ಅವನು ಹೇಳಿದ ದಾರಿಯಲ್ಲೇ ಹೋದರು.. ನಮಗೆ ಆ ಸೂಪರ್  ಮಾರ್ಕೆಟ್  ಸಿಗಲೇ ಇಲ್ಲ (ಇನ್ನೂ ದೂರ ನಡೆಯಬೇಕಿತ್ತು).  ಸೊ.. ಅದರ ಬದಲಾಗಿ ಕಂಡ ಇನ್ನೊದು ಸೂಪರ್ ಮಾರ್ಕೆಟ್ ಗೆ ನುಗ್ಗಿದೆವು... ಕೌಂಟರ್ ನಲ್ಲಿ ಒಂದೇ ಹುಡುಗಿ., ಮೊಬೈಲ್ ನಲ್ಲಿ ಗೇಮ್ ಆಡಿಕೋತಾ ಕೂತಿತ್ತು.... ಸರಿ ನಮಗೆ  ಸಿಕ್ಕಿದ್ದು, ಹಣ್ಣು  ಬ್ರೆಡ್ ಜಾಮ್.. ನೀರಿನ ಬಾಟಲ್,  ಎತ್ತಿಕೊಂಡು ಬಂದು ಬಿಲ್ ಮಾಡಿಸಿ ರೂಮಿಗೆ ವಾಪಸ್ ಆದ್ವಿ. ರಾತ್ರಿ ಸುಮಾರು 1.30 ರಲ್ಲಿ ಒಬ್ಬಳೇ ಹುಡುಗಿ ಒಂದು ಸೂಪರ್ ಮಾರ್ಕೆಟ್ ನಲ್ಲಿ ಆರಾಮಾಗಿ ವ್ಯಾಪರಾ ಮಾಡಿಕೊಂಡು ಕೂತಿದ್ದು  ನೋಡಿ.. ನಾನಂತು ಸುಸ್ತು.. ನಮ್ಮ ಭಾರತ ದಲ್ಲಿ 24/7 ಸೂಪರ್ ಮಾರ್ಕೆಟ್ಸ್ ಇಲ್ಲವೇ ಇಲ್ಲ..( ನನಗೆ ಗೊತ್ತಿರುವ ಹಾಗೆ ಇಲ್ಲ ) ಅಂಥದರಲ್ಲಿ  ಒಂಟಿ ಹುಡುಗಿ ಕೂರುವುದು ಎಂದರೇ... ಯಾಕೋ... ನೆನೆಸಿಕೊಳ್ಳೋಕೂ... ಸದ್ಯವಿಲ್ಲವೇನೋ ಎನಿಸಿತು :-(
 ಸರಿ ಬೆಳಗ್ಗಿ 8.30 ರಿಂದ ನಮ್ಮ ಸಿಟೀ ಟೂರ್ ಇದ್ದರಿಂದ, ಬೇಗ ಒಂದಷ್ಟು ಹಣ್ಣು ತಿಂದು ಮಲಗಿದೆವು. 
ಬೆಳಗ್ಗೆ ಎದ್ದು  ರೆಡೀ ಯಾಗಿ, 7.30 ಗೆಲ್ಲಾ ಡೈನಿಂಗ್ ಹಾಲ್ ಗೆ ಬಂದೆವು. ಬ್ರೇಕ್‌ಫಾಸ್ಟ್ ಬಫೆ ಇದ್ದದರಿಂದ.  ನಂಗಂತೂ, ಬ್ರೇಕ್‌ಫಾಸ್ಟ್ ನೋಡಿ ಖುಷಿ..ಯಾಕಂದ್ರೆ.. ಇಡ್ಲಿ, ಸಾಂಬರೂ ಇತ್ತು.  ಸರಿ ಗಡದ್ದಾಗಿ ಎರೆಡು ಇಡ್ಲಿ, ಫ್ರೈಡ್ ರೈಸ್, ಆರೆಂಜ್  ಜೂಸ್ ಕುಡಿದು ಮತ್ತೆ  ರೂಮಿಗೋಗಿ, ಬೇಕಾದ ಕ್ಯಾಮರ .. ದುಡ್ಡು, ಮೊಬೈಲ್ ಗಳನ್ನೆತ್ತಿಕೊಂಡು ಬರುವಷ್ಟರಲ್ಲಿ 8.15.  ನಮ್ಮ ಟೂರ್ ಗೈಡ್ ನಮಗಾಗಿ ಕಾಯುತ್ತಿದ್ದ. ( ನಾನು ಇದುವರೆಗೂ ನೋಡಿರುವ ಹಾಗೆ, ಹಾಂಗ್‌ಕಾಂಗ್, ಮಲೇಶಿಯ, ಬೇಜಿಂಗ್.. ಎಲ್ಲರೂ ಟೈಮ್ ಫಾಲೊ ಮಾಡುವುದರಲ್ಲಿ ಒಬ್ಬರನ್ನೊಬ್ಬರು ಮೀರಿಸುತ್ತಾರೆ). 
ಅದು 10 ಸೀಟಿಂಗ್ ಮಿನಿ ಬುಸ್ಸು, ಸರಿ ನಾವು ಹತ್ತಿ  ಕೂರುವಷ್ಟರಲ್ಲೇ, ಎರೆಡು ಇಂಡಿಯನ್ ಫ್ಯಾಮಿಲೀಸ್  ಕೂತಿದ್ದವು (ನಂತರ ತಿಳಿದು ಬಂದಿದ್ದು, ಪುಣೆ ಹಾಗೂ ಮುಂಬೈ ಕುಟುಂಬಗಳೆಂದು). ಮತ್ತೆ ದಾರಿಯಲ್ಲಿ ಸಿಕ್ಕ ಹೋಟೆಲ್ ಒಂದರಿಂದ ಮತ್ತೊಂದು ಜೋಡಿ(ಅಮೆರಿಕದ್ದು)ಯನ್ನು  ಹತ್ತಿಸಿಕೊಂಡು ಹೊರೆಟೆವು.
ನಮ್ಮ ಟೂರ್ ಗೈಡ್ ನಿರರ್ಗಳ ವಾಗಿ  ಇಂಗ್ಲೀಶ್ ನಲ್ಲಿ  ಸಿಂಗಪುರ ದ ಬಗ್ಗೆ ಮಾಹಿತಿ ಕೊಡಲಾರಂಬಿಸಿದ್ದ. ಅದರಲ್ಲಿ ಮುಖ್ಯವಾದದ್ದು ಇವು: 
  1. Singapore ಅಂದರೆ Singa+pore = Lion+fish ಅದಕ್ಕಾಗಿಯೇ,.. Merlion ಆ ದೇಶದ ಪ್ರವಾಸೋದ್ಯಮದ ಲೋಗೋ. 
  1. ಸಿಂಗಪುರ್ ನಾ  ಜನಸಂಕ್ಯೆ  ಯನ್ನು ಈ ರೀತಿಯ ಜನಾಂಗೀಯ  ಗುಂಪುಗಳಾಗಿ ವಿಂಗಡಿಸಬಹುದು( ethnic groups )  74%  ಚೈನೀಸ್, 13.5%  ಮಲೇಶಿಯಾನ್ಸ್, 9% ಇಂಡಿಯನ್ಸ್,  3.5% ಇನ್ನಿತರೆ.
  1. ಒಬ್ಬ  ಪೋಲೀಸ್ ನವನು ಕೂಡ ನಮ್ಮ ಕಣ್ಣಿಗೆ ಕಾಣಸಿಗುವುದಿಲ್ಲ , ಯಾಕೆಂದರೆ,... everything will be controlled through CCTV in a control room. ಆಕ್ಸಿಡೆಂಟ್ ರೇಟ್,  ರೂಲ್ಸ್ ಬ್ರೇಕಿಂಗ್  ಎಲ್ಲಾ ಇಲ್ಲವೇ ಇಲ್ಲ, ನೋ ಕ್ರೈಮ್ ರೇಟ್ ಸಹ. 
  1. ಕುಡಿಯುವ ನೀರು ಸಹ ಪಕ್ಕದ  ಮಲೇಶಿಯಾದಿಂದ ತರಿಸಿಕೊಳ್ಳಲಾಗುತ್ತದೆ. 
  1. ಟಾಪ್ 10 ಬೆಸ್ಟ್ ಎಜುಕೇಶನಲ್ ಸಿಸ್ಟಮ್ಸ್ ನಲ್ಲಿ ಸಿಂಗಪುರ್ ಕೂಡ ಒಂದು. 
  1. One of the busiest ports. 
  1. High net worth individuals (Singapore has the highest number of millionaires per capita in Asia) 
  1. ಸ್ವಚ್ಛತೆ.. ಪಬ್ಲಿಕ್, ಮೆಟ್ರೋ..ಎಲ್ಲ ಕಡೆಯೂ.. ಫಳ ಫಳ..  ಚೂಯಿಂಗ್ ಗಮ್, ಉಗಿಯುವುದು.. ಗ್ರ್ಯಾಫಿಟೀ  ಎಲ್ಲವೂ  ಸಿಂಗಪುರ್ ನಲ್ಲಿ  ನಿಷಿದ್ಧ.  

 ಇನ್ನೂ ಸಾಕಷ್ಟು ವಿಷಯಗಳಲ್ಲಿ  ಸಿಂಗಪುರ್ ಮುಂದು..... 
ಸಿಂಗಪುರ್ ನಾ ನೇತಾ...ಲೀ ಕ್ವಾನ್ ಯೀವ್.(Lee Kuan Yew,  is recognised as the founding father of independent Singapore) ಲೀ ಯನ್ನು ಸ್ವತಂತ್ರ ಸಿಂಗಪುರ್ ನಾ ಜನಕ ಎನ್ನಲಾಗುತ್ತದೆ. 
Lee being described as transitioning Singapore from the "third world to the first world in a single generation" under his leadership. ಇಂದು ಸಿಂಗಪುರ್ ನಾ ಸಾಧನೆ ಗೆ ಮುಖ್ಯ ಕಾರಣ ಲೀ, 1959 ರಿಂದ 1990 ರ ವರೆಗೆ ಲೀ ಪ್ರಧಾನಿ ಪಟ್ಟವನ್ನಲಂಕರಿಸಿದ್ದರು.
ಸಿಂಗಪುರ್ ನಾ ಸಾಧನೆ ಯನ್ನು ಗಮನಿಸಿದಾಗ ನನಗನ್ನಿಸ್ಸಿದ್ದು..ಎಲ್ಲ ದೇಶದಲ್ಲೂ  ಒಬ್ಬ ಲೀ ಯ ಅವಶ್ಯಕತೆ ಇದೆ. ನಮ್ಮ ಭಾರತದಲ್ಲೇಕೆ ಲೀ ಹುಟ್ಟಲಿಲ್ಲ...?????ಆದರೆ ನನ್ನ ದೊಡ್ಡ ಸಾಲಾಮ್ ಲೀ ಯವರಿಗೆ, ನಾವು ಹೋದ ದಿನದ ಹಿಂದಿನ ದಿನವಷ್ಟೇ(23 ಮಾರ್ಚ್ 2015) ಲೀ ಯವರು.. .. ಸಿಂಗಪುರ್ ನಾ.. ಹಾಗೆ ನಮ್ಮನೆಲ್ಲಾ ಅಗಲಿದ್ದರು... ನಮಗೆ ಎಲ್ಲೆಲ್ಲೂ ಕಾಣ ಸಿಕ್ಕಿದ್ದು.. ಲೀ ಬಗೆಗಿನ ಮಾತು, ಹಾಗೆ, ಸಿಂಗಪುರ್ 1 ವಾರದ ಶೋಕಾಚರಣೆಯನ್ನು ಘೋಷಿಸಿತ್ತು... ಆದರೆ ಯಾರು... ಗುಂಪು ಗಲಾಟೆ ಮಾಡದೆ ತಮ್ಮ ಕೆಲಸಗಲ್ಲ್ಲಿ ತೊಡಗಿದ್ದರು..(ನನಗೆ ನೆನಪಾದದ್ದು ನಟ ರಾಜ್‌ಕುಮಾರ್ ಅವರ ಮರಣದ ಸಮಯದಲ್ಲಿ ನಡೆದ.. ಘಟನೆಗಳು.. ನೂಕು ನುಗ್ಗಲು.. ತುಳಿತ). 
ನಮ್ಮ ದೇಶಕ್ಕೂ ಒಬ್ಬ ಲೀ ಬೇಕು ಆಗ ನಮ್ಮ ಭಾರತವೂ , ಸಿಂಗಪುರ್ ನಷ್ಟು ಖ್ಯಾತಿ ಯನ್ನು ಹೊಂದಬುಹುದಿತ್ತು ಅನ್ನೋ ವಿಷಯ ಮನಕ್ಕೆ ಬಂದಾಗ.. ಈ ವಿಷಯ ನಿಮ್ಮೊಡನೆ ಹಂಚಿಕೋಬೇಕೆನಿಸಿತು.ನಮ್ಮ ಸಿಂಗಪುರ್ ನಾ ಸಿಟೀ ಟೂರ ನಾ ಬಗ್ಗೆ ಮುಂದಿನ ಪೋಸ್ಟ್ ನಲ್ಲಿ ಬರೆಯುತ್ತೇನೆ... ನಿಮ್ಮ ಚೆಂದದ ಸಲಹೆ ಅನಿಸಿಕೆಗಳಿಗೆ  ಸ್ವಾಗತ. (ಒಂದು ವಾರದಿಂದ ಕಾಡಿದ ನೆಗಡಿ, ಜ್ವರ ,ಕೆಮ್ಮುಗಳಿಂದ, ಈ ಪೋಸ್ಟ್ ನಾ ಇಲ್ಲಿಗೆ ಮುಗಿಸ್ಥ ಇದೇನೇ.. ಬಟ್.. ಮುಂದಿನ ಪೋಸ್ಟ್ ನಲ್ಲಿ ಸಿಂಗಪುರ್ ನ ಬಗ್ಗೆ  ಇನ್ನಷ್ಟು ಮಾಹಿತಿ ನೀಡುವ ಪ್ರಯತ್ನದಲ್ಲಿದ್ದೇನೆ)



Wednesday, 24 June 2015


ಅನುಭಂಧದ ಕಾರಂಜಿ......ಸಣ್ಣ ಕಥೆ 



"ಅಪ್ಪನಿಗೆ ಫೋನ್ ಮಾಡಿದ್ಯೇನೆ? ನಾನು ಮೊನ್ನೆ ಮಾಡಿದ್ದಾಗ, ಯಾಕೋ.. ಶೀಲಾ ಫೋನೇ ಮಾಡಿಲ್ಲ ಅಂತ ಪೇಚಾಡ್ತಿದ್ದರು", ನೀಲಾ ಅಕ್ಕ ಫೋನ್ ನಲ್ಲಿ ಹೇಳಿದಾಗ, ಯಾಕೋ  ಏನೆಳಬೇಕೋ ತೋಚದೆ," ಹಾ...ಹಾ.. ಏನಂದೆ.. ಫೋನಾ.. ಮಾಡ್ತೀನಿ ಬಿಡುವಾಗಲಿಲ್ಲ ಇತ್ತೀಚೆಗೆ, ಈಗ ಫೋನ್ ಇಡ್ಲಾ ..."ಎಂದು ಫೋನ್ ಕಟ್ ಮಾಡಿದ್ದೆ. ನಂತರ, ಆಫೀಸ್ ಕೆಲಸದಲ್ಲೂ.. ಸರಿಯಾಗಿ ತೊಡಗಿಸಿಕೊಳ್ಳಲಾಗಿರಲಿಲ್ಲ. 

ನಾಳೆ ಶನಿವಾರ ಅದರ ನಂತರ ಬರೋ.. ಹಬ್ಬಗಳ  ರಜಾ ಸೊ.. ಲಾಂಗ್ ವೀಕೆಂಡ್ ... ಅನ್ನೋ ಗಡಿಬಿಡಿಲಿ ಎಲ್ಲರೂ... ಬೇಗ ಬೇಗ ಕೆಲಸ ಮುಗಿಸಿ ತಮ್ಮ ತಮ್ಮ ಊರಿಗೊ,ಮನೆಗೋ  ಹೋಗುವ ಆತುರದಲ್ಲಿದ್ದರು. ನಾನ್ ಹೋಗಿ ಮಾಡುವುದಾದ್ರೂ ಏನು....? ಅದೇ PG.. ಅದೇ ಒಂಟಿತನ.. ಅದರ ಬದಲು ಆಫೀಸ್ನಲ್ಲೇ ಇನ್ನೊಂದಿಷ್ಟು ಹೊತ್ತು ಕೂರೋಣ ಅನ್ನಿಸ್ತಾ ಇತ್ತು.... ಆದರೆ ನಂತರ ಕ್ಯಾಬ್ ಗಳು ಸಿಗುತ್ತಿರಲಿಲ್ಲ ವಾದ್ದರಿಂದ.. ಸಮಯಕ್ಕೆ ಸರಿಯಾಗಿ ಹೊರಟರೇನೇ ಸರಿ ಅಂತ .. ಸಿಸ್ಟಮ್ ಶಟ್ ಡೌನ್  ಮಾಡಿ ರೆಡೀ ಆದೆ. "ಆಯ್ತಾ ಶೀಲಾ, ಹೊರೋಡೊಣವಾ.. ಸದ್ಯ ನಾಳೆ ಇಂದ  ವೀಕೆಂಡ್... ಸೋಮವಾರ ಈದ್ ಮಿಲಾದ್, ಮಂಗಳವಾರ  ಕ್ರಿಸ್ಮಸ್.. ಒಟ್ಟಿಗೆ ನಾಲ್ಕು ದಿನ... ಆರಾಮಾಗಿ ಅಮ್ಮನ ಮನೆಗೆ ಹೋಗ್ತಿದೀನಿ.. ಗಂಡ ಮಗನ ಜೊತೆ, ತುಂಬಾ ದಿನ ಆಗಿತ್ತು ಅಪ್ಪ ಅಮ್ಮನ್ನ ನೋಡಿ. ನೀನು ಹೋಗ್ತಿದಿಯಲ್ಲ ಮೂಡು ಬಿದ್ರೆಗೆ ?"  ಎಂದು ಒಂದೇ ಸಮ ವಟಗುಟ್ಟಿದವಳತ್ತಾ  ನೋಡಿದೆ, "ಹ.. ಇನ್ನೂ ಡಿಸೈಡ್ ಮಾಡಿಲ್ಲ ಕಣೆ ನೇಹಾ, ನೋಡೋಣ.. ನಾಳೆ ಆದ್ರೆ ಹೋಗ್ತೀನಿ..."ಎಂದೇ ನೀರಸವಾಗಿ. ನೇಹಾ ಆಶ್ಚರ್ಯದಿಂದ "ಅದೇನೇ .. ನಾವೆಲ್ಲಾ,... ಇಂಥದೆನಾದ್ರೂ ಒಂದು ರಜಾ ಸಿಕ್ಕರೆ ಸಾಕು ಅಂತ ಕಾಯ್ತಿದ್ದರೆ, ನೀನು ಅದೇ  ಕಿತ್ತೋಗಿರೋ  PG ನಲ್ಲಿ ಇರ್ತೀನಿ ಅಂತಿಯಲ್ಲಾ..." ಎಂದವಳಿಗೆ ಏನು ಉತ್ತರಿಸ ಬೇಕೊಂತ ಯೋಚಿಸ್ತಾ ಇದ್ದೋಳಿಗೆ.. ನಮ್ಮ ರೂಟ್ ನಾ ಕ್ಯಾಬ್ ಕಾಣಿಸಿ "ಹೇ.. ನಡಿಯೇ ನೇಹಾ... ನಮ್ಮ ಕ್ಯಾಬ್ ಆಲ್‌ರೆಡೀ ಬಂದಾಗಿದೆ... " ಅಂತ ಧಾಪುಗಾಲಕಿ ಅತ್ತ ನಡೆದೇ.

PG ಗೆ ಬಂದ ಮೇಲೆ ಸಹ ಅದೇ ಗುಂಗಿನಲ್ಲಿದ್ದೆ.. ಊರಿಗೆ ಹೋಗಲೋ ಬೇಡವೋ...ಅಂತ. ಯಾಕೋ... ಹೋಗುವ ಮನಸ್ಸಾಗಲಿಲ್ಲ... ಸುಮ್ಮನಾದೆ. ಸ್ವಲ್ಪ ಹೊತ್ತು ಲ್ಯಾಪ್‌ಟಾಪ್  ಮುಂದೆ ಕೂತಿದ್ದು. ... ಎದ್ದು.. ಊಟ ಮಾಡಿ  ಬಂದೊಳಿಗೆ.. ಇನ್ನೂ ನಾಲ್ಕು ದಿನ ಹೇಗೆ ಕಳೆಯೋದು ಅನ್ನೋ ಯೋಚನೆಯಲ್ಲಿರುವಾಗಲೇ .. ಮೊಬೈಲ್ ರಿಂಗಾಯ್ತ... ನೋಡಿದರೆ ಅಮ್ಮ...

 "ಹಲೋ... ಹೇಳಮ್ಮಾ"  ಅಂದೆ.
"ಕೂಸೇ... ಊಟ ಆಯ್ತಾ..." ಅಮ್ಮನ ಕಳಕಳಿ.
"ಇದೋ ಈಗ್ತಾನೇ ಮಾಡಿ ಬಂದೆ, ನಿಂದಾಯ್ತಮ್ಮ " ಅಂದೆ.
"ಆಯ್ತು ಕೂಸೇ, ಏನೋ..ಈಸಲ ಎರಡು ಹಬ್ಬಗಳು, ಒಟ್ಟಿಗೆ ಬಂದು, ನಾಲ್ಕು ದಿನ ರಜಾ ಅಂತಲ್ಲ.. ಊರಿಗೆ ಬಾ ಕೂಸೇ... ನೋಡೋ ಹಂಗಾಗಿದೆ ... ನೋಡಿ ಆಗಲೇ ಮೂರು ತಿಂಗಳಾಗ್ತ ಬಂತು" ಅಮ್ಮನ, ಪ್ರೀತಿ ಒಸರೊ.. ದ್ವನಿ ಕೇಳಿ... ಗಂಟಲು ಒತ್ತಿ ಬಂತು.
"ನನಗೂ ನಿನ್ನ ನೋಡೋ ಹಾಗಾಗಿದೆಯೇ...ನೀನೇ ಬರಬಾರದ....ಇಲ್ಲಿಗೆ." ನುಗ್ಗಿ ಬಂದ ಅಳು ನುಂಗಿ  ಕೇಳಿದೆ.
"ಅದೆಲ್ಲ ಆಗೋಲ್ಲಾ ಅಂತ ನಿನಗೆ ಗೊತ್ತಲ್ಲ ಕೂಸೇ... ನೀನೇ ಬಾ.. ಇಲ್ಲ ಅನ್ನ ಬೇಡ..." ಎಂಬ ಅಮ್ಮನ ಮಾತಿಗೆ... ಬರೆ ಹೂಂ ಗುಟ್ಟಿದೆ.
"ಕಾಯ್ತಿರ್ತೀನಿ, ನಾಳೆ ಬಂದು ಬಿಡ್ತಿಯಲ್ಲ...ಇವತ್ತು ರಾತ್ರಿ ಹೋರ್ಡ್ತ ಇದೀಯಲ್ಲಾ  ಅಲ್ಲಿಂದ??" ಅದಕ್ಕೂ ಹೂಂ ಗುಟ್ಟಿದೆ.
 "ಸರಿ ಇಡ್ತೀನೆ" ಅಂತ ಅಮ್ಮ ಒದ್ದೆ ಧನಿಯಲ್ಲಿ ಹೇಳಿ ಫೋನ್ ಕಟ್ ಮಾಡಿದರು.

ಇನ್ನೂ ಯೋಚಿಸ್ತಾ ಕೂತ್ರೆ.. ಬಸ್ಸು ಸಿಗೋಲ್ಲ ಅಂತ... ಟೈಮ್ ನೋಡಿದೆ .. 8.30...ಮೆಜೆಸ್ಟಿಕ್ ಇಲ್ಲಿಂದ ಅರ್ಧ ಗಂಟೆ...ಯಾವುದಾದ್ರೂ ಬುಸ್ ಸಿಕ್ಕೇ ಸಿಗುತ್ತೆ ಅಂತ.. ಕೈಗೆ ಸಿಕ್ಕ ನಾಲ್ಕು ಬಟ್ಟೆ ಬ್ಯಾಗಿಗೆ ತುರುಕಿ ಹೊರಟೇ ಬಿಟ್ಟೆ.

ಮೆಜೆಸ್ಟಿಕ್ ನಲ್ಲಿ  ಇಳಿದಾಗ... ಜನ ಜುಂಗುಳಿ ನೋಡಿ..... ಒಮ್ಮೆ ಭಯವಾಯ್ತು.. ಬಸ್ ಬುಕ್ ಮಾಡಿಲ್ಲ ಏನೂ ಇಲ್ಲ... ಬುಸ್ಸು ಸಿಗುತ್ತೊ ಇಲ್ಲವೋ ಅಂತ... ಅದೂ... back to back ನಾಲ್ಕು ದಿನ ರಜಾ... ಎಲ್ಲರೂ ಊರಿಗೋಗೋ ಆತುರ. ಅಂತೂ ಇಂತೂ  ಹೇಗೋ ರಾಜಹಂಸ ದಲ್ಲಿ ಒಂದು ಸೀಟ್ ಸಿಕ್ಕಿ ಹತ್ತಿ ಕೂತದ್ದಾಯ್ತು, ಕೊನೆ ಸೀಟ್ ಬೇರೆ.. ಇನ್ನೂ ನಿದ್ದೆ ಮಾಡಿದ ಹಾಗೆ ಇದೆ....!.
 ಸರಿ.. ಬುಸ್ ಫುಲ್ ಆದದ್ದರಿಂದ... ಸರಿಯಾದ ಸಮಯಕ್ಕೆ ಹೊರಟಿತು.

ಊರಿಗೆ ಹೋಗಲೇ ಬಾರದೆಂದು ಕೊಂಡಿದ್ದವಳಿಗೆ, ಅಮ್ಮನ ದ್ವನಿ.. ಎಳಿದುಕೊಂಡು ಹೊರಟಿತ್ತು.

ಸೀಟೀಗೆ ತಲೆಯೊರಗಿಸಿದವಳಿಗೆ.. ಬಾಲ್ಯದ ನೆನಪು.....ಒಂದರ ಮೇಲೊಂದು ... ಕಣ್ಣಿಗೆ ಕಟ್ಟ ತೊಡಗಿತು


ನೀಲಾ,ಶೀಲಾ ಇಬ್ಬರೇ ಮಕ್ಕಳು ಮಂಜಯ್ಯ ಮತ್ತು ಶಾಂತಮ್ಮನಿಗೆ, ಮಂಜಯ್ಯ ಹೆಗಡೇರು.. ಮೂಡಗೆರೆ ಯ ಹತ್ತಿರದ.. ಕಬ್ಬಿನಗದ್ದೆಯವರು. ಸಾಕಷ್ಟು ಗದ್ದೆ, ತೋಟ ...ಸುಖಿ ಸಂಸಾರ ನಡೆಸಲು.. ಆದರೆ.. ದುರಾಸೆ... ಧರ್ಪದ ಮಂಜಯ್ಯ ನಿಗೆ ಸಂತೃಪ್ತಿ ಎಂಬುದೇ  ಇಲ್ಲ.. ಗಂಡು ಮಗುವಾಗಲಿಲ್ಲಾಂಬ ಅಸಂತೃಪ್ತಿ ಹೆಂಡತಿಯ ಮೇಲೆ... ಸದಾ ಹೊಡೆಯುವುದೋ.. ಬೈಯ್ಯುವುದಕ್ಕೊ... ಕಾರಣವಾದರೆ.....
ಎಷ್ಟೇ.. ಬೆಳೆ ಬಂದರೂ.. ಪಕ್ಕದ ತೋಟದ ಮಲ್ಲಿಕಾರ್ಜುನ  ಹೆಗಡೇರಷ್ಟು ಬೆಳೆ ಯಾಗಲಿಲ್ಲವೆಂಬ.. ಅಸಂತೃಪ್ತಿ... ಕೆಲ್ಸದವರ ಮೇಲೆ...ಸದಾ... ವಟ ವಟಗುಟ್ಟುತ್ತಾ... ಬೈಗಳಿಗೆ ಕಾರಣವಾಯ್ತು....
ಹಸ್ಲರ ಮೇಲೆ ಸದಾ..."ನಿಮ್ಮ ಜಾತಿಯೇ ಕಳ್ಳ ಜಾತಿ... ನಿಮಗೆ ಸಲಿಗೆ ಕೊಟ್ಟಷ್ಟು... ನಮ್ಮ ತಲಿ ಮೇಲೆ ಕಾರ ಅರೀತಿರಿ, ನಾಯಿ ನಾ ಸಿಂಹಾಸನದ ಮೇಲೆ ತಂದಿಡಲಾದಿತೆ" ಅಂತ... ಅವರನ್ನು ತುಳಿಯುವ ಪಣಹೋತ್ತವರಂತೆ ಸದಾ..ಅವರನ್ನು ಕಂಡಾಗಲೆಲ್ಲ ನಾಲ್ಕು ಕಣ್ಣು..ನಾಲ್ಕು ಬಾಯಿ ಮಂಜಯ್ಯನವರಿಗೆ.


ನೀಲಾ.. ಮೊದಲ ಮಗಳಾದ್ದರಿಂದ.. ಅವಳ ಮೇಲೆ ಸ್ವಲ್ಪ ಪ್ರೀತಿ ಇತ್ತು. ಆದರೆ ಎರಡನೇದು ಹೆಣ್ಣಾ ದಾಗ... ನಿರಾಸೆಗೊಂಡಿದ್ದ ಮಂಜಯ್ಯ... ಹೆಂಡತಿ ಮಗಳ ಮುಖವನ್ನ ಒಂದು ವಾರ ನೋಡಿರಲಿಲ್ಲ.

 ಹಾಗಾಗಿ,,, ಶೀಲಾ ಅಮ್ಮನ ಮಗಳಾಗೆ ಉಳಿದಿದ್ದಳು. ಎಲ್ಲದರಲ್ಲೂ ತಾರ ತಮ್ಯ ಮಂಜಯ್ಯನವರದು. ನೀಲಾ ಬಿಟ್ಟ ಬಟ್ಟೆ, ಆಟಿಕೆ, ಪುಸ್ತಕಗಳಿಂದಲೇ... ಶೀಲಾ ಓದಿದ್ದು, ಬೆಳದಿದ್ದು. ಅಮ್ಮನ ಪ್ರೀತಿಯೊಂದಿಲ್ಲದಿದ್ದಾರೆ ಏನಾಗಿರುತ್ತಿದ್ದಳೋ.

ಒಂದೆರಡು ಘಟನೆಗಳು... ಅಪ್ಪ ಅನ್ನುವ ಗೌರವ ವನ್ನು ಸಹ ದೂರ ಮಾಡಿತ್ತು. 

ಒಮ್ಮೆ ನೀಲಾ, ಸುಮಾರು 12 ವರ್ಷದವಳಿರ ಬಹುದು,ಹಸ್ಲರಾ ಕಾನನ ಮಗ ಸಣ್ಣನ, ಜೊತೆ ಆಡುತ್ತಿದ್ದಳು, ಸಣ್ಣಾನು ನೀಲಾಳ ವಯಸ್ಸಿನವನೇ, ಅಡಿಕೆ ಗರಿಯ ಟೋಪಿ ಮಾಡುವುದನ್ನು ಹೇಳಿಕೊಡುತ್ತಿದ್ದ... ದೂರದಿಂದಲೇ.
ನೀಲಾಳಿಗೆ ಏನನ್ನಿಸಿತೋ.. ಸಣ್ಣನ ತಲೆ ಮೇಲಿನ ಟೋಪಿ ತೆಗೆದು.. ತನ್ನ ನೆತ್ತಿಯ ಮೇಲಿಟ್ಟುಕೊಂಡುಬಿಟ್ಟಳು, ಅದೇ ಸಮಯಕ್ಕೆ ಸಣ್ಣ, "ಬ್ಯಾಡಿ ಅಮ್ಮೋರೇ... ಅದನ್ನು ಕೊಟ್ಟು ಬಿಡಿ, ನಿಮ್ಮ ಅಪ್ಪೋರು ನೋಡಿದ್ರೆ..." ಅಂತ ಭಯದಿಂದಲೇ ಅವಳ ನೆತ್ತಿಯ ಮೇಲಿಂದ ತೆಗೆದುಕೊಳ್ಳಲು ಕೈ ಹಾಕಿದ್ದನಷ್ಟೇ.. ಎಲ್ಲಿದ್ದರೋ ಮಂಜಯ್ಯ... " ಏನೋ... ಬಡವ .. ಮೈ ಮೇಲಿನ ಕಬರು ಎಲ್ಲದೋ ನಿಂಗೆ " ಎಂದು ಅಲ್ಲೇ ಬಿದ್ದಿದ್ದ ಬಿದಿರಿನ ಕಡ್ಡಿಯನ್ನೆತ್ತಿ ಹಿಂದೆ ಮುಂದೆ ನೋಡದೆ... ಹೊಡೆಯಲು ಶುರು ಮಾಡಿಬಿಟ್ಟರು.....ಅನಿರೀಕ್ಷಿತ ವಾಗಿ ಬಿದ್ದ ಏಟುಗಳಿಂದ, ಸಣ್ನನಿಗೆ ಬಾಯಿ ತೆಗೆಯಲೂ ಆಗದಂಥ ಭಯ..ಚಡ್ಡಿ ಒದ್ದೆ ಮಾಡಿಕೊಂಡು... ನೆಲದ ಮೇಲೆ ಬಿದ್ದಿದ್ದವನನ್ನು, ಅಲ್ಲೇ ಕೆಲಸ ಮಾಡುತ್ತಿದ್ದ ಅವರಪ್ಪ, ಕಾನ.. ಓಡಿ ಬಂದು ಅವುಚಿ ಕೊಂಡಿದ್ದ.

"ಅಯ್ಯಾರೆ ಬಿಟ್ಟು ಬಿಡಿ.. ಏನು ಅರೀದ ಕಂದನ ಮ್ಯಾಲೆ ಹೀಂಗೆ ಕೈ ಮಾಡಿರಲ್ಲ.. ಮನುಸಥ್ವ ಆದ ನಿಮ್ಗೆ" ಎಂದು ಮಗನನ್ನು ತಬ್ಬಿಕೊಂಡು ಅತ್ತಿದ್ದ. "ನಂಗೆ, ಮನುಸಥ್ವದ ಬಗ್ಗೆ ಹೇಳ್ತಿಯೆನ್ಲಾ... ಬಡ್ಡಿ ಮಗನೇ......ಯಾರತ್ರ ಹೇಂಗಿರಬೇಕಂತ ತಿಳಿಸೋದು ಬ್ಯಾಡೇನ್ಲಾ ನಿನ್ ಮಗಂಗೆ" ಅಂತ ಅವನ ಬೆನ್ನ  ಮೇಲೂ ಒಂದೇಟು ಹಾಕಿದ್ದರು.

ಎಲ್ಲಾ ನೋಡುತ್ತಿದ್ದ ... ನೀಲಾ ಹನಿಗಣ್ಣವಳಾಗಿದ್ದರೆ, 8 ವರ್ಷದ ಶೀಲಾ, ತಾನೂ ಚಡ್ಡಿ ಒದ್ದೆ ಮಾಡಿಕೊಂಡು ಭಯದಿಂದ.. ಕಂಪಿಸುತ್ತಿದ್ದಳು. 

ನಂತರದ ದಿನಗಳಲ್ಲಿ... ಶೀಲಾ ಅಪ್ಪನಾ ಬಳಿ ಹೋಗುವುದಿರಲಿ, ಮಾತಾಡುವುದಿರಲಿ, ಅವರಿದ್ಡಕಡೆ ಸುಳಿಯುತ್ತಲೂ ಇರಲಿಲ್ಲ.. ಎಲ್ಲ ಅಮ್ಮನ ಬಳಿಯೇ... ಬೆಳೆದದ್ದು. ಅಮ್ಮನ ಸೆರಗಿನ ಮರೆಯಲೇ...

ಆದರೆ ಓದಿನಲ್ಲಿ ಜಾಣೆಯಾದ ಶೀಲಾ... ಊರಿಗೆ, ಓದಿದ ಶಾಲಾ, ಕಾಲೇಜಿಗೆ  ಒಳ್ಳೆ ಹೆಸರು ತಂದಿದ್ದಳು... ಆಗೆಲ್ಲ ಮಂಜಯ್ಯ... ಹೆಮ್ಮೆಯಿಂದ ಬೀಗಿ... ಚಿಕ್ಕ ಮಗಳನ್ನು ಪ್ರೀತಿಸ ತೊಡಗಿದ್ದರು. ನೀಲಾ PUC ಮಾಡಲಾಗದೆ ಮನೆಯಲ್ಲೇ..ಕೂತು.. 2 ವರ್ಷಗಳೇ ಕಳೆದಿದ್ದವು... ದೂರದ ನೆಂಟ ರ ಹುಡುಗನೇ...ಬೆಂಗಳೂರಿನಲ್ಲಿ ಬ್ಯಾಂಕ್ ಕೆಲಸದಲ್ಲಿ ಇದ್ದ ನಟರಾಜ ನಿಗೆ ಕೊಟ್ಟು ಅದ್ಧೂರಿಯಾಗಿ ಮದುವೆ ಮಾಡಿದ್ದರು.

ಈಗೀಗ.. ಎಲ್ಲ ಸರಿ ಇದೆ  ಅನ್ನೋವಷ್ಟರಲ್ಲಿ, ಮತ್ತೊಂದು ಘಟನೆ... ಶೀಳಾಳಿಗೆ.. ತಂದೆಯನ್ನು... ದ್ವೇಷಿಸಿ ದೂರವೇ ಇಡುವಂತೆ ಮಾಡಿತ್ತು.

ಶೀಲಾ BSc, ಮಾಡುತ್ತಿದ್ದಳು, ಹಸ್ಲರ ಅಣ್ಣಯ್ಯ, ಸಹ ಅದೇ ಕಾಲೇಜಿ ನಲ್ಲಿ BA ಓದುತ್ತಿದ್ದ.  ಅಣ್ಣಯ್ಯನ ಅಪ್ಪ ಮುನಿಯ ಪಕ್ಕದ ತೋಟದ ಮಲ್ಲಿಕಾರ್ಜುನ ಹೆಗಡೇರ ತೋಟದಲ್ಲಿ ಕೆಲಸ ಮಾಡುವವ.. ಮಲ್ಲಿಕಾರ್ಜುನ ಹೆಗಡೇರು, ಹಸ್ಲರ ಮಕ್ಕಳನ್ನು ಓದಿ.. ಮುಂದೆ ಬರಲು ತುಂಬಾನೇ ಸಹಕಾರ, ಪ್ರೋತ್ಸಾಹ ನೀಡಿದ್ದರು.

ಅವರಲ್ಲೆಲ್ಲ.. .. ಮುಂದು ಬಂದಿದ್ದವನೆಂದರೆ ಮುನಿಯನ ಮಗ, ಅಣ್ಣಯ್ಯ ಒಬ್ಬನೇ...

ಒಮ್ಮೆ ಕಾಲೇಜಿ ನಿಂದ ಬರುವುದು ಲೇಟ್ ಆಗಿ, ಕತ್ತಲಾಗಿ ಬಿಟ್ಟಿತ್ತು, ಶೀಲಾಳ ಹಿಂದೆ ಬಸ್ ಇಳಿದ ಅಣ್ಣಯ್ಯ, ಕತ್ತಲ ದಾರಿಯಲ್ಲಿ ಶೀಲಾ ಒಬ್ಬಳೇ ನಡೆಯುವುದನ್ನು ಕಂಡು "ಅಮ್ಮೋರೇ, ಕತ್ತಲಲ್ಲಿ ಹುಳು ಹುಪ್ಪಟೆ, ಕಾಟ... ನಾನು ನಿಮ್ಮ ಮನೆಯವರೆಗೂ ಬಿಟ್ಟು ಬರ್ತೇನೆ ನಡೀರಿ" ಎಂದು ಜೊತೆಯಾಗಿ ಬಂದಿದ್ದ.

ಮನೆಯಲ್ಲಿ, ಮಂಜಯ್ಯ... ಕತ್ತಲಾಗಿ ಇನ್ನೂ ಮಗಳು ಬರಲಿಲ್ಲವೆಂದು.. ಟಾರ್ಚ್ ಹಿಡಿದು ತಾವೇ ಕರೆದು ಬರಲು ಹೊರಟಿದ್ದರು... ದಾರಿಯಲ್ಲಿ ಒಬ್ಬರಿಗೊಬ್ಬರು ಮಾತಾಡಿಕೊಂಡು ಬರುತ್ತಿರುವ ಮಗಳು ಮತ್ತು  ಪಕ್ಕದ ತೋಟದ ಹಸ್ಲರ ಅಣ್ಣಯ್ಯ ನನ್ನು  ಕಂಡು.. ದೂರ್ವಾಸರಾಗಿದ್ದರು. ಎದುರಿಗೆ ಅಪ್ಪನನ್ನು ಕಂಡು ...ಸ್ವಭಾವತ ಭಯಸ್ಥೆಯಾದ ಶೀಲಾ... ಗಾಬರಿಯಿಂದ... "ಅಪ್ಪ...ಅದೂ ಅದೂ... " ಅಂದಿದ್ದಳು.
ಅಣ್ಣಯ್ಯ ಇದ್ಯಾವುದರ ಪರಿವೆ ಇಲ್ಲದೆ.. "ನಂಸ್ಕಾರ ಅಯ್ಯ, ಕತ್ತಲಾಗಿತ್ತು ಅಂತ ಅವ್ವೊರ್ನ ಮನಿಗೆ ತಲುಪಿಸೋಣ ಅಂತ ಬರ್ತಿದ್ದೆ... ನಾನಿನ್ನು ಬರ್ತಿನಯ್ಯ" ಅಂತ... ನಮಸ್ಕರಿಸಿ ಹಿಂತಿತುಗಿದ್ದ.

ಆದರೆ... ಮಂಜಯ್ಯ ಅರ್ಥಯಸಿದ್ದೇ ಬೇರೆ... " ಹಸ್ಲರ  ಮುಂಡೆ ಮಕ್ಕಳಿಗೆ, ಬ್ರಾಹ್ಮಣರ ಹೆಣ್ ಮಕ್ಕಳ ಮೇಲೆ ಕಣ್ಣಾ ಕೋಷ್ಟು ಸೊಕ್ಕು ಬಂದದೇನು...., ಆ ಮಲ್ಲಿಕಾರ್ಜೂನುಂಗೆ ಹೊಡಿಬೇಕು... ಹಸ್ಲರ ಮಕ್ಕಳು ಓದಬೇಕಂತ.. ಓದಿ... ಏನು ಗುಡ್ಡೆ ಹಾಕಬೇಕಂತ... ಇವನ್ನ ಶಾಲಿ ಗೆ ಕಳಿಸಿದನೋ..." ಅಂತ ದಾರಿಯುದ್ದಕ್ಕೂ.. ಸಿಡಿಗುಟ್ಟತ್ತಲೇ ಬಂದಿದ್ದರು.

"ಇಲ್ಲಪ್ಪ... ಕತ್ತಲಗಿತ್ತು ಅಂತ... ಮನೆಯವರೆಗೂ ಬಿಡ್ತೇನೆ ಅಂತ ಬಂದ ಅಷ್ಟೇ...ಅವನು... ಇದುವರೆಗೂ... ನನ್ನೊಟ್ಟಿಗೆ ಮಾತಾಡಿದ್ದೆ ಇಲ್ಲ....."ಎಂದು ಹೇಳ ಹೊರಟವಳನ್ನು ತಡೆದು "ನೀ ಸುಮ್ನಿರು ಕೂಸೇ... ಇವೆಲ್ಲಾ ಹೀಂಗೆ  ಚಿಗರ ಕಂಡು... ಒಂದಿನ ನಮ್ಮ ಬ್ರಾಹ್ಮಣರ ಹೆಣ್ ಮಕ್ಕಳ ತಲೆ ಕೆಡಸಿ... ಮದುವೆ ಆಗೋಕ್ಕು ಹೇಸವೊಲ್ಳ... ಕಳ್ಳ ಜಾತಿ ನನ್ಮಕ್ಕಳು" ಎಂದು ಬುಸುಗುಟ್ಟಿದ್ದರು.
ನಂತರ ಅದೇನು ಮಾಡಿದರೋ.. ಅಣ್ಣಯ್ಯ ಕಾಲೇಜನಿಂದ.. ಡಿಬಾರ್ ಆಗಿದ್ದ.. ಅದು... ಯಾವುದೌ ಹುಡುಗಿಯನ್ನು ಛೇದಿಸಿ ...ಮಾನಭಂಗ ಮಾಡಲೆತ್ನಿಸಿದ್ದಾನೆಂಬ ಆಪಾದನೆ ಮೇಲೆ.....! ಯಾರಾ ಹುಡುಗಿ ಅನ್ನೋ ನಿಜ ಇಂದಿಗೂ ಗೊತ್ತಿಲ್ಲ.. ಇದೆಲ್ಲವನ್ನೂ ಮಾಡಿಸಿದ್ದು  ಮಂಜಯ್ಯ ಅಂತ ಮಾತ್ರ ಖಾತ್ರಿ ಆಗಿತ್ತು ಶೀಳಾಳಿಗೆ... ನನ್ನಿಂದಾಗಿ ಅವನ ವಿದ್ಯೆ... ಜೀವನ ಹಾಳಾಯ್ತು ಅನ್ನೋ ಕೊರಗಲಿ... ಶೀಲಾ...ಪಟ್ಟ ವೇದನೆ ಅಷ್ಟಿಷ್ಟಲ್ಲ..

ಶೀಲಾಗೆ ಅಪ್ಪನ ಬಗ್ಗೆ ಅಸಹ್ಯ...ಹೇಸಿಗೆ... ಬೇಸರ... ಅವರತ್ತ ಸುಳಿಯುವುದು ಇಲ್ಲ.... BSc ಮುಗಿಸಿ... ಬೆಂಗಳೂರಿನಲ್ಲಿ, ಕೆಲಸದಲ್ಲಿದ್ದಾಳೆ. ತಾಯಿಗಾಗಿ ಊರಿಗೋಗಲು ಮನ ಹಂಬಲಿಸಿದರೂ.. ಅಪ್ಪನ ಮುಖ ನೋಡಲು.. ಮನ ಹಿಂಜರಿಯುತ್ತದೆ...
 ಆದರೆ ಇತ್ತೀಚ್ಗೆ... ಮಂಜಯ್ಯ... ಜರ್ಜರಿತರಾಗಿದ್ದಾರೆ... ಮುಪ್ಪಿನ ಕಾಯಿಲೆ... ಮಗಳಿಗೆ ಮದುವೆ ಮಾಡಬೇಕೆಂಬ ಹಂಬಲ ವಾದರೆ... ಕಡ್ಡಿ ತುಂಡು ಮಾಡುವಂತೆ ಮಾತಾಡುವ ಶೀಲಾ ಮದುವೆಗೆ ಒಪ್ಪುತ್ತಿಲ್ಲ.

ಶೀಲಾಳ, ತಾಯಿಯೂ ಒಮ್ಮೊಮ್ಮೆ ಮಗಳ ಮೇಲೆ ರೇಗಿದ್ದುಂಟು "ಕೂಸೇ... ನಿನ್ನದು ಅತೀ ಆಯ್ತು... ನಿನ್ನ ಅಪ್ಪಯ್ಯ ಅವರು..ನಿನ್ನ ಮೇಲಿನ ಪ್ರೀತಿಗೆ ಹೇಳತಾರೆ... ನಿನಗೆ.. ಮಾತಾಡಲು... ಪುರುಸೊತ್ತಿಲದಂಗೆ ಆಡ್ತಿಯಲ್ಲೇ...ನಿಜ...ಅವರು ಕೋಪಿಷ್ಟನೇ ಆದರೆ... ಮಗಳೆಂಬ ಪ್ರೀತಿ ಕೊಡೋದು ನಿನ್ನ ಕರ್ತವ್ಯ ಅಲ್ಲೇನು"... ಅಂತ... 

"ಯಾರ್ರೀ ...ಮೂಡು ಬಿದ್ರೆ... "ಅನ್ನೋ ಕಂಡಕ್ಟರ್ ದ್ವನಿ ಕೇಳಿ.. ಎದ್ದು ನಿಂತ ಶೀಲಾ... ತನ್ನ ಬ್ಯಾಗೆತ್ತಿಕೊಂಡು ಇಳಿದಳು... ಥರಾಗುಟ್ತಿಸುವ ಚಳಿಗೆ ದುಪ್ಪಟ್ಟಾ ಮತ್ತಷ್ಟು ಗಟ್ಟಿಯಾಗಿ ಸುತ್ತಿಕೊಂಡು, ಅತ್ತಿತ್ತ ನೋಡಿದಳು.. ಯಾವುದು... ಆಟೋ ಕಾಣಲಿಲ್ಲ... ಸರಿ... ಬೆಳಗಾಗುವರೆಗೂ...ಬಸ್ಸ್ಟ್ಯಾಂಡ್ ನಲ್ಲೇ ಕಾಯುವುದೆಂದು ಅತ್ತ ನಡೆಯ ಬೇಕೆನಿಸುವಷ್ಟರಲ್ಲೇ... 

"ಕೂಸೇ..." ಅಪ್ಪನ ಧನಿ... ಮಫ್ಲೆರ್ ಸುತ್ತಿ ಸ್ವೆಟರ್ ತೊಟ್ಟ ಅಪ್ಪ, ಆ ಡಿಸೆಂಬರ್ ಚಳಿಲಿ ನಡುಗುತ್ತಾ ನಿಂತಿದ್ದರು.. ಆ ಕನ್ನಡಕದ ಹಿಂದಿದ್ದ ಕಂಗಳಲ್ಲಿ ಪ್ರೀತಿಯ ಸೆಲೆ...ಮತ್ತಷ್ಟು ದೇಹ ಬಾಗಿತ್ತು.. ಜರ್ಜರಿತವಾಗಿದ್ದರು.
ಜೊತೆಯಲ್ಲೇ.. ಅನತಿ ದೂರದಲ್ಲಿ... ಹಸ್ಲರ ಕಾನನ ಮಗ... ಸಣ್ಣ......! ಗಾಡಿಯೊಂದಿಗೆ ಕೈ ಕಟ್ಟಿ ನಿಂತಿದ್ದ. ಶೀಲಾಳಿಗೆ ಪ್ರೀತಿಯುಕ್ಕಿತು ಅಪ್ಪನ ಮೇಲೆ..."ಅಪ್ಪಾ...." ಅನ್ನುತ್ತಾ ಅವರೆಡೆಗೆ ನಡೆದಳು...

"ಬಂದ್ಯಾ ಕೂಸೇ.. ಏನೂ ತ್ರಾಸಾಗಿಲ್ಲ ಅಲ್ಲ.. ನಿಮ್ಮವ್ವ ಹೇಳಿದ್ಲು.. ನೀ ಬೆಳಗ್ಗೇನೇ ಬರ್ತಿ ಅಂತ.. ಅದಕ್ಕೆ ಹೊಂಟು ಬಂದೆ" ತಲೆ ನೇವರಿಸಿದ ಅಪ್ಪನತ್ತ.. ಇಷ್ಟು ದಿನ ತೋರದ ತನ್ನ ಪ್ರೀತಿಯ ನೋಟ ಬೀರಿದಳು ಶೀಲಾ....
ಪೂರ್ವದಲ್ಲಿ ಸೂರ್ಯ.. ತನ್ನ ದಿನಚರಿಯ ಪ್ರಾರಂಬಿಸಲು ತಯಾರಿ ನಡೆಸಿದುದರ ಕುರುಹಾಗಿ... ಬಾನೆಲ್ಲ ಕೆಮ್ಪೆತ್ತಿತ್ತು.....
ನಿಮ್ಮಅನಿಸಿಕೆ ,ಸಲಹೆ .. ಟೀಕೆ.. ಟಿಪ್ಪಣಿಗಳಿಗೆ..  ಸದಾ ಸ್ವಾಗತ..



Monday, 22 June 2015

ಬಾಲ್ಯದ ಪ್ರಿಯಾ ಗೆಳತಿ.... ಎಲ್ಲಿರುವೇ...

ನಾನು ಪ್ರೈಮರೀ ಸ್ಕೂಲ್ನಲ್ಲಿ ದ್ದಾಗ, ನಾಲ್ಕನೇ ತರಗತಿಗೆ  ರಶ್ಮಿ ಅನ್ನೋ ಹುಡುಗಿ ಹೊಸ್ದಾಗಿ ಸೇರಿದ್ಲು ಆ ವರ್ಷ, ರಶ್ಮಿ ಯಾವ ಊರಿಂದ ಬಂದಿದ್ದಳು ಅಂತ ನನಗೆ ಸರಿಯಾಗಿ ನೆನಪಿಲ್ಲ. ಆದರೆ, ಹೊಸದಾಗಿ ಸೇರಿದೋಳ ಜೊತೆ ನಾವೆಲ್ಲ.. ನಾ ಮುಂದು ನೀ ಮುಂದು ಅಂತ ಅವಳ ಜೊತೆ ಮಾತಾಡೋಕೆ ಮುಗಿಬಿದ್ದಿದ್ವಿ ... ಅವಳೂ.. ತಾನೂ ಬೇರೆ ಊರಿಂದ ಬಂದಿರೋ ಗತ್ತನ್ನ.. ನಮ್ಮತ್ರ ಚೆನ್ನಾಗೇ ತೋರಿಸಿದ್ಲು.ನಂತರದ ದಿನಗಳಲ್ಲಿ... ರಶ್ಮಿ ಮತ್ತು ನಮ್ಮ ಗೆಳೆತನ ಚೆನ್ನಾಗೇ ಬೆಳೀತು. ಅವಳೂ ಓದುವುದರಲ್ಲಿ ನಮ್ಮ ಸರಿ ಸಮವೇ... 


ಅವಳ ಅಪ್ಪ.. AEO (assistant educational officer) ಆಗಿದ್ದರು.. ಹಾಗಾಗಿ ಅವಳೂ ಸ್ವಲ್ಪ ನಮಗಿಂತ ಮೇಲೆ ಅನ್ನೋತರ ಟೀಚರ್ಸ್ ಸಹ ನಡಿಸ್ಕೊಲ್ತ ಇದ್ದದರಿಂದ... ಅವಳಿಗೂ ಸ್ವಲ್ಪ ಜಂಬ ಇದ್ದೇ ಇತ್ತು. ಆದರೆ.. ನನ್ನ ಮತ್ತು ಅವಳ ಸ್ನೇಹಾ..ತುಂಬಾನೇ ಚೆನ್ನಾಗಿತ್ತು. ನಾನು ಸಂಗೀತ ಕಲಿಯುತ್ತಿದ್ದ ದಿನಗಳು, ಅವಳಿಗೆ ದೈವದತ್ತವಾಗಿ ಬಂದ ಕಂಠ.. ಎಲ್ಲ ಸ್ಕೂಲ್ ಪ್ರೋಗ್ರಾಮ್ ನಲ್ಲೂ  ಚೆನ್ನಾಗೇ  ಇಬ್ಬರು ಭಾಗವಹಿಸ್ತ ಇದ್ವಿ..


ಶಾಲೆ ಇಂದ ನಮ್ಮ ಮನೆ ದೂರ ವಿದ್ದದ್ದರಿಂದ ನಾನು ಊಟದ ಡಬ್ಬಿ ತೆಗೆದು ಕೊಂಡೋಗುತ್ತಿದ್ದೆ, ರಶ್ಮಿಯ ಮನೆ ಶಾಲೆಗತ್ಟಿರಾ ಲಂಚ್ ಬ್ರೇಕ್ ನಲ್ಲಿ.. ನನ್ನನ್ನು ಬಿಡದೆ ತನ್ನ ಮನೆಗೆ ಕರೆದುಕೊಂಡು ಹೋಗುತ್ತಿದ್ದಳು.. ಹಾಗಾಗಿ  ನನಗೆ ತುಂಬಾನೇ ಪರಿಚಯ.. ಅವಳ ಮನೆಯವರೆಲ್ಲಾ.


ಅವಳಿಗೆ 3 ಅಕ್ಕಂದಿರು, ಒಬ್ಬಳು ತಂಗಿ, ಒಬ್ಬ ತಮ್ಮ,..6  ಜನ ಮಕ್ಕಳ ದೊಡ್ಡ ಕುಟುಂಬ.. ಕೆಲವೊಮ್ಮೆ  ನನಗೆ ಅವರ ಮನೆಯವರ ಹೆಸರುಗಳೇ ನೆನಪಿರುತ್ತಿರಲಿಲ್ಲ.. ಇಲ್ಲ ಕನ್ಫ್ಯೂಷನ್  :-( 


ಶನಿವಾರ .. ಭಾನುವಾರಗಳಂದು ಅವಳು ನಮ್ಮ ಮನೆಗೆ ಬರುತ್ತಿದ್ದಳು.. ನಮ್ಮದು ತುಂಬಾ ದೊಡ್ಡ ಕಾಂಪೌಂಡ್.... ಎಷ್ಟೊಂದು ಮರ ಗಿಡ.. ಆಡಲು ಜೋಕಾಲಿ.. ಹಾಗಾಗಿ (ಈಗ ಅದೆಲ್ಲ ಇಲ್ಲ... ಬಾಡಿಗೆ ಮನೆಗಳನ್ನು ಕಟ್ಟಿಸಿದೇವೆ ಖಾಲಿ ಜಗದಲ್ಲೆಲ್ಲ....). ಆರನೇ ತರಗತಿಯವರೆಗೂ ಜೊತೆಯಲ್ಲೇ ಓದಿದ್ದೆವು, ಅವಳ ತಂದೆಗೆ ವರ್ಗ ವಾದದ್ದರಿಂದ ಅವಳು ದೊಡ್ಡಬಳ್ಳಾಪುರಕ್ಕೆ ಹೊರಟು ಹೋದಳು.. ನಂತರವೂ.. ನಾವು ಪತ್ರ ದ ಮೂಲಕ  ಟಚ್ ನಲ್ಲಿದ್ದೆವು.. ಸುಮಾರು ಪತ್ರಗಳು,,
ಹತ್ತನೇ ತರಗತಿವರೆಗೆ ಸಾಲು ಸಾಲು ಪತ್ರ .. ತಿಂಗಳಿಗೊಮ್ಮೆ ಎಂಬಂತೆ, ಅವರ ತಂದೆಗೆ ಮತ್ತೆ  ವರ್ಗವಾಗಿದ್ದರಿಂದ.. ಅವಳು ಮತ್ತೆ ಬೇರೆ ಉರಿಗೆ ಹೋದ ಮೇಲೆ.. ನಮ್ಮ ಗೆಳೆತನ ಕೊನೆಗೊಂಡಿತ್ತು, ಅನ್ನೋದಕ್ಕಿಂತ.. ನಮ್ಮ ಪತ್ರ ವ್ಯವಹಾರ ನಿಂತಿತ್ತು.


ನನಗವಳ  ಬದಲಾದ ವಿಳಾಸ ತಿಳಿದಿರಲಿಲ್ಲ. ನನ್ನ PUC ಮುಗಿದ ಸಮಯದಲ್ಲಿ ಒಮ್ಮೆ ಪತ್ರ ಬರೆದಿದ್ದಳು... ಆಗ ನಮ್ಮ ಮನೆಗೆ ಲ್ಯಾಂಡ್ ಲೈನ್ ಫೋನ್ ಬಂದಿತ್ತು, ನಂಬರ್ ಕೊಟ್ಟು ಫೋನ್ ಮಾಡಲು ಬರೆದಿದ್ದೆ. ಒಮ್ಮೆ ಫೋನ್ ಸಹಾ ಮಾಡಿದ್ದಳು ಅಮ್ಮಣ್ಣಿ ಕಾಲೇಜ್/' ಮಹಾರಾಣಿ ಕಾಲೇಜ್ ನಲ್ಲಿ  BSc ಮಾಡುತ್ತಿರುವುದಾಗಿ ಹೇಳಿದ್ದಳು.. ನಂತರ ಪತ್ರ ವ್ಯವಹಾರವೂ ಇಲ್ಲ . ಫೋನು ಇಲ್ಲ...
ರಶ್ಮಿ, ಇಂದ್ಯಾಕೋ ತುಂಬಾ ನೆನಪಾಗಿದ್ದಾಳೇ....ಅವಳನ್ನು ಹುಡುಕುವ ಎಲ್ಲಾ ಪ್ರಯತ್ನವೂ ಮಾಡಿದೆ..through social networking...ಪ್ಚ್...ಪ್ಚ್... nope... I couldn't  find her.. ರಶ್ಮಿ ಎಲ್ಲೇ ಇದ್ದರೂ ಚೆನ್ನಾಗಿರಲಿ ಅನ್ನೋ ಹಾರೈಕೆಯೊಂದಿಗೆ... ಮತ್ತು ಈ ಬ್ಲೋಗ್ ಮೂಲಕವಾದ್ರೂ ಸಿಗಲಿನ್ನೊ ಆ ಸಣ್ಣ ಆಸೆಯೊಂದಿಗೆ.. ಈ ಬ್ಲಾಗ್ ನಾ, ಈ ಪೋಸ್ಟ್ ...:-)



Saturday, 13 June 2015

ಅಣ್ಣನ ಕೈಲಿ ತಿಂದ ಮೊದಲ ಹಾಗೂ ಕೊನೆ ಏಟು....!...!!!



ನಾನಾಗ ನಾಲ್ಕೂವರೆ ಇಲ್ಲ ಐದು ವರ್ಷದವಳಿರಬಹುದು, ಮನೇಲಿ ಅಮ್ಮನ ಜೊತೆ ಒಬ್ಬಳೇ, ಅಮ್ಮ ತನ್ನ ಪಾಡಿಗೆ ತಾನು ಕೆಲಸ ಮಾಡಿಕೊಂಡಿರೋರು, ನಾನು ನನ್ನ ಬೊಂಬೆಗಳ ಜೊತೆ, ಅಕ್ಕನ್ದಿರಿಬ್ಬರು ಸ್ಕೂಲ್ ಗೆ ಹೋಗಿರ್ತ ಇದ್ದರು. ನನಗೂ ಸ್ಚೂಲ್‌ಗೆ ಹೋಗ್ಬೇಕು ಅಂತ ತುಂಬಾ ಆಸೆ ಇತ್ತು ಆಗ, ಆದರೆ ಇನ್ನೂ ಚಿಕ್ಕವಳು ಅಂತ ಸ್ಕೂಲ್ ಗೆ ಸೇರಿಸಿರಲಿಲ್ಲ. 6 ವರ್ಷಕ್ಕೆ ಒಂದೇ ಸಲ ಒಂದನೇ ಕ್ಲಾಸ್ ಗೆ ಅಡ್ಮಿಶನ್ ಮಾಡಿಸೋಣ ಅಂತ.


ಸರಿ, ಅವತ್ತು ಅಷ್ಟೇ ಎಂದಿನಂತೆ ಅಣ್ಣ ನೈಟ್ ಶಿಫ್ಟ್ ಮಾಡಿ ಬಂದು ಮಲಗೀದಾರೆ, ಅಮ್ಮ ಅಕ್ಕನ್ದಿರಿಬ್ಬರನ್ನು ಸ್ಕೂಲ್ ಗೆ ಕಳಿಸಿ, ಮುಂದಿನ ಬಾಗಿಲು ಹಾಕಿ, ಮನೆ ಕೆಲಸ ಎಲ್ಲಾ ಮಾಡಿ, ಬಟ್ಟೆ ಒಗಿಲಿಕ್ಕೆ ಅಂತ ಹಿತ್ತಿಲ ಕಡೆ ಹೋಗಿದಾರೆ. ನಾನು, ಮನೇಲೇ ಚೇರ್ ಮೇಲೆ, ಗೊಂಬೆ ಗಳ ಜೊತೆ ಆಟ ಆಡ್ತಾ ಇದೀನಿ, ಗೊತ್ತು ಶಬ್ಧ ಮಾಡ್ಬಾರದು ಅಂತ.. ಯಾಕಂದ್ರೆ ನಮ್ಮ ಅಣ್ಣಾ(ಅಪ್ಪನನ್ನ, ನಾವು ಅಣ್ಣಾ ಅಂತಾನೆ ಕರೆಯೋದು) ತುಂಬಾನೇ ಸ್ಟ್ರಿಕ್ಟ್, ಅವರು ನಿದ್ದೆ ಮಾಡುವಾಗ ಒಂದು ಚೂರು ಶಬ್ದ ವಾಗಬಾರದು. ನಾವು ಮೂರು ಜನ ಅಕ್ಕ ತಂಗೀರು ಮನೇಲಿದ್ದರೂ, ಅಣ್ಣ ಮಲಗಿದ್ದರೇ, ಒಂದು ಚೂರು ಗಲಾಟೆ ಮಾಡದೆ ಆಡ್ತಿದ್ವಿ.ನನ್ನ ದೊಡ್ಡಕ್ಕ, ತುಂಬಾನೇ ಪ್ರೀತಿ ನನ್ನ ಕಂಡರೆ, ತಾನೇ ನನಗೆ ಕಥೆ ಹೇಳಿ ಮಲಗಿಸೋದು, ಆಟ ಆಡಿಸೋದು....ಎಲ್ಲಾ.


ಸರಿ, ನಾನು ಆಡ್ತಾ ಇದೀನಿ , ಅಂತ ಅಮ್ಮ ನೆಮ್ಮದಿಯಾಗಿ ಬಟ್ಟೆ ಓಗಿತಾ ಇದಾರೆ. ನಾನು ಎಷ್ಟೊತ್ತು ಅಂತ ಆಡಲಿ, ಬೇಜಾರಾಯ್ತು, ಚೇರ್ ಇದ್ದದ್ದು ಮೇನ್ ಡೋರ್ ಪಕ್ಕದ ಕಿಡಕಿ ಅತ್ರ, ಸರಿ, ಚೇರ್ ಮೇಲೆ ನಿಂತು ಹೋಗರನ್ನು ಬರೋರನ್ನು ನೋಡ್ತಾ ನಿಂತುಕೊಂಡೆ, ಅಷ್ಟರಲ್ಲಿ, ನಮ್ಮ ಮನೆ ಪಕ್ಕದಲ್ಲಿರೋ, ಮಹಾಲಕ್ಷ್ಮಿ ಸ್ಚೂಲಿಗೆ ಹೋಗ್ತಾಇರೋದು ಕಾಣಿಸ್ತು, ನನಗೂ ಆಕ್ಷಣಾ ತುಂಬಾನೇ ಆಸೆ ಆಗೋಯ್ತು,"ಮಾಲಚ್ಚಕ್ಕ... ಮಾಲಚ್ಚಕ್ಕ" ಕರೆದೆ ಮೆಲ್ಲಗೆ, ಅಣ್ಣನ ರೂಮಲ್ಲಿ ಫ್ಯಾನ್ ಜೋರಾಗಿ ಇತ್ತಾದರಿಂದ, ಅವರಿಗೆ ಕೇಳಿಸಿರೋ ಸಾದ್ಯತೆ ಇಲ್ಲ. ಸರಿ.. ಕಿಡಕಿ ಅತ್ರ ಬಂದ ಮಾಲಚ್ಚಕ್ಕಾ, "ಏನು, ಪುಟ್ಟಿ' ಅಂದ್ಲು, "ನಾನು ಸ್ಕೂಲ್ ಗೆ ಬರ್ತೀನಿ" ಅಂದೆ. ಅದೇನಂದಾಳೋ.. ನನಗೆ ಸರಿಯಾಗಿ ನೆನಪಿಲ್ಲ. ಆದ್ರೆ, ನಾನು ಚೇರ್ ಸಹಾಯದಿಂದ ಮೇನ್ ಡೋರ  ನಾ ಮೇಲಿನ ಬೋಲ್ಟ್ ತೆಗೆದು, ಚಪ್ಪಲಿ ಮೆಟ್ಟಿ ಹೊರಟೆ ಬಿಟ್ಟೆ ಅವಳ ಜೊತೆ. ನನಗೇನು ಗೊತ್ತಿತ್ತಾಗ, ಸ್ಕೂಲ್ ಗೆ ಸೇರಿದೋರು ಮಾತ್ರ ಹೋಗ ಬೇಕು.. ಇಲ್ಲಾಂದ್ರೆ ಮನೆಲೇ ಇರಬೇಕು ಅಂತ. ಆಗೆಲ್ಲ ಸರ್ಕಾರಿ ಸ್ಚೂಲ್‌ನಲ್ಲೇ ನಮ್ಮ ವಿದ್ಯಾಬ್ಯಾಸ ನಡೆದಿದ್ದು. ನಮ್ಮ ಅಕ್ಕಂದಿರಿದ್ದ ಸ್ಚೂಲೆ ಮಾಲಚ್ಚಕ್ಕನು ಓದ್ತಾ ಇದ್ದದ್ದು, ಆದ್ರೆ ಅವಳು ಏಳನೇ ಕ್ಲಾಸ್. ನಮ್ಮದೊಡ್ಡಕ್ಕ 5ನೇ  ಕ್ಲಾಸ್, ಸಣ್ಣಕ್ಕ ಮೂರನೇ ಕ್ಲಾಸ್.ಸರಿ ನಾನು ಮಾಲಚ್ಚಕ್ಕ ನ ಕೈ ಹಿಡಿದು ನಡೆಯಲಾರಂಬಿಸಿದೆ.. ಸ್ಕೂಲ್ ಮನೆಯಿಂದ ತುಂಬಾನೇ ದೂರ. ಮಾಲಚ್ಚಕ್ಕ ನನ್ನ ಸ್ವಲ್ಪ ದೂರ ಎತ್ತಿಕೊಂಡ್ಲು ಸೊಂಟದ ಮೇಲೆ. ಸರಿ ಸ್ಕೂಲ್ ಗೆ ಬಂದಮೇಲೆ, ಅವಳು ತನ್ನ ಕ್ಲಾಸ್ ರೂಮಿಗೊಗೋಕಿಂತ ಮುಂಚೆ,"ಇದು, ನಿಮ್ಮ ದೊಡ್ಡಕ್ಕನ ಕ್ಲಾಸ್ ರೂಮ್, ಇದು ನಿಮ್ಮ ಸಣ್ಣಕ್ಕನ ಕ್ಲಾಸ್ ರೂಮ್ "ಅಂತ ದೂರದಿಂದಲೇ ತೋರಿಸಿದ್ಲು, ಸರಿ ಆಮೇಲೆ ಅವಳ  ಕ್ಲಾಸ್ ಗೆ ಅವಳು ಹೋದ್ಲು. ನಾನು ಅಲ್ಲೇ ಮೈದಾನದಲ್ಲಿ ಆಡ್ತಾ ಇದ್ದ ಮಕ್ಕಳ ಜೊತೆ ಆಡೋದಕ್ಕೆ ಶುರು ಮಾಡ್ದೆ, ಆ ಮಕ್ಕಳು ಒಂದನೇ ಕ್ಲಾಸ್  ಇರಬೇಕು.. ನಾನು ಎಲ್ಲರಿಗಿಂತ ಪುಟ್ಟವಳು, ಚೆನ್ನವಾದ ಫ್ರೋಕ್ ಹಾಕಿದ್ದೆ, ಸೊ.. ಎಲ್ಲರೂ ಸೇರಿ ಆಟ ಆಡೂದ್ವಿ. ಆಮೇಲೆ ಸುಮಾರು ಹೊತ್ತಾದ ಮೇಲೆ ಒಬ್ಬ ಮಾಸ್ಟರ್ ಬಂದು, ಎಲ್ಲರನ್ನೂ ಕ್ಲಾಸ್ ರೂಮಿಗೆ ಕರಕೊಂಡೊದ್ರು, ನಾನೂ ಹೋಗಿ ಅವರ ಜೊತೆಲೇ ಕೂತೆ, ಮಾಸ್ಟರ್ ಬೋರ್ಡ್ ಮೇಲೆ ಆ ಆ ಇ ಈ ಬರೆದು, ನಮ್ಗೆಲ್ಲರಿಗೂ ಬರೆಯೋಕೆ ಹೇಳಿದ್ರು, ಅವರಿಗಿನ್ನೂ ನಾನು ಹೊಸಬಳು ಅಂತ ಗೊತ್ತೇ ಆಗಿರಲಿಲ್ಲ. ಸರಿ ಎಲ್ಲರತ್ರಾನು  ಸ್ಲೇಟ್  ಬಳಪ ಇದೆ , ಆದ್ರೆ ನನ್ನ ಹತ್ರ ಇಲ್ಲ. ಆಗ ಆ ಮಾಸ್ಟರ್ ನನ್ನ ಕಡೆ ನೋಡಿದ್ರು. "ಯಾರಿದು ಹೊಸ ಪುಟ್ಟಿ, ಎಲ್ಲಿ ನಿನ್ನ ಸ್ಲಟು ಬಳಪ " ಅಂದ್ರು. ಆ ವಯಸಲ್ಲಿ ಭಯ ಎಲ್ಲಾ ಏನು ಅಂತಾನೆ ಗೊತ್ತಿರಲ್ಲ ಅಲ್ವಾ.. ನಾನು ಹೇಳಿದೆ, "ಇಲ್ಲ ನನ್ಹತ್ರ", ನಿನ್ನ ಹೆಸರೇನು, ಯಾರಾ ಮನೆ ಅಂತ ಎಲ್ಲ ವಿಚಾರಿಸಿಕೊಂಡ್ರು, ನಾನೂ ದೈರ್ಯವಾಗೆ ನನ್ನ ಇಬ್ಬರು ಅಕ್ಕಂದಿರೂ ಇದೆ ಸ್ಚೂಲ್‌ನಲ್ಲಿ ಯಾವ ಯಾವ ಕ್ಲಾಸ್ ನಲ್ಲಿ ಓದೋದು ಅಂತ ಹೇಳಿದೆ. ಅವರು ಆಗ, 'ಹೊ...ಎಲ್ಲೋ ಸ್ಕೂಲ್ ಅಬ್ಯಾಸ ಆಗ್ಲಿ ಅಂತ ನನ್ನ ಕರೆತಂದಿದರೆ' ಅಂತ ಅನ್ಕೊಂಡು, ಮುದ್ದು ಮುದ್ದಾಗಿದ್ದ ನನ್ನ, ಎತ್ತಿ ಮುದ್ದಿಟ್ಟು ಮತ್ತೆ ಕೂಳಿಸಿದ್ರು. ಸರಿ ಆಮೇಲೆ.. ಏನೆಲ್ಲ ಮಾಡಿದೆನೋ ಗೊತ್ತಿಲ್ಲ, ನೆನಪಿಲ್ಲ.  

ಇತ್ತ, ಬಟ್ಟೆ ಒಗೆದು ಬಂದ ಅಮ್ಮ, ಮನೆ ಬಾಗಿಲು ತೇಗಿದಿರೋದು ನೋಡಿ.. ಗಾಬರಿಯಾಗಿದರೆ.. ನಾನು ಬೇರೆ ಕಾಣಿಸ್ತಿಲ್ಲ..... ಹೊರಗಡೆ ಎಲ್ಲಾ ಹುಡುಕಿದಾರೆ. ಎಲ್ಲೂ ಇಲ್ಲ.. ಆ ಬೀದಿಲಿರೊ ಎಲ್ಲ ಮನೆಗಳಲ್ಲೂ ಹುಡುಕಿದರೆ... ನಾನು ಸಿಕ್ಕಿಲ್ಲ. ಅಮ್ಮನ ಸ್ಥಾನದಲ್ಲಿ, ಇವತ್ತು ನಾನು ಇದ್ದು ನೆನೆಸಿಕೊಂಡರೆ.. ಅಮ್ಮ ಪಟ್ಟಿರಾ ಬಹುದಾದ.. ಧುಖ, ಸಂಕಟ, ಭಯ ನಿಜಾವಾಗ್ಲೂ ಯಾವ ತಾಯಿಗೂ ಬೇಡ ಅನ್ನಿಸುತ್ತೆ. 

ಮನೆ ಬೀಗ ಹಾಕಿಕೊಂಡು ಅಕ್ಕ ಪಕ್ಕದ ಬೀದಿ, ಮೇನ್ ರೂಡ್ ನಾ ಅಂಗಡಿಗಳ ಕಡೆ ಎಲ್ಲ ಕಡೆ ಹುಡುಕಿದರೆ ನಾನು ಸಿಕ್ಕಿಲ್ಲ. ಅಷ್ಟರಲ್ಲಿ ಅದೇ ಉರಲ್ಲಿದ್ದ ನಮ್ಮ ಚಿಕ್ಕಮ್ಮ( ತಾಯಿಯ ದೂರದ ಸಂಭಂದಿ) ಸಿಕ್ಕಿ, ಇಬ್ಬರೂ ಎಲ್ಲಾ ಕಡೆ ಹುಡುಕಿದಾರೆ. ನನ್ನ ಪತ್ತೆ ಇಲ್ಲ. ಸರಿ ಮನೆಗೆ ಬಂದು, ಅಣ್ಣನಿಗೆ ಹೇಳೋಕೆ ಅಮ್ಮನಿಗೆ ಭಯ, ಮೊದಲೇ ಅಣ್ಣಾ,, ದೂರ್ವಾಸ ಮುನಿ ಕೋಪದಲ್ಲಿ, ಹೇಳದೆ ಇರೋಕು ಆಗೋಲ್ಲ. ಸರಿ ಮದ್ಯಾನ್ಹ  3 ಗಂಟೆ ವರ್ಗೂ ಹುಡುಕಿ ಹುಡುಕಿ ಸಾಕಾಗಿ .. ನಿದಾನವಾಗಿ ಅಣ್ಣನನ್ನ ಎಬ್ಬಿಸಿ ಅಮ್ಮ, ಹೇಳಿದರೆ, ಮೊದಲೇ ನಿದ್ದೆ ಮಂಪರಿನಲ್ಲಿದ್ದ ಅಪ್ಪನಿಗೆ ....ಮೊದಲು ಅರ್ಥ ಆಗಿಲ್ಲ... ಆಮೇಲೆ ಮತ್ತೇ.. ಎಲ್ಲಾ ಕಡೆ ಹುಡುಕಾಡಿದರೆ..  ಆದರೆ.. ನಾನು ಸಿಕ್ಕಿಲ್ಲ. ಅಮ್ಮನಂತು ಸಾಯೋಷ್ಟು ಭಯದಿಂದ.. ತತ್ತರಿಸಿದರೆ.. ಇತ್ತ ಕಡೆ.. ಮೊದಮೊದಲು ದೈರ್ಯವಾಗಿದ್ದ ಅಣ್ಣಾ, ನಾನು ಎಲ್ಲೂ ಕಾಣಿಸದೆ ಇದ್ದ  ಭಯ ದಲ್ಲಿ, ಅಮ್ಮನಿಗೊಂದು ಕೆನ್ನೆಗೆ ಬಾರಿಸಿದ್ದರು ಸಹ.. 'ಮಗುನಾ ಸರಿಯಾಗಿ ನೋಡ್ಕೊಳೋಕೆ ಆಗೊಲ್ವ ಅಂತ"... ಅಮ್ಮ ಭಯದಲ್ಲಿ  ಏನೂ ಮಾಡಲು ತೋಚದೆ ಅಳೋದಕ್ಕೂ ಶಕ್ತಿ ಇಲ್ಲದೆ ಕೂತಿದಾರೆ.  ಆಗ ಸ್ವಲ್ಪ ಮಕ್ಕಳ ಕಳ್ಳರು ಜಾಸ್ತಿನೇ.. ನಮ್ಮ ಅಣ್ಣನಿಗೆ ಅದೇ ತಲೇಲಿ ಸುಳಿತ ಇದ್ದದ್ದು.. ಎಲ್ಲೋ.. ನನ್ನ, ಮಕ್ಕಳು ಕಳ್ಳರೇ ಎತ್ತ್ಕೊಂಡೋಗಿ ಬಿಟ್ಟಿದಾರೆ ಅಂತ.  ಸರಿ ಪೋಲೀಸ್ ಕಂಪ್ಲೈಯೆಂಟ್ ಕೊಡೋಣ ಅಂತ ಅಣ್ಣಾ ತೀರ್ಮಾನಿಸಿ ರೆಡೀ ಆದ್ರು. 



ಇತ್ತ ಸ್ಚೂಲ್‌ನಲ್ಲಿ. ಎಲ್ಲ ಕ್ಲಾಸ್ ಗಳೂ ಮುಗೀತಿದ್ಡಾಗೆ, ನಾನು ನನ್ನ ದೊಡ್ಡಕ್ಕನ ಕ್ಲಾಸ್ ನಾ ಹೊರಗೆ ನಿಂತು ಕಾಯ್ತಿದ್ದೀನಿ(ಮಾಲಚ್ಚಕ್ಕ ತೋರಿಸಿದ್ಲಲ್ಲ), ಅವರ ಕ್ಲಾಸ್ ಬಿಟ್ಟೊಡನೆ... "ಸುನೀತಕ್ಕಾ..." ಅಂತ ಅವಳ ತೆಕ್ಕೆಗೆ ಬಿದ್ದೊ ಳನ್ನ.. ಅಕ್ಕ ಎತ್ತಿ ಮುದ್ದಿಸಿ .. "ನೀನಿಲ್ಲಿ,,,,??? ಅಮ್ಮ ಬಂದಿದರಾ...?" ಅಂತೆಲ್ಲ ಕೇಳಿದಳು. ನಾನು ಇಲ್ಲ ಅಂತ.. ಬೆಳಿಗ್ಗೆ ಇಂದ ಆದದ್ದನ್ನೆಲ್ಲ ಹೇಳಿದೆ ಏನೋ ಮಹಾ ಕಾರ್ಯ ಸಾಧಿಸಿದೋಳ ಹಾಗೆ.....

 ಸರಿ ಇಬ್ಬರು ಅಕ್ಕಂದಿರ ಜೊತೆ ನಾನು ಮನೆಗೆ ಹೊರಟೆ. ಸುನೀತಕ್ಕ ನನ್ನ ಉಪ್ಪು ಕೂಸು ಮಾಡಿಕೊಂಡೆ ಎತ್ತಿಕೊಂಡು ಬಂದ್ಲು ಅಷ್ಟೂ ದೂರ ಪಾಪ., ಅವಳಿಗೆ ಮನೆಲಿ ಆಗಿರ್ಬಹುದಾದ ಪಜೀತೀ ಬಗ್ಗೆ ಯಾವುದೇ ಸುಳಿವಿರಲಿಲ್ಲ.ಮನೆ ಹತ್ರಾಗುವಷ್ಟರಲ್ಲಿಬೀ, ಅಣ್ಣಾ ಸೈಕಲ್ನ ಮನೆಯಿಂದ ಆಚೆ ನಿಲ್ಸಿದ್ದರು. ಪೋಲೀಸ್ ಸ್ಟೇಶನ್ ಗೆ ಹೋಗಬೇಕು ಅಂತ, ಸರಿ ಮನೆಗೆ ಹೋದ ಮೇಲೆ, ಅಣ್ಣನಿಗೆ ನನ್ನ ನೋಡಿದ ಸಂತೋಷಕ್ಕಿಂತ.. ಅವರಿಗಾಗಿದ್ದ  ಭಯ ಗಾಬರಿನೆ ಒಂದು ಕೈ ಜಾಸ್ತಿ ಇತ್ತು. ಸರಿ.. ಸುನೀತಕ್ಕನ ಕಡೆ ಕೋಪ ಹೋಯ್ತು.. ಅವಳೇ ನನ್ನ ಸ್ಚೂಲ್‌ಗೆ ಕರಕೊಂಡೋಗಿರೋದು ಅಂತ.. ಆದರೆ ಅವಳಿಂದ ಗೊತ್ತಾಗಿದ್ದು ನಾನು ಮಾಲಚ್ಚಕ್ಕನ ಜೊತೆ ಹೋಗಿದ್ದರ ಬಗ್ಗೆ. ಸರಿ ಅದೆಲ್ಲಿತ್ತೊ ಕೋಪ ಅಣ್ಣನಿಗೆ, ಸೈಕಲ್ ಫಾಕ್ಸ್ (ಸೈಕಲ್ ಚಕ್ರದ ಕಂಬಿ), ಕೈಗೆ ತಗೊಂಡೋರೆ... ಬಿಟ್ಟರು ಬಿಟ್ಟ್ರು....ನನಗೆ, ಅಳಲು ಕೂಡ ಶಕ್ತಿ ಇಲ್ಲದೆ ನಿಂತಿದ್ದೆ, ಒಂದಲ್ಲ, ಎರೆಡಲ್ಲಾ.. ಸುಮಾರು ಏಟು,, ಅಡ್ಡ ಬಂದ ಅಮ್ಮನಿಗೂ ಬಿತ್ತು. ಚಿಕ್ಕಮ್ಮ "ಬೇಡ ಭಾವ ಮಗು ಬಿಡಿ ಬಿಡಿ" ಎನ್ನುತಿದ್ದರೂ... ಅಣ್ಣನಿಗೆ ಅರಿವಿಲ್ಲ. ಮೈ ಎಲ್ಲ ಬಾಸುಂಡೆ.. ಕೆಂಪಗಿನ ಬರೆ.. ನನ್ನ ಏಳೇ ಮೈ ಮೇಲೆಲ್ಲಾ... ನನಗೆ ಕೂಯೀ ಮಿಯೀ ಅನ್ನಲು ಬಾಯಿಲ್ಲ. ದೈರ್ಯವಿಲ್ಲ. 

ಅಮ್ಮ ನನ್ನ ಎಳೆದುಕೊಂಡೋಗಿ ರೂಮಲ್ಲಿ ತಬ್ಬಿಕೊಂಡು ಗೋಳೋ ಎಂದು ಅಳಲು ಶುರು ಮಾಡಿದ್ರು.. ನನಗೂ ಅಳು.. ಆದ್ರೆ.. ಎಷ್ಟು ನೋವಿತ್ತು.. ಏನಾಗ್ತಾ ಇತ್ತು ಅಂತ ನನಗೆ ನಿಜವಾಗ್ಲೂ ನೆನಪಿಲ್ಲ.. ಸ್ವಲ್ಪ ಹೊತ್ತಿಗೆ ಅಮ್ಮನ ತೊಡೆ ಮೇಲೆ ನಿದ್ದೆ ಮಾಡಿದ್ದೆ.  ಅಣ್ಣಾ ... ನೈಟ್ ಶಿಫ್ತಿಗೊಗುವಾಗ್ಲೂ ನಾನು ಮಲಗಿಯೇ ಇದ್ದೇನಂತೆ.. ಮಲಗಿದ್ದವಳನ್ನೇ ನೋಡಿ ಅಣ್ಣಾ... ಮೈಗೆ ಏನಾದ್ರೂ ಹಚ್ಚಲು ಹೇಳಿ ಹೋದ್ರು. ಆ ರಾತ್ರಿ ನನಗೆ  ಎದ್ದದ್ದೂ ನೆನಪಿಲ್ಲ, ಊಟ ಮಾಡಿದ್ದು ನೆನಪಿಲ್ಲ. 

ಆದ್ರೆ.. ಬೆಳಗ್ಗೆ ಎದ್ದಾಗು.. ಅಣ್ಣಾ ನನ್ನ ಪಕ್ಕದಲ್ಲೇ ಕೂತಿದ್ರು. ನೈಟ್ ಶಿಫ್ತಿಗೆ ಅಂತ ಹೋದ ಅಣ್ಣಾ ನಾ ಕೈಲಿ ಕೆಲಸ ಮಾಡಲಾಗಲಿಲ್ಲವಂತೆ ಅಯ್ಯೋ ಮಗೂಗೆ ಹೊಡೆದು ಬಿಟ್‌ನಲ್ಲ.. ಅನ್ನೋ ಹಪ ಹಪಿ..ತಳಮಳ.. ಸಂಕಟ.. ದುಖಃ.., ಅರ್ಧ ರಾತ್ರಿ ಸುಮಾರು, ಹನ್ನೆರಡೋ.. ಒಂದು ಗಂಟೆಗೆಲ್ಲ 6 ಮೈಲಿ, ಸೈಕಲ್ ತುಳಕೊಂಡು  ಮನೆಗೆ ವಾಪಸ್ ಬಂದೋರು.. ನನ್ನ ಪಕ್ಕನೆ ಕೂತಿದ್ರಂತೆ. ಬೆಳಗ್ಗೆ ಎದ್ದ ನನ್ನ ಮುದ್ದಿಸಿದ್ದೋ ಮುದ್ದಿಸಿದ್ದು.. ಅಮ್ಮನ ಕೈಲಿ ನನ್ನ ರೆಡೀ ಮಾಡಿಸಿ.. ಮರತ್‌ಹಳ್ಳಿ ಗೆ ಕರಕೊಂಡು ಹೋಗಿ ಸಿನೆಮಾ ತೋರಿಸಿ.. ಹೋಟೆಲ್‌ನಲ್ಲಿ ಮಸಾಲೆ ದೋಸೆ , ಹೋರ್ಲೀಕ್ಸ್ ಕೊಡಿಸಿ ಮನೆಗೆ ಕರಕೊಂಡು ಬಂದಿದ್ದರು. ಅಮ್ಮ ಮತ್ತು ಅಕ್ಕಂದಿರಿಗೂ ಬೇಕರಿ ತಿಂಡಿಗಳು.... :-0

ಈಗಲೂ.. ನನಗೆ ... ಈ ಘಟನೆ ನೆನಪಾಗೋದು ಯಾಕೆ ಅಂದ್ರೆ.. ಅದಾದ ಮೇಲೆ ಅಣ್ಣಾ ನನಗೆ ಯಾವತ್ತೂ ಹೊಡೆದಿರಲಿಲ್ಲ. ನಾನು ಅವರ ಮುದ್ದಿನ ಮಗಳೆ ಅಂದಿಗೂ.. ಇಂದಿಗೂ.

ಸ್ಚೂಲಿಗೊಗೊ ಮಕ್ಕಳನ್ನೆಲ್ಲ.. ನಮ್ಮ ಬೀದಿಯಲ್ಲಿ ನೋಡುವಾಗ.. ಈ ಘಟನೆ ನೆನಪಾಯ್ತು.. ಅದಕ್ಕೆ ಶೇರ್ ಮಾಡಿದೆನೆ.. :-)

ನಿಮ್ಮ ಸಲಹೆ ಸೂಚನೆಗಳಿಗೆ.. ಸದಾ ಸ್ವಾಗತ

Monday, 8 June 2015

ಮರೆತರೂ ಮರೆಯಲಿ ಹ್ಯಾಂಗಾ...........ಮ್ಯಾಗಿ.. ಮ್ಯಾಗಿ... ಮ್ಯಾಗಿ....!!!


 ಮರೆತರೂ ಮರೆಯಲಿ ಹ್ಯಾಂಗಾ.....Inspired by Malathisanchyinda :  Maggie mania
(http://malathisanchiyinda.blogspot.in/2015/06/good-bye.html)

ಮ್ಯಾಗಿ ಟೂ ಮಿನಿಟ್ಸ್ ನೂಡಲ್ಸ್,
      ಮ್ಯಾಗಿ ಕಪ್ ನೂಡಲ್ಸ್, 
ಮ್ಯಾಗಿ ಮಲ್ಟೀಗ್ರೇನ್  ನೂಡಲ್ಸ್, 
ಮ್ಯಾಗಿ  ಆಟ್ಟ ನೂಡಲ್ಸ್, 
ಮ್ಯಾಗಿ ಓಟ್ಸ್ ನೂಡಲ್ಸ್....
ಓ ದೇವರೇ,....ಎಷ್ಟು ವೆರೈಟೀ ಇತ್ತು. ಮನೆಯಲ್ಲಂತೂ ಯಾವಾಗ್ಲೂ ಸ್ಟಾಕ್ ಇರೋದು . ಯಾಕಂದ್ರೆ  ಮನೇಲಿ ನಾನು, ಕೀರ್ತಿ(ನನ್ನ ಪ್ರೀತಿಯ ಯಜಮಾನರು), ಇಬ್ಬರೇ ಆದ್ದರಿಂದ.. ಅಡುಗೆ ಮಾಡಲು ಬೇಜಾರಾದಾಗಲೆಲ್ಲಾ.. ಮ್ಯಾಗಿ ವೆರೈಟೀ! ಸವಿಯಲು ಸಿದ್ದ.


 ನನಗೆ ಮ್ಯಾಗಿ ಕಪ್ ನೂಡಲ್ಸ್ ಇಷ್ಟ ಆದ್ರೆ, ಕೀರ್ತಿ ಗೆ ಮ್ಯಾಗಿ ಓಟ್ಸ್ ನೂಡಲ್ಸ್. ನಾನು ಎಷ್ಟಾದ್ರೂ easy way of cooking ಇಷ್ಟ ಪಡುವವಳು. ಎಲೆಕ್ಟ್ರಿಕ್ ಕೆಟ್ಲ್ ನಲ್ಲಿ ನೀರು ಕುದಿಸು, ಕಪ್ ನೂಡಲ್ಸ್ ಗೆ ಸುರಿ, 3-4 ನಿಮಿಷ ಬಿಡು...slurp.... slurp..... ಅಂತ ತಿಂದು ಮುಗಿಸು.
ಕೀರ್ತಿಗೆ ಈರುಳ್ಳಿ, ಟೊಮ್ಯಾಟೋ, ಹಸಿಮೆಣಸಿನಕಾಯಿ, ಗರಂ ಮಾಸಲಾ ಹಾಕ್ಲೇಬೇಕು...(ಪಾಪ ಅವರೇ ತರಕಾರಿ ಕಟ್ ಮಾಡಿ ಕೊಡೋದು in fact).


ನಮ್ಮ ತಂದೆ ಮೊನ್ನೆ(ಭಾನುವಾರ) ಬಂದಿದ್ದಾಗ ಕೇಳ್ತಿದ್ರು, ಇನ್ನೂ ನೂಡಲ್ಸ್ ತಿಂತಿದೀರಾ ಅಂತ... "ಇಲ್ಲ ಅಣ್ಣಾ " ಅಂತ ಬಾಯಲ್ಲಿ ಹೇಳಿದೆನಾದ್ರೂ... ಮನೆಲಿ ಇನ್ನೂ 2-3 ಪ್ಯಾಕೆಟ್ ಮ್ಯಾಗಿ ಹಾಗೇ ಇತ್ತು....!


ನಾನು, ಕೀರ್ತಿ ವರ್ಷಕೊಮ್ಮೆ ಅಥವಾ ಎರೆಡು ಸಲ, ಚೀನಾ ಶವೋಲಿನ್ ಟ್ರಿಪ್ ಹೋಗ್ತೀವಿ, (China Shaolin temple- for Kungfu training), ವೆಜಿಟೆರಿಯನ್ ಆದ ನಮಗೆ ಆ ಒಂದು - ಒಂದೂವರೆ ತಿಂಗಳು ಡೈಯೆಟ್ ಮಾಡೋಕೆ ಒಳ್ಳೆ ಚಾನ್ಸ್. ಯಾಕಂದ್ರೆ. ಅವರ ಊಟ ನಮ್ಮ ಕೈಲಿ ಮಾಡೋಕಾಗೊಲ್ಲ. ಹಾಸ್ಟಲ್  ನಲ್ಲಿ ವೆಜ್ ಬೇರೆಯಾಗೇನೋ ಬೆಯ್ಸ್ತಾರೆ.. ಆದರೆ ಉಪ್ಪಿಲ್ಲ ...ಕಾರ ಇಲ್ಲ..., ಸುಮ್ನೆ ಸೌತೆಕಾಯಿನೋ.. ಆಲೂಗಡ್ದೇನೋ, ಸೆಲೆರಿ ಸೊಪ್ಪೋ, ಎಲೆ ಕೋಸೋ ಇಲ್ಲಾಂದ್ರೆ.. ಸೋಯಾ ಮೊಳಕೆ ಕಾಳನ್ನೊ,  ಆಲಿವ್ ಆಯಿಲ್  ಹಾಕಿ ಅರ್ಧ ಬೇಯ್ಸಿ ಕೊಡ್ತಾರೆ. ಅದರ ಜೊತೆ ಒಂದು ಬಟ್ಟಲು ಅನ್ನ...ಅದೂ ಬರೆ ಮಧ್ಯಾನ್ಹದ ಊಟಕ್ಕೆ. 

 ಬೆಳಗ್ಗೆ  ಮತ್ತೆ ಸಾಯಂಕಾಲ ಒಂದು ತರಕಾರಿ ಜೊತೆಗೆ ಒಂದು ಸೋಯಾ ಬನ್ ಅಷ್ಟೇ. ( ಬೆಳಗ್ಗಿನ ತಿಂಡಿ - 7 .30 ಕ್ಕೆ, ಮಧ್ಯಾನ್ಹ  ಊಟ - 11.30 ಕ್ಕೆ, ರಾತ್ರಿ ಊಟ - 6.30 ಕ್ಕೆ). ನಾವಂತೂ ಆ ಟ್ರೈನಿಂಗ್ ಜೊತೆ ಈ ಅರೆ ಹೊಟ್ಟೆ ಊಟ.. ಕೇಳ್ಬೇಡಿ... ಹೇಗೆ ಪ್ಲ್ಯಾನ್ಸ್ ಮಾಡ್ತ ಇರ್ತೀವಿ ಗೊತ್ತಾ.. ಬೆಂಗಳೂರಿಗೆ ಹೋದ ತಕ್ಷಣ  S N ನಲ್ಲಿ ಇಡ್ಲಿ ವಡೆ ತಿನ್ಬೇಕು, MTR ನಲ್ಲಿ ಊಟ ಮಾಡ್ಬೇಕು, ಅಮ್ಮನ ಕೈನ ಘೀ ರೈಸ್ ತಿನ್ನಬೇಕು ಅಂತ ದಿನಾ  ಮನಸಲ್ಲೇ ಲಿಸ್ಟ್ ಮಾಡಿಕೊಂಡು ಬಾಯಲ್ಲಿ ನೀರೂರುಸಿಕೋತಿದ್ವಿ

 ಅಲ್ಲಿನವರು ಹಾಗೂ ಬೇರೆ ದೇಶಗಳಿಂದ ಬಂದ ಇತರೆ ಟ್ರೇನೀ ಗಳು ... ಚೆನ್ನಾಗಿ ತಿಂತಾರೆ, ನಮಗೆ ಆಲಿವ್ ಆಯಿಲ್ ವಾಸನೆ(ಸುವಾಸನೆ ಕೆಲವರಿಗೆ) ಸೇರೊಲ್ಲ. ಮತ್ತೆ ರಾತ್ರಿ 9 ಕ್ಕೆಲ್ಲಾ  ಹಸಿವು, ಆಗೆಲ್ಲ ಮ್ಯಾಗಿ ನಮ್ಮ ಆಪತ್ಬಾಂಧವ. ಎಲ್ಲಾ ರೂಮ್ ಗಳಲ್ಲೂ ಎಲೆಕ್ಟ್ರಿಕ್  ಕೆಟ್ಲ್ ಇರ್ತ ಇತ್ತು. ಗ್ರೀನ್ ಟೀ ಮಾಡಿಕೊಳ್ಳಲು,. ಸೋ... ನಮಗೆ ಕಪ್ ನೂಡೆಲ್ಸ್ ಮಾಡ್ಕೊಳೋಕೆ ತೊಂದ್ರೆ ಇಲ್ಲ.... ಬಿಸಿ ನೀರು ಕುದಿಸು, ಮ್ಯಾಗಿ ಕಪ್ ಗೆ ಸುರಿ.. ತಿನ್ನು.... ನಮಗೆ ನಿಜವಾಗ್ಲೂ.. ಉಪ್ಪು ಕಾರ ತಿಂದು ಎಷ್ಟೋ.. ಯುಗಗಳಾಗಿ ಬಿಟ್ಟಿದೆಯೋ ಎನಿಸಿಬಿಟ್ಟಿರುತ್ತೆ ಅಲ್ಲಿನ ಊಟ  ಮಾಡಿ , ಆರೋಗ್ಯದ ಕಡೆ ಇಂದ ನೋಡಿದ್ರೆ..Chinese have the best food..."for taste Indian food.. for health Chinese food" ಅನ್ನೋ ಗಾದೆನೇ ಇದೆ...

 ನಮ್ಮ ಮ್ಯಾಗಿ.. ನಾಲಿಗೆ ಸೋಕಿದ ತಕ್ಷಣ .. ಆ ಹದವಾದ ಉಪ್ಪು, ಕಾರ , ಮಸಾಲೆಯ ರುಚಿ .. ಹ್ಮಮ್ಮ್ಮ್ಮ್ಮ್ಮ್.. ಹೇಳೋಕೆ ಪದಗಳೇ ಇಲ್ಲ.. ಅನುಭವಿಸಿಯೇ ತೀರಬೇಕು.ನಮ್ಮ ಕಣ್ಣಲಿ ನೀರು ಬರೋದೊಂದು ಬಾಕಿ.. ಸಂತೋಷದಿಂದ.
                              .
ಮೊನ್ನೆ ಮೊನ್ನೆ.. ಮೇ ನಲ್ಲಿ ಹಾಂಗ್‌ಕಾಂಗ್ ಗೆ ಹೋಗಿದ್ವಿ.. ಕೀರ್ತಿ, ಇಂಟರ್‌ನ್ಯಾಶನಲ್ ವೂಶೂ ಮತ್ತು ಕುಂಗ್ ಫೂ ಟೂರ್ನಮೆಂಟ್ ನಲ್ಲಿ ಪಾರ್ಟಿಸಿಪೇಟ್ ಮಾಡಿದ್ರು....5 ದಿನದ ಟೂರ್ನಮೆಂಟ್. ನಾನು ಇದುವರೆಗೂ ಹಾಂಗ್‌ಕಾಂಗ್ ಗೆ 5 ಸಲ ಹೋಗಿದೆನೆ. ಆದ್ರೆ  This was the best trip ever, ಅಲ್ಲಿನ ಆರ್ಗನೈಸರ್ಸ್ ನಮಗೆ 5 ಸ್ಟಾರ್ ಹೋಟೆಲ್ ನಲ್ಲಿ ಅಕ್ಕೋಮೊಡೇಶನ್ ಒದಗಿಸಿದ್ರು.(ನೀವು ಹಾಂಗ್‌ಕಾಂಗ್ ಹೋಗೋ ಹಾಗಿದ್ರೆ, ನಾನು ನಿಮಗೆ ಪ್ರಿಫರ್ ಮಾಡೋದು The L hotel in Nina tower) . 80 ಅಂತಸ್ತಿನ ಕಟ್ಟಡ, ನಮ್ಮ ರೂಮ್ ಇದ್ದದ್ದು 57ನೇ ಅಂತಸ್ತಿನಲ್ಲಿ.  ಅಲ್ಲಿನ ಲಿಫ್ಟ್ ಗಳು ಎಷ್ಟು fast ಅಂದ್ರೆ, 57ನೇ ಅಂತಸ್ತಿಗೆ ಒಂದು ನಿಮಿಷಕ್ಕಿಂತ ಬೇಗನೇ  ರೀಚ್ ಆಗ್ತಿದ್ವಿ.

A view from  57th floor room in L hotel, Hong kong.

ಅಲ್ಲಿನ ರೂಮ್ ಗಳು, 30* 40 ಸೈಟ ನಷ್ಟು ದೊಡ್ಡದು (ನಮ್ಮ ಬೆಂಗಳೂರಿನ ಇಡೀ ಮನೆಯಷ್ಟು)... ಬಾಲ್ಕನೀ ಇಂದ ಕೆಳಗೆ ನೋಡೋದೇ ಒಂದು ಮಜಾ....ಇನ್ನು  ಬ್ರೇಕ್‌ಫಾಸ್ಟ್ .... The L hotel  ನಾ ಬಫೆನಲ್ಲಿ. ಥೇಟ್ ಅಮೆರಿಕನ್ ಸ್ಟೈಲ್ & ಚೈನೀಸ್ ಸ್ಟೈಲ್. ಸರಿ ಹೇಗೋ ಗಡದ್ದಾದ ತಿಂಡಿ ಮುಗಿಸಿ ಟೂರ್ನಮೆಂಟ್ ಗೆ ಹೋದ್ರೆ.. ಮಧ್ಯಾನ್ಹ  ಊಟ ಬೇಡ ಅನ್ನಿಸ್ತಿತ್ತು, ಆದ್ರೆ ರಾತ್ರಿ ಊಟಕ್ಕಾಗಿ ಪರದಾಡ್ತಿದ್ವಿ.

ಯಾಕೆ ಅಲ್ಲಿ ಹೋಟೆಲ್ ಗಳಿರಲಿಲ್ಲವ ನಿಮ್ಮ ಊಟಕ್ಕೆ ಅಂತ ನೀವು ಕೇಳ ಬಹುದು... ಆದ್ರೆ ಅಲ್ಲಿ ಹೋಗಿ ನೀವು ನಾನ್ವೆಜ್ ಅಲ್ಲ ವೆಜ್ ಊಟ ಬೇಕು ಅಂತ ಅವರಿಗೆ ವಿವರಿಸೋದರಲ್ಲಿ .... ಬೆಳಗಾಗಿರುತ್ತೆ. ಅವರಿಗೆ ಮೀನು, ಮೊಟ್ಟೆ ವೆಜ್ ಫುಡ್. ಮತ್ತು  ಅವರ ಗ್ರೇವೀ ಇಂದ... ಮಾಂಸದ ತುಂಡನ್ನು ತೆಗೆದು ಹಾಕಿದರೆ ಅದೇ ವೆಜ್ ಫುಡ್. ಅದಕ್ಕಾಗಿ ಇದೆಲ್ಲ ಸರ್ಕಸ್ ಬೇಡ ಅಂತ ನಾವು ನಮ್ಮ ಮ್ಯಾಗಿ ಇಟ್ಟೊಕೊಂಡಿರ್ತಿದ್ವಿ. ಜೊತೆಗೆ ಅಲ್ಲಿ  ತಾಜಾ ಹಣ್ಣುಗಳಿಗೆ ಬರವಿಲ್ಲ. ಹಾಗಾಗಿ ಹಣ್ಣುಗಳನ್ನು ಕೊಂಡು ತಿಂತಿದ್ವಿ. ಸೋ ಆಗೆಲ್ಲ ನಮಗೆ ಹೊಟ್ಟೆ ತುಂಬಿಸಿದ್ದು ಈ ಮ್ಯಾಗಿ ಕಪ್ ನೂಡಲ್ಸ್. 

ಆ ಮಳೆಯಲೀ .. ಚಳಿಯಲೀ.. ಬಾಲ್ಕನೀಯಲ್ಲಿ ಕೂತ್ಕೊಂಡು.. ಒಂದು ದೊಡ್ಡ ಕಪ್ ಗ್ರೀನ್ ಟೀ ಮತ್ತೆ ಬಿಸಿ ಬಿಸಿ ನೂಡಲ್ಸ್ ತಿಂತಾ ಇದ್ರೆ .. ಅದರ ಮಜಾನೇ ಬೇರೆ.
ಕೀರ್ತಿ with his gold medals

ಹಾ.. ಹ.. ಹೇಳೋದೇ ಮರ್ತೇ ನೋಡಿ.. ಕೀರ್ತಿ ಹಾಂಗ್‌ಕೋಂಗ್ ಟೂರ್ನಮೆಂಟ್ ನಲ್ಲಿ ಎರೆಡು ಗೋಲ್ಡ್ ಮೆಡಲ್ ಗೆದ್ದು ಬಂದ್ರು... ಅದಕ್ಕೆ ಹೇಳಿದ್ದು "This was the best trip ever" ಅಂತ.  


ಹೂಂ.. ಮತ್ತೆ ಈಗ ಮುಂದಿನ ಸರ್ತಿ ನಾವು ಚೀನಾ ಕೆ ಹೋದಾಗ ನಮ್ಮ ಹಸಿವನ್ನು, ನಾಲಿಗೆಯ ರುಚಿಯನ್ನೂ ತಣಿಸೋದು ಹೇಗೆ ಅನ್ನೋದು..ಈಗಿನಿಂದಲೇ  ಚಿಂತೆಯಾಗಿ ಬಿಟ್ಟಿದೆ ನಂಗೆ.


ಇಷ್ಟೂ ವರ್ಷಗಳು ಮ್ಯಾಗಿ ನಮಗೆ ಆಪತ್ಬಾಂಧವ. ಆದರೆ ಈಗ ಮ್ಯಾಗಿ... ಮ್ಯಾಗಿ... ನೀನ್ಯಾಕೆ ಹೀಗೆ ಮಾಡಿದೆ... ನಿನ್ನ ಮರೆತರೂ ಮರೆಯಲಿ ಹ್ಯಾಂಗ... ಹಸಿದಿದ್ದಾಗ.. ನಾಲಿಗೆ ಕೆಟ್ಟು ಕೇರವಾಗಿದ್ದಾಗ ನೀನು ತೋರಿಸಿದ  ರುಚಿ, ಸ್ವಾದ.. ಆತ್ಮೀಯತೆ.. ಹೇಗೆ ಮರೆಯಲಿ. 


ಅದಕ್ಕೋಸ್ಕರ ಈ ನನ್ನ ಲೇಖನ, ನಿನಗೆ ಮುಡಿಪು.. I sincerely dedicate this article to you Maggie...

ಹಾಗೆ ಈ ಆರ್ಟಿಕಲ್ ಬರೆಯೋಕೆ ಇನ್ಸ್ಪಿರೇಶನ್ ಆದ ನೆನಪಿನ ಸಂಚಿಯಿಂದ ಮಾಲತಿ ಯವರಿಗೂ  ನನ್ನ ಧನ್ಯವಾದಗಳು.


ಓದುವ ನಿಮ್ಮೆಲರಿಗೂ ಸಹ ನನ್ನ ಧನ್ಯವಾದಗಳು.




Thursday, 4 June 2015

ಮರುಜನ್ಮ.. ...ಸಣ್ಣ ಕಥೆ

"ಅತ್ತಿಗೆ, ನಿಮ್ಮ ಕೈ ಮುಗಿತೇನೆ, ನನ್ನ ದಯವಿಟ್ಟು ಒಳಗೆ ಕಳಿಸಬೇಡಿ, ನನ್ನ ಕೈಲಾಗೊಲ್ಲ.. ಅವರು ನನ್ನ ಮುಕ್ಕಿಬಿಡ್ತಾರೆ" ರೂಮಿಗೆ ಹೋಗಲು ನಿರಾಕರಿಸಿ ಅಳುತ್ತಿದ್ದಳು ವೇದಾ. ಕೆದರಿದ ತಲೆ, ಕಚ್ಚಿದ ಗುರುತು ಒಂದು ಕೆನ್ನೆಯ ಮೇಲಾದರೆ, ಅಂಗೈ ಗುರುತು ಇನ್ನೊಂದರ ಮೇಲೆ. ಆಸ್ತವ್ಯಸ್ತಗೊಂಡ ಸೀರೆ ದೈನ್ಯ ಮುಖ. ಇದ್ಯಾವುದೂ  ಶಾಂತಾ ಅತ್ತಿಗೆ(ಗಂಡನ ಅಕ್ಕ) ಮೇಲೆ  ಯಾವುದೇ ಪರಿಣಾಮ ಬೀರಲಿಲ್ಲ. ಬದಲಿಗೆ "ಗಂಡನಿಗೆ ಸುಖ ಕೊಡಲಾರದ ನೀನೆಂಥ ಹೆಂಡ್ತಿಯೆ ಅವನಿಗೆ, ಹೋಗ್ಲಿ ಬಾ"ಎಂದು ತನ್ನ ರೂಮಿಗೆ ಕರೆದೊಯ್ದು , ಮುಖ ತೊಳೆಸಿ, ಬೇರೆ ಸೀರೆ ಉಡಿಸಿ ತಲೆ ಬಾಚಿ ಅಲಂಕರಿಸಿದಳು. 17 ವರ್ಷದ ಮುಗ್ದ ವೇದಾ ಎಲ್ಲದಕ್ಕೂ ಮೂಕವಾಗಿದ್ದಳು, ಗಂಡನಲ್ಲಿಗೆ ಕಳಿಸದಿದ್ದರೆ ಸಾಕು .ತಾನು ಬೇರೆ ಏನು ಬೇಕಾದರೂ ಮಾಡಲು ಸಿದ್ಧ. ವೇದಾಳ ಕೈ ಹಿಡಿದು ಕರೆದೊಯ್ದಳು ಶಾಂತಾ... ತಲೆ ತಗ್ಗಿಸಿ ಬರುತ್ತಿದ್ದ ವೇದ... ಗಂಡನ ರೂಮಿನ ಎದಿರುಗೆ ಬಂದು ನಿಂತಾಗ... ಬೆಚ್ಚಿದಳು. ದೈನ್ಯವಾಗಿ ಶಾಂತಳತ್ತ ನೋಡಿದಳು. ಶಾಂತಳಿಗೆ ಅದರ ಅರ್ಥ ಗೊತ್ತಿದ್ದರೆ ತಾನೇ...ಕುತ್ಸಿಕತೆ, ಕ್ರೌರ್ಯವಾಗಿ  ನಕ್ಕು,"ಲೋ. ಶ್ರೀಧರಾ, ನಿನ್ನ ಅಪ್ಸರೆ ಬಂದಿದಾಳೆ ನೋಡೋ" ಎಂದು ರೂಮಿನ ಒಳಗೆ ತಳ್ಳಿ ಬಾಗಿಲೇಳೆದುಕೊಂಡ್ಲು.


ರೂಮೊಕ್ಕ ವೇದಾ ತರ ತರ ನಡುಗುತ್ತಿದ್ದಳು, ಅವಳ ಏಳೇ ದೇಹ ಕಂಪಿಸುತ್ತಿತ್ತು, ಕೈ ಮುಗಿದಳು ಗಂಡನತ್ತ ನೋಡಿ. ಮಾತು ಹೊರಡಲಿಲ್ಲ ಬಾಯಿಂದ."ನನ್ನಿಂದ ತಪ್ಪಿಸಿಕೊಂಡು ಎಲ್ಲಿ ಹೋಗಬಹುಬಹುದಂದುಕೊಂಡಿದ್ದೆ.....! ನನ್ನ ಸ್ವೀಟ್ ವೇದು..." ಎಂದು ಹತ್ತಿರ ಬಂದವನತ್ತ ನೋಡದೆ, ತಪ್ಪಿಸಿಕೊಳ್ಳಲು ಎಲ್ಲಾದರೂ ಜಾಗವಿರುವುದೇನೋ ಎಂದು ಅತ್ತಿತ್ತ ನೋಡಿದಳು. ಇಲ್ಲಾ... ಅಷ್ಟರಲ್ಲೇ, ಮೃಗದಂತೆ ಅವನ ಬಿಗಿ ಬಂದನದಲ್ಲಿದ್ದಳು. ತಪ್ಪಿಸಿಕೊಳ್ಳುವ ಮಾತೆಲ್ಲಿ.... ಅವಳು ಒದ್ದಾಡಿದಷ್ಟು, ಅವನ ಹಿಂಸೆ, ವಿಕೃತತೆ ಹೆಚ್ಚಾಗು ತ್ತಿತ್ತು . ಸಹಿಸಲಾರದೆ, ಜ್ಞಾನ ತಪ್ಪಿದಳು ವೇದಾ.


ಜ್ಞಾನ ಬಂದಾಗಲೂ, ಅದೇ ಪರಿಸ್ಥಿತಿಯಲ್ಲಿ ಬಿದ್ದಿದ್ದಳು ವೇದಾ ನೆಲದ ಮೇಲೆ. ಮೈ ಮೇಲೆ ಕೂದಲೆಳೆ ಬಟ್ಟೆಯೂ ಇಲ್ಲದೆ, ಮೈಯೆಲ್ಲಾ ನಜ್ಜು ಗುಜ್ಜಾದ ನೋವು.ಮೈ ಮುದುರಿ  ನಾಚಿಕೆಯಿಂದ ಹಿಡಿಯಷ್ಟಾಗಿ ತಲೆಯೆತ್ತಿ ನೋಡಿದರೆ...., ಎದುರಿಗೆ ಕುಳಿತು ಕಾಯುತ್ತಿದ್ದ ಶ್ರೀಧರ ,ಅವಳು ಎಂದು ಎಚ್ಚರಗೊಂಡಾಳೋ... ಎಂದು, ಅವಳು ಎಚ್ಚರಗೊಂಡಿದ್ದು, ಗಮನಿಸಿ, ಕೈಲಿದ್ದ, ಕ್ಯಾಮರ, ಮತ್ತೆ ಟೀವೀ ಮೇಲೆ ಸರಿಯಾದ ಆಂಗಲ್ ಗೆ ಅಡ್ಜಸ್ಟ್ ಮಾಡಿ ಹತ್ತಿರ ಬಂದವನತ್ತ, ಬೆದರಿದ ಕಂಗಳಲ್ಲೇ ಬೇಡವೆಂಬಂತೆ ಶಕ್ತಿ ಇಲ್ಲದ  ಕೈಗಳನ್ನೆತ್ತಿ  ಬೇಡಿದಳು, ಶ್ರೀಧರನ ಕಂಗಳಲ್ಲಿ ವಿಕೃತ ಕಾಮ ಮತ್ತೊಮ್ಮೆ ವಿಜ್ರುಂಬಿಸಿತು.

ವೇದಾ, ಆಗಷ್ಟೇ PUC ಗೆ ಸೇರಿದ್ದಳು, ಮನೆಯವರ ವಿರೋಧದ ಮದ್ಯೆ ಅಣ್ಣ ವೆಂಕಟೇಶ್  ಒಬ್ಬನೇ ಸಹಾಯಕ್ಕೆ ನಿತದ್ದು. ಸಣ್ಣ ಹಳ್ಳಿಯ ದೇವಸ್ಥಾನದ ಅರ್ಚಕರಾಗಿದ್ದ ಶಂಕರಯ್ಯನವರು ಪಕ್ಕಾ ಸಂಪ್ರದಾಯಸ್ಥರು, ಮೊದಲ ಮಗ ಶಂಕರ ಹುಟ್ಟಿದ, ಹನ್ನೆರೆಡು ವರ್ಷಕ್ಕೆ ಹುಟ್ಟಿದ ಅಪರೂಪದ ಮಗಳು ವೇದಾ. ಅವಳ 15 ನೇ ವರ್ಷದಿಂದಲೇ ಅವಳ ಮದುವೆಗಾಗಿ ತಯಾರಿ ನಡೆದಿತ್ತು, ಮಗಳು ಕಾಲೇಜ್ ಗೆ ಹೋಗುವೆನಂದಾಗ... ದೊಡ್ಡ ವಾಗ್ವಾದವೇ ನಡೆದಿತ್ತು ಮನೆಯಲ್ಲಿ ತಂದೆ ಮಗನಿಗೆ. ಶಂಕರಯ್ಯನವರ ತಾಯಿ ಇನ್ನೂ ಗಟ್ಟಿ ಮುಟ್ಟಾಗಿದ್ದರು, ಶಂಕರಯ್ಯನವರ ಪತ್ನಿಯನ್ನು ಇನ್ನೂ ತಮ್ಮ ಹಿಡಿತದಲ್ಲೇ ಇಟ್ಟುಕೊಂಡಿದ್ದರು, ಆಕೆಗೆ ತನ್ನತನ ವೆನ್ನುವುದೇ ಇರಲಿಲ್ಲ. ಗಂಡ ಮತ್ತು ಅತ್ತೆಯ ಕೈ ಕೆಳಗೆ ಅವರು ಹೇಳಿದಂತೆಯೇ  ನಡೆಯುತ್ತಿದ್ದರು.... ವೆಂಕಟೇಶ  ಡಿಗ್ರೀ ಮುಗಿಸಿ ಯಾವುದೋ,.. ಖಾಸಗಿ ಕಂಪನೀಯಲ್ಲಿ ಅಕೌಂಟೆಂಟ್ ಆಗಿದ್ದ.. ತನ್ನ ತಂಗಿಯೂ ಓದಲಿ ಎಂಬ ಆಸೆಯಿಂದ ಅವಳಿಗೆ ಬೆಂಬಲಿಸಿದ್ದ. 

ಆದರೇನು, PUC ಗೆ ಸೇರಿದ ಸ್ವಲ್ಪೇ ದಿನದಲ್ಲಿ ವೇದಾಳಿಗೆ ಸಂಭಂದ ಕುದುರಿ ಬಂದಿತ್ತು. ಹುಡುಗ ಅಮೇರಿಕದಲ್ಲಿ ಯಾವುದೋ ಕೆಲಸದಲ್ಲಿದ್ದ, ಸದ್ಯಕ್ಕೆ ಬೆಂಗಳೂರಿನಲ್ಲೇ ಕೆಲಸವಾಗಿದ್ದರಿಂದ ತಿರುಗಿ ಬಂದಿದ್ದ. ಶಂಕರಯ್ಯನವರು, ತಮ್ಮ ಯೋಗ್ಯತೆಗೆ ಮೀರಿದ ಸಂಬಂಧವೆಂದು, ಸಂತೋಷ ಪಟ್ಟು ಮದುವೆ ಮಾಡಿಕೊಟ್ಟಿದ್ದರು.
ವೆಂಕಟೇಶನ ವಿರೋಧ ಯಾವುದೇ ಲೆಕ್ಕಕ್ಕಿರಲಿಲ್ಲ.. ವೇದಾಳಂತು ಸರಿ... ಅತ್ತೆಯ ಕೈಲಿ ನಡುಗುವ ಅಮ್ಮನ ಮಗಳು... ಇನ್ನೇನನ್ನು  ನೀರಿಕ್ಷಿಸಲು ಸಾಧ್ಯ.. ಕಣ್ಮುಚ್ಚಿ ಕುತ್ತಿಗೆಯೋಡ್ಡಿದ್ದಳು. 


ಮದುವೆಯ ದಿನವೇ.. ವೇದಾಳನ್ನು ಬೆಂಗಳೂರಿಗೆ ಕರೆ ದೊಯ್ದಿದ್ದರು ಶ್ರೀಧರನ ಮನೆಯವರು(ಶ್ರೀಧರನಿಗೆ ತಂದೆ ತಾಯಿ ಇಲ್ಲ, ಗಂಡ ಸತ್ತ ಮೇಲೆ  ತಮ್ಮನೊಡನಿದ್ದ  ಅಕ್ಕ ಶಾಂತಾ ಒಬ್ಬಳೇ.). ಮೊದಲ ರಾತ್ರಿಯೇ.. ವೇದಾಳಿಗೆ  ನರಕ ದರ್ಶನವಾಗಿತ್ತು. ಅಮೇರಿಕ ದಿಂದ ತಂದ...ಕಾಮಕೇಳಿಯ.. ಕಸ್ಸೆಟ್ಸ್ TV ಯಲ್ಲಿ ಹಾಕಿ.. ವೇದಾಳನ್ನು ನೋಡಲು ಒತ್ತಾಯಿಸಿ ಅಂತೆಯೇ ಅವಳ ಮೇಲೆ ಅತ್ಯಾಚಾರವೆಸಗಿದ್ದ ( ಹೆಣ್ಣಿಗೆ ಇಷ್ಟವಿಲ್ಲದ ಮೇಲೆ ಅವಳು ವೈಶ್ಯೆ ಯೇ ಆಗಿರಲಿ.. ಅದು ಅತ್ಯಾಚಾರವೇ ಸೈ ಅಲ್ಲವೇ....??).ಅದಕ್ಕೆ.. ತಕ್ಕಂತೆ ಅವನ ಅಕ್ಕ ಶಾಂತಾ... ತಾನೂ ನಾದಿನಿಯ ಮೇಲೆ ತನ್ನ ಮಾನಸಿಕ ವಿಕೃತತೆಯನ್ನು ತೋರಿಸಿಕೊಳ್ಳುತ್ತಿದ್ದಳು.. ಬೇಕೆಂದೇ  ವೇದಾಳನ್ನು ಶೃಂಗರಿಸಿ.. ಅವನ ರೂಮಿಗೆ ತಳ್ಳಿ, ಹೊರಗಿಂದ ಚಿಲಕ ಹಾಕಿಕೊಳ್ಳುತ್ತಿದ್ದಳು.
ಶ್ರೀಧರ ನದು ತೀರಲಾರದ ದಾಹ.. ಕಾಮುಕತೆ.. ವಿಕೃತತೆವೇದಾ... ಮೇಲೆ ಎಸಗಿದ ಅತ್ಯಾಚಾರದ ವೀಡಿಯೋ ಮಾಡಿ ... ಮತ್ತೆ ಮತ್ತೆ ನೋಡುವುದು.


ಪಕ್ಕದ  ಮನೆಯವರ ಮುಂದೆಲ್ಲ" ಅಯ್ಯೋ... ನನ್ನ ತಮ್ಮನಿಗೆ, ಎಂತಹಾ ಹಳ್ಳಿ ಗೊಡ್ಡು  ಗಂಟು ಬಿದ್ದಿದೆಯಮ್ಮ... ಅವನ ಇಷ್ಟಾ ನಿಷ್ಟ ಗಳನ್ನು ಅರ್ಥವೇ ಮಾಡಿಕೊಳ್ಳೋಲ್ಲ...."ಇನ್ನೂ ಇತ್ಯಾದಿ ದೂರುತ್ತಿದ್ದಳು. ವೇದಾ ರಾತ್ರಿಯಾಯಿತಂದರೆ ಬೆವರಿ ನಡುಗುತ್ತಿದ್ದಳು... ಮದುವೆಯಾಗಿ 1 ತಿಂಗಳಲ್ಲೇ.. ಸೊರಗಿ ಸೊಪ್ಪಾಗಿದ್ದಳು.  ಶಂಕರಯ್ಯನವರೊಮ್ಮೆ.. ಅಳಿಯನಿಗೆ ಫೋನ್ ಮಾಡಿ.. ಮಗಳನ್ನು ನೋಡಲು ಬರುವೆನೆಂದರೆ... ಶ್ರೀಧರ "ಇಲ್ಲ ಮಾವನವರೇ... ನಿಮ್ಮ ವೇದಾಳೊಟ್ಟಿಗೆ ನಾನು ಹನಿಮೂನ್ ಗೆ ಹೊರಟಿರುವೆ, ಬಂದ ಮೇಲೆ ನಾನೇ ಫೋನ್ ಮಾಡುವೆ" ಎಂದು ನಯವಾಗಿ ನಿರಾಕರಿಸಿದ್ದ.
ವೇದಾ ತನ್ನ ಅಣ್ಣಾ ವೆಂಕಟೇಶನ ಆಫೀಸ್ ಫೋನಿಗೆ ಫೋನ್ ಮಾಡೋಣವೆಂದರೆ.. ಶಾಂತಾಳ ಹದ್ದಿನ ಕಣ್ಣು.. ದಿಕ್ಕು ತೋಚದೆ... ಸುಮ್ಮನಾಗಿದ್ದಳು. ಇದೆ ರೀತಿ ಮುಂದುವರೆದು.ಶ್ರೀಧರನ ವಿಕೃತ ಕಾಮ ತಾಳಲಾರದೆ.. ವೇದಾ ಎರೆಡು - ಮೂರು ಸಲ ಮೂರ್ಛೆಯೋಗಿ, ಜ್ಞಾನ ಬರಲು ಮೂರು ದಿನಗಳೇ ಬೇಕಾಗಿತ್ತು...ಆಗಲೂ ಶ್ರೀಧರನಾಗಲಿ,ಶಾಂತಳಾಗಲಿ, ಅವಳನ್ನು ಆಸ್ಪತ್ರೆ ಗೆ ಕರೆದೊಯ್ದಿರಲಿಲ್ಲ. 


ಅವಳಲ್ಲಿ  ಇನ್ನೇನು ನನಗೆ ಉಳಿದಿಲ್ಲ ಎಂಬ ಭಾವನೆ ಶ್ರೀಧರನಿಗೆ ಬಂದು... ಅವಳ ಕೈಲಿ ಡೈವೋರ್ಸ್ಗೆ ಸೈನ್ ಮಾಡಿಸಿಕೊಂಡಿದ್ದ... ಅವಳ ಅಣ್ಣನಿಗೆ ಫೋನ್ ಮಾಡಿ ಬರಲು ಹೇಳಿದ್ದ. ವೆಂಕಟೇಶ ಬಂದಾಗ, "ಅಣ್ಣಾ ನಾನಿಲ್ಲಿ ಇರೋಕಾಗಲ್ಲ ಅಣ್ಣಾ... " ಎಂದು ತೆಕ್ಕೆ ಬಿದ್ದು ಆಳುತ್ತಿದ್ದ,... ಮೂಳೆ ಚಕ್ಕಳವಾಗಿದ್ದ  ತಂಗಿಯನ್ನು ನೋಡಿ... ಬಿಕ್ಕಿ ಬಿಕ್ಕಿ ಅತ್ತುಬಿಟ್ಟ.
ಶ್ರೀಧರ ಅವನ ಮೇಲೇ ಗೂಬೆ ಕೂರಿಸಿದಾ "ವೇದಾ ಏನು ಅರಿಯದ ಮುಗ್ದೆ ಅವಳಿಗೆ ಧಾಂಪತ್ಯ ಜೀವನವೇನೆಂಬುದೇ ತಿಳಿಯದು... ನೀವೆಲ್ಲ ಸೇರಿ ನನ್ನ ಬಾಳು ಹಾಳುಮಾಡಿದಿರಿ. ಅವಳನ್ನು ಕರೆದುಕೊಂಡೋಗಿ, ಅವಳೂ ಒಪ್ಪಿ ಡಿವೋರ್ಸೆಗೆ ಸೈನ್ ಮಾಡಿದ್ದಾಳೆ" ಎಂದಿದ್ದ. ವೆಂಕಟೇಶ ಮರು ಮಾತಾಡದೆ.. ತಂಗಿಯನ್ನು ಮನೆಗೆ ಕರೆದು ಕೊಂಡು ಬಂದಿದ್ದ. ಅವಳ ಮೈ ಮೇಲಿನ ಕಚ್ಚಿದ ಗುರ್ತು... ಕೆನ್ನೆಯೆಲ್ಲಾ ಬಾತುಹೋಗಿದ್ದೆ ಸಾಕಿತ್ತು ಅವನಿಗೆ ಇಡೀ ಕಥೆ ಹೇಳಲು.
ಮನೆಯಲ್ಲಿ ದೊಡ್ಡ ಜಗಳವೇ ನಡೆಯಿತು, ಶಂಕರಯ್ಯ ಮಗನನ್ನು ಹಿಡಿದು ಕೆನ್ನೆಗೆ ನಾಲ್ಕು ಬಾರಿಸಿಯೂ ಬಿಟ್ಟರು.. ಅವರಿಗೆ ಮಗಳ ಸ್ಥಿತಿಯ ಬಗ್ಗೆ ಯಾವುದೇ ಕಾಳಜಿಯಿಲ್ಲ.. ಕೇವಲ, ಮರ್ಯಾದೆಯ ಪ್ರಶ್ನೆ... ನೋಡಿದವರು ಏನೆಂದಾರು.... ನಾವು ತಲೆ ಎತ್ತಿ ತಿರುಗುವುದು ಹೇಗೆ..... !
ಹೆಣ್ಣಾದವಳು  ಗಂಡನ ಮನೆಯಲ್ಲಿರಬೇಕಷ್ಟೆ... ಅವನು ಸಾಯಿಸಿದರು ಅಷ್ಟೇ... ಬಾಳಿಸಿದರೂ ಅಷ್ಟೇ... ಮಗಳನ್ನು ಮತ್ತೆ.. ಅಳಿಯನ ಕಾಲಿಡಿದು.. ಅವನ ಮನೆಗೆ ಬಿಟ್ಟು ಬರಲು ರೆಡೀ ಯಾದಾಗ, ವೆಂಕಟೇಶ ತಡೆಯಾದಾದ.. ತಂಗಿಯ ಕೈ ಹಿಡಿದು.. ಮನೆಯಿಂದ ಹೊರ ಬಂದಿದ್ದ " ಅಪ್ಪಾ... ನೀವು ಒಬ್ಬ ತಂದೆಯಾ... ಅವಳ ಸ್ಥಿತಿ ಏನು ಅಂತ ಕಣ್ಣಿಗೆ ಕಟ್ಟಿದಂತಿದೆ.. ಮತ್ತೆ ಅದೇ ನರಕಕ್ಕೆ ತಳ್ಳಲು ಸಿದ್ದರಾಗಿದ್ದೀರಲ್ಲ.. ನಿಜಕ್ಕೂ ನೀವು ಮನುಷ್ಯರೇನಾ... ಬೇಡ.. ನನ್ನ ತಂಗಿಗೆ ನಾನು ಇದ್ದೇನೆ" ಏನು ಹೇಳಲು ಮರೆತಿರಲಿಲ್ಲ .


ತಂಗಿಯೊಡನೆ ಬೆಂಗಳೂರಿನಲ್ಲಿ ಮನೆ ಮಾಡಿ ಇರತೊಡಗಿದ್ದ. ಆದರೆ ವೇದಾ ಮಾನಸಿಕವಾಗಿ ಹಾಗೂ ದೈಹಿಕವಾಗಿ ಜರ್ಜರಿತಳಾಗಿದ್ದಳು. ಡಾಕ್ಟರ್ ಹೇಳಿದ್ದರು... "ಸಾಮೂಹಿಕವಾಗಿ ಹತ್ತು ದಿನ ಒಂದೇ ಸಮನೆ ಅತ್ಯಾಚಾರವೆಸಗಿದಂತಿದೆ ನಿಮ್ಮ ತಂಗಿಯ ದೇಹಸ್ಥಿಥಿ.. ".. ವೆಂಕಟೇಶ... ಆಸ್ಪತ್ರೆ ಎಂದೂ ನೋಡದೆ ಡಾಕ್ಟರ್ ಕೈಹಿಡಿದು ಭೋರೆಂದು ಅತ್ತಿದ್ದ .
"ವೇದಾ ಗರ್ಭವತಿಯೂ ಹೌದು, ಆದರೆ ಆಕೆ ಇರೋ ಸ್ಥಿತಿಲಿ ... ಅಬಾರ್ಶನ್  ಮಾಡುವುದೇ ಒಳ್ಳೆಯದು... ಮಾಡದಿದ್ದರೂ ಮುಂದೆ.. ಸುಮಾರು ಪ್ರಾಬ್ಲಮ್ಸ್ ಆಗುತ್ತವೆ,ಅಬ್‌ನಾರ್ಮಲ್ ಮಗು ಆಗುವ ಚಾನ್ಸಸ್ ಸಹ ಹೆಚ್ಚು" ಎಂದಾಗ  ವೆಂಕಟೇಶ ಎಲ್ಲದಕ್ಕೂ ಒಪ್ಪಿ ಸಹಿ ಮಾಡಿದ್ದ. ಸತತವಾಗಿ 3 ತಿಂಗಳ ಚಿಕಿತ್ಸೆ, ಕೌನ್ಸೆಲಿಂಗ್ ಗಳಿಂದ ..ವೇದಾ ಒಂದು ಮಟ್ಟಿಗೆ ಸುಧಾರಿಸಿಕೊಂಡಳು. 

ವೇದಾ ಮತ್ತೆ ಓದಲು ನಿರ್ಧರಿಸಿ, ಅಂತೆಯೇ..PUC  ಗೆ ಸೇರಿದ್ದಳು.
ವೆಂಕಟೇಶ.. ತನ್ನ ಆಫೀಸ್ ನಲ್ಲೇ ತನ್ನ ಸಹದ್ಯೋಗಿಯಾದ.. ವೀಣಾಳನ್ನು, ಮದುವೆಯಾದ.. ವೀಣಾ.. ನಿಜಕ್ಕೂ ವೇದಾಳ ಪಾಲಿಗೆ ದಾರಿದೀಪ. ತಾಯಿ, ಅಕ್ಕ, ಅತ್ತಿಗೆ, ಸ್ನೇಹಿತೆ ಎಲ್ಲವೂ ಆಗಿದ್ದಾಳೆ.


ಈಗ ವೇದಾ.. ತನ್ನ Mcom ಮುಗಿಸಿ ದೊಡ್ಡ  ಮಲ್ಟಿನ್ಯಾಶನಲ್  ಕಂಪನೀ ಯಲ್ಲಿ ದೊಡ್ಡ ಹುದ್ದೆಯಲ್ಲಿದ್ದಾಳೆ. ಮೊದಲಿನ ಮುಗ್ದತೆ ಮುಖದ ಮೇಲೆ ಹಾಗೆ ಇದೆ. ಆದರೆ ಸ್ವಾಬಿಮಾನ ...ಆತ್ಮಸ್ಥೈರ್ಯ , ಸ್ವಾತಂತ್ರ್ಯ,  ಸ್ವಾವಲಂಬಿ ಬದುಕು ಅವಳನ್ನು ತುಂಬಾ ಎತ್ತರಕ್ಕೇರಿಸಿದೆ. ಹಿಂದಿನದೆಲ್ಲ ಅವಳಿಗೆ ನೆನಪೇ ಇಲ್ಲವೆನ್ನುವಷ್ಟು ಬದಲಾಗಿದ್ದಾಳೆ. ಬರುವ ನಾಳೆಗಳನ್ನು ಒಬ್ಬಳೇ ಎದುರಿಸಬಲ್ಲಳು. ಮರುಜನ್ಮ ಕೊಟ್ಟ ಅಣ್ಣಾ ಅತ್ತಿಗೆ ಅವಳ ಪಾಲಿಗೆ ಸರ್ವಸ್ವ... 


ಆದರೆ ಇನ್ನೂ, ಅವಳ ತಂದೆ ಶಂಕರಯ್ಯ ಮತ್ತು ಅಜ್ಜೀ, ಇವರಿಬ್ಬರನ್ನೂ ಕ್ಷಮಿಸಿಲ್ಲ.. ನೋಡಲೂ ಬಂದಿಲ್ಲ. ಇಷ್ಟು ವರ್ಷಗಳಲ್ಲಿ.. ವೇದಾ ತಾಯಿ.. ಮಗಳಿಗಾದ ಅನ್ಯಾಯಕ್ಕೆ, ಮಗನನ್ನು ನೋಡದೆ..ಗಂಡನ ಬಳಿ ತನ್ನ ಆಸೆ ,ಅಭಿಪ್ರಾಯ ವ್ಯಕ್ತಪಡಿಸಲಾಗದೆ    ಕೊರಗಿ,ಕೊರಗಿ ಇಹಲೋಕ ತ್ಯಜಿಸಿದ್ದರು. ಆದರೆ ಶಂಕರಯ್ಯ ಮತ್ತು ಅವರ ತಾಯಿ ಮಾತ್ರ.. ವೇದಾ ಮತ್ತು ವೆಂಕಟೇಶನ ಅಪರಾಧವನ್ನು.....(???) ಕ್ಷಮಿಸಿಲ್ಲ.

Friday, 29 May 2015

ಹೀಗೂ ಒಂದು ಕಾಲೇಜ್ ತಮಾಷೆ....:-)


ನಾನು MBA  ಮಾಡುತ್ತಿದ್ದ ದಿನಗಳು,  POM(production and operations management) ಅನ್ನೋ  ಸಬ್ಜೆಕ್ಟ್ ಇತ್ತು, ಆ ಸುಬ್ಜೆಕ್ಟೇ ಬೋರೋ ಇಲ್ಲ ಆ ಸಬ್ಜೆಕ್ಟ್ ಟೀಚ್ ಮಾಡೋ ಪ್ರೊಫೆಸರ್ ಬೋರ್ ಮಾಡ್‌ಸ್ತಿದ್ದರೋ.. ಗೊತ್ತಿಲ್ಲ, ಆದ್ರೆ ನಿದ್ದೆ ಮಾತ್ರ.. ತುಂಬಾ ಬರೋದು. ಮೊದಲೇ  ಕ್ಲಾಸ್ ನಲ್ಲಿ ಕುಳಿತ್ಕೊಳ್ಳೋದು ಸೆಕೆಂಡ್ ಬೆಂಚ್, ನಿದ್ದೆ ಹೇಗೆ ಮಾಡೋದು...?? ಅದಕ್ಕೆ ಒಂದು ಐಡಿಯಾ ಇತ್ತು ನಮ್ಮತ್ರ... ಅವರು  ಪಾಠ ಮಾಡೋವಾಗ, ಇಂಪಾರ್ಟೆಂಟ್ ಪಾಯಂಟ್ಸ್  ನೋಟ್ ಮಾಡ್ಕೊಳ್ತಿದ್ವಲ್ಲ, ಅದೇ ನೋಟ್ ಬುಕ್ಕಲ್ಲೀ, ಅವರ ಬಗ್ಗೆ ಕಾಮೆಂಟ್ ಬರೆದು ಪಾಸ್ ಮಾಡ್ತಿದ್ವಿ ಪಕ್ಕದೊರಿಗೆ, ಅವರು ಅವರ ಬುಕ್ ನನಗೆ ಕೊಡೋರು... ಅವರಿಂದ  ಅವರ ಪಕ್ಕದೊರಿಗೆ... ಹೀಗೆ..ಫರ್ಸ್ಟ್ ಬೆಂಚ್‌ಗೂ ಸೆಕೆಂಡ್ ಬೆಂಚ್‌ಗೂ ಬುಕ್ ಹರಿದಾಡೋದು.. ಜೊತೆಗೆ... ನಾನು ಬರೆದ ಕಾಮೆಂಟ್ ಗೆ ಅವರ ಕಾಮೆಂಟ್ ಸೇರಿಸುತ್ತಾ ಹೋಗೋರು... ಕೊನೆಗೆ ಆ ನೋಟ್ ಬುಕ್ ನನ್ನ ಹತ್ರ ಬರೋ ಅಷ್ಟೊತ್ತಿಗೆ... ದೊಡ್ಡ ಕತೇನೇ ಆಗಿರ್ತಿತ್ತು... ಮತ್ತೆ ನಾನು ಬರೆದ ಕಾಮೆಂಟ್ ಇಂದ ಕೊನೆಯವರು ಬರೆದ ಕಾಮೆಂಟ್ ಓದುವಷ್ಟರಲ್ಲಿ... ಸಿಕ್ಕಾಪಟ್ಟೆ ನಗು ಬಂದ್ಬಿಡ್ತಿತ್ತು...ಹೇಗೋ ತಡ್ಕೊಂಡು...ಮತ್ತೆ ಪಾಠಧ ಕಡೆ ಕಾನ್ಸೆಂಟ್ರೇಟ್ ಮಾಡ್ತಿದ್ವಿ. ಮತ್ತೆ ಹತ್ತು -ಹದಿನೈದು ನಿಮಿಷ ಆದ್ಮೇಲೆ ನಿದ್ದೆ ಎಳಿತಿತ್ತು..ಮತ್ತೆ ಅದೇ ರೀತಿ ಹೊಸ ಕಾಮೆಂಟ್ ಶುರು. 


ಕಾಮೆಂಟ್ ಏನಾದ್ರೂ ಆಗಿರ್ತಿತ್ತು, ಕೆಲವೊಮ್ಮೆ, ಆ ಪ್ರೊಫೆಸರ್ ನಿಂತಿರೋ ಪೋಸ್ ಬಗ್ಗೆ, ಅವರು pronounce ಮಾಡೋ ಕೆಲ ಪದಗಳ ಬಗ್ಗೆ ಹೀಗೆ ಸುಮಾರು  topics ಇರ್ತ ಇತ್ತು ನಮ್ಮಹತ್ರ..ಫರ್ಸ್ಟ್ two ಬೆಂಚ್ ಸ್ ನಲ್ಲಿ ನಾವು ಆಲ್‌ಮೋಸ್ಟ್ ಎಲ್ಲ ಕನ್ನಡ ಬರ್ತಿದ್ದ ಹುಡುಗಿಯರೇ ಇದ್ದದ್ದು, ಹಾಗಾಗಿ ನಾವು ಕಾಮೆಂಟ್ಸ್ ನಾ ಕನ್ನಡದಲ್ಲೇ ಬರೆದು, ಪಾಸ್ ಮಾಡ್ತ್ ಇದ್ದದ್ದು, ಸೊ ಬೇರೆ ಸ್ಟೇಟ್ ಹುಡುಗಿಯರಿಗೆ ಏನು ಗೊತ್ತಾಗ್ತಾ ಇರಲಿಲ್ಲ. 
ಹಾ... ಹೇಳೋದೇ ಮರೆತಿದ್ದೆ, ಫರ್ಸ್ಟ್ ಬೆಂಚ್‌ನಲ್ಲಿ ಒಬ್ಬ ಕಲ್ಕತ್ತಾ ಹುಡುಗಿ  Ms. ಬ್ಯಾನಾರ್ಜೀ ಕುಳಿತುಕೊಳ್ತ ಇದ್ದಳು, ಕಾಲೇಜ ಗೆ ಸೇರಿದ ಹೊಸದರಲ್ಲಿ, ನಾವು ಅವಳನ್ನು ನೋಡಿ.. ಗ್ಯಾರಂಟೀ ಇದು... ರಾಂಕ್  ಸ್ಟೂಡಂಟ್  ಅಂತ ಅಂದುಕೊಂಡಿದ್ವಿ( ಯಾವಾಗ್ಲೂ,, ಟೆಕ್ಸ್ಟ್ ಬುಕ್ಸ್ ನಲ್ಲೇ ಕಣ್ಣು, ದಪ್ಪ ದಪ್ಪ ಕನ್ನಡಕ ಬೇರೆ, ಯಾರತ್ರಾನೂ ಮಾತಾಡ್ತಾ ಇರಲಿಲ್ಲ, ಫರ್ಸ್ಟ್ ಬೆಂಚ್ ನಲ್ಲಿ ಫರ್ಸ್ಟ್ ಸೀಟ್) ಹೀಗಾಗಿ, ನಾವೂ ಸ್ವಲ್ಪ ಸೀರೀಯಸ್ ಆಗಿ ಇರ್ತಿದ್ವಿ ಅವಳ ಹತ್ರ. ಮತ್ತೆ lecturers ಪಾಠ ಮಾಡುವಾಗ ಅವರು ವಿವರಿಸೋ ಪ್ರತೀ ಪದನೂ... ನೋಟ್ ಬುಕ್ ನಲ್ಲಿ ಬರೆದುಕೊಳ್ಳೋಳು,(ನಾವೂ ಬರೆದು ಕೊಳ್ತಾ ಇದ್ವಿ ಓನ್ಲೀ.. ಇಂಪಾರ್ಟೆಂಟ್ ಪಾಯಂಟ್ಸ್ ಅಷ್ಟೇ.). ನಂತರ ಅವಳ ಬುಕ್  'ಸ್ವಲ್ಪ ಕೊಡು ನೋಡಿ ಕೊಡ್ತೀವಿ ಅಂದ್ರೆ... ಜಪ್ಪಯ್ಯ ಅಂದ್ರು ಕೊಡ್ತಾ ಇರಲಿಲ್ಲ', ಸರಿ ಬಿಟ್ಟಾಕು ಅಂತ ಕೇಳೋದು ಬಿಟ್ಟುಬಿಟ್ವಿ... ನಾವೇನು ಕಮ್ಮಿನಾ... ನಾವು ಚೆನ್ನಾಗಿ ಓದುತ್ತಿದ್ವಿ.. ನಮಗೂ ಈಗೊ ಇತ್ತು ಅಷ್ಟೋ ಇಷ್ಟೋ...:- ) 


ಇದೆಲ್ಲ ಫರ್ಸ್ಟ್ ಸೆಮೆಸ್ಟರ್  ನಲ್ಲಿ ನಡೆದಿದ್ದು. ಫರ್ಸ್ಟ್ ಸೆಮೆಸ್ಟರ್ ರಿಸಲ್ಟ್ ಬಂತು ನೋಡಿ... ನಮಗೆಲ್ಲ ಶಾಕ್... ಯಾಕೆ ಅಂತೀರಾ.... ನಮ್ಮ ರಿಸಲ್ಟ್ ನೋಡಿ... ಯಾಕಂದ್ರೆ... ನಮ್ಮ ಗ್ರೂಪ್ ನಲ್ಲಿ ಎಲ್ಲರೂ ಫರ್ಸ್ಟ್ ಕ್ಲಾಸ್, ನಾನೇ  highest ಗ್ರೂಪ್ ನಲ್ಲಿ (distinction  ಗೆ ಸ್ವಲ್ಪ ಮಾರ್ಕ್ಸ್ ಕಮ್ಮಿ ಆಗಿತ್ತು). ನಾವ್ಯಾರೂ ಇಷ್ಟು ಚೆಂದದ ರಿಸಲ್ಟ್ ಎಕ್ಸ್‌ಪೆಕ್ಟ್ ಮಾಡಿರಲಿಲ್ಲ. ಶಾಕ್ ಆಗಿದ್ದು ಇದಕ್ಕಲ್ಲ ಮಾರಾಯ್ರೆ....! ನಮ್ಮ  Ms. ಬ್ಯಾನಾರ್ಜೀ ಎಲ್ಲಾ ಸಬ್ಜೆಕ್ಟ್ ನಲ್ಲೂ ಫೇಲ್....ಏಳೂ ಸಬ್ಜೆಕ್ಟ್ನಲ್ಲಿ ಅದಕ್ಕೆ ಶಾಕ್... ಯಾರು ಅದರ ಬಗ್ಗೆ ಮಾತಾಡ್ಲಿಲ್ಲ, ಅಣಕಿಸಿಯೂ ಇಲ್ಲ. ಆದ್ರೆ ಪ್ರತಿ ಸಬ್ಜೆಕ್ಟಿಗೂ ಅವಳ ಹತ್ರ ಲೆಕ್ಚರರ್ ರೆಫರ್ ಮಾಡಲು ಹೇಳಿದ ಎಲ್ಲಾ ಟೆಕ್ಸ್ಟ್ ಬುಕ್ಸ್ ಇತ್ತು... ಅದೇ ಆಶ್ಚರ್ಯ... ನನ್ನ ಹತ್ರ ಅಂತೂ ಒಂದು ಟೆಕ್ಸ್ಟ್ ಇರಲಿಲ್ಲ. ನನ್ನ ಪೂರ   MBA ನಾ ನಾನು ಒಂದು ಟೆಕ್ಸ್ಟ್ ಬುಕ್ ತೆಗೆದು ಕೊಳ್ಳದೆ, ಕಾಲೇಜ್ ಗೆ ಟಾಪರ್ ಆಗಿ ಪಾಸ್ ಮಾಡಿದ್ದು  ನನಗೆ ಹೆಮ್ಮೆಯ ವಿಷಯ. 


ಹಾ.. ಹಾ....  ಈಗ ಮೊದಲಿನ ವಿಷಯಕ್ಕೆ ಬರ್ತೇನೆ... ನಾವು ಕಾಮೆಂಟ್ ಬರೆದು ಪಾಸ್ ಮಾಡಲಿಕ್ಕೆ ಶುರು ಮಾಡಿದ್ದು ಸೆಕೆಂಡ್ ಸೆಮೆಸ್ಟರ್ ಇರುವಾಗ,(ನಾವು ಸ್ವಲ್ಪ ಚಿಗುರ್‍ಕೊಂಡಿದ್ವಿ, ಫರ್ಸ್ಟ್ ಸೆಮೆಸ್ಟರ್ ಆದ್ರೆ ಸ್ವಲ್ಪ ಭಯ ಇರುತ್ತೆ  ಅಲ್ವಾ... ಹಾಗಾಗಿ ಆಗ ಕಾಮೆಂಟ್ಸ್ ಪಾಸ್ ಮಾಡ್ತಿರಲಿಲ್ಲ), ಹಂಗಂತ ಎಲ್ಲ ಕ್ಲಾಸ್ ನಲ್ಲೂ ಹೀಗೆ ಮಾಡ್ತಿದ್ವಿ ಅನ್ಕೋಬೇಡಿ... only in POM class. 
ಸರಿ ಸುಮಾರು ದಿನ ಹೀಗೆ ನಡೀತು... ಒಂದು ದಿನ  ಕ್ಲಾಸ್ ತುಂಬಾನೇ ಬೋರಿಂಗ್ ಇತ್ತು.. ನಿದ್ದೆ.. ಅಂದ್ರೆ ನಿದ್ದೆ  ಎಳೀತಾ ಇತ್ತು  ಲಂಚ್ ಪೀರಿಯಡ್ ಆದ ಮೇಲೆ ಮೊದಲನೇ  ಕ್ಲಾಸ್ ಬೇರೆ, ಹೊಟ್ಟೆಯೊಳಗಿನ  ಊಟ ನಮ್ಮೆಲ್ಲರ ಮೇಲೆ ದ್ವೇಷ ತೀರಿಸಿಕೊಳ್ತಾ ಇತ್ತು. ಸರಿ ನಾನೇ ಕಾಮೆಂಟ್ ಬರೆಯಲು ಶುರು ಮಾಡಿದೆ, ಆ ಪ್ರೊಫೆಸರ್ ಯಾವಾಗ್ಲೂ ಸ್ಟೇಜ್ ಮೇಲೆ ನಿಂತು ಪಾಠ ಮಾಡುವಾಗ, ತಮ್ಮ ದೇಹವನ್ನು  ಸ್ವಲ್ಪ ಸೊಟ್ಟಕ್ಕೆ ಇಟ್ಟು ನಿಂತು, ಎಡ ಕೈ ಸೊಂಟದ ಮೇಲೆ ಕೈ ಇಟ್ಟುಕೊಂಡು explain  ಮಾಡೋರು... ನಂಗ್ಯಾಕೋ.. ಅವತ್ತು ಅದು ಥೇಟ್ ಬೇಲೂರು ಶೀಲಾ ಬಾಲಿಕೆ ತರ ಕಾಣಿಸಿಬಿಡ್ತು......:-), ಅದನ್ನೇ ಬರೆದು ಪಾಸ್ ಮಾಡಿದೆ 'ಆಹಾ.. ನೋಡಿರೇ ನಮ್ಮಬೇಲೂರು ಶೀಲಾ ಬಾಲಿಕೆನಾ.. ನೋಡಲು ಎರಡೂ ಕಣ್ಣೂ ಸಾಲ್ತ ಇಲ್ಲ'  ಅಂತ.. ಸರಿ ಪಾಸ್ ಆಯ್ತು ನನ್ನ ನೋಟ್ ಬುಕ್. ನನ್ನ ಪಕ್ಕದಲ್ಲಿದ್ದೋರು ಹೇಗೋ ನಗು ತಡೆದುಕೊಂಡು... ತಮ್ಮ ಕಾಮೆಂಟ್ ನಾ ಬರೆದು ಪಾಸ್ ಮಾಡುದ್ರು.. ಆದ್ರೆ  ಫರ್ಸ್ಟ್ ಬೆಂಚ್ ನಲ್ಲಿದ್ದ ಶರ್ಲೀ(Shirley) ಗೆ ನಗು ತಡೆಯೋಕೆ ಆಗಲಿಲ್ಲ, ಕೈ ಬಾಯಿಗಡ್ಡ ಇತ್ತು ನಕ್ಕೆ ಬಿಟ್ಲು ಸ್ವಲ್ಪ ಜೋರಾಗೇ, ಅವಳ ಕಡೆಯೇ  ನೋಡ್ತಾ ಇದ್ದ ನನ್ನ ಮುಖದ ಮೇಲೂ ಮಂದಹಾಸ, ಕಾಮೆಂಟ್ ಬರೆದ ನನ್ನ ಬಗ್ಗೆಯೇ ಹೆಮ್ಮೆ, ಪ್ರೊಫೆಸರ್ ನನ್ನ ಕಡೆ ನೋಡಿದ್ರು,  "why are you smiling, is there any joke??? ",  ಅಂದ್ರು, ನಾನು ಸ್ವಲ್ಪ ತಡಬಡಾಯ್ಸಿ, "no sir, nothing" ಅಂದೆ, ಅಷ್ಟರಲ್ಲಿ ನನ್ನ ನೋಟ್ ಬುಕ್ ನಾ ಮುಂದಿನ ಬೆಂಚ್ ನಿಂದ ಇನ್ನೊಂದು ಹುಡುಗಿ ಅವಳೆಲ್ಲಿ ಸಿಕ್ಕಿ ಹಾಕಿಕೊ ಬೇಕಾಗುತ್ತೋ ಅನ್ನೋ ಭಯದಲ್ಲಿ  ನನ್ನ ಕೈಲಿ ಕೊಟ್ಳು....:-(   

ಅಷ್ಟೇ , ಪ್ರೊಫೆಸರ್ ಗೆ  ಅರ್ಥ ಆಯ್ತು.. "ho.. your passing comments on me, is this what you do during the class hours" ಅಂದ್ರು... ನಂಗೋ.. ಕಿವಿಎಲ್ಲಾ  ಬಿಸಿ ಆಗೋಯ್ತು ಭಯದಿಂದ, ಅವರೆಲ್ಲಿ ನನ್ನ ನೋಟ್ ಬುಕ್ ಇಸ್ಕೊಂಡು ನೋಡ್ತಾರೋ ಅಂತ, ಸದ್ಯಕ್ಕೆ ಆ ಮಹಾನುಭಾವರು ಸ್ಟೇಜ್ ಇಂದ ಇಳಿದು ಬರಲೇ ಇಲ್ಲ. ನಾನು ಬಚಾವ್, "sorry sir " ಅಂದೆ, ಆವರಿಗೆ ಏನು ಅರ್ಥ ಆಯ್ತೋ... ಇಲ್ಲ ತಮ್ಮ ಕಾಲೇಜ್ ಡೇಸ್ ನೆನಪಾಯ್ತೋ... ಸುಮ್ಮನಾದ್ರು.  


ಯಪ್ಪಾ.... ಅವತ್ತೇ ಲಾಸ್ಟ್... ಅವರ ಕ್ಲಾಸ್ ನಲ್ಲಿ ಕಾಮೆಂಟ್ ಬರೆದು ಪಾಸ್ ಮಾಡೋ ಕೆಲಸಕ್ಕೆ ರಾಜೀನಾಮೆ ಕೊಟ್ಟೆ. ಆದ್ರೂ... ಬೇಲೂರು ಶೀಲಾ ಬಾಲಿಕೆ... ಯಾವಾಗ್ಲೂ... ನೆನಪಾಗುತ್ತೆ... ಆಗೆಲ್ಲ ಆ ಪ್ರೊಫೆಸರ್ ,,, ಆ ಕ್ಲಾಸ್. ಎಲ್ಲಾ ನೆನಪಾಗುತ್ತೆ. ಯಾಕೋ...ಈ  ತಮಾಷೆ ನಾ ನಿಮ್ಮೊಂದಿಗೆ ಹಂಚಿಕೋಬೇಕನ್ನಿಸಿತು  ಪೋಸ್ಟ್ ಮಾಡಿದೆನೆ.... ನಿಮಗೂ... ನಗು ಬಂದ್ರೆ ನಕ್ಕು ಬಿಡಿ... ಮತ್ತೆ ಕಾಮೆಂಟ್ ಮಾಡೋದ್ನ ಮರೀಬೇಡಿ....:-)

Happy weekend everyone....:-) 


Wednesday, 27 May 2015

ಸ್ವಾರ್ಥಿ.....! ಭಾಗ 3


ಸ್ವಾರ್ಥಿ.....! ಭಾಗ 3


 ಮುಂದುವರೆದ ಭಾಗ.....
ಪ್ರಕಾಶಯ್ಯನ ಕಾಟ ತಾಳಲಾರದೆ ಶಿಲ್ಪಾ, ಕೆಲಸಕ್ಕೆ ಸೇರಿದ್ದಳು. ಆಫೀಸ್ನಾ ಕ್ಯಾಬ್ ಫೇಸಿಲಿಟೀ ಇದ್ದರೂ, ಬೇಡ ನಾನೇ ಡ್ರಾಪ್ ಮಾಡ್ತೀನಿ, ನನಗೆ on the way ,ಅಂತ ದಿನಾ ಡ್ರಾಪ್ ಮಾಡಲು ಶುರು ಮಾಡಿದ್ದ ಪ್ರಕಾಶಯ್ಯ, ಆತ 30  ವರ್ಷದಿಂದ two wheeler ಓಡಿಸುತ್ತಿದ್ದರೂ , ಇನ್ನೂ ಸರಿಯಾಗಿ ಬರದು, ನಾಲ್ಕೂವರೆ ಅಡಿಯ ಮನುಷ್ಯ.. ಶಿಲ್ಪಾಳಿಗೆ ಸಾಕು ಸಾಕಾಗಿ ಹೋಗುತ್ತಿತ್ತು, ನಾನೇ ಡ್ರೈವ್ ಮಾಡ್ತೀನಿ ಅಂದ್ರು ಕೇಳದ ಮನುಷ್ಯ.. ದಾರಿಯಲ್ಲಿ ಯಾವುದಾದರೂ ಹುಡುಗಿಯೋ, ಹೆಂಗಸೋ ಕಂಡರಂತೂ ಕೇಳುವುದೇ ಬೇಡ... ದೃಷ್ಟಿ ಆಕಡೆ.  


'ಸರಿ ಹೆಂಡತೀನ ಮೇಲೆ ಕಳಿಸಿದ್ದಾಯ್ತು, ನನ್ನನ್ನೂ ಕಳಿಸಿ ಪುಣ್ಯ ಕಟ್ಟಿಕೊ ತಂದೆ ' ಅನ್ನೋ ಪ್ರಾರ್ಥನೆ ಮಾಡುತ್ತಿದ್ದಳು ಶಿಲ್ಪಾliterally.  ಅಂತೂ ಇಂತೂ ಶಿಲ್ಪ 6 ತಿಂಗಳು ಕೆಲಸ ಮಾಡುವಲ್ಲಿ, ಸುಸ್ತಾಗಿದ್ದಳು, ಮನೆಯಲ್ಲಿ ಕಾಡುವ ಪ್ರಕಾಶಯ್ಯ, ಸಂಜೆ 6 ಕ್ಕೆಲ್ಲಾ ಮನೆಯಲ್ಲಿರಬೇಕು, ಇಲ್ಲ ವಾದರೆ ನೂರಾರು ಕ್ರಾಸ್ ಕ್ವೆಸ್ಚನ್ಸ್. 'ತಾನು ಕಳ್ಳ, ಪರರನ್ನು ನಂಬ' ಅನ್ನೋ ಹಾಗೆ, ಅದೇನು ಸರ್ಕಾರಿ ಆಫೀಸ್ ಕೆಟ್ಟೋಯ್ತೆ, 6 ಕ್ಕೆಲ್ಲಾ ಮನೆಯಲ್ಲಿರಲು... 


ಸೊಸೆ ಇಲ್ಲದಿದ್ದಾಗ, ಕೇಶವನ ಮುಂದೆ, 'ತನ್ನಂಥ ತಂದೆಯೇ ಇಲ್ಲ ನಾನು ನನ್ನ ಜೀವನ ನಾ ಮುಡುಪಾಗಿಟ್ಟಿರೊದೆ ನಿಮಗೋಸ್ಕರ', ಅನ್ನೋ ರೀತಿ build up, brain wash.....ಹೂ...ಕೇಶವನೂ ಸರಿ, ಮೊದಲೇ ಮುಗ್ದ, ತಂದೆ ಹೇಳಿದ್ದಕ್ಕೆಲ್ಲ ಸೈ. ಶಿಲ್ಪಾ ಏನಾದರೂ ಮಾವನ ಬಗ್ಗೆ ಹೇಳಲು ಹೋದರೆ..'ನೀನ್ಯಾಕೆ ಅವರಿಗೆ ಸರಿಯಾಗಿ ಉತ್ತರಿಸೊಲ್ಲ, ಮುಖ ಯಾಕೆ ಒರಟಾಗಿ ಇಟ್ಟುಕೋತಿಯ, ಅವರು ಏನೇ ಇರಲಿ, ನಿನ್ನ ಕರ್ತವ್ಯ ಮಾಡು' ಅನ್ನೋ ಭಾಷಣ ಕೇಳಿ ಕೇಳಿ, ಶಿಲ್ಪ... ರೋಧಿಸಿದ್ದು ಎಷ್ಟೋ ಸಲ. ಗಂಡ ಹೆಂಡಿರ ಮಧ್ಯೆ ಜಗಳ ತಂದಿತ್ತು ತಮಾಷೆ ನೋಡುವುದರಲ್ಲೂ ಎತ್ತಿದ ಕೈ ಪ್ರಕಾಶಯ್ಯ..ನೀವೆಲ್ಲಾದರೂ ಇಂಥ ತಂದೆ ಉರುಫ್ ಮಾವ ನನ್ನು ನೋಡಿದ್ದೀರಾ(ಮಾವ ಇರಬಹುದೇನೋ...ಆದ್ರೆ ತಂದೆ)......??


4 ವರ್ಷಗಳ ಕಾಲ ಸಹಿಸಿದ ಶಿಲ್ಪ, ಹೇಗೋ ಬೇರೆ ಹೋಗಲು ಕೇಶವನನ್ನೂ ಒಪ್ಪಿಸಿದ್ದಾಗಿತ್ತು, ಅಡ್ವಾನ್ಸ್ ಕೂಡ ಕೊಟ್ಟಾಗಿತ್ತು ಹೊಸ ಮನೆಗೆ ಹೋಗಲು, ಲೀಸ್ ಮೇಲೆ . ಶಿಲ್ಪ ತವರು ಮನೆಗೆ ಹೋದಾಗ, ಪ್ರಕಾಶಯ್ಯ , ಕೇಶವನ ತಲೆ ಮತ್ತೆ brain wash ಮಾಡಿದ್ದರು, 'ಲೀಸ್ ದುಡ್ಡನ್ನು ಮನೆ ಬಿಡುವಾಗ ಕೊಡದ್ದಿದ್ದರೆ ಏನು ಮಾಡ್ತೀರಿ....? ಒಂದಲ್ಲ , ಎರೆಡಲ್ಲಾ  ಹತ್ತು ಲಕ್ಷ.. ..!ಹಾಗೆ ಹೀಗೆ....., ಅದೇ ಹತ್ತು ಲಕ್ಷ ನನಗೆ ಕೊಡಿ, ನಾನೆಲ್ಲಾದ್ರೂ ಅಪಾರ್ಟ್ಮೆಂಟ್ ಮೇಲೆ ಇನ್‌ವೆಸ್ಟ್ ಮಾಡ್ತೀನಿ, (ಈ ಮನುಷ್ಯನಿಗೆ ಇರೋದೂ ಕೊಟ್ಟು ಮುಂಡ ಮೊಚ್ಕೊಳ್ಳಬೇಕಾಗಿತ್ತಂತೆ)... ' ಅಂತ ಫುಲ್ ತಲೆಗೆ ಬೆಣ್ಣೆ ತಿಕ್ಕಿದಾನೆ, ಕೇಶವನು ತಿಕ್ಕಿಸಿಕೊಂಡಿದಾನೆ. ತಾಯಿ ಮನೆಯಲ್ಲಿದ್ದ ಶಿಲ್ಪ ಅಳುತ್ತಲೇ ಬಂದಿದ್ದಳು, ಫೋನ್ ಮೂಲಕ ಗಂಡ ಬೇರೆ ಹೋಗುವುದು ಬೇಡವೆಂದಾಗ.  

ಅಂತೂ ಇಂತೂ ... ಗಂಡನನ್ನು ಒಲಿಸಿ...ಓಲಾಡಿ ಹೊಸ ಮನೆಗೆ ಬಂದಿದ್ದಾಗಿತ್ತು.. ಶಿಲ್ಪ... ಏನನ್ನು ಹೆಚ್ಚಿಗೆ ಆ ಮನೆಯಿಂದ ತಂದಿರಲಿಲ್ಲ. ಶಿಲ್ಪಾ ಸ್ವಲ್ಪ ನೆಮ್ಮದಿಯ ಉಸಿರು ಬಿಡುವಂತಗಿತ್ತು.... ಆದರೂ ಬೆಂಬಿಡದ ಪಿಶಾಚಿ ಪ್ರಕಾಶಯ್ಯ, ದಿನ ರಾತ್ರಿ ಉಟಕ್ಕೆ ಹಾಜರ್, ಅದೇ ರಾಗ ಆದೆ ತಾಳ, ಅನ್ನಸಾರ ಲ್ಲಿ ಏನು ಸಿಕ್ಕೊಲ್ಲ, ಚಪಾತಿ  ಜೀರ್ಣ ಆಗೋಲ್ಲ., ಮಣ್ಣು ಮಸಿ.. ಶಿಲ್ಪ ಈಗ ಅದಕ್ಕೆಲ್ಲ ಕೇರ್ ಮಾಡೊಲ್ಲಾ... ತಿಂದರೆ ತಿನ್ನಲಿ ಬಿಟ್ಟರೆ ಬಿಡಲಿ... ಮೈದುನ ಮಾತ್ರ.. ದಿನ ಊಟ ಮಾಡಿಯೇ ಹೋಗ್ತಾನೆ.... ಸದ್ಯಕ್ಕೆ ಅಪ್ಪನೊಂದಿಗೆ ಇದ್ದಾನೆ... ದಿನವೂ ತಂದೆಯ ಬಗ್ಗೆ ದೂರುತ್ತಾನೆ ಅತ್ತಿಗೆಯ ಬಳಿ,'ನನಗಿನ್ನೂ, ಈಗ 26 ವರ್ಷ ಮದುವೆಯಾಗು ಅಂತ ಪ್ರಾಣ ತಿಂತಾರೆ ಅತ್ತಿಗೆ.... ನಾನು ರೂಮ್ ಮಾಡಿಕೊಂಡು  ಹೋಗ್ತೀನಿ ಅಂತ' ಶಿಲ್ಪ ಎಲ್ಲದಕ್ಕೂ ಈಗ ನಿರ್ಲಿಪ್ತೆ.


4 ವರ್ಷದಿಂದ ತನ್ನ ತನವನ್ನೇಕಳೆದುಕೊಂಡಿದ್ದ ಶಿಲ್ಪ.. ಈಗ.. ಮತ್ತೊಮ್ಮೆ ತನ್ನನ್ನು ರೂಪಿಸಿಕೊಳ್ಳುವ ಪ್ರಯತ್ನದಲ್ಲಿದ್ದಾಳೆ. ಅಷ್ಟರಲ್ಲೇ.. ತಾನು ತಾಯಾಗುವ ಸುದ್ದಿ..'ok ... no problem ಇನ್ನೊದು ವರ್ಷ, ತಾಯ್ತನದ ಸವಿ ಸವಿದು... ಕರಿಯರ್ ಬಗ್ಗೆ ಯೋಚಿಸಿದರೆ ಆಯಿತೆಂದು' , ನವಮಾಸಗಳು ಕಳೆದು, ಈಗ ಮುದ್ದಾದ ಮಗುವಿನ ತಾಯಾಗಿದ್ದಾಳೆ.

ನನಗೂ ನಾಮಕರಣದ ಕರೆಯೋಲೆ ಬಂದಿದೆ....ಹೋಗಿ ಬರ್ತೇನೆ.....




ನಿಮ್ಮ ಸಲಹೆ ಅನಿಸಿಕೆಗಳಿಗೆ ಸ್ವಾಗತ.. ಕಾಗುಣಿತ ದೋಷವಿದ್ದಲಿ ದಯೆಇಟ್ಟು ಕ್ಷಮಿಸಿ.

Monday, 25 May 2015

ಸ್ವಾರ್ಥಿ ....! ಭಾಗ 2

 

ಸ್ವಾರ್ಥಿ ....! ಭಾಗ 2 

 ಆದರೆ ಸ್ವಲ್ಪ ದಿನದಲ್ಲೇ ಪ್ರಕಾಶಯ್ಯನ ನಿಜ ರೂಪ ಅನಾವರಣಗೊಂಡಿತ್ತು ಹತ್ತಿರದ ನೆಂಟರ ಮೂಲಕ, ಅದಕ್ಕೆ ಶಿಲ್ಪಾಳಿಗೆ ಬಂದ ಅನುಮಾನವೇ ಕಾರಣ, ಸದಾ ಮೊಬೈಲ್ ನಲ್ಲಿ ಮೆಸೇಜ್ ಹಾಗೂ ಮಾತಾಡುತ್ತಿರುವ ಆ ಮನುಷ್ಯನ ಮೇಲೆ.. ತುಂಬಾನೇ ಅನುಮಾನ ಬಂದಿತ್ತು. ನಂತರ, ಒಮ್ಮೆ ಆತನ ರೂಮಿನ ಮುಂದೆ ಕಸ ಗುಡಿಸುವಾಗ ಒಳಗಿನಿಂದ ಕೇಳಿ ಬಂದ ಮಾತುಗಳು... 'ಇಲ್ಲ ಚಿನ್ನಾ, ಬಂಗಾರ, ನಾನು ಸ್ವಲ್ಪ ಬ್ಯುಸಿ ಇದ್ದೇ ಅದಕ್ಕೆ ಬರೋದಿಕ್ಕೆ ಆಗಲಿಲ್ಲ,  ಇವತ್ತು ರಾತ್ರಿ ಬರ್ತೀನಿ ಬಿಡು... ಏನು ಬೇಕು ಅಂತ ಮೆಸೇಜ್ ಮಾಡು ತಂದು ಕೊಡ್ತೀನಿ, ಲವ್ ಯೂ  ಚಿನ್ನಿ"  ಎಂಬ ಸಂಭಾಷಣೆ ಕೇಳಿ ಬಂದಿತ್ತು, ಆದರೂ ಅದರ ಬಗ್ಗೆ  ಜಾಸ್ತಿ ವಿವರಣೆ ಇಲ್ಲದಿದ್ದರಿಂದ ಸುಮ್ಮನಾಗಿದ್ದಳು. ನಂತರ ಒಮ್ಮೆ ಪ್ರಕಾಶಯ್ಯ ಸ್ನಾನಕ್ಕೆ ಹೋಗಿದ್ದಾಗ ಮೊಬೈಲ್  ಚೆಕ್ ಮಾಡಿದ್ದಳು, ಆಗ ಸಿಕ್ಕಿತ್ತು ಲವ್ ಮೆಸೇಜ್ ಗಳು... ಫೋಟೋಗಳು,. ಆಕೆಯೊಂದಿಗೆ ತೆಗಿಸಿಕೊಂಡ ಹೋಟೆಲ್ ರೂಮಿನ ಫೋಟೋಗಳು... ಇನ್ನೇನು ಬೇಕಿತ್ತು ಸಾಕ್ಷಿಗೆ. ನಂತರ ಆ ಫೋಟೋಗಳನ್ನು ಗಂಡನಿಗೂ ತೋರಿಸಿದ್ದಳು. ಗಂಡನೂ... ಆತನ  ರಾಸಲೀಲೆ ಹೇಳಿದ್ದ,  ಹತ್ತಿರದ ನೆಂಟರಲ್ಲಿ  ಸೂಕ್ಷ್ಮವಾಗಿ ವಿಚಾರಿಸಿದಾಗ  ತಿಳಿದು ಬಂದ ಸುದ್ದಿ ಕೇಳಿ , ಶಿಲ್ಪ ಹೌಹಾರಿದ್ದಳು. 

'ಪ್ರಕಾಶಯ್ಯ, ಹೆಣ್ಣುಗಳ ಕಾಯಲಿ ಮನುಷ್ಯ, ಈಗಲೂ ಇಬ್ಬರು , ಮೂವರು ಗರ್ಲ್‌ಫ್ರೆಂಡ್ ಗಳು ಇದ್ದರು. ತಮ್ಮ ಹೆಂಡತಿ ಇದ್ದಾಗಲೇ, ಮತ್ತೊಬ್ಬ ಮಗಳ ವಯಸ್ಸಿನ ಹುಡುಗಿಯನ್ನು ಹೆಂಡತಿಯ ಮುಂದೆಯೇ ಮದುವೆಯಾಗಿ ಕರೆತಂದಿದ್ದರು ( ಕೇಶವ ಮತ್ತು  ಮೈದುನ, ತಮ್ಮ 17ನೇ ವಯಸ್ಸಿನಿಂದಲೇ , ಬೇರೆ ಇದ್ದರು ಓದುವ ಹಾಗೂ ಕೆಲಸದ ಸಲುವಾಗಿ). 


ನಂತರ, ಮಕ್ಕಳಲ್ಲಿ ಹೇಳಿ ಕೊಂಡಿದ್ದು,' ಆ ಹುಡುಗಿಗೆ ಯಾರು ಇಲ್ಲ ಹಾಗಾಗಿ ಮನೆಯಲ್ಲಿ ನಿಮ್ಮ ತಾಯಿಗೆ ಸಹಾಯವಾಗಲಿ ಅಂತ ತಂದಿಟ್ಟುಕೊಂಡಿರುವುದಾಗಿ ಕಥೆ ಕಟ್ಟಿದ್ದರು'. ಕೇಶವನ ತಾಯಿಯೂ ಮಕ್ಕಳ ಬಳಿ ಹೇಳಿರಲಿಲ್ಲ, ಪ್ರಕಾಶಯ್ಯ, ಆಕೆಯನ್ನು ಮಕ್ಕಳಲ್ಲಿ ಒಂಟಿಯಾಗಿ ಮಾತಾಡಲು ಬಿಟ್ಟರೆ ತಾನೇ....!.
ಕೆಲ ದಿನಗಳ ನಂತರ, ಚಿಕ್ಕ ಹೆಂಡತಿಯ ಮೋಹಕ್ಕೆ ಒಳಗಾದ ಪ್ರಕಾಶಯ್ಯ, ಹೆಂಡತಿಯನ್ನು ಬಲವಂತ ಮಾಡಿ ರಾತ್ರಿ 12 ಗಂಟೆಯಲ್ಲಿ, ಕೆಲಸವಿದೆ, ನಮ್ಮ ಆಫೀಸ್ quatrous ಗೆ ಹೋಗ ಬೇಕೆಂದು ಕರೆದುಕೊಂಡು ಹೋಗಿದ್ದರು, ಅದರ ಹಿಂದಿದ್ದ ಉದ್ದೇಶ ದೇವರಿಗೆ ಗೊತ್ತು... ಹೋಗುವ ರಸ್ತೆಯಲ್ಲಿ... ಆಕ್ಸಿಡೆಂಟ್ ನಲ್ಲಿ, ಅವರ ಪತ್ನಿ ಸ್ಥಳದಲ್ಲೇ ಆಸು ನೀಗಿದ್ದರೆ, ಈ ಮನುಷ್ಯ ಮಾತ್ರ ಏನೂ ಆಗದೆ, ಗುಂಡು ಕಲ್ಲಿನ ಹಾಗೆ ಪಾರಾಗಿದ್ದರು ಕಾಲಿಗೆ ಫ್ರ್ಯಾಕ್ಚರ್ ಆಗಿತ್ತಷ್ಟೆ. ಆದರೆ, ಇಂದಿಗೂ ಆ ಆಕ್ಸಿಡೆಂಟ್ ಒಂದು.. ಅನುಮಾನಾಸ್ಪದ ವಿಷಯವೇ ಎಲ್ಲರಿಗೂ. 


ತಾಯಿಯ ಸಾವಿನ ನಂತರವೇ ಮಕ್ಕಳಿಗೆ ತಿಳಿದದ್ದು, ತಮ್ಮ ಅಪ್ಪನ ರಾಸ ಲೀಲೆ..!, ಮಕ್ಕಳಿಬ್ಬರೂ ಏನು ಹೇಳಿರಲಿಲ್ಲ... ಹೇಳುವುದಾದರೂ ಏನು... ಕೇಳಿದರೆ, 'ನಿಮ್ಮ ಅಮ್ಮನಿಗೇ ಏನೂ ಅಭ್ಯಂತರ ವಿರಲಿಲ್ಲ'  ಎಂದಿದ್ದನಂತೆ. ಯಾವ ಹೆಣ್ಣೆ ಆಗಲಿ, ತನ್ನ ಮುಂದೆಯೇ, ಇನ್ನೊಬ್ಬ ಹೆಣ್ಣನ್ನು ಮದುವೆಯಾಗುವುದು ಸಹಿಸಿಯಾಳೇ, ಸಂಸಾರ ಮಾಡುವುದನ್ನು ಪ್ರೋತ್ಸಾಹಿಸಿಯಾಳೇ.....??. ಪ್ರಕಾಶಯ್ಯನ ಕಾಮುಕ ,ಅಸಭ್ಯ ಕಾಟ ತಾಳಲಾರದೆ ಒಪ್ಪಿರಬೇಕಷ್ಟೆ. ಶಿಲ್ಪಾಲಿಗೆ, ಮದುವೆಯಾದ ಹೊಸದರಲ್ಲಿ ಆತನ ರೂಮ್ ಕ್ಲೀನ್ ಮಾಡುವಾಗ ದೊರೆತ ಕಾಮಸೂತ್ರ ಬುಕ್ಸ್, ಮತ್ತಷ್ಟು ಅದೇ ರೀತಿಯ ಬುಕ್ಸ್ ದೊರೆತದ್ದೇ ಸಾಕ್ಷಿ,
ಮತ್ತೆ ಚಿಕ್ಕ ಹೆಂಡತಿಯ ಮಾತು ಕೇಳಿ ಇದ್ದ ಮನೆ ಮಾರಿದ್ದು ಆಯಿತು, ಮಕ್ಕಳು ಒಂದೂ ಮಾತು ಕೇಳದೆ ಹೋಗಿ ಸೈನ್ ಮಾಡಿ ಬಂದಿದ್ದರು(ನನಗನಿಸುವುದು... ಇಂಥ ಮಕ್ಕಳೂ ಇರುವರೆ... ಅಂತ....! ಅವರ ಮೇಲೆ ಶಿಲ್ಪಾಳಿಗೆ ಹೇಳಿದ ದೂರಿಗೆ ಲ್ಲೆಕ್ಕವಿಲ್ಲ). ಬಂದ 50 ಲಕ್ಷದಲ್ಲಿ, ಒಂದು ಪೈಸೆಯೂ ಉಳಿದಿಲ್ಲ , ಚಿಕ್ಕ ಹೆಂಡತಿ ಎಲ್ಲವನ್ನೂ ಬಾಚಿಕೊಂಡು... ಟೋಪಿ ಹಾಕಿ ಪರಾರಿಯಾಗಿದ್ದು ಆಯ್ತು.... ಇಷ್ಟು ದಿನ ಅವಳಿದ್ದಳು.
ಸೊಸೆ ಯಾಕೆ ಬೇಕಾಯಿತೆಂದರೆ.. ಮನೆಯಲ್ಲಿ ಕೂಳು ಹಾಕಲು ಯಾರೂ ಇರಲಿಲ್ಲ.. ಮತ್ತು ನೆಂಟರ ಮುಂದೆಲ್ಲ ಮಾನ ಮೂರು ಕಾಸಿಗೆ ಹರಾಜಾಗಿತ್ತು. ಮಕ್ಕಳನ್ನು  ಹೋಗಿ ಗೋಗರೆದು... ಹೇಗೂ. ಮದುವೆಯೂ ಮಾಡಿಸಿದ್ದಾಯ್ತು... ಅಣ್ಣನ  ಮಾತಿಗೆ ಬೆಲೆ ಕೊಟ್ಟು ಮೈದುನ ಬಂದುಜೊತೆಯಲ್ಲಿ ಇರಲಾರಂಬಿಸಿದ್ದ.ಆದರೆ ಅವನಿಗೆ ತಂದೆಯ ಬಗ್ಗೆ ಒಂದಿನಿತೂ ಗೌರವ ಉಳಿದಿರಲಿಲ್ಲ.ಅತ್ತಿಗೆಯನ್ನು ಗೌರವಿಸುತ್ತಿದ್ದ.


ಕೇಶವನೇ, ತನ್ನ ಕರ್ತವ್ಯ ಎಂದು.. ತಂದೆಯನ್ನು ನೋಡಿಕೊಳ್ಳುತ್ತಿದ್ದ. ಆದರೆ ಆತನಿಲ್ಲದಿದ್ದಾಗ, ಸೊಸೆಯ ಮುಂದೆ ತನ್ನ ಬಾಲ ಬಿಚ್ಚಿ, ಅವಳನ್ನು ಗೋಳು ಹೊಯ್ದುಕೊಳ್ಳುತ್ತಿದ್ದ ಈ ಪ್ರಕಾಶಯ್ಯ.


ಇನ್ನೂ ಇದೆ.. ......
ನಿಮ್ಮ ಅನಿಸಿಕೆಗಳನ್ನು ದಯವಿಟ್ಟು ಬರೆಯಿರಿ... ಕಾಗುಣಿತ ದೋಷಗಳನ್ನು ತಿದ್ದುವ  ಪ್ರಯತ್ನ ಮಾಡುತ್ತಲೇ ಇದ್ದೇನೆ. ದೋಷಗಳು ಕಂಡಬಂದಲ್ಲಿ ಮನ್ನಿಸಿ 

Monday, 18 May 2015


ಸ್ವಾರ್ಥಿ......! ಭಾಗ 1


"ನಿಮ್ಮ ಮದುವೆಗೆ 18 ಲಕ್ಷ ಖರ್ಚಾಯ್ತು ಎಲ್ಲ ಸೇರಿ..., ಆದ್ರೆ ನೀನೇನು ತಲೆ ಕೆಡಿಸಿಕೋಬೇಡ, ನಾನು ನನ್ನ ಪೆನ್ಷನ್ ಮೇಲೆ ಸಾಲ ತಗೊಂಡಿರೋದು, ಆದ್ರೆ ಪೆನ್ಷನ್ ನಲ್ಲಿ ಒಂದೂ ಪೈಸೆ ಉಳಿಯೋಲ್ಲ ಅಷ್ಟೇ.." ಎಂದ ಮಾವನತ್ತ (ಗಂಡನ ತಂದೆ) ಬೆರಗಿನಿಂದ ನೋಡಿದಳು ಶಿಲ್ಪ, ಇನ್ನೂ ಮದುವೆಗಚ್ಚಿದ ಮೆಹಂದಿ ಅಳಿಸಿರಲಿಲ್ಲ ಕೈಗಳಲ್ಲಿ, ಹರಿಶಿಣದ ಛಾಯೆ ಮುಖದಲ್ಲಿ. 'ಏನು ದೇವಸ್ಥಾನದಲ್ಲಿ ಮದುವೆ ಮಾಡಿಕೊಂಡದಕ್ಕೆ , ನನಗೆ 5 ರೇಶಿಮೆ ಸೀರೆ ಒಂದು ಮಾಂಗಲ್ಯ ಚೈನ್ ಮಾಡಿಸದ್ದಕ್ಕೆ 18 ಲಕ್ಷದ ಲೆಕ್ಕ' ಹೇಳುತ್ತಿದ್ದರಲ್ಲಾ ಎಂದು ಗಾಬರಿಗೊಂಡ ಮುಖದಿಂದ ಮಾವನ ಕಡೆ ನೋಡಿದಳು, ಗಿಡ್ಡನೆಯ., ಸೊಟ್ಟ ಮೂಗಿನ..ಗೆಡ್ಡೆ ಕಣ್ಣಿನ ಪರಮೇಶಯ್ಯ, ದೊಡ್ಡನೆ ಕಪ್ಪಿನಲ್ಲಿದ್ದ  ಕಾಫಿ ಸೊರ ಸೊರ ಹೀರುವುದರಲ್ಲಿ ಮಗ್ನರಾಗಿದ್ದರು.


ಮದುವೆಯಾದದ್ದಗಲಾಯ್ತು, ಯಾಕೋ ಈ ಮನುಷ್ಯನ ನಡತೆಯಲ್ಲಿನ ಬದಲಾವಣೆ ಎತ್ತಿ ತೋರುತ್ತಿತ್ತು, ಮದುವೆಯಾಗುವವರೆಗೂ, ತನ್ನಂಥ ಒಳ್ಳೆಯವನೇ ಇಲ್ಲ, ನಾನು ನನ್ನ ಜೀವನಾನ ಮುಡುಪಾಗಿಟ್ಟಿರೋದೇ ನನ್ನ ಇಬ್ಬರು ಮಕ್ಕಳಿಗೆ ಅಂತ ಪಾಡುತ್ತಿದ್ದ ಮನುಷ್ಯ ಈಗ, ನಾನು ನನ್ನಿಂದಲೇ ಮನೆ ನಡಿಯುತ್ತಿರೋದು, 'ನಿನ್ನ ಗಂಡ ಮದುವೆಗೆ ಮೊದಲು ಇಷ್ಟು ಕಾಟ ಕೊಟ್ಟ, ನಿನ್ನ ಮೈದುನ ಇಷ್ಟು ಕಾಡಿದ. ಅವರಿಗಾಗಿ ಇಷ್ಟು ಖರ್ಚುಮಾಡಿದ್ದೇನೆ ಇದುವರೆಗೂ' ಅಂತ, ತಾನು ಬರೆದಿದ್ದ ಚೀಟಿ ತೋರಿಸೋದು,

"ನಿನ್ನ ಗಂಡ, ಮದುವೆಗೆ ಮೊದಲು, ತನ್ನ ಸೋಶಿಯಲ್ habits ಬಗ್ಗೆ ಹೇಳಿದಾನ" ಎಂದ ಮಾವನತ್ತ ಮತ್ತೊಮ್ಮೆ ಬೆಚ್ಚಿ ನೋಡಿದಳು, "ಯಾವದರ ಬಗ್ಗೆ ಹೇಳ್ತಿದೀರಾ?" ಎಂದು ಗೊತ್ತಿದ್ದೂ ಎಂದಳು, "ಏನು ಇಲ್ಲ ಬಿಡು", ಎಂದು ಮತ್ತೆ ಪೇಪರ್‌ನಲ್ಲಿ ಮುಖ ಹುದುಗಿಸಿದ ಮಾವನತ್ತ, ನಿಜಕ್ಕೂ ಭಯದಿಂದ ನೋಡಿದಳು.(ನಿಜಕ್ಕೂ, ಗಂಡ ಮದುವೆಗೆ ಮೊದಲು ಫೋನ್ ಮಾಡಿ ಹೇಳಿದ್ದ, ತಾನು ಸ್ಮೋಕ್ ಮಾಡುವುದಾಗಿ) ಆದರೆ, ಇಲ್ಲಿ ಅದನ್ನು ಮುಚ್ಚಿಟ್ಟು ಮತ್ತೆ ಸೋಗಿನ ಮುಖ ತೋರಿದ ಮಾವನತ್ತ ಸಿಟ್ಟೇರಿತು.


"ನೀನು, ಕೇಶವನಿಗೆ ಫೋನ್ ಮಾಡಿ ಅವನನ್ನ ಒಲಿಸಿಕೊ, ಅವನಿಗೆ ಫೋನ್ ಮಾಡು ನಿನ್ನ ಹೆಸರು ಜಪ ಮಾಡುವಷ್ಟು ಅವನಿಗೆ ನಿನ್ನ ಹುಚ್ಚು ಹಿಡಿಸು" ಈ  ರೀತಿಯ ಮಾತುಗಳನ್ನಾಡಲು ದಿನಕ್ಕೆ ನಾಲ್ಕೈದು ಸಲ ಫೋನ್ ಮಾಡಿ ತಲೆ ತಿನ್ನುತ್ತಿದ್ದ ಪ್ರಕಾಶಯ್ಯ. ಆಗೆಲ್ಲ ಶಿಲ್ಪಾಲಿಗೆ, ತಲೆ ಕೆಡುತ್ತಿತ್ತು, ಪರಿಚಯದವರ ಮೂಲಕ ಬಂದ ಸಂಭಂಧವಿದು, ಮನೆಯವರಿಗೆಲ್ಲ ಇಷ್ಟವಾಗಿದ್ದು ಒಂದೇ ಕಾರಣಕ್ಕೆ, ಅತ್ತೆ ಇಲ್ಲದ ಮನೆ,  ಮಗಳು ಸುಖ ವಾಗಿದ್ದಾಳೆಂದು, ಜೊತೆಗೆ  ಪ್ರಕಾಶಯ್ಯನ ಬಣ್ಣದ ಮಾತುಗಳು...! 'ಸ್ವಂತ ಮನೆ ಇತ್ತು, ಆದರೆ  ಹೆಂಡತಿ ಅಪಘಾತ ಒಂದರಲ್ಲಿ ತೀರಿಕೊಂಡಿದ್ದರಿಂದ, ತನಗೆ ಆ ಮನೆಯಲ್ಲಿ ಇರಲು ಇಷ್ಟ ವಾಗದೆ ಮಾರಿದ್ದೇ 50 ಲಕ್ಷ ಕ್ಕೆ, ನನಗೆ ಇನ್ನೂ 3 ವರ್ಷ ಸರ್ವಿಸ್ ಇದೆ, ತಿಂಗಳಿಗೆ ಅರವತ್ತು ಸಾವಿರ ಸಂಬಳ, ರಿಟೈರ್ಮೆಂಟ್ ನಲ್ಲಿ, 20 ಲಕ್ಷ  ವರೆಗೂ ಬರುತ್ತೆ ವಗೈರ ವಗೈರ....' ಮದ್ಯಮ ವರ್ಗದ ಕುಟುಂಬದವರಾದ ಶಿಲ್ಪ ರ ತಂದೆ ತಾಯಿಗೆ , ಮಗಳು ಸುಖವಾಗಿದ್ದಾಳೆಂದು ಅನಿಸಿದ್ದರಲ್ಲಿತಪ್ಪಿಲ್ಲ. ಆದರೆ ಮಗನನ್ನು ಕರೆದುಕೊಂಡು ಬಾರದೆ ಇಷ್ಟು ವರಾತ ತೆಗೆದಿದ್ದ  ಪ್ರಕಾಶಯ್ಯ. (ನಂತರ ತಿಳಿದು ಬಂದಿದ್ದು ಅವರ ಮಗ ಕೇಶವನಿಗೆ, ಮದುವೆಯೇ ಇಷ್ಟವಿರಲಿಲ್ಲ, ಈ ಮನುಷ್ಯ ಮಾತ್ರ ಶಿಲ್ಪಾಳಿಗೆ ಬೆಂಬಿಡದ ಬೇತಾಳನ ಹಾಗೆ ಜೋತು ಬಿದ್ದಿದ್ದ).


ಸಂಪ್ರದಾಯಸ್ಥ ಕುಟುಂಬದಲ್ಲಿ ಬೆಳೆದ ಶಿಲ್ಪ, ಪ್ರಕಾಶಯ್ಯನಿಗೆ ಒರಟಾಗಿ ಉತ್ತರಿಸಬೇಕೆಂದು ಬಾಯಿಗೆ ಬರುತ್ತಿದ್ದ ಮಾತುಗಳನ್ನು ತಡೆ ಹಿಡಿದ್ದಿದ್ದಳು ಹಿರಿಯರೆಂಬ ಗೌರವದಿಂದ, ಆದರೆ ಯಾವಾಗ, ಕಾಟ ತಡೆಯದವಾಳಾದಳೋ ಹೇಳಿದ್ದಳು,"ನಿಮ್ಮ ಮಗನಿಗೆ ಮದುವೆಯಾಗಲು ಇಷ್ಟ ವಿಲ್ಲದ ಮೇಲೆ, ನನ್ನ ಪ್ರಾಣ ಯಾಕೆ ತೆಗೀತಿರಿ, ನನ್ನ ಮದುವೆಯ ಬಗ್ಗೆ ತಲೆ ಕೆಡಿಸಿ ಕೊಳ್ಳಲು ನನ್ನ ತಂದೆ ತಾಯಿ ಇದ್ದಾರೆ, ತಾವು ದಯವಿಟ್ಟು ನನಗೆ ಫೋನ್ ಮಾಡ್ಬೇಡಿ "ಎಂದು ಉಗಿದ ಮೇಲೆ ಸುಮ್ಮನಾಗಿದ್ದರು.


ಮನೆಯವರೆಲ್ಲ ಈ ಸಂಭಂದದ ಬಗ್ಗೆ ನಿರ್ಲಕ್ಷ ತಳೆದು 4 ತಿಂಗಳೇ ಕಳೆದು ಹೋಗಿತ್ತು, ಧಿಡೀರೆಂದು ಶಿಲ್ಪಳ ಮೊಬೈಲಿಗೆ ಕೇಶವನಿಂದ ಮೀಟ್ ಮಾಡಬೇಕೆಂದು ಮೆಸೇಜ್ ಬಂದಾಗ, ಮೊದಲಿಗೆ ಸುಮ್ಮನಾಗಿದ್ದಳು, ನಂತರ ಕಾಲ್ ಮಾಡಿಯೂ ಮೀಟ್ ಮಾಡುವ ಬಗ್ಗೆ ಕೇಳಿದಾಗ, ತಂದೆ ತಾಯನ್ನು ಕೇಳಿ ಹೇಳುವುದಾಗಿ ಹೇಳಿ, ತಾಯಿಂದ ಅಪ್ಪಣೆ ಪಡೆದು ಮೀಟ್ ಮಾಡಿದ್ದಳು ಕೆಫೇ ಕಾಫೀ ಡೇ ನಲ್ಲಿ, ಕೇಶವ ಅಪ್ಪನಂತೆ ವಿಲಕ್ಷನವಾಗಿರದೆ, ಹ್ಯಾಂಡ್‌ಸಮ್ ಆಗಿದ್ದ, 5'8 ಇಂಚಿನ ಕೇಶವ ಸುಂದರ, ಸುಶೀಲ, ಸಂಭಾವಿತ, "ನನಗೆ ಮದುವೆಯಾಗಲು ಇಷ್ಟವಿರಲಿಲ್ಲ, ಆದ್ರೂ ತಂದೆ ಒತ್ತಾಯದಿಂದ ಮಾಡಿದ ಫಜೀತಿಯ ಬಗ್ಗೆ ಸಾರೀ ಕೇಳಿದ, ನಂತರ 4 ತಿಂಗಳ ನಂತರವೂ, ಮದುವೆಯ ಸುದ್ದಿ ಬಂದಾಗ, ಕಣ್ಣ ಮುಂದೆ ತೇಲಿದ್ದು ನಿಮ್ಮ ಮುಖ, ಯಾಕೋ ನೀವೇ ಲೈಫ್ ಪಾರ್ಟ್ನರ್ ಆದ್ರೆ ಚೆನ್ನ ಅನ್ನಿಸಿತು" ಎಂದು ಸರಳವಾಗಿ ಮಾತಾಡಿದವ, ಶಿಲ್ಪಳ ಮನಸನ್ನುಕದ್ದಿದ್ದ. ಜಾತಕಗಳ ಒಂದಾಣಿಕೆ, ಮನೆಯವರ ಒಪ್ಪಿಗೆ, ಹದಿನೈದೇ ದಿನದಲ್ಲಿ ಮದುವೆ ಕೂಡ ಆಗಿಹೋಗಿತ್ತು.


ದೇವಸ್ಥಾನದಲ್ಲಿ ಮದುವೆಯನ್ನು ನಾವೇ ಮಾಡಿಕೊಳ್ಳುವುದಾಗಿ ಒತ್ತಿ ಒತ್ತಿ ಹೇಳಿದ ಪ್ರಕಾಶಯ್ಯ, ರಿಸೆಪ್ಶನ್ ಮಾತ್ರ ಹೆಸರಾಂತ ಪಾರ್ಟೀ ಹಾಲಿನಲ್ಲಿ ಶಿಲ್ಪಳ ತಂದೆಯೇ ಮಾಡಿ ಕೊಟ್ಟಿದ್ದರು.ಬಂದವರೆಲ್ಲ ಮೆಚ್ಚಿದ್ದರು ದಂಪತಿಗಳ ಜೋಡಿಯನ್ನು, ಮತ್ತು ರಿಸೆಪ್ಶನ್ ನಾ. ಹೀಗಿರುವಾಗ, ಮದುವೆಗೆ 18 ಲಕ್ಷ ಖರ್ಚಾಯ್ತು ಎಂದ ಪ್ರಕಾಶಯ್ಯನ ಬಗ್ಗೆ ಶಿಲ್ಪ ಭಯಗೊಂಡಿದ್ದರಲ್ಲಿ ತಪ್ಪೇನಿರಲಿಲ್ಲ,


ಮದುವೆಯ ನಂತರ ನಿಜವಾದ ಬಣ್ಣ ತೋರಿಸ ತೊಡಗಿದ್ದ ಪ್ರಕಾಶಯ್ಯ, ಬೆಳಗ್ಗೆ ತಿಂಡಿಗೆ ಅನ್ನ್ನದ ಐಟಮ್ ಬೇಡ, ಬರೀ ದೋಸೆ, ಇಡ್ಲಿ, ಚಪಾತಿ ಗಳೇ ಆಗಬೇಕು. ರಾತ್ರಿ ಅನ್ನಸಾರು ಮುದ್ದೆ  ಮಾಡಿದ್ದರೆ, ಅನ್ನ ಸಾರಿನಲ್ಲಿ ಏನು ಸಿಗುತ್ತೆ ಅಂತ, ಚಪಾತಿ ಪಲ್ಯ ಮಾಡಿದ್ದರೆ ಜೀರ್ಣ ಆಗೋಲ್ಲ ಎಂದು ಊಟವೇ ಮಾಡುತ್ತಿರಲಿಲ್ಲ, ಆಗೆಲ್ಲಾ ಶಿಲ್ಪ ಏನು ಮಾಡಬೇಕೆಂದು ಅರ್ಥವಾಗದೆ ಧುಖಿಸಿದ್ದಳು.ಗಂಡನ ಬಳಿ ತೋಡಿಕೊಂಡಾಗ "ಅವರಿಗೆ ಚೆನ್ನಾಗಿ ನಾಲಿಗೆಚಪಲ, ಹೋಟೆಲ್ ಊಟದ ಹುಚ್ಚು ಚೆನ್ನಾಗೇ ಹೊರಗೆ ತಿಂದು ಬಂದಿರ್ತಾರೆ, ನೀನೇನು ತಲೆ ಕೆಡಿಸಿಕೊಳ್ಳಬೇಡ, ನಿನಗೆ ಏನು ಬೇಕೋ ಅದೇ ಅಡುಗೆ ಮಾಡು"ಎಂದಿದ್ದ.


"ನನ್ನ ಹೆಂಡತಿ ಮಾಡಿದಾಗೆ ಯಾರಿಗೂ ಅಡಿಗೆ ಮಾಡಲು ಬರಲ್ಲ, ಎಲ್ಲಾ ತರದ ಅಡುಗೆ ಮಾಡೋಳು" ಎಂಬ ಮಾತು ಪ್ರತಿ ಬಾರಿ ಊಟ ಮಾಡುವಾಗಲೂ ಕೇಳಿ ಕೇಳಿ, ಶಿಲ್ಪಾಳಿಗೆ ಸಾಕಾಗಿ ಹೋಗಿತ್ತು. ತಾನು MBA  ಮಾಡಿ, ಒಂದು ದೊಡ್ಡ ಕೊಂಪನಿ ಯಲ್ಲಿ ಮ್ಯಾನೇಜರ್ ಆಗಿ ದುಡೀತಿದ್ದೋಳು, ಈಗ, ಆ ಕಂಪನಿ ದೂರ ಅಂತ, ಬಿಟ್ಟು ಹತ್ತಿರದಲ್ಲೇ ಕೆಲಸ ಹುಡುಕುತ್ತಿದ್ದಳು, ಶಿಲ್ಪಾ ಅಡುಗೆ ಮಾಡೋದರಲ್ಲಿ ಅಚ್ಚುಕಟ್ಟು, ರುಚಿ ಶುಚಿಯಲ್ಲಿ ಎರಡು ಮಾತಿಲ್ಲ, ಅಂತದ್ರಲ್ಲಿ  ಈ ಮನುಷ್ಯ ನಡೆಸೋ.. ದಬ್ಬಾಳಿಕೆ ನೋಡಿ ರೋಸಿಹೋಗುತ್ತಿದ್ದಳು.



ಇನ್ನೂ ಇದೆ ... ಭಾಗ 2   ನೀರಿಕ್ಷಿಸಿ

Saturday, 16 May 2015

ಓ ನೆನಪೇ.....


ಓ ನೆನಪೇ ನೀನೆಷ್ಟು ಸುಂದರ
ನೀ ಬರುವ ಆ ಘಳಿಗೆ ಅದೆಷ್ಟು ಮಧುರ
ನನ್ನಲ್ಲಿರುವ ನೀನು ಎಂದೆಂದಿಗೂ ಅಮರ.


ನೆನಪೇ ನೀ ಆಗಿರಬಹುದು ಕೆಲವರಿಗೆ
ಕಾಡುವ ಬೆಂಬಿಡದ ರಕ್ಕಸ
ನನಗೆ ಮಾತ್ರ ನೀ ಬರಲೇ ಬೇಕು ದಿನಕ್ಕೊಮ್ಮೆ
ಬಂದರೆ ತಂದೇ ತರುವೆ ಮರೆಯದೆ ಸಂತಸ.


ಆಗಿರಬಹುದು, ನೀ ಕೆಲವರ
ಪ್ರಾಣ ಹರಣಕ್ಕೆ ಕಾರಣ,
ಅಂತೆಯೇ ನಾ ಜೀವಂತವಿರುವುದಕ್ಕೂ
ಪರೋಕ್ಷವಾಗಿ ನೀನೇ ಕಾರಣ.


ನನ್ನೀ ಒಂಟಿ ಜೀವನದಲಿ
ಬಂದು ತೋರಿದೆ ನೀ ಆತ್ಮೀಯ ಅನುಭೂತಿ
ನೆನಪೇ, ನೀ ಅಂತೆಯೇ
ಕಲಿಸಿಕೊಟ್ಟೆ ಜೀವನದ ರೀತಿ-ನೀತಿ.


Wednesday, 13 May 2015

ಪ್ರಥಮ...???

"ಸೆಕೆಂಡ್ ಪೀ ಯು ಸೀ ರಿಸಲ್ಟ್ ಬಂದಿದೆ, ನೋಡೋಕ್ ಬರ್ತೀಯಾ" ಅಂತ ಫೋನ್ ಮಾಡಿದ್ದ ಗೆಳತಿಗೆ, "ಇಲ್ಲ ವಸಂತ, ನನ್ನ ತಮ್ಮ ಬೆಳಿಗ್ಗೇನೇ ಇಂಟರ್‌ನೆಟ್ ನಲ್ಲಿ ಚೆಕ್ ಮಾಡಿದಾನೆ, ನನ್ ಮಾರ್ಕ್ಸೆಲ್ಲ ಗೊತ್ತಾಗಿದೆ. ನೀನು ಹೋಗಿ ನೋಡಿಕೊಂಡು ಬಾ" ಎಂದೆಳೆ ಫೋನಿಟ್ಟೆ. 


ಕಾಲೇಜ್ ಗೆ ಸೆಕೆಂಡ್ ಹೈಯೆಸ್ಟ್, ಮಾರ್ಕ್ಸ್ ಸ್ಕೋರ್ ಮಾಡಿದ್ದರು ಯಾಕೋ.... ಎಂಜಾಯ್ ಮಾಡುವ ಸ್ತಿತಿಯಲ್ಲಿರಲಿಲ್ಲ.    ಥರ್ಡ್ ಕ್ಲಾಸ್ ನಲ್ಲಿ ಪಾಸ್ ಮಾಡಿದ್ದಾಗ ಮಾತಾಡಿಸದೆ ಇದ್ದ ಅಣ್ಣಾ (ಅಪ್ಪ), ಈಗ ತುಂಬಾನೇ ಖುಷಿಯಾಗಿದ್ರು.ಅಮ್ಮ ಅಕ್ಕ ಪಕ್ಕಾದೋರಿಗೆಲ್ಲ ಹೇಳಿ ಬಂದಿದ್ರು... ಆದ್ರೂ ಮನ ಅರಳಲೆ ಇಲ್ಲ.


ನಾನು..ಓದೋದ್ರಲ್ಲಿ ಫರ್ಸ್ಟ್ ರಾಂಕ್ ಸ್ಟೂಡೆಂಟ್ ಅಲ್ಲದಿದ್ರು.. ದಡ್ಡಿ ಅಂತೂ ಇಲ್ಲ. ಫರ್ಸ್ಟ್ ಕ್ಲಾಸ್ ಬರ್ತಾಳೆಅಂತ ಇದ್ದ ಅಣ್ಣನಿಗೆ, ನಾನು ಥರ್ಡ್ ಕ್ಲಾಸ್ ನಲ್ಲಿ sslc ಪಾಸ್ ಮಾಡ್ದಾಗ, ತುಂಬಾನೇ ಬೇಸರ ಆಗಿತ್ತು. ನನ್ನ ಮಾತೂ ಆಡಿಸಿರಲಿಲ್ಲ. ಅಮ್ಮ ನೂ ಚೆನ್ನಾಗಿ ಬೈದಿದ್ರು... ಆದ್ರೂ ಆಮೇಲೆ ಸಮಾಧಾನ ಮಾಡಿದ್ರು.... !ನಮ್ಮೂರಲ್ಲಿ ಫೇಲ್ ಆದಡ್ದ್ಕೆ ಒಬ್ಬಳು ಅತ್ಮಹತ್ಯೆ ಮಾಡಿಕೊಂಡಿದ್ದಳಲ್ಲ ಅದಕ್ಕೆ ಇರಬೇಕು ಅಂತ ಈಗ ಅನ್ನಿಸುತ್ತೆ.


ಸರಿ ಥರ್ಡ್  ಕ್ಲಾಸ್ ಗೆ ಸೈನ್ಸ್ ಗೆ ಯಾರು ಸೇರಿಸಿಕೊಳ್ತಾರೆ, ಆರ್ಟ್ಸ್ ಗೆ ಸೇರಿದ್ದಾಯ್ತು... ಯಾರ ಸಲಹೆಯೂ ಇಲ್ಲದೆ( ಅಣ್ಣಾ ಅಂತೂ... ಮಾತೇ ಆಡಿರಲಿಲ್ಲ). ಬೇರೆ ಬೇರೆ ಸ್ಚೂಲಿಂದ ಬಂದ ಹುಡುಗಿಯರೆಲ್ಲ ಗೆಳತಿಯರಾದರು ಕಾಲೇಜ್ ನಲ್ಲಿ..... ತುಂಬಾ ಆತ್ಮೀಯಳಾಗಿದ್ದು "ಶ್ರೀ ಲೇಖಾ'.


ಶ್ರೀ ಲೇಖ ಚೆಂದದ ಹುಡುಗಿ, ಓದುವುದರಲ್ಲೂ ... sslc ನಲ್ಲಿ, 75% ಇದ್ದರೂ ಆರ್ಟ್ಸ್ ಗೆ ಸೇರಿದ್ದ್ಳು. ನಂತರ ತಿಳಿದು ಬಂದದ್ದು , ಅವರದು ತೀರಾ ಬಡತನ, ತಂದೆ ದೇವಸ್ಥಾನ ದ ಅರ್ಚಕ, ಮೂರು ಮಕ್ಕಳು, ಮಡದಿಯ ಸಂಸಾರ ಅದರಲ್ಲೇ ತುಂಬ ಬೇಕಿತ್ತು. ಸೈನ್ಸ್ ಒದಿಸೂ ಶಕ್ತಿ ಇರಲಿಲ್ಲ ಆದರೂ ಓದುವ ಆಸಕ್ತಿ ಇಂದ ಆರ್ಟ್ಸ್ ಗೆ ಸೇರಿದ್ದಳು ಶ್ರೀ ಲೇಖ.
ನಾವಿಬ್ಬರೂ ತುಂಬಾ ಆತ್ಮೀಯರಾಗಿ ಬಿಟ್ಟೆವು, ಕೆಲವೇ ದಿನಗಳಲ್ಲಿ ನನಗೂ... ಚೆನ್ನಾಗಿ ಓದುವ ಆಸಕ್ತಿ ಹುಟ್ಟಿಕೊಂಡಿತ್ತು ಅವಳಿಂದಾಗಿ. ಅವ್ಳು ತುಂಬಾನೇ ಸಹಾಯ ಮಾಡ್ತಿದ್ಳುಕೂಡಾ .

ಆಗ ತಾನೇ ಹರೆಯಕ್ಕೆ ಕಾಲಿಟ್ಟಿದ್ದ ನಾವೆಲ್ಲರೂ... ಮದುವೆ, ಮದುವೆಯಾಗುವ ಹುಡುಗನ ಬಗ್ಗೆ ಕನಸು ಕಾಣುತ್ತಿದ್ದೆವು.. ಯಾವುದಾದರೂ ಒಂದು ಕ್ಲಾಸ್ ಇಲ್ಲದಿದ್ದಾಗ ಗುಂಪಾಗಿ ಕೂತು ಹರಟುತ್ತಿದ್ದೆವು... ಆದರೆ ಶ್ರೀ ಲೆಖಾ... ತನ್ನ ಕನಸಿನ ರಾಜಕುಮಾರ ನಾ ಬಗ್ಗೆ ಮಾತೆ ಆಡುತ್ತಿರಲಿಲ್ಲ...ಕೇಳಿದರೆ, "ಸದ್ಯ ನಾನು ಪೀ ಯು ಸೀ ಮುಗಿಸಿದರೆ ಸಾಕಾಗಿದೆ, ನಮ್ಮ್ಮ ಮನೆಯಲ್ಲಿ ಮದುವೆ ಮಾಡಿ ನನ್ನ  ಈಗಲೇ ಸಾಗಿ ಹಾಕೋಕೆ ರೆಡೀ ಯಾಗಿದರೆ... ಬೆನ್ನ ಹಿಂದೆ ಇರೋ ತಂಗೀರ ಚಿಂತೆ ನಮ್ಮಪ್ಪಂಗೆ" ಎನ್ನುತ್ತಿದ್ದಳು. ಅವರ ಮನೆಯ ಪರಿಸ್ಥಿತಿ ಅರಿವಿದ್ದ ನಾವ್ಯಾರೂ ಹೆಚ್ಚಿಗೆ ಪೀಡಿಸುತ್ತಿರಲಿಲ್ಲ.


ಅವತ್ಯಾಕೋ ಶ್ರೀ ಲೇಖ ತುಂಬಾನೇ ಸಪ್ಪಗಿದ್ದಳು, ಯಾಕೆ ಅಂತ ತುಂಬಾ ಸಾರಿ ಪೀಡಿಸಿ ಕೇಳಿದ್ದಕ್ಕೆ ಹೇಳಿದಳು," ನಮ್ಮನೆಲ್ಲಿ ನೆನ್ನೆ ನನ್ನ ನೋಡೋಕೆ ಯಾರೋ ಬಂದಿದ್ದರು ಕಣೆ, ಅವ್ರಿಗೆ ನಾನು ಒಪ್ಪಿಗೆ ಅಂತೇ, ಒಂದು ವಾರದಲ್ಲೇ ಮದುವೆ ಮಾಡಿಕೊಳ್ತರಂತೆ.... ನನ್ನ ಓದು ಅಷ್ಟೇ... " ಅಂತ ಅಳೋಕೆ ಶುರು ಮಾಡಿದೊಳನ್ನ ಹೇಗೆ ಸಮಾಧಾನ ಮಾಡ್ಬೇಕೋ ಗೊತ್ತಾಗಲೇ ಇಲ್ಲ."ನಂಗಿಸ್ಟ್ ಇಲ್ಲ ಅಂತ ಹೇಳು ನಿಮ್ ತಂದೆಗೆ, " ಅಂದೆ. "ಅದೆಲ್ಲ ನಡಿಯೋದಿಲ್ಲವೇ ನಮ್ಮ ಮನೆಲಿ, ನನ್ನ ಒಂದು ಮಾತೂ ಕೇಳೋಲ್ಲ ಇದ್ರ ಬಗ್ಗೆ" ಎಂದು ಸುಮ್ಮನಾದಳು. ನಾನೂ ಅಸಹಾಯಕಿ, ಏನು ಮಾಡಬೇಕು ತೋಚಲಿಲ್ಲ, ಅವಳೇ ಹೇಳಿದ್ಲು, "ಅವರ ಮನೆಯವರು, ತಮ್ಮ ಮನೆಯ ಫೋನ್ ನಂಬರ್ ಕೊಟ್ಟೋಗಿದಾರೆ ನಮ್ಮ ಅಪ್ಪನ ಕೈಲಿ, ನಾನೇ ಅವರ ಮನೆಗೆ ಅನಾಮಧೇಯ ಕಾಲ್ ಮಾಡಿ ಶ್ರೀ ಲೇಖಳ ಚಾರೆಕ್ಟೇರ್ ಚೆನ್ನಾಗಿಲ್ಲ ಅಂತ ಹೇಳಿಬಿಡ್ತೀನಿ, ಆಗ್ಲಾದ್ರೂ ಅವರು ನನ್ನ ಮದುವೆ ಆಗೋಕ್ಕೆ ಒಪ್ಪೊಲ್ಲ, ಅಸ್ಟರಲ್ಲಿ ನನ್ನ ಸೆಕೆಂಡ್ ಪೀ ಯು ಸೀ ಎಗ್ಸ್ಯಾಮ್ ಮುಗಿಯುತ್ತೆ, ನಾನೇ ಎಲ್ಲಾದ್ರೂ ಸ್ಚೂಲ್‌ನಲ್ಲಿ, ಟೀಚರ್ ಆಗಿ ಸೇರಿಕೋತೀನಿ, ನಮ್ಮ ಅಪ್ಪನಿಗೆ ಸ್ವಲ್ಪ ಸಹಾಯ ಆಗುತ್ತೆ" ಎಂದಳು.  ಅವಳ ಮಾತು ಕೇಳಿ ನನಗೆ ಭಯಾನೂ ಆಯ್ತು, "ಬೇಡ ಶ್ರೀ, ಒಂದು ಸಲ ನೀಂ ಅಮ್ಮನ ಹಥ್ರನಾದ್ರು ಮಾತಾಡಿ ನೋಡು" ಅಂದೆ. "ಇಲ್ಲವೇ, ಅವರಂತೂ, 'ನಿಮ್ಮ ಅಪ್ಪ ಹೇಳಿದಾಗೆ ಕೇಳೋಕೇನು ನಿಂಗ' ಅಂತ ನನ್ನೇ ಬೈತಾರೆ" ಅಂದವಳಿಗೆ, ಏನೂ ಸಹಾಯ ಮಾಡುವ ಸ್ಥಿತಿಯಲ್ಲಿರಲಿಲ್ಲ ನಾನು, ಸುಮ್ಮನೆ ಮನೆಗೆ ಬಂದಿದ್ದೆ.


ಮೂರು ದಿನದ ನಂತರ ಖುಷಿಯಾಗಿದ್ದ ಶ್ರೀಲೇಖಾ, ಹೇಳಿದ್ದಳು " ಲೇ, ಅವರು ನನ್ನ ಮದುವೆ ಆಗೋಕೆ ಇಸ್ಟ ಇಲ್ಲ ಅಂತ ಹೇಳಿಬೀಟ್‌ರು ಕಣೇ, ಸದ್ಯಕ್ಕೆ, ಯಾವುದೇ ತೊಂದ್ರೆ ಇಲ್ಲದೆ ಎಗ್ಸ್ಯಾಮ್ ಗೆ ಓದ್ಕೋಬಹುದು, ಒಂದು ಫೋನ್ ಕಾಲ್ ಎಸ್ಟೆಲ್ಲಾ ಬದಲಾಯಿಸ್ತು ನೋಡಿದಯ " ಎಂದವಳನ್ನು, ನೋಡಿ ವಿಚಿತ್ರವೆನಿಸಿತು, ಸದ್ಯ ಅವಳು ಖುಷಿಯಾದ್ಲಲ್ಲ ಅಷ್ಟು ಸಾಕೆನಿಸಿತ್ತು. 


ನಂತರ ಎಗ್ಸ್ಯಾಮ್ ಗಡಿಬಿಡಿಯಲ್ಲಿ, ನಾವಿಬ್ಬರೂ ಸಿಗುತ್ತಿದ್ದದ್ದೆ ಅಪರೂಪ, ಸಿಕ್ಕರೂ, ಪರೀಕ್ಷೆಯ ಬಗ್ಗೆಯೇ ಮಾತುಕತೆ. 


ನಂತರ ಇನ್ನೆರೆಡು ಎಗ್ಸ್ಯಾಮ್ ಇದೆ ಅನ್ನುವಾಗ, ಸಿಕ್ಕ ಶ್ರೀಲೇಖ, "ನಿನ್ನತ್ರ ಅರ್ಜೆಂಟಗಿ ಮಾತಾಡಬೇಕೆಂದಳು", ಸರಿ ಎಂದು ಇಬ್ಬರು , ಲೈಬ್ರರ್ರೀಯಲ್ಲಿ ಮಾತಾಡಲು ಕೂತೆವು, ಬಾಡಿದ್ದ ಅವಳ ಮುಖ ನೋಡಿ,"ಯಾಕೆ ಶ್ರೀ, ಇಸ್ಟೊಂದು ಓದುತ್ತಿದಿಯ, ನಿದ್ದೇನೆ ಮಾಡ್ತಿಲ್ಲ ಅನಿಸುತ್ತೆ  ಹೇಗಿದ್ದರೂ ನೀನೇ ಫರ್ಸ್ಟ್ ಬರೂದು ತಾನೇ" ಎಂದೇ.ಅದಕ್ಕವಳ ಕಣ್ಣಲ್ಲಿ, ಫಳಕ್ಕನೆ ಉದುರಿದ ಕಣ್ಣೀರನ್ನು ಕಂಡು ಘಾಬರಿಯದೆ,"ಯಾಕೆ ಶ್ರೀ, ಏನಾಯ್ತು ಹೇಳಮ್ಮಾ" ಎಂದೆ. 

ಆಕಡೆ ಈಕಡೆ ನೋಡಿ ಕಣ್ಣೀರೋರೆಸಿಕೊಂಡ ಅವಳು,"ನನಗೆ ಮದುವೆ ಫಿಕ್ಸ್ ಆಗಿದೆ ಕಾಣೆ, ಎಗ್ಸ್ಯಾಮ್ ಮುಗಿದ  ಹತ್ತು ದಿನಕ್ಕೆ ಮದುವೆ,  ಈ ಸಲ ಬಂದ ಗಂಡ...ಹಾ ಹ್ಹ ಹ್ಹ  ಹ್ಹ, ಗಂಡ ಅವನು, 45 ವರ್ಷದ ಮುದುಕ, ನನ್ನ ಅನಾಮಧೇಯ ಫೋನ್ ಕಾಲ್ ಗೂ ಹೆದರಲಿಲ್ಲ, ನನ್ನೇ ಮಧುವೆ ಆಗ್ತೀನಿ ಅಂತ ಕೂತಿದಾನೆ, ತುಂಬಾ ಸಾಹುಕಾರ, ನಾನು ಎರಡನೇ ಹೆಂಡತಿ, ನನ್ನ ವಯಸ್ಸಿನ ಮಗ ಇದಾನಂತೆ, ನನ್ನ ಮದುವೆ ಮಾಡಿಕೊಂಡು, ನನ್ನ ತವರು ಮನೆ ಉದ್ದಾರ ಮಾಡ್ತಾನಂತೆ, ನಮ್ಮಪ್ಪನ ತಲೆ ಚೆನ್ನಾಗಿ ಕೆಡಿಸಿ ಒಪ್ಪಿಸಿದನೇ, ನಮ್ಮಪ್ಪ ಮದುವೆ ಡೇಟ್ ಫಿಕ್ಸ್ ಮಾಡಿದ್ಧೂ ಅಯ್ತು'" ಎಂದಳು.ನನಗೂ ಅಳು ಬಂತು, "ಶ್ರೀ , ಏನೇ ಮಾಡೋದು ಈಗ" ಎಂದೆ. "ಏನೂ ಮಾಡೋ ಹಾಗಿಲ್ಲವೇ, ಎಲ್ಲಾದ್ರೂ ಓಡೋಗೋಣ ಅನ್ನಿಸುತ್ತೆ, ಆದ್ರೆ ಎಲ್ಲೊಗ್ಲೀ,...." ಮತ್ತೆ  ಅತ್ತಳು. ಏನೆಂದು ಸಮಾಧಾನ ಮಾಡಲಿ !!! ಸುಮಾರು  ಹೊತ್ತು ಸುಮ್ಮನಿಡ್ವಿ, "ಹೋಗ್ಲಿ ಬಿಡು ನನ್ನ ಹಣೆಲಿ ಬರೆದಾಗೆ ಆಗುತ್ತೆ ," ಎಂದು ನಿಟ್ಟಿಸುರು ಬಿಟ್ಟು ಎದ್ದಳು. ನಾನು ಅವಳ ಭುಜದ ಮೇಲೆ ಕೈ ಹಾಕಿ ನಡೆದೆ.


ನಂತರ ಎಗ್ಸ್ಯಾಮ್ ಮುಗಿದ ನಂತರ ನಮ್ಮ ಮಾವನ ಮದುವೆ ಇದ್ದದರಿಂದ , ನಮ್ಮ ಮನೆಯವರೆಲ್ಲ 1 ವಾರದ ಮುಂಚೆಯೇ ಊರಿಗೊರಟು ಹೋದ್ವಿ, ಹೋಗುವ ಮೊದಲು, ಅವಳನ್ನು ಭೇಟೆ ಯಾಗಿ , ಸಮಾಧಾನ ಮಾಡುವಪ್ರಯತ್ನ ಮಾಡಿದ್ದೆ, ಆದ್ರೆ ಹೇಗೆ.. ಸಾದ್ಯ....!!!.


ಇದೆಲ್ಲ ಆಗಿ ಇಂದಿಗೆ ಒಂದೂವರೆ   ತಿಗಳೇ ಆಗಿದೆ, ಆದ್ರೆ ಶ್ರೀಲೇಖ ಇಲ್ಲ ನನ್ನೊಂದಿಗೆ, ನಾನು ಮಾವನ ಮದುವೆ ಮುಗಿಸಿ ಬರುವಸ್ತರಲ್ಲಿ, ಶ್ರೀಲೇಖಳ, ಸಾವಿನ ಸುದ್ಧಿ ಕಾಯುತ್ತಿತ್ಟು.


 ಹೌದು, ಶ್ರೀ ಲೇಖ ಆತ್ಮಹತ್ಯೆ ಮಾಡಿಕೊಂಡಿದ್ಲು, ಅದೂ ಅತಿ ಘೋರವಾಗಿ, ತನ್ನ ಸುಂದರ ರೂಪವನ್ನ ಸುಟ್ಟುಕೊಂಡು ಪ್ರಾಣ ತೆತ್ತಿದ್ದಳು. ಆತ್ಮಹತ್ಯೆ ನೇ ಅವಳಿಗೆ ಕಂಡ ಏಕೈಕ ದಾರಿ....


ಎದೆ ನಡುಗಿಸುವಂತ ಅವಳ ಕಳೇಬರ ನೋಡಿ , ನಾನು ಒಂದು ವಾರ ಮೇಲೆದ್ದಿರಲಿಲ್ಲ..ಯಾರು ಕೊಟ್ಟರು ಅವಳ ಸುಂದರ ಜೀವನವನ್ನ ಹಾಳು ಮಾಡುವ ಸ್ವತಂತ್ರ ಅವರಪ್ಪನಿಗೆ, ಆ ಮುದಕನಿಗೆ ಇವಳೇ ಬೇಕಿತ್ತೆ ಮದುವೆ ಯಾಗಲು....??? ಇನ್ನೂ ಸ್ವಲ್ಪ ದಿನದಲ್ಲಿ ಅವಳೇ ಕೆಲಸಕ್ಕೆ ಸರಿ... ತನ್ನ ಮನೆ ಯನ್ನು ಅವಳೇ  ಸಾಕುತಿದ್ದಾಳಲ್ಲ.... ಕೊನೆ ಮೊದಲಿಲ್ಲದ ನನ್ನ ಪ್ರಶ್ನೆಗಳಿಗೆ ಯಾರು ಉತ್ತರಿಸಿಯಾರು.... ಆದರೂ ಒಂದುತುಂಬು ಜೀವದ ಬಲಿ ಇಲ್ಲಿ ......ಇಂದು, ಪೀ ಯು ಸೀ ರಿಸಲ್ಟ್ ನಲ್ಲಿ, ಅವಳೇ ಕಾಲೇಜ್ ಗೆ ಫರ್ಸ್ಟ್, ನಾನು ಸೆಕೆಂಡ್. , ಅವಳು ಸಾವಿನಲ್ಲೂ  ಪ್ರಥಮ ಸ್ಥಾನ ನಾ ತಾನೇ ಹೊಡೆದು ಬಿಟ್ಟಳು.


(ನಿಜ ಜೀವನದಲ್ಲಿ ನಡೆದ ಘಟನೆಯಾಧಾರಿತ)


ಚೆಂದದ ಸಲಹೆ, ಪ್ರತಿಕ್ರಿಯೆಗಳಿಗೆ ಕಾಯುತ್ತಿರುತ್ತೇನೆ.


Tuesday, 12 May 2015

ಮಿಸ್ಸಿಂಗ್ ಯೂ....!

 "ನಿವ್ಯ ಇದ್ದಿದ್ದರೆ ಚೆನ್ನಾಗಿ ಟೈಮ್ ಪಾಸ್ ಆಗ್ತಿತ್ತು ಅಲ್ವಾ ಅಪ್ಪು", ಅಂತ ಗಂಡನಕಡೆ, ನೋಡಿದರೆ ಕೊಂಚ ನಾಲಿಗೆ ತುಟಿಯಿಂದಾಚೆ ಬಿಟ್ಟು ನನ್ನ ಕಡೀನೆ ನೋಡ್ತಾ ಇದ್ರು. ಹ  ಹ ಹ  ನಗು ನನ್ನ ತುಟಿಮೇಲೆ, ನೀವ್ಯ ಯಾವಾಗ್ಲೂ ಹಾಗೆ , ನಿದ್ದೆ ಬಂದುಬಿಟ್ರಾಂತು ಆದೇ ಪೋಸ್ ನಲ್ಲಿ  ತೊಡೆಮೇಲೆ ಮಲ್ಗಥ ಇದ್ದಿದ್ದು.
"ನಿವ್ಯ", ಒಂಭತ್ತು ತಿಂಗಳ ಮುದ್ದು ಪೋರಿ, ನಮ್ಮ ಮನೆಯ ಪಕ್ಕದಲ್ಲಿ ಬಾಡಿಗೆಗಿದ್ದ, ಮರಾಠಿ ದಂಪತಿಯ ಮಗಳು, ನಿವ್ಯ ಮತ್ತು ನಿತ್ಯ ಅವಳಿ ಮಕ್ಕಳು.  ನಿವ್ಯ ನಮಗೆ ಚೆಂದಾಗಿ ಒಂದಿಕೊಂಡುಬಿಟ್ಟಿದ್ದಳು, ನಮ್ಮ ಮನೆಲೇ, ಆಟ, ಹಾಲು, ನಿದ್ದೆ ಎಲ್ಲಾ, ನಾಲ್ಕು ತಿಂಗಳ ಮಗುವಿನಿಂದ, ನಮ್ಮಲ್ಲೇ ಹೆಚ್ಚಾಗಿ ಇರುತ್ತಿದ್ದಳು.
ನಿತ್ಯ, ಸ್ವಲ್ಪ ರಿಸರ್ವ್ಡ್, ಅಮ್ಮನ ಮಗಳು. ಹಾಗಾಗಿ ನಮಗೆ ನಿವ್ಯ ತುಂಬಾ ಮುದ್ದು. ಮಕ್ಕಳನ್ನೇ ಎತ್ತಿಕೊಳ್ಳದ ನಮ್ಮ ಹೆಜಮಾನರು ನೀವ್ಯಾಳನ್ನು ಎತ್ತಿ ಮುದ್ದಾಡುತ್ತಿದ್ದರು, ಅವಳು ಹಾಗೆ.. ನಗೆ ಮಲ್ಲಿಗೆ.. ಮುದ್ದು ಬಂಗಾರಿ, ಹವಳದ ಮಣಿ...ತನ್ನ ನಗುವಿನಿಂದಾಗೆ ಎಲ್ಲರನ್ನೂ ಆಕರ್ಷಿಸಿಬಿಡುತ್ತಿದ್ದಳು.

ಅವರ ಮನೆಗೆ ಹೋದ್ರೆ ಸಾಕು, " ಆಂಟೀ ಕೆ ಪಾಸ್ ಜಾಒ ಬೇಟಿ" ಅಂತ, ಅವರಮ್ಮ, ನನ್ನ ಮಡಿಲಿಗೆ ನೀವ್ಯ ಳನ್ನು ತುರುಕೋಕ್ಕೆ ಕಾಯ್ತರ್ತಿದ್ರು. ಯಾಕಂದ್ರೆ, ಒಬ್ಬರೇ ಆ ಇಬ್ಬರು ತುಂಟ ಪುಟಾಣಿಗಳ್ನ ನೋಡ್ಕೊಳೋದ್ರಲ್ಲಿ, ಸುಸ್ತೋ ಸುಸ್ತು. ಯಾರಾದ್ರೂ ಬಂದ್ರೆ ಸಾಕು, ಸ್ವಲ್ಪ ಹೊತ್ತು  ಮಕ್ಕಳನ್ನ ನೋಡಿ ಕೊಂಡ್ರೆ ಸಾಕು ಅಂತ ಕಾಯ್ತಿರ್ತಿದ್ರು.

ಈಗ ಹತ್ತು ದಿನದಿಂದ  ನಮ್ಮ ಮನೆ ಬಿಕೋ ಅಂತಿದೆ, ನೀವ್ಯಳ ಅಳು,ನಗೆ,ಕೇಕೆ ಗಳಿಲ್ಲದೆ. ಅವರ ತಂದೆ ಸಾಫ್ಟ್‌ವೇರ್ ಇಂಜಿನಿಯರ್, ಹಾಗಾಗಿ ಹೈದೆರಾಬಾದ್ ನಿಂದ ಒಳ್ಳೆ ಆಫರ್ ಬಂದ ತಕ್ಷಣ ಒಪ್ಪಿಕೊಂಡು ಮನೆ ಕಾಲಿ ಮಾಡಿಕೊಂಡು ಹೊರಟು ಹೋದ್ರು ಹತ್ತು ದಿನಗಳ ಕೆಳಗೆ.


ಆ ಪುಟ್ಟಿನ ಮರೆಯೋಕೆ ಆಗ್ತಿಲ್ಲ, ವಾಟ್ಸ್ಸಪ್ಪ್ ನಲ್ಲಿ ಅವರಮ್ಮನ ಜೊತೆ ದಿನ ಚಾಟ್ ಮಾಡುವಾಗ್ಲೂ, "ಮಿಸ್ಸಿಂಗ್ ನಿವ್ಯ"  ಅನ್ನೋ ಪದ ವಿದ್ದೆ ಇರುತ್ತೆ, 
ಆದ್ರೆ "ಮಿಸ್ಸಿಂಗ್ ಯೂ ...." ಅನ್ನೋ ವಾಕ್ಯ ನನ್ನ ಮನದ ಧುಖ ನಾ ನಿಜವಾಗಿಯೂ  ಕನ್ವೇ ಮಾಡುತ್ತಾ.....? ಆ ಪುಟ್ಟಿಗೆ ನಾನು ನೆನಪಿರ್ತಿನ.....? ಅನ್ನೋ ಪ್ರಶ್ನೆ ಗಳು ಏಳ್ತವ. 

"ಮಿಸ್ಸಿಂಗ್ ಯೂ"ಅನ್ನೋದು..  ಈಗ ತುಂಬಾನೇ ಸುಲಭವೆನ್ನಿಸೋ ವೇ ಆಫ್ ಕನ್ವೇಯಿಂಗ್, ಆದ್ರೆ, ಇದಕ್ಕಿಂತಲೂ ಸೂಕ್ಷಮವಾದ, ಸೂಕ್ತವಾದ, ವಾಕ್ಯ ಅಥವಾ ಪದ ನಿಮಗೆ ಗೊತ್ತಾ.......ದಯವಿಟ್ಟು ತಿಳಿಸಿ....

ನಿಮ್ಮ ಚೆಂದದ ಉತ್ತರಗಳಿಗೆ ಹಾಗೂ, ಸಲಹೆ ಸೂಚನೆಗಳಿಗೆ ಎದಿರು ನೋಡುತ್ತಿರುತ್ತೇನೆ.....:-)

(ನಿವ್ಯ ಬ್ಲೂ ಫ್ರೋಕ್, ನಿತ್ಯ ಗ್ರೀನ್ ಫ್ರೋಕ್)



ಬ್ಲೋಗ್ ಬರೆಯಲು ಸ್ಪೂರ್ತಿ ಕೊಟ್ಟ ಎಲ್ಲಾ ಬ್ಲೊಗ್ಗಿಗರಿಗು ಧನ್ಯವಾದಗಳು...

ಬ್ಲೋಗ್ ಬರೆಯಲು ಸ್ಪೂರ್ತಿ ಕೊಟ್ಟ ಎಲ್ಲಾ ಬ್ಲೊಗ್ಗಿಗರಿಗು ಧನ್ಯವಾದಗಳು...


"ಮ್ಯಾರೇಜ್ ಆದ ಮೇಲೆ ಕೆಲಸಕ್ಕೆ ಇಸ್ಟ ಇದ್ದ್ರೆ ಹೋಗ್ ಬಹುದು ಇಲ್ಲಾ ಮನೆಲೇ ಇರಬಹುದು ನಿನ್ನಿಸ್ಟ" ಎಂದ ಮಾವನ ಮನೆಯವ್ರಿಗೆ,ಏನೆಳೊಬೇಕೋ ಗೊತ್ತಾಗಿರಲಿಲ್ಲಾ .ಮದುವೇ ಆಯ್ತು, ಗಂಡನ ಮನೆಗೆ ಬಂದು ಸೆಟ್ಲ್ ಆಗಿದ್ದು ಆಯ್ತು, MBA ಕಾಲೇಜ್ ಟಾಪರ್ ಆಗಿ ಪಾಸ್ ಮಾಡಿದ್ದು ವ್ಯರ್ಥಾ ಮಾಡಲಿಕ್ಕೆ ಈಸ್ಟ ಇರಲಿಲ್ಲ, ಮೊದಲು ಕೆಲಸ ಮಾಡುತಿದ್ ಆಫೀಸ್ ಈಗ ತುಂಬಾ ದೂರ, ಹೋಗಿ ರಿಸೈನ್ ಮಾಡಿ ಬಂದಾಯ್ತು, J P  ನಗರದ  ಆಸು  ಪಾಸಲ್ಲೇ ಕೆಲಸ ಆಗಬೆಕ್ಕಿತ್ತು, ಗಂಡನಿಗೆ ನೈಟ್  ಶಿಫ್ತೂ , ನಾನು ಡೇ ಶಿಫ್ಟು ಆದ್ರೆ ನಮ್ಮಿಬ್ರ ಭೇಟಿ ನೇ ಅಪರೂಪ ಆಗೋಗುತ್ತೆ, ಆದ್ರೂ, ಮೊದಲು ಬರ್ತಿದ್ಧ ಸಂಬಳಕ್ಕಿಂತ  ಜಾಸ್ತಿ ಸಂಬಳ  ಆಫರ್ ಮಾಡಿ ಕೆಲಸ ಸಿಕ್ಕಾಗ ಕುಶಿ ಯಾಗಿ ಹೋಗಿದ್ದೆ, ನಾಲ್ಕು ತಿಂಗಳು ಕೆಲಸ ಮಾಡೋದ್ರಲ್ಲಿ ಸಾಕಾಗಿ ಹೋಗಿತ್ತು, ಕೆಲಸ ಬಿಟ್ಟುಬಿಟ್ಟೆ ಮನೆಲಿ ಕೂತೆ.
ಮನೆಲಿ ಕೂತೋರಿಗೆ ನೂರಒಂದು ಸಲಹೆ ಕೊಡೋದರಲ್ಲಿ ನಮ್ಮ ಮಾವಂದು ಎತ್ತಿದ ಕೈ, ಪುಣ್ಯಕ್ಕೆ ಅತ್ತೆ ಇರಲಿಲ್ಲ !
ಅಂತೂ ಇಂತೂ ಮದುವೆ ಆದ 5 ವರ್ಷಧಮೇಲೆ ನನಗೆ ಈಗ ಸಮಯ ಸಿಕ್ಕಿದೆ ನನ್ನ ಬ್ಲೋಗ್ ಮಾಡಲು.
ಇದಕ್ಕೆ ತುಂಬು ಸ್ಪೂರ್ತಿ ಕೊಟ್ಟ ಬ್ಲೋಗಿಗರನ್ನು ಇಲ್ಲಿ ಸ್ಮರಿಸಿ ಧನ್ಯವಾದ ಅರ್ಪಿಸಲು ಇಸ್ಟ ಪಡ್ತೇನೆ.
http://sandhyeyangaladi.blogspot.in/  ನ ಸಂಧ್ಯಾ ,
http://ittigecement.blogspot.in/ ನ ಎಲ್ಲರ ಪ್ರಕಾಶಣ್ಣ,
nanunanprapancha.blogspot.in ,
abisarike.blogspot.in ಇನ್ನೂ ಹತ್ತು ಹಲವು ಬ್ಲೋಗ್‌ಗ್ ಗಳು
ನಾನಿನ್ನು ಈ ಬ್ಲೋಗ್ ಪ್ರಪಂಚಕ್ಕೆ  ಹೊಸಬಳು, ನಿಮ್ಮೆಲ್ಲರ ಪ್ರೋತ್ಸಾಹ ಹಾಗೂ, ಸಲಹೆ ಸೂಚನೆಗಳು ತುಂಬಾನೇ ಮುಕ್ಯ.ದಯವಿಟ್ಟು, ನನ್ನ ಬ್ಲೋಗಿನ ಬಗ್ಗೆ ಬರೆಯಿರಿ.